• Home
 • »
 • News
 • »
 • national-international
 • »
 • ದೇಶದಲ್ಲಿ ಹೆಚ್ಚುತ್ತಿರುವ ಓಮೈಕ್ರಾನ್​ ಪ್ರಕರಣ; ನಾಳೆ ಆರೋಗ್ಯ ಅಧಿಕಾರಿಗಳೊಂದಿಗೆ ಪ್ರಧಾನಿ ಸಭೆ

ದೇಶದಲ್ಲಿ ಹೆಚ್ಚುತ್ತಿರುವ ಓಮೈಕ್ರಾನ್​ ಪ್ರಕರಣ; ನಾಳೆ ಆರೋಗ್ಯ ಅಧಿಕಾರಿಗಳೊಂದಿಗೆ ಪ್ರಧಾನಿ ಸಭೆ

ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ

ಓಮೈಕ್ರಾನ್ ರೂಪಾಂತರವು ಡೆಲ್ಟಾ ರೂಪಾಂತರಕ್ಕಿಂತ ವೇಗವಾಗಿ ಹರಡುತ್ತಿದೆ. ಈಗಾಗಲೇ ಲಸಿಕೆ ಹಾಕಿದ ಅಥವಾ ಕೋವಿಡ್‌ನಿಂದ ಚೇತರಿಸಿಕೊಂಡ ಜನರಲ್ಲಿ ಸೋಂಕನ್ನು ಉಂಟುಮಾಡುತ್ತಿದೆ

 • Share this:

  ನವದೆಹಲಿ (ಡಿ.22): ದೇಶದಲ್ಲಿ ಓಮೈಕ್ರಾನ್ (Omicron)​ ಸೋಂಕು ವೇಗವಾಗಿ ಹರಡುತ್ತಿದ್ದು, ದಿನದಿಂದ ದಿನಕ್ಕೆ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ನಿನ್ನೆ 200 ಇದ್ದ ಓಮೈಕ್ರಾನ್​ ಪ್ರಕರಣ ಇಂದು 213 ಆಗಿದೆ. ದೆಹಲಿ ಮತ್ತು ಮಹಾರಾಷ್ಟ್ರದಲ್ಲಿ ಅತಿ ಹೆಚ್ಚಿನ ಸೋಂಕು ವರದಿಯಾಗಿದೆ. ಇನ್ನು ಸೋಂಕು ಹೆಚ್ಚಳ ಕುರಿತು ಕಳವಳ ವ್ಯಕ್ತಪಡಿಸಿದರು ಪ್ರಧಾನಿ ನರೇಂದ್ರ ಮೋದಿ (PM Narendra Modi) ನಾಳೆ ಈ ಕುರಿತು ಅಧಿಕಾರಿಗಳು ಮತ್ತು ತಜ್ಞರೊಂದಿಗೆ ಸಭೆ ನಡೆಸಲು ಮುಂದಾಗಿದ್ದಾರೆ. ಈ ವೇಳೆ ದೇಶದಲ್ಲಿ ಕೋವಿಡ್ ಪ್ರಕರಣ ಮತ್ತು ಹೆಚ್ಚುತ್ತಿರುವ ಓಮೈಕ್ರಾನ್ ಕುರಿತು ಮಾಹಿತಿ ಪಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.


  ಕಟ್ಟುನಿಟ್ಟಿನ ನಿಯಮ ಜಾರಿಗೆ ಸೂಚನೆ


  ದೇಶದಲ್ಲಿ ಓಮೈಕ್ರಾನ್​ ಸೋಂಕು ಹೆಚ್ಚಾಗುವ ಲಕ್ಷಣ ಹೊಂದಿರುವ ಹಿನ್ನಲೆ ಈ ಹಿಂದೆ ಕೋವಿಡ್ ಸೋಂಕು ಸಮಯದಲ್ಲಿ ನಿರ್ಮಾಣ ಮಾಡಿದ್ದ ವಾರ್​ ರೂಂ ರೂಪಿಸಲು ಸಮಿತಿ ಸಲಹೆ ನೀಡಿದೆ, ಅಲ್ಲದೇ ರಾಜ್ಯಗಳಲ್ಲಿ ಹಿಂಪಡೆದಿರುವ ರಾತ್ರಿ ಕರ್ಫ್ಯೂ ಸೇರಿದಂತೆ ಅನೇಕ ನಿಯಮ ಜಾರಿಗೆ ತರಲು ಸೂಚನೆ ನೀಡಲಾಗಿದೆ. ರಾಜ್ಯಗಳಲ್ಲಿ ವ್ಯಾಪಕ ಪರೀಕ್ಷೆ, ನಿಯಂತ್ರಣ, ಸೋಂಕು ತಡೆಗಟ್ಟುವಿಕೆಗೆ ಕ್ರಮಗಳನ್ನು ಕೈಗೊಳ್ಳುವ ಕುರಿತು ಸಲಹೆ ನೀಡಿದೆ.


  ಆರೋಗ್ಯ ಸಚಿವಾಲಯಕ್ಕೆ ಬರೆಯಲಾದ ಪತ್ರದಲ್ಲಿ ಸೋಂಕು ನಿಯಂತ್ರಣಕ್ಕೆ ದೂರದೃಷ್ಟಿ, ದತ್ತಾಂಶ ವಿಶ್ಲೇಷಣೆ, ಕ್ರಿಯಾತ್ಮಕ ನಿರ್ಧಾರ ತೆಗೆದುಕೊಳ್ಳುವಿಕೆ ಮತ್ತು ಕಟ್ಟುನಿಟ್ಟಾದ ಮತ್ತು ತ್ವರಿತ ನಿಯಂತ್ರಣ ಕ್ರಮ ಕೈಗೊಳ್ಳುವಂತೆ ಸಮಿತಿ ತಿಳಿಸಿದೆ
  ತೆಲಂಗಾಣದಲ್ಲಿ ಇಂದು ಎರಡು ಓಮೈಕ್ರಾನ್​ ಸೋಂಕು ಪತ್ತೆಯಾಗಿದ್ದು, ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 24ಕ್ಕೆ ಏರಿದೆ. ದೆಹಲಿ ಮತ್ತು ಮಹಾರಾಷ್ಟ್ರ ನಂತರದ ಸ್ಥಾನದಲ್ಲಿ ತೆಲಂಗಾಣ ಇದೆ. ಇನ್ನು ಅರುಣಾಚಲ ಪ್ರದೇಶದಲ್ಲಿ (Arunachal pradesh) ಕೂಡ ಇಂದು ಮೊದಲ ಓಮೈಕ್ರಾನ್ ಪ್ರಕರಣ ದಾಖಲಾಗಿದೆ


  ಬೂಸ್ಟರ್ ಡೋಸ್ ಅಗತ್ಯ
  ಓಮೈಕ್ರಾನ ಸೋಂಕು ದೇಶದಲ್ಲಿ ಎಚ್ಚುತ್ತಿರುವ ಕುರಿತು ಮಾತನಾಡಿರುವ ILBS ನಿರ್ದೇಶಕ ಡಾ ಎಸ್ ಕೆ ಸರಿನ್, ದೇಶದ ಜನರಿಗೆ ಬೂಸ್ಟರ್ ಅತ್ಯಗತ್ಯ ಎಂದಿದ್ದಾರೆ. ಯಾವುದೇ ಲಸಿಕೆಯ ಎರಡು ಡೋಸ್‌ಗಳನ್ನು ಹೊಂದಿರುವಾಗ ನಿಮ್ಮ ರಕ್ಷಣೆಯ ಮಟ್ಟವು ವಿಶೇಷವಾಗಿ 3 ರಿಂದ 6 ತಿಂಗಳ ನಂತರ ಕಡಿಮೆಯಾಗುತ್ತದೆ. ಮೂರನೇ ಡೋಸ್ ಅಥವಾ ಬೂಸ್ಟರ್ ಹೊಂದಿದ್ದರೆ, ತೀವ್ರವಾದ ಸೋಂಕಿಗೆ ಒಳಗಾಗುವ ಸಾಧ್ಯತೆ ಕಡಿಮೆಯಾಗುತ್ತದೆ, ಆಸ್ಪತ್ರೆಗೆ ದಾಖಲಾಗುವುದು ಕಡಿಮೆಯಾಗುತ್ತದೆ. ಓಮೈಕ್ರಾನ್ ಸಂದರ್ಭದಲ್ಲಿ ಪರಿಗಣಿಸಬೇಕಾಗಿದೆ. ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕೆಲಸಗಾರರು ಬೂಸ್ಟರ್ ಅನ್ನು ಪಡೆಯಬೇಕು ಎಂದಿದ್ದಾರೆ.


  ಇದನ್ನು ಓದಿ: ಕೋವಿಡ್ ಲಸಿಕೆ ಪ್ರಮಾಣಪತ್ರದಲ್ಲಿ ಪ್ರಧಾನಿ ಫೋಟೋ ಪ್ರಶ್ನಿಸಿದ ಅರ್ಜಿ ವಜಾಗೊಳಿಸಿದ ಕೇರಳ ಹೈ ಕೋರ್ಟ್​​


  ಪ್ರಬಲ ಡೆಲ್ಟಾ ರೂಪಾಂತರ 


  ಅಮೆರಿಕದ, ಫೆಡರಲ್ ಅಂದಾಜಿನ ಪ್ರಕಾರ, ಹೊಸ ರೂಪಾಂತರವು ಎಲ್ಲಾ ಅನುಕ್ರಮ ಕೋವಿಡ್ ಪ್ರಕರಣಗಳಲ್ಲಿ 73 ಪ್ರತಿಶತವನ್ನು ಹೊಂದಿದೆ, ಕಳೆದ ವಾರ ಸುಮಾರು 3% ರಿಂದ ಏರಿಕೆಯಾಗಿದೆ. ಕಳೆದ ವಾರ ಯುಎಸ್‌ನಲ್ಲಿ ವೈರಸ್‌ನ ಪ್ರಬಲ ರೂಪವಾಗಿದ್ದ ಡೆಲ್ಟಾ ರೂಪಾಂತರವು ಈಗ ಸರಿಸುಮಾರು 27 ಪ್ರತಿಶತ ಅನುಕ್ರಮ ಪ್ರಕರಣಗಳಿಗೆ ಕಡಿಮೆಯಾಗಿದೆ.


  ಇದನ್ನು ಓದಿ: ದೇಶದಲ್ಲಿ 200 ದಾಟಿದ ಓಮೈಕ್ರಾನ್​ ಪ್ರಕರಣ; ಮಹಾರಾಷ್ಟ್ರ-ದೆಹಲಿಯಲ್ಲಿ ಅಧಿಕ ಸೋಂಕು​


  ಓಮೈಕ್ರಾನ್ ರೂಪಾಂತರವು ಡೆಲ್ಟಾ ರೂಪಾಂತರಕ್ಕಿಂತ ವೇಗವಾಗಿ ಹರಡುತ್ತಿದೆ. ಈಗಾಗಲೇ ಲಸಿಕೆ ಹಾಕಿದ ಅಥವಾ ಕೋವಿಡ್‌ನಿಂದ ಚೇತರಿಸಿಕೊಂಡ ಜನರಲ್ಲಿ ಸೋಂಕನ್ನು ಉಂಟುಮಾಡುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.


  ವಿಭಿನ್ನ  ಲಕ್ಷಣ


  ಅಧ್ಯಯನವೊಂದರ ಪ್ರಕಾರ, SARS-CoV-2 ವೈರಸ್‌ನ ವಿಭಿನ್ನ ರೂಪಾಂತರಗಳಿಗೆ COVID-19 ಅನುಭವ ಹೊಂದಿರುವ ರೋಗಿಗಳ ರೋಗಲಕ್ಷಣಗಳ ಕ್ರಮವು ವಿಭಿನ್ನವಾಗಿರುತ್ತದೆ. ಯುಎಸ್‌ನ ದಕ್ಷಿಣ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸಂಶೋಧಕರು ವಿವಿಧ ಭೌಗೋಳಿಕ ಪ್ರದೇಶಗಳ ರೋಗಿಗಳಲ್ಲಿ ಅಥವಾ ವಿವಿಧ ರೋಗಿಗಳ ಗುಣಲಕ್ಷಣಗಳೊಂದಿಗೆ COVID-19 ರೋಗಲಕ್ಷಣಗಳ ಕ್ರಮವು ವಿಭಿನ್ನವಾಗಿದೆಯೇ ಎಂದು ತಿಳಿಯಲು ಮುಂದಾಗಿದ್ದಾರೆ.

  Published by:Seema R
  First published: