ಗೃಹ ಬಂಧನ ಪ್ರಶ್ನಿಸಿ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ ಓಮರ್​ ಅಬ್ದುಲ್ಲಾ ಸಹೋದರಿ

ಒಮರ್​ ಅವರ ಗೃಹ ಬಂಧನ ಪ್ರಶ್ನಿಸಿ ಹೇಬಿಯಸ್​ ಕಾರ್ಪಸ್​ ಅರ್ಜಿ ಸಲ್ಲಿಸಲಾಗಿದೆ. ಈ ಅರ್ಜಿಯನ್ನು ಈ ವಾರದೊಳಗೆ ಆಲಿಸುವಂತೆ ಕೇಳಲಾಗಿದ್ದು, ಸುಪ್ರೀಂ ಕೋರ್ಟ್​ ಕೂಡ ಈ ಮನವಿಗೆ ಸ್ಪಂದಿಸಿದೆ ಎಂದು ಕಾಂಗ್ರೆಸ್​ ನಾಯಕ ಹಾಗೂ ಹಿರಿಯ ವಕೀಲ ಕಪಿಲ್​ ಸಿಬಲ್ ತಿಳಿಸಿದ್ದಾರೆ

ಒಮರ್​ ಅಬ್ದುಲ್ಲಾ

ಒಮರ್​ ಅಬ್ದುಲ್ಲಾ

  • Share this:
ನವದೆಹಲಿ (ಫೆ.10): ಕಳೆದ ಹಲವು ತಿಂಗಳಿನಿಂದ ಜಮ್ಮು ಕಾಶ್ಮೀರ ಮಾಜಿ ಸಿಎಂ ಒಮರ್​ ಅಬ್ದುಲ್ಲಾ ಗೃಹ ಬಂಧನದಲ್ಲಿರಿಸಿರುವ ಕ್ರಮ ಪ್ರಶ್ನಿಸಿ ಅವರ ಸಹೋದರಿ ಸುಪ್ರೀಂ ಕೋರ್ಟ್​ನಲ್ಲಿ ಹೊಸ ಅರ್ಜಿ ಸಲ್ಲಿಸಿದ್ದಾರೆ. ಸಾರ್ವಜನಿಕ ಸುರಕ್ಷಾ ಕಾಯ್ದೆ ಅಡಿ ಅವರು ಈ ಅರ್ಜಿ ಸಲ್ಲಿಸಿದ್ದು, ಅವರನ್ನು ಬಂಧ ಮುಕ್ತಗೊಳಿಸುವಂತೆ ಕೋರಿದ್ದಾರೆ.

ಒಮರ್​ ಅವರ ಗೃಹ ಬಂಧನ ಪ್ರಶ್ನಿಸಿ ಹೇಬಿಯಸ್​ ಕಾರ್ಪಸ್​ ಅರ್ಜಿ ಸಲ್ಲಿಸಲಾಗಿದೆ. ಈ ಅರ್ಜಿಯನ್ನು ಈ ವಾರದೊಳಗೆ ಆಲಿಸುವಂತೆ ಕೇಳಲಾಗಿದ್ದು, ಸುಪ್ರೀಂ ಕೋರ್ಟ್​ ಕೂಡ ಈ ಮನವಿಗೆ ಸ್ಪಂದಿಸಿದೆ ಎಂದು ಕಾಂಗ್ರೆಸ್​ ನಾಯಕ ಹಾಗೂ ಹಿರಿಯ ವಕೀಲ ಕಪಿಲ್​ ಸಿಬಲ್ ತಿಳಿಸಿದ್ದಾರೆ.

ಇನ್ನು ಅರ್ಜಿ ಸಲ್ಲಿಸಿರುವ ಒಮರ್​ ಸಹೋದರಿ ಸಾರಾ ಅಬ್ಧುಲ್ಲಾ ಪೈಲಟ್​, ಇದು ಅಸಂವಿಧಾನಿಯವಾಗಿದ್ದು, ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ ಎಂದಿದ್ದಾರೆ.

ಇದನ್ನು ಓದಿ: ದೆಹಲಿಯ ಶಾಹಿನ್ ಬಾಗ್ ಸಿಎಎ ವಿರೋಧಿ ಹೋರಾಟ; ಇಂದು ಸುಪ್ರೀಂ ಅಂಗಳದಲ್ಲಿ ಪ್ರತಿಭಟನೆ ತೆರವು ಅರ್ಜಿ ವಿಚಾರಣೆ

ಕೇಂದ್ರ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವಾದ 370ನೇ ವಿಧಿ ರದ್ದು ಮಾಡುವ ಮುನ್ನ ಕಣಿವೆ ರಾಜ್ಯದಲ್ಲಿನ ರಾಜಕೀಯ ನಾಯಕರನ್ನು ಬಂಧನಕ್ಕೆ ಒಳಪಡಿಸಲಾಗಿತ್ತು. ಯಾವುದೇ ಆರೋಪವಿಲ್ಲದೇ ಕಳೆದ ಆಗಸ್ಟ್​ 5ರಂದು ಒಮರ್​ ಅಬ್ಧಲ್ಲಾ ಅವರನ್ನು ಗೃಹ ಬಂಧನಕ್ಕೆ ಒಳಪಡಿಸಲಾಗಿತ್ತು.
First published: