Nita Ambani: ಒಲಿಂಪಿಸಂನ ಪ್ರಮುಖ ಮೌಲ್ಯಗಳನ್ನು ಹೆಚ್ಚಿಸಲು ಹೊಸ ಹೆಜ್ಜೆ - ನೀತಾ ಅಂಬಾನಿ

Olympic Values Education Programme: ಒಡಿಶಾ ರಿಲಯನ್ಸ್ ಫೌಂಡೇಶನ್ ಅಥ್ಲೆಟಿಕ್ಸ್ ಹೈ-ಪರ್ಫಾರ್ಮೆನ್ಸ್ ಸೆಂಟರ್‌ ಕೆಲಸ ನಿರ್ವಹಿಸಲು, ರಿಲಯನ್ಸ್ ಫೌಂಡೇಶನ್ ಒಡಿಶಾ ಸರ್ಕಾರದೊಂದಿಗೆ ಸಹಯೋಗವನ್ನು ಹೊಂದಿದೆ.

ಶ್ರೀಮತಿ ನೀತಾ ಅಂಬಾನಿ

ಶ್ರೀಮತಿ ನೀತಾ ಅಂಬಾನಿ

  • Share this:
IOC ಸದಸ್ಯೆ, ಶ್ರೀಮತಿ ನೀತಾ ಅಂಬಾನಿ (Nita Ambani) ಅವರು ಒಡಿಶಾದಲ್ಲಿ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (International Olympic Committee) ಆರಂಭಿಸುತ್ತಿರುವ ಭಾರತದ ಮೊದಲ 'ಒಲಿಂಪಿಕ್ ಮೌಲ್ಯಗಳ ಶಿಕ್ಷಣ ಕಾರ್ಯಕ್ರಮ' (Olympic Values Education Programme) ವನ್ನು ಶ್ಲಾಘಿಸಿದರು. OVEP ಒಲಿಂಪಿಸಂನ ಪ್ರಮುಖ ಮೌಲ್ಯಗಳನ್ನು ಹುಟ್ಟುಹಾಕುವಲ್ಲಿ ಶಿಕ್ಷಣ ಮತ್ತು ಕ್ರೀಡೆಯ ಅವಳಿ ಶಕ್ತಿಗಳನ್ನು ಸಂಯೋಜಿಸುತ್ತದೆ ಎಂದು ಅಂಬಾನಿ ಒತ್ತಿ ಹೇಳಿದ್ದಾರೆ. ಭಾರತವು ಉತ್ತಮ ಅವಕಾಶಗಳ ದೇಶ ಎಂದು ಐಒಸಿ ಸದಸ್ಯೆ ನೀತಾ ಅಂಬಾನಿ ಹೇಳಿದ್ದು "ನಮ್ಮ ಶಾಲೆಗಳಲ್ಲಿ ನಾವು 250 ಮಿಲಿಯನ್ ಮಕ್ಕಳನ್ನು ಹೊಂದಿದ್ದೇವೆ, ಅದು ಪ್ರತಿಭೆ ಮತ್ತು ಸಾಮರ್ಥ್ಯದಿಂದ ತುಂಬಿದೆ. ಅವರು ನಾಳೆಯ ಚಾಂಪಿಯನ್‌ಗಳು, ನಮ್ಮ ರಾಷ್ಟ್ರದ ಭವಿಷ್ಯ ಎಂದಿದ್ದಾರೆ.

IOC ಯು OVEP ಯನ್ನು ಯುವಜನರಿಗೆ ಗೌರವ ಮತ್ತು ಸ್ನೇಹದ ತತ್ವಗಳ ಕುರಿತು ಶಿಕ್ಷಣ ನೀಡಲು ರಚಿಸಿದೆ. ಯುವಕರು ಸಕ್ರಿಯ, ಆರೋಗ್ಯಕರ ಮತ್ತು ಜವಾಬ್ದಾರಿಯುತ ನಾಗರಿಕರಾಗಲು ಸಹಾಯ ಮಾಡಲು ಈ ಮೌಲ್ಯಾಧಾರಿತ ಶಿಕ್ಷಣವನ್ನು ನೀಡುವುದು ಕಾರ್ಯಕ್ರಮದ ಗುರಿಯಾಗಿದೆ.

ಈ ವರ್ಷದ ಆರಂಭದಲ್ಲಿ 2023 ರಲ್ಲಿ IOC ಅಧಿವೇಶನವನ್ನು ಆಯೋಜಿಸುವ ಭಾರತದ ಪ್ರಯತ್ನವನ್ನು ಬೆಂಬಲಿಸುವ ತಂಡದ ನಾಯಕತ್ವವನ್ನು ಅಂಬಾನಿ ಅವರು ವಹಿಸಿಕಂಡಿದ್ದರು ಮತ್ತು 40 ವರ್ಷಗಳ ಕಾಯುವಿಕೆಯ ನಂತರ ಭಾರತಕ್ಕೆ ಸರ್ವಾನುಮತದಿಂದ ಹಕ್ಕುಗಳನ್ನು ನೀಡಲಾಯಿತು ಎಂಬುದು ಸಹ ಇಲ್ಲಿ ಮುಖ್ಯವಾಗುತ್ತದೆ.

ಪ್ರಪಂಚದಲ್ಲಿ ಬಹಳ ಕಡಿಮೆ ಸಂಖ್ಯೆಯ ಮಕ್ಕಳು ಮಾತ್ರ ಒಲಿಂಪಿಯನ್ ಆಗಬಹುದು, ಆದರೆ ಪ್ರತಿ ಮಗುವನ್ನು ಒಲಿಂಪಿಸಂನ ಆದರ್ಶಗಳನ್ನು ತಿಳಿದುಕೊಳ್ಳಬಹುದು. ಅದು OVEP ಯ ಧ್ಯೇಯವಾಗಿದೆ, ಹಾಗೆಯೇ ಇದು ನಿಜಕ್ಕೂ ಭಾರತಕ್ಕೆ ಒಂದು ದೊಡ್ಡ ಅವಕಾಶವಾಗಿದೆ. ಮುಂದಿನ ವರ್ಷ ಮುಂಬೈನಲ್ಲಿ IOC ಸೆಷನ್ 2023 ಅನ್ನು ಆಯೋಜಿಸಲು ನಾವು ತಯಾರಿ ನಡೆಸುತ್ತಿದ್ದು, ನಮ್ಮ ದೇಶದಲ್ಲಿ ಒಲಿಂಪಿಕ್ ಆಂದೋಲನವನ್ನು ಮತ್ತಷ್ಟು ಬಲಪಡಿಸಲು ನಾನು ಎದುರು ನೋಡುತ್ತಿದ್ದೇನೆ ಎಂದು ನೀತಾ ಅಂಬಾನಿ ವಿವರಿಸಿದ್ದಾರೆ.

ನೀತಾ ಅಂಬಾನಿ OVEP ಸೇರಿದಂತೆ ಹಲವು ಒಲಂಪಿಕ್ ಮೂವ್‌ಮೆಂಟ್ ಸಂಬಂಧಿತ ಸಮಿತಿಗಳಲ್ಲಿ ಭಾಗಿಯಾಗಿದ್ದು, ಇದು ಒಲಿಂಪಿಕ್ ಶಿಕ್ಷಣದ ಅಡಿಯಲ್ಲಿ ಬರುತ್ತದೆ ಮತ್ತು ಯುವಕರಲ್ಲಿ ಮೂಲಭೂತ ಒಲಿಂಪಿಕ್ ಬಗ್ಗೆ ಆದರ್ಶಗಳನ್ನು ಹುಟ್ಟುಹಾಕಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ರೋಗಿಯೊಬ್ಬರ ಮೂತ್ರಪಿಂಡದಿಂದ 206 ಕಲ್ಲುಗಳನ್ನು ಹೊರತೆಗೆದ ವೈದ್ಯರ ತಂಡ

ಭಾರತದಲ್ಲಿನ ಐಒಸಿ ಅಧಿವೇಶನವು ಹಲವಾರು ಅದ್ಭುತ ಉದ್ದೇಶಗಳನ್ನು ಹೊಂದಿದ್ದು, ಯುವಕರಲ್ಲಿ ಕ್ರೀಡೆಯ ಬಗ್ಗೆ ಆಸಕ್ತಿ ಹೆಚ್ಚಿಸಲು ಹಾಗೂ ಅವರಿಗೆ ಎಲ್ಲಾ ಸೌಲಭ್ಯ ನೀಡುವ ಉದ್ದೇಶ ಹೊಂದಿದೆ. ಅಲ್ಲದೇ ಇದು ವಿಶ್ವದಾದ್ಯಂತ ಭಾರತದ ಗೌರ ಹೆಚ್ಚಿಸಲು ಸಹಕಾರಿಯಾಗುತ್ತದೆ ಎಂದು ನೀತಾ ಅಂಬಾನಿ ಅಭಿಪ್ರಾಯಪಟ್ಟಿದ್ದಾರೆ.

OVEP ಆಧಾರಿತ ಯೋಜನೆಗಳು ಮತ್ತು ಚಟುವಟಿಕೆಗಳು ಜಡ ಜೀವನಶೈಲಿ, ಏಕಾಗ್ರತೆಯ ಕೊರತೆ ಮತ್ತು ಮಕ್ಕಳು ಶಾಲೆಯಿಂದ ಹೊರಗುಳಿಯುವುದು ಸೇರಿದಂತೆ ಜಾಗತಿಕ ಸವಾಲುಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ.

ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ಐಒಸಿ ಸದಸ್ಯೆ ಶ್ರೀಮತಿ ನೀತಾ ಅಂಬಾನಿ, ಐಒಸಿ ಶಿಕ್ಷಣ ಆಯೋಗದ ಅಧ್ಯಕ್ಷ ಮೈಕೆಲಾ ಕೊಜುವಾಂಗ್ಕೊ ಜಾವೊರ್ಸ್ಕಿ, ಒಲಿಂಪಿಯನ್ ಮತ್ತು ಐಒಸಿ ಅಥ್ಲೀಟ್‌ಗಳ ಆಯೋಗದ ಸದಸ್ಯ ಅಭಿನವ್ ಬಿಂದ್ರಾ ಸೇರಿದಂತೆ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (ಐಒಎ) ಅಧ್ಯಕ್ಷ ನರೀಂದರ್ ಬಾತ್ರಾ ಸಮ್ಮುಖದಲ್ಲಿ OVEP ಅಧಿಕೃತವಾಗಿ ಪ್ರಾರಂಭವಾಗಿದೆ.

ಇದನ್ನೂ ಓದಿ: ವಿಸ್ಮಯ ಆತ್ಮಹತ್ಯೆ ಪ್ರಕರಣ; ಪತಿ ಕಿರಣ್‌ಗೆ ಹತ್ತು ವರ್ಷ ಜೈಲು ಶಿಕ್ಷೆ

ಒಡಿಶಾ ರಿಲಯನ್ಸ್ ಫೌಂಡೇಶನ್ ಅಥ್ಲೆಟಿಕ್ಸ್ ಹೈ-ಪರ್ಫಾರ್ಮೆನ್ಸ್ ಸೆಂಟರ್‌ ಕೆಲಸ ನಿರ್ವಹಿಸಲು, ರಿಲಯನ್ಸ್ ಫೌಂಡೇಶನ್ ಒಡಿಶಾ ಸರ್ಕಾರದೊಂದಿಗೆ ಸಹಯೋಗವನ್ನು ಹೊಂದಿದೆ.
Published by:Sandhya M
First published: