• Home
 • »
 • News
 • »
 • national-international
 • »
 • Virus: ಹಿಮನದಿಗಳಲ್ಲಿ 15,000 ವರ್ಷ ಹಳೆಯ ಪುರಾತನ ವೈರಸ್‌ ಪತ್ತೆ!

Virus: ಹಿಮನದಿಗಳಲ್ಲಿ 15,000 ವರ್ಷ ಹಳೆಯ ಪುರಾತನ ವೈರಸ್‌ ಪತ್ತೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೆಲವೊಂದು ವೈರಸ್ ಹಾಗೂ ಸೂಕ್ಷ್ಮಾಣು ಜೀವಿಗಳು ವಿಜ್ಞಾನ ಲೋಕಕ್ಕೆ ಅಪರಿಚಿತವಾಗಿದ್ದು ಇವುಗಳ ಕುರಿತು ಕೂಲಂಕುಷ ಅಧ್ಯಯನ ನಡೆಸಬೇಕಾಗಿದೆ ಎಂದು ಅಧ್ಯಯನಕಾರರು ತಿಳಿಸಿದ್ದಾರೆ.

 • Share this:

  ಟಿಬೆಟಿಯನ್ ಹಿಮನದಿಯ ಮಂಜುಗಡ್ಡೆಯ ಮಾದರಿಗಳು ಸುಮಾರು 15,000 ವರ್ಷಗಳಷ್ಟು ಹಳೆಯದಾದ ವೈರಸ್‌ಗಳು ಮತ್ತು ಇತರ ಸೂಕ್ಷ್ಮಜೀವಿಗಳ ಸಂಗ್ರಹವನ್ನು (Old Viruses) ಹೊಂದಿದೆ ಎಂಬುದು ವರದಿಯಾಗಿದೆ. ಧ್ರುವ ಪ್ರದೇಶಗಳಲ್ಲಿ ಮಣ್ಣಿನ ದಪ್ಪನೆಯ ಮೇಲ್ಮೈ ಪದರ ವರ್ಷಪೂರ್ತಿ ಹೆಪ್ಪುಗಟ್ಟಿರುತ್ತದೆ ಇದನ್ನು ಪರ್ಮಾಫ್ರಾಸ್ಟ್ ಎಂದು ಕರೆಯಲಾಗಿದ್ದು, ಇದು ಕರಗುತ್ತಿದ್ದಂತೆ ಪ್ರಾಚೀನ ಜೀವಿಗಳು (Melting Tibetan Glaciers) ಇಲ್ಲಿಂದ ಹೊರಬರುತ್ತಿದ್ದು, ಭಯಾನಕ ಚಲನಚಿತ್ರದ ರೀತಿಯಲ್ಲಿ ಕಂಡುಬಂದಿದೆ ಎಂಬುದಾಗಿ ವರದಿ ಬಣ್ಣಿಸಿದೆ.


  ಹೊಸದಾಗಿ ಪತ್ತೆಯಾದ ವೈರಸ್ ಹಾಗೂ ಸೂಕ್ಷ್ಮಾಣು ಜೀವಿಗಳು
  ಈ ವರದಿಯ ಕುರಿತು ಮೈಕ್ರೋಬಯೋಮ್ ಜರ್ನಲ್‌ನಲ್ಲಿ ಲೇಖನಗಳು ಪ್ರಕಟವಾಗಿದ್ದು ಈ ವೈರಸ್‌ಗಳು ಸಂಶೋಧಕರಿಗೆ ಗೊತ್ತಿಲ್ಲದೇ ಇರುವ ಸೂಕ್ಷ್ಮಜೀವಿಗಳಾಗಿವೆ ಎಂಬುದು ಅಧ್ಯಯನಗಳಿಂದ ತಿಳಿದಿದೆ.


  ವಿವಿಧ ಪ್ರಾಣಿಗಳ ಅವಶೇಷ ಪತ್ತೆ
  ಅಳಿವಿನಂಚಿನಲ್ಲಿರುವ ಉಣ್ಣೆಯಿಂದ ಆವೃತವಾದ ಖಡ್ಗಮೃಗದಂತಹ ಮೆಗಾಫೌನಾದಂತಹ ನಿರ್ದಿಷ್ಟ ಪ್ರದೇಶದಿಂದ ಸಂರಕ್ಷಿಸಲಾದ ಜೀವಿಗಳು, 40,000 ವರ್ಷಗಳಷ್ಟು ಹಳೆಯದಾದ ದೈತ್ಯ ತೋಳದ ಅವಶೇಷಗಳು, 750,000 ವರ್ಷಗಳಷ್ಟು ಹಳೆಯದಾದ ಬ್ಯಾಕ್ಟೀರಿಯಾಗಳು ಪತ್ತೆಯಾಗಿವೆ.


  ಪ್ರಯೋಗಾಲಯದ ಉಷ್ಣತೆಯಲ್ಲಿ ಜೀವ ಪಡೆದುಕೊಂಡ ಶತಮಾನಗಳಷ್ಟು ಪುರಾತನ ಪಾಚಿ ಹಾಗೆಯೇ ನಂಬಲಾಗದಷ್ಟು, ಚಿಕ್ಕ 42,000 ವರ್ಷ ವಯಸ್ಸಿನ ದುಂಡಾಣು ಹುಳುಗಳು ಜೀವ ಪಡೆದುಕೊಂಡಿವೆ.


  ಹಿಮನದಿಯಲ್ಲಿ ವೈರಸ್ ರೂಪುಗೊಂಡಿದ್ದು ಹೇಗೆ?
  ಭೂಮಿಯಿಂದ ಅದೆಷ್ಟೋ ದೀರ್ಘ ಗತಕಾಲದಲ್ಲಿ ಅಸ್ತಿತ್ವದಲ್ಲಿದ್ದ ಈ ಜೀವಿಗಳ ಆಕರ್ಷಕ ನೋಟವು ಅವು ವಾಸಿಸುತ್ತಿದ್ದ ಪರಿಸರದ ವಿವರಗಳನ್ನು ಒಳಗೊಂಡಂತೆ ಪುರಾತನ ಜೀವ ವ್ಯವಸ್ಥೆಗಳ ಇತಿಹಾಸವನ್ನು ಬಹಿರಂಗಪಡಿಸುತ್ತಿವೆ ಎಂದು ಓಹಿಯೋ ಸ್ಟೇಟ್ ಯೂನಿವರ್ಸಿಟಿಯ ಮೈಕ್ರೋಬಯಾಲಜಿಸ್ಟ್ ಅಧ್ಯಯನ ಲೇಖಕ ಝಿ-ಪಿಂಗ್ ಜಾಂಗ್ ತಿಳಿಸಿದ್ದಾರೆ.


  ಮಂಜಿನ ತುಂಡುಗಳೂ ಇವೆ
  ಹಿಮನದಿಗಳು ಕ್ರಮೇಣ ರೂಪುಗೊಂಡಿದ್ದು ಧೂಳು ಮತ್ತು ಅನಿಲಗಳ ಜೊತೆಗೆ, ಅನೇಕ ವೈರಸ್‌ಗಳು ಕೂಡ ಆ ಮಂಜುಗಡ್ಡೆಯಲ್ಲಿ ಸಂಗ್ರಹವಾಗಿವೆ ಎಂದು ಪಿಂಗ್ ಜಾಂಗ್ ಅಭಿಪ್ರಾಯವಾಗಿದೆ. ಹಿಮನದಿಯನ್ನು ಗುಲಿಯಾ ಐಸ್ ಕ್ಯಾಪ್ ಎಂದು ಕರೆಯಲಾಗುತ್ತದೆ. ಸಂಶೋಧಕರು 2015 ರಲ್ಲಿ ಅದರ 22,000-ಅಡಿ ಶಿಖರದಿಂದ ಮಂಜಿನ ತುಂಡುಗಳನ್ನು ಸಂಗ್ರಹಿಸಿದರು.


  ಹಿಮನದಿಯ ಕರಗುವಿಕೆಯು ಪುರಾತನ ಸೂಕ್ಷ್ಮಜೀವಿಗಳು ಹಾಗೂ ವೈರಸ್‌ಗಳ ನಷ್ಟಕ್ಕೆ ಕಾರಣವಾಗಿರುವುದು ಮಾತ್ರವಲ್ಲದೆ ಭವಿಷ್ಯದಲ್ಲಿ ಅವುಗಳನ್ನು ಪರಿಸರಕ್ಕೆ ಬಿಡುಗಡೆಗೊಳಿಸಲು ಕಾರಣವಾಗಿವೆ ಎಂಬುದು ಪಿಂಗ್ ಅಭಿಪ್ರಾಯವಾಗಿದೆ.


  ವೈರಸ್‌ಗಳಿಂದ ಉಂಟಾಗುವ ಹಾನಿಯನ್ನು ತಡೆಯುವುದು ಹೇಗೆ?
  ಮೆಟಾಜೆನೊಮಿಕ್ಸ್ ತಂತ್ರಗಳು ಹಾಗೂ ಮಂಜಿನ ತುಂಡುಗಳನ್ನು ಕ್ರಿಮಿನಾಶಕವಾಗಿಡಲು ಸಹಾಯಕಾಗಿರುವ ಹೊಸ ವಿಧಾನಗಳು ಈ ದಿಸೆಯಲ್ಲಿ ಕಾರ್ಯನಿರ್ವಹಿಸಲಿದ್ದು ಇದರಿಂದ ಪರಿಸರಕ್ಕೆ ಉಂಟಾಗುವ ಹಾನಿಯನ್ನು ತಡೆಯಬಹುದು ಜೊತೆಗೆ ಮಂಜಿನೊಳಗೆ ನಿಖರವಾಗಿ ಏನಿದೆ ಎಂಬುದನ್ನು ಕುರಿತು ತಿಳಿದುಕೊಳ್ಳಲು ಸಹಕಾರಿಯಾಗಿದೆ ಎಂದು ತಿಳಿಸಿದ್ದಾರೆ.


  ಇದನ್ನೂ ಓದಿ: Wife Husband: ವಿಮೆ ಆಸೆಗೆ ಗರ್ಭಿಣಿ ಹೆಂಡತಿಯನ್ನು ಸಾವಿರ ಅಡಿ ಪ್ರಪಾತಕ್ಕೆ ತಳ್ಳಿ ಕೊಂದ ಗಂಡ; 30 ವರ್ಷ ಶಿಕ್ಷೆ


  ಮಾಲಿನ್ಯವನ್ನು ತಪ್ಪಿಸಲು ಅಧ್ಯಯನವು ಬಳಸಿದ ವಿಧಾನದಲ್ಲಿ ಮಂಜುಗಡ್ಡೆಯ ಹೊರಪದರವನ್ನು ತೆಗೆದುಹಾಕಿ ನಂತರ ಗಡ್ಡೆಯ ಮೇಲ್ಮೈಯನ್ನು ಕ್ರಿಮಿನಾಶಕಗೊಳಿಸಲು ಆಲ್ಕೋಹಾಲ್ ಹಾಗೂ ನೀರಿನ ಮಿಶ್ರಣವನ್ನು ಬಳಸಿ ಸ್ವಚ್ಛಗೊಳಿಸುವುದನ್ನು ಒಳಗೊಂಡಿದೆ.


  ಆನುವಂಶಿಕ ವಸ್ತುಗಳು ಪತ್ತೆ
  ತಂಡವು 1,017-ಅಡಿ ಆಳದ ಮಂಜುಗಡ್ಡೆಗಳನ್ನು ವಿಶ್ಲೇಷಿಸಿದಾಗ, ಸಂಶೋಧಕರು ಸುಮಾರು 15,000 ವರ್ಷಗಳಿಂದ ಹೆಪ್ಪುಗಟ್ಟಿದ 33 ವಿಭಿನ್ನ ವೈರಸ್‌ಗಳಿಂದ ಆನುವಂಶಿಕ ವಸ್ತುಗಳನ್ನು ಪತ್ತೆಮಾಡಿದ್ದು, ಅವುಗಳಲ್ಲಿ 28 ವೈರಸ್‌ಗಳು ವಿಜ್ಞಾನಕ್ಕೆ ಹೊಸದು ಎಂದು ಇನ್ನೊಬ್ಬ ಅಧ್ಯಯನಕಾರ ಜಾಕ್ ಗೈ ವರದಿ ಮಾಡಿದ್ದಾರೆ.


  ಕೂಲಂಕುಷ ಅಧ್ಯಯನ
  ಈ ವೈರಸ್‌ಗಳು ಪರಿಸರದಲ್ಲಿ ಅಭಿವೃದ್ಧಿಹೊಂದುವ ವೈರಸ್‌ಗಳಾಗಿವೆ ಎಂದು ಓಹಿಯೋ ಸ್ಟೇಟ್ ಯೂನಿವರ್ಸಿಟಿ ಮೈಕ್ರೋಬಯಾಲಜಿಸ್ಟ್ ಮ್ಯಾಥ್ಯೂ ತಿಳಿಸಿದ್ದಾರೆ. ವೈರಸ್ ಅತ್ಯಂತ ತೀವ್ರವಾದ ಪರಿಸರ ವ್ಯವಸ್ಥೆಗಳಲ್ಲಿ ಕೂಡ ಬದುಕುಳಿಯಬಹುದು ಎಂಬುದಕ್ಕೆ ಇವುಗಳು ಸಾಕ್ಷಿಯಾಗಿವೆ ಎಂದು ಮ್ಯಾಥ್ಯೂ ತಿಳಿಸಿದ್ದಾರೆ.


  ಸಸ್ಯ ಮತ್ತು ಮಣ್ಣಿನ ಆವಾಸ ಸ್ಥಾನಗಳಲ್ಲಿ ಮೆಥಿಲೋಬ್ಯಾಕ್ಟೀರಿಯಂ ತಳಿಗಳಲ್ಲಿ ಕಂಡುಬರುವ ವೈರಸ್‌ಗಳಿಗೆ ಹೆಚ್ಚು ಸಂಬಂಧಿಸಿವೆ ಎಂಬುದು ಮ್ಯಾಥ್ಯೂ ಹೇಳಿಕೆಯಾಗಿದೆ. ಈ ಹೆಪ್ಪುಗಟ್ಟಿದ ವೈರಸ್‌ಗಳು ಮಣ್ಣು ಅಥವಾ ಸಸ್ಯಗಳಿಂದ ಹುಟ್ಟಿಕೊಳ್ಳುತ್ತವೆ. ಅವುಗಳ ಆತಿಥೇಯರಿಗೆ ಪೋಷಕಾಂಶಗಳ ಸ್ವಾಧೀನವನ್ನು ಸುಲಭಗೊಳಿಸುತ್ತವೆ ಎಂದು ತಂಡವು ತೀರ್ಮಾನಿಸಿದೆ.


  ಇದನ್ನೂ ಓದಿ: West Bengal: ಹೆಣ್ಮಕ್ಕಳಿಗೆ ತ್ರಿಶೂಲ ಇಟ್ಟುಕೊಳ್ಳಲು ಸಲಹೆ ಕೊಟ್ಟ ಬಿಜೆಪಿ ನಾಯಕ!


  ಕೋವಿಡ್-19 ಸಾಂಕ್ರಾಮಿಕದ ನಂತರ ಪ್ರಾಚೀನ ವೈರಸ್‌ಗಳ ಭೀತಿಯು ಚಿಂತಾಜನಕವಾಗಿದ್ದು ಕರಗುವ ಮಂಜುಗಡ್ಡೆಯು ಮೀಥೇನ್ ಮತ್ತು ಇಂಗಾಲದ ಬೃಹತ್ ನಿಕ್ಷೇಪಗಳನ್ನು ಬಿಡುಗಡೆ ಮಾಡುವ ದೊಡ್ಡ ಅಪಾಯವಿದೆ ಎಂಬುದಾಗಿ ಅಧ್ಯಯನಕಾರರು ಸೂಚಿಸಿದ್ದಾರೆ.


  ಕೆಲವೊಂದು ವೈರಸ್ ಹಾಗೂ ಸೂಕ್ಷ್ಮಾಣು ಜೀವಿಗಳು ವಿಜ್ಞಾನ ಲೋಕಕ್ಕೆ ಅಪರಿಚಿತವಾಗಿದ್ದು ಇವುಗಳ ಕುರಿತು ಕೂಲಂಕುಷ ಅಧ್ಯಯನ ನಡೆಸಬೇಕಾಗಿದೆ ಎಂದು ಅಧ್ಯಯನಕಾರರು ತಿಳಿಸಿದ್ದಾರೆ.

  Published by:ಗುರುಗಣೇಶ ಡಬ್ಗುಳಿ
  First published: