Viral Video: ಮನೆ ಗೋಡೆಗೆ ಕಪ್ಪು ಬಣ್ಣ ಬಳಿದರೆ ಅಂತರಾಷ್ಟ್ರೀಯ ಡ್ರೋನ್‌ಗಳಿಂದ ಅಪಾಯ! ಆ ಹುಡುಗಿ ಹೇಳಿದ್ದು ನಿಜಾನಾ?

Viral Video: ಟ್ಯಾಕ್ಸಿ ಚಾಲಕನೊಬ್ಬನ ಮೇಲೆ ಯುವತಿಯೊಬ್ಬಳು ಹಲ್ಲೆ ಮಾಡಿ ತಾನೇ ರಂಪ ರಾದ್ಧಾಂತ ಮಾಡಿದ್ದು ನೆನಪಿದೆಯಾ? ಅದೇ ಹುಡುಗಿಯ ಹಳೇ ವಿಡಿಯೋ ಒಂದು ಹೊಸದಾಗಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅವಳು ಕಿರುಚಿರುವ ಪರಿ ನೋಡಿದ್ರೆ ಅಬ್ಬಬ್ಬಾ ಎನಿಸೋದು ಖಂಡಿತಾ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

ಲಕ್ನೋದ ಅಡ್ಡಹಾದಿಯಲ್ಲಿ ಟ್ಯಾಕ್ಸಿ ಚಾಲಕನ ಮೇಲೆ ಹಲ್ಲೆ ಮಾಡಿದ ಹುಡುಗಿಯ ವಿಡಿಯೋ ಇಂಟರ್‌ನೆಟ್‌ನಲ್ಲಿ ಭಾರಿ ಸುದ್ದಿ ಮಾಡಿತು ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಕೆಲವು ದಿನಗಳ ನಂತರ,ಅದೇ ಹುಡುಗಿಯ ಬಗ್ಗೆ ಇನ್ನೊಂದು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ ಹಾಗೂ ಭಾರಿ ಸುದ್ದಿ ಮಾಡುತ್ತಿದೆ. ವಿಡಿಯೋದಲ್ಲಿ ಆಕೆ ನೆರೆಹೊರೆಯವರ ಮೇಲೆ ಕೋಪದಿಂದ ಹಲ್ಲೆ ನಡೆಸುವುದನ್ನು ಕಾಣಬಹುದು.ಅ ಹುಡುಗಿಯ ಹೆಸರು ಪ್ರಿಯದರ್ಶಿನಿ ನಾರಾಯಣ್ ಯಾದವ್. ಇತ್ತೀಚಿನ ವೀಡಿಯೊದಲ್ಲಿ, ಪ್ರಿಯದರ್ಶಿನಿ ನಾರಾಯಣ್ ಯಾದವ್ ಅವರು ನೆರೆಹೊರೆಯವರಿಗೆ ತಮ್ಮ ಮನೆಗಳ ಗೋಡೆಗಳಿಗೆ ಬಳಿದ ಕಪ್ಪು ಪೇಂಟ್ ತೆಗೆದು ಬೇರೆ ಬಣ್ಣ ಬಳಿಯುವಂತೆ ಆದೇಶಿಸಿ ಕಿರುಚುವುದನ್ನು ನೀವು ಕೇಳಬಹುದು, ಏಕೆಂದರೆ ಕಪ್ಪು ಬಣ್ಣವು "ಅಂತರಾಷ್ಟ್ರೀಯ ಡ್ರೋನ್‌ಗಳನ್ನು" ಆಕರ್ಷಿಸುತ್ತದೆ, ಇದು ಹತ್ತಿರದ ವಾಸಿಸುವ ಜನರಿಗೆ ಅಪಾಯಕಾರಿಯಾಗಿದೆ ಎಂಬುವುದು" ಅವರ ವಾದ.


ಟ್ಯಾಕ್ಸಿ ಚಾಲಕರನ್ನು ಪದೇ ಪದೇ ಹೊಡೆಯುವ ಆಕೆಯ ಒಂದು ಈಗಿನ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಜನರ ಭಾರೀ ಕೋಪಕ್ಕೆ ಕಾರಣವಾಗಿದೆ.ಆದ್ದರಿಂದ ಹಲವು ಜನರು ಆಕೆಯ ಒಂದು ಹಳೆಯ ವಿಡಿಯೋವನ್ನು ಮತ್ತೆ ಪೋಸ್ಟ್ ಮಾಡಿದ್ದಾರೆ. ಅ ಹಳೆಯ ವಿಡಿಯೋದಲ್ಲಿ ಇನ್ಹೆ ಬೊಲಿಯೆ ಕಿ ಯೆ ವಾಲ್ ಕೋ ಆ್ಯಂಟಿ- ಬ್ಯ್ಲಾಕ್ ಕರೆ,  ಕ್ಯೂಂಕಿ ಇಂಕಿ ವಜಾಹ್‌ಸೆ ಯಹಾನ್ ಇಂಟರ್ನ್‌ನ್ಯಾಶನಲ್ ಡ್ರೋನ್ ಘೂಮ್ತೆ ಹೈ, ಔರ್ ಪೂರಿ ಕಾಲೋನಿ ಕಿ ಜಾನ್ ಖತ್ರೆ ಮೇ ಹೈ "(ಈ ಪ್ರದೇಶದಲ್ಲಿ ಡ್ರೋನ್‌ಗಳು ನಿರಂತರವಾಗಿ ಹಾರುವುದು ನಮ್ಮ ಜೀವಕ್ಕೆ ಅಪಾಯವನ್ನುಂಟುಮಾಡುತ್ತದೆ. ಅದಕ್ಕೆ ಗೋಡೆಗೆ ಕಪ್ಪು ಬಣ್ಣದ ಪೇಂಟ್‌ ಒಳ್ಳೆಯದಲ್ಲ ನೀವು ಕಪ್ಪು ಪೇಂಟ್‌ ಮಾಡಿಸಿಬೇಡಿ), ಎಂದು ಆಕೆಯು ನೆರೆಹೊರೆಯವರ ಮೇಲೆ ಅರಚುವ ವೀಡಿಯೊವೊಂದನ್ನು ಬಳಕೆದಾರರು ಹಂಚಿಕೊಂಡಿದ್ದಾರೆ.

ಆಕೆಯ ಕಿರುಚಾಟವನ್ನು ನೋಡಿ ಆಕೆಯನ್ನು ಸಮಾಧಾನಪಡಿಸಿದ, ಒಬ್ಬ ಪೋಲಿಸ್ ಅಧಿಕಾರಿ, "ನೀನು ಮನೆಗೆ ಹೋಗು, ನಾನು ಅವರಿಗೆ ಅರ್ಥ ಮಾಡಿಸುತ್ತೇನೆ ಮತ್ತು ಅದನ್ನು ಅವರಿಂದ ಲಿಖಿತವಾಗಿ ಬರೆಯಿಸಿಕೊಳ್ಳುತ್ತೇನೆ" ಎಂದು ಹೇಳಿದರು.


ಇದನ್ನೂ ಓದಿ: ಅಯ್ಯೋ..! ಫೋಟೋ ಕ್ಲಿಕ್ಕಿಸುವ ಮಂಪರಿನಲ್ಲಿ ಕಾಲು ಜಾರಿ ನೀರಿಗೆ ಬಿದ್ದ ಫೋಟೋಗ್ರಾಫರ್‌!

ಜುಲೈ 30 ರಂದು ಲಕ್ನೋದ ಕೃಷ್ಣ ನಗರ ಪೊಲೀಸ್ ಠಾಣೆಯಲ್ಲಿ ಟ್ಯಾಕ್ಸಿಯ ಘಟನೆಯನ್ನು ಮೊದಲು ವರದಿ ಮಾಡಲಾಯಿತು.ಈ ಘಟನೆಯನ್ನು ಕುರಿತು ಆರಂಭಿಕ ಪೊಲೀಸ್ ವರದಿಯ ಪ್ರಕಾರ, 28 ವರ್ಷದ ಮಹಿಳೆ ಅವಧ್ ಕ್ರಾಸಿಂಗ್ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಆಕೆಯನ್ನು ಕಾರೊಂದು ಗುದ್ದಿ ಆಕೆ ನೆಲಕ್ಕೆ ಬಿದ್ದರು ಎಂದು ವರದಿ ಮಾಡಲಾಗಿದೆ."ಕಾರಿನಲ್ಲಿ ಮೂವರು ಪ್ರಯಾಣಿಕರಿದ್ದರು. ಆಕೆಗೆ ಕಾರು ಗುದ್ದಿದ ನಂತರ ಆ ಮಹಿಳೆ ಚಾಲಕನನ್ನು ಕಾರಿನಿಂದ ಕೆಳಗಿಳಿಸಿ ಆತನನ್ನು ಹೊಡೆಯಲು ಆರಂಭಿಸಿದರು. ನಂತರ ಕಾರಿನಲ್ಲಿ ಮೂವರು ಪ್ರಯಾಣಿಕರನ್ನು ಹಾಗೂ ಅ ಹುಡುಗಿಯನ್ನು ಕೃಷ್ಣ ನಗರ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಸೆಕ್ಷನ್ 151/107/116 ಪ್ರಕಾರ ಕ್ರಿಮಿನಲ್ ಪ್ರೊಸೀಜರ್ ಕಾನೂನು ಅಡಿಯಲ್ಲಿ, ಮೂವರು ಪುರುಷರನ್ನು ಬಂಧಿಸಲಾಯಿತು. ಮಹಿಳೆಯನ್ನು ಸುರಕ್ಷಿತವಾಗಿ ಆಕೆಯ ಮನೆಗೆ ಕರೆದೊಯ್ಯಲಾಯಿತು, "ಎಂದು ಆರಂಭಿಕ ಪೊಲೀಸ್ ಹೇಳಿಕೆ ತಿಳಿಸಿದೆ.
ಆದರೆ,ನಂತರ ತಿಳಿದ ಸಂಗತಿಯೆಂದರೆ ಟ್ಯಾಕ್ಸಿ ಚಾಲಕನ ಮೇಲೆ ಹಲ್ಲೆ ಮಾಡಿರುವುದಾಗಿ ಮಹಿಳೆಯ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಕಪಾಳಮೋಕ್ಷ ಮಾಡಿದ ವ್ಯಕ್ತಿ ದೂರು ನೀಡಿದ ನಂತರ ಪ್ರಕರಣ ದಾಖಲಿಸಲಾಗಿದೆ ಎಂದು ಕೇಂದ್ರ ಪೊಲೀಸ್ ಇಲಾಖೆಯ (ಡಿಸಿಪಿ) ಉಪ ಮುಖ್ಯಸ್ಥ ಚಿರಂಜೀವ್ ನಾಥ್ ಸಿನ್ಹಾ ಹೇಳಿದ್ದಾರೆ. "ಮಹಿಳೆಯೊಬ್ಬಳು ಪುರುಷನಿಗೆ ಕಪಾಳಮೋಕ್ಷ ಮಾಡಿದ ವೈರಲ್ ವೀಡಿಯೋಗೆ ಸಂಬಂಧಿಸಿದಂತೆ, ನಾವು ಒಬ್ಬ ವ್ಯಕ್ತಿಯಿಂದ ದೂರು ಸ್ವೀಕರಿಸಿದ್ದೇವೆ. ದೂರುದಾರರ ಪ್ರಕಾರ, ಎಫ್ಐಆರ್ ಅನ್ನು ಕೃಷ್ಣನಗರ ಪೊಲೀಸ್ ಇಲಾಖೆಯ ಸಂಬಂಧಿತ ವಿಭಾಗದಡಿಯಲ್ಲಿ ಸಲ್ಲಿಸಲಾಗಿದೆ" ಎಂದು ಡಿಸಿಪಿ ಸಿನ್ಹಾ ಹೇಳಿದ್ದಾರೆ.
Published by:Soumya KN
First published: