ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಇದ್ದ ಎಲಾನ್ ಮಸ್ಕ್ಗೆ (Elon Musk) ಕಳೆದ ವರ್ಷದಿಂದ ಅದೃಷ್ಟ ಕೈಕೊಟ್ಟಂತಿದೆ. ಬಿಲಿಯನ್ ಡಾಲರ್ಗಿಂತ ಹೆಚ್ಚಿನ ಮೊತ್ತದ ಆಸ್ತಿ ಸಂಪಾದಿಸಿ ವಿಶ್ವ ದಾಖಲೆ ಬರೆದಿದ್ದ ಮಸ್ಕ್ ಈಗ ಅದಕ್ಕೆ ವಿರುದ್ಧವಾದ ವಿಶ್ವ ದಾಖಲೆ (World Record) ಒಂದನ್ನು ಬರೆದಿದ್ದಾರೆ. ಕಳೆದ ವರ್ಷ ಎಲಾನ್ ಮಸ್ಕ್ ಟ್ವಿಟರ್ ಅನ್ನು ಸ್ವಾಧೀನ ಪಡಿಸಿಕೊಂಡ ನಂತರ ಎಲಾನ್ ಮಸ್ಕ್ ಅವರನ್ನು ದಿನದಿಂದ ದಿನಕ್ಕೆ ಸಮಸ್ಯೆಗೆ ಸಿಲುಕಿಸುತ್ತಿದೆ ಅಂತಾನೇ ಹೇಳ್ಬಹುದು. ಟ್ವಿಟರ್ (Twitter) ಅನ್ನು ಬದಲಾವಣೆ ಮಾಡಬೇಕೆಂದು ಸಾಕಷ್ಟು ಅಭಿವೃದ್ಧಿಗಳನ್ನು ಮಾಡಿದರೂ ಕೆಲವೊಂದು ಮಾತ್ರ ವಿಫಲವಾಯಿತು. ಕೊನೆ ಆರ್ಥಿಕ ಸಂಕಷ್ಟದಿಂದ ತನ್ನ ಕಂಪೆನಿಯಲ್ಲಿದ್ದ ಉದ್ಯೋಗಿಗಳನ್ನೇ ವಜಾ ಮಾಡಿದ್ರೂ ಇದೀಗ ಮತ್ತೊಂದು ಸುದ್ದಿ
ಟ್ಟಿಟರ್ ಖರೀದಿಸಿದ ಮೇಲೆ ದಿನಕ್ಕೊಂದು ರೀತಿಯಲ್ಲಿ ಸುದ್ದಿ ಮಾಡುತ್ತಲೇ ಇದ್ದ ಮಸ್ಕ್ ಇದೀಗ ತಮ್ಮ ವೈಯಕ್ತಿಕ ಸಂಪತ್ತಿನ ನಷ್ಟದ ವಿಚಾರವಾಗಿ ಸುದ್ದಿಯಾಗಿದ್ದಾರೆ.
ಹೌದು, ವೈಯಕ್ತಿಕ ನಷ್ಟದ ಇತಿಹಾಸದಲ್ಲೇ ಅತಿಹೆಚ್ಚು ನಷ್ಟ ದಾಖಲಿಸುವ ಮೂಲಕ ಹಿಂದೆ ಇದ್ದ ಗಿನ್ನೆಸ್ ವಿಶ್ವ ದಾಖಲೆಯನ್ನು ಮುರಿದು ಹೊಸ ದಾಖಲೆ ಬರೆದಿದ್ದಾರೆ.
ಇದನ್ನೂ ಓದಿ: 12 ದಿನಗಳಲ್ಲಿ 5.4 ಸೆಂ.ಮೀ ಮುಳುಗಿದ ಜೋಶಿಮಠ, ಫೋಟೋ ಬಿಡುಗಡೆ ಮಾಡಿದ ಇಸ್ರೋ
$165 ಬಿಲಿಯನ್ ಕಳೆದುಕೊಂಡ ಮಸ್ಕ್
ಈ ವಿಚಾರವಾಗಿ ಗಿನ್ನೆಸ್ ವಿಶ್ವ ದಾಖಲೆ ಮೂಲಗಳು ಮಾಹಿತಿ ನೀಡಿದ್ದು, ವೆಬ್ಸೈಟ್ನಲ್ಲಿ ನವೆಂಬರ್ 2021 ರಿಂದ ಡಿಸೆಂಬರ್ 2022 ರವರೆಗೆ ಅವರು ಸುಮಾರು $165 ಬಿಲಿಯನ್ (1 34,69,33,77, 50,000.0 ರೂ) ಕಳೆದುಕೊಂಡಿದ್ದಾರೆ ಎಂದು ತಿಳಿಸಿದೆ.
ಈ ಮೂಲಕ ಎಲಾನ್ ಮಸ್ಕ್ ಅವರು ಇತಿಹಾಸದಲ್ಲಿ ಅತಿದೊಡ್ಡ ವೈಯಕ್ತಿಕ ಸಂಪತ್ತಿನ ನಷ್ಟದ ವಿಶ್ವ ದಾಖಲೆಯನ್ನು ಮುರಿದಿದ್ದಾರೆ.
ಮಸಯೋಶಿ ದಾಖಲೆ ಬ್ರೇಕ್ ಮಾಡಿದ ಮಸ್ಕ್
ಈ ಹಿಂದೆ ಜಪಾನ್ನ ಟೆಕ್ ಹೂಡಿಕೆದಾರ ಮಸಯೋಶಿ ಅವರು 2000 ರಲ್ಲಿ 58.6 ಶತಕೋಟಿ ಡಾಲರ್ ಸಂಪತ್ತು ಕಳೆದುಕೊಂಡಿದ್ದರು’ ಎಂದು ಗಿನ್ನೆಸ್ ವಿಶ್ವ ದಾಖಲೆ ಬ್ಲಾಗ್ನಲ್ಲಿ ಉಲ್ಲೇಖಿಸಲಾಗಿದೆ.
ಈಗ ಮಸ್ಕ್ $165 ಬಿಲಿಯನ್ ಕಳೆದುಕೊಳ್ಳುವ ಮೂಲಕ ಮಸಯೋಶಿ ಅವರ ಹಿಂದಿನ ದಾಖಲೆಯನ್ನು ಬ್ರೇಕ್ ಮಾಡಿ ಹೊಸ ಇತಿಹಾಸ ಬರೆದಿದ್ದಾರೆ.
ಕುಸಿತ ಕಂಡ ಟೆಸ್ಲಾ
ಜಾಗತಿಕ ಮಟ್ಟದಲ್ಲಿ ಷೇರು ಮಾರುಕಟ್ಟೆ ತತ್ತರಿಸಿರುವ ನಡುವೆ, ಅವರ ಮಾಲೀಕತ್ವದ ಟೆಸ್ಲಾ ಷೇರುಗಳು ತೀವ್ರವಾಗಿ ಕುಸಿತ ಕಂಡಿದ್ದವು. ಟ್ವಿಟರ್ ಸ್ವಾಧೀನಪಡಿಸಿಕೊಂಡ ನಂತ ಮಸ್ಕ್ ಅದ್ಯಾಕೋ ಟೆಸ್ಲಾ ಕಂಪನಿ ಕಡೆ ಗಮನ ನೀಡುತ್ತಿಲ್ಲ ಎಂಬ ಆರೋಪಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ್ದವು. ಅದಕ್ಕೆ ಸಾಕ್ಷಿಯಂತೆ ಟೆಸ್ಲಾ ಕಳೆದ ವರ್ಷ ಭಾರಿ ಕುಸಿತವನ್ನು ಕಂಡಿತ್ತು.
ಟ್ವಿಟರ್ ಅನ್ನು ಖರೀದಿಸುವುದಕ್ಕಾಗಿ ಮಸ್ಕ್ ಅವರು ಟೆಸ್ಲಾದ 7 ಶತಕೋಟಿ ಡಾಲರ್ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದರು. ಹೀಗೆ ಕಳೆದ ವರ್ಷ ಹಲವು ಬಾರಿ ಅವರು ಟೆಸ್ಲಾದ ಶತಕೋಟಿ ಡಾಲರ್ ಮೌಲ್ಯದ ಷೇರು ಮಾರಾಟ ಮಾಡಿದ್ದರು. ಟೆಸ್ಲಾ ಅವರ ಕಾರ್ಯಕ್ಷಮತೆಯಿಂದಾಗಿ 2022 ರಲ್ಲಿ ಟೆಸ್ಲಾ ಷೇರುಗಳ ಮೌಲ್ಯವು ಸುಮಾರು 65% ನಷ್ಟು ಕುಸಿಯಿತು. ಹಾಗೆಯೇ ಕಂಪನಿ ವರ್ಷದಲ್ಲಿ ಕೇವಲ 1.3 ಮಿಲಿಯನ್ ವಾಹನಗಳನ್ನು ವಿತರಣೆ ಮಾಡಿದೆ.
ಈ ಎಲ್ಲಾ ಬೆಳವಣಿಗೆಗಳು ನೇರವಾಗಿ ಮಸ್ಕ್ ಬೊಕ್ಕಸದ ಮೇಲೆ ಪರಿಣಾಮ ಬೀರಿದ್ದು ಅತಿಹೆಚ್ಚು ಸಂಪತ್ತಿನ ನಷ್ಟಕ್ಕೆ ಕಾರಣವಾಗಿದೆ. ಆರ್ಥಿಕ ಹಿಂಜರಿತದ ಭಯ, ಏರುತ್ತಿರುವ ಸ್ಪರ್ಧೆ ಮತ್ತು ಕೋವಿಡ್-ಸಂಯೋಜಿತ ಉತ್ಪಾದನಾ ಸವಾಲುಗಳನ್ನೇಲ್ಲಾ ಆಧರಿಸಿ ಅನೇಕ ತಜ್ಞರು ಮಸ್ಕ್ ಅವರು ಟ್ವಿಟರ್ಗಿಂತ ಎಲೆಕ್ಟ್ರಿಕ್ ವಾಹನ ಕಂಪನಿಯ ಮೇಲೆ ಕೇಂದ್ರೀಕರಿಸಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.
ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಪಟ್ಟದಿಂದ ಕೆಳಗಿಳಿದ ಮಸ್ಕ್
ಸಂಪತ್ತು ನಷ್ಟದಿಂದಾಗಿ ಮಸ್ಕ್ ಇತ್ತೀಚೆಗಷ್ಟೇ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಪಟ್ಟದಿಂದ ಕೆಳಗಿಳಿದಿದ್ದಾರೆ. ಈ ಪಟ್ಟಿಯಲ್ಲಿ 185.4 ಶತಕೋಟಿ ಡಾಲರ್ ವೈಯಕ್ತಿಕ ಸಂಪತ್ತು ಹೊಂದುವ ಮೂಲಕ ಫ್ಯಾಷನ್ ಲೇಬಲ್ ಲೂಯಿ ವಿಟಾನ್ ಅನ್ನು ಹೊಂದಿರುವ ಫ್ರೆಂಚ್ ಐಷಾರಾಮಿ ಸರಕುಗಳ ಕಂಪನಿ LVMH ನ ಮುಖ್ಯ ಕಾರ್ಯನಿರ್ವಾಹಕ ಬರ್ನಾರ್ಡ್ ಅರ್ನಾಲ್ಟ್ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದಾರೆ.
ಫೋರ್ಬ್ಸ್ ಪ್ರಕಾರ ಎಎಲಾನ್ ಮಸ್ಕ್ ಈಗ ಸುಮಾರು $178bn (£152bn) ಮೌಲ್ಯವನ್ನು ಹೊಂದಿದ್ದಾರೆ ಎಂದು ತಿಳಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ