Tirupati: ಬರೋಬ್ಬರಿ 9.2 ಕೋಟಿ ಮೌಲ್ಯದ ಆಸ್ತಿ ದಾನ ಕೊಟ್ಟ ಅಜ್ಜಿ! ಸತ್ತ ಮೇಲೂ ತೀರಿತು ತಿಮ್ಮಪ್ಪನ ಹರಕೆ!

ಪಾರ್ವತಮ್ಮ ತೀರಿಕೊಂಡಿದ್ದರೂ ಅವರ ಹರಕೆ ಸಲ್ಲಿಕೆಯಾಗಿದೆ. ಬಡವರ ಸೇವೆ ಮಾಡಬೇಕೆಂಬ ಅವರ ಕನಸು, ಅವರು ತೀರಿಕೊಂಡ ಬಳಿಕ ಈಡೇರಿದೆ. 9.2 ಕೋಟಿ ಮೌಲ್ಯದ ಅವರ ಆಸ್ತಿ ತಿಮ್ಮಪ್ಪನ ಖಜಾನೆ ಸೇರಿದೆ. ಅದು ಆಸ್ಪತ್ರೆಯ ಸೇವೆಗೆ ಬಳಕೆಯಾಗಲಿದೆ...

ತಿರುಪತಿಗೆ ಆಸ್ತಿ ಪತ್ರ ಹಸ್ತಾಂತರ

ತಿರುಪತಿಗೆ ಆಸ್ತಿ ಪತ್ರ ಹಸ್ತಾಂತರ

  • Share this:
ತಿರುಪತಿ: ಕಲಿಯುಗದ (Kaliyuga) ಸಾಕ್ಷಾತ ದೈವ (God) ಅಂದ್ರೆ ತಿರುಪತಿ ತಿಮ್ಮಪ್ಪ (Tirupati Timmappa) ಎನ್ನುವ ಮಾತಿದೆ. “ಮಾತು ಬಿಡ ಮಂಜುನಾಥ, ಕಾಸು ಬಿಡ ತಿಮ್ಮಪ್ಪ” ಅಂತ ಹಿರಿಯರು ಹೇಳುತ್ತಾರೆ. ಹಿಂದೆ ತನ್ನ ಹಾಗೂ ಪದ್ಮಾವತಿ ವಿವಾಹೋತ್ಸವಕ್ಕಾಗಿ (Marriage) ಸಮುದ್ರರಾಜನಲ್ಲಿ ತಿಮ್ಮಪ್ಪ ಅಪಾರ ಪ್ರಮಾಣದ ಸಾಲ (Loan) ಮಾಡಿದ್ದನಂತೆ. ಆ ಸಾಲ ತೀರಿಸಲು ಇನ್ನೂ ಸಾಧ್ಯವಾಗಲಿಲ್ಲವಂತೆ. ಹಾಗಾಗಿ ಭಕ್ತರು (Devotees) ತಿಮ್ಮಪ್ಪನಿಗೆ ಕಾಣಿಕೆ (Donation) ನೀಡಿ, ಆ ಸಾಲ ತೀರಿಸಲು ಸಹಾಯ ಮಾಡುತ್ತಾರೆ. ಆ ಮೂಲಕ ದೇವರ ಕೃಪೆಗೆ ಪಾತ್ರರಾಗುತ್ತಾರೆ, ಆಶೀರ್ವಾದ ಪಡೆಯುತ್ತಾರೆ ಎನ್ನುವ ಪ್ರತೀತಿ ಇದೆ. ಅದೇ ರೀತಿ ಪ್ರತಿದಿನ ಭಕ್ತರು ತಿರುಪತಿ ತಿಮ್ಮಪ್ಪನ ಹುಂಡಿಗೆ ಹಣ (Money), ಚಿನ್ನಾಭರಣ (Jewelry), ದವಸ ಧಾಸ್ಯ, ಮುತ್ತು ರತ್ನ ಇತ್ಯಾದಿಗಳನ್ನು ನೀಡುತ್ತಾರೆ. ಇದೀಗ ಚೆನ್ನೈನ (Chennai) ವೃದ್ಧೆಯೊಬ್ಬರು ತಿರುಪತಿ ತಿಮ್ಮಪ್ಪನಿಗೆ ಬರೋಬ್ಬರಿ 9.2 ಕೋಟಿ (9.2 Crore) ಮೌಲ್ಯದ ಆಸ್ತಿಯನ್ನು (Property) ದಾನವಾಗಿ ನೀಡಿದ್ದಾರೆ.

ಚೆನ್ನೈನ ಭಕ್ತೆಯಿಂದ 9.2  ಕೋಟಿ ಮೌಲ್ಯದ ಆಸ್ತಿ ದಾನ

ಚೈನ್ನೆ ನಿವಾಸಿಯಾಗಿರುವ 76 ವರ್ಷದ ಪಾರ್ವತಮ್ಮ ಎಂಬುವರು ಇತ್ತೀಚಿಗಷ್ಟೇ ನಿಧನರಾಗಿದ್ದರು. ಅವರು ಅವಿವಾಹಿತರಾಗಿಯೇ ಇದ್ದರು. ಅವರ ಬಳಿ ಸುಮಾರು 10 ಕೋಟಿಯಷ್ಟು ಮೊತ್ತದ ಆಸ್ತಿ ಇತ್ತು. ಅದನ್ನು ತಿರುಪತಿಗೆ ದಾನ ನೀಡಬೇಕು, ಅದನ್ನು ಸಮಾಜಸೇವೆಗೆ ಬಳಸಬೇಕು ಎನ್ನುವುದು ವೃದ್ಧೆಯ ಆಸೆಯಾಗಿತ್ತು. ಅದು ನಿನ್ನೆ ಈಡೇರಿದೆ.

ವೃದ್ಧೆಯ ಆಸ್ತಿ ಪತ್ರ ಟಿಟಿಡಿಗೆ ನೀಡಿದ ಸಹೋದರಿ

ಪಾರ್ವತಮ್ಮ ಅವರು ನಿಧನರಾಗಿರುವುದರಿಂದ ಅವರ ಆಸೆಯಂತೆ ಆಸ್ತಿಯನ್ನು ತಿರುಪತಿ ತಿಮ್ಮಪ್ಪನಿಗೆ ದಾನ ನೀಡಲಾಯ್ತು. ನಿನ್ನೆ ಅವರ ಸಹೋದರಿ ರೇವತಿ ಹಾಗೂ ರೇವತಿಯವರ ಪತಿ ವಿಶ್ವನಾಥಂ ಅವರು ತಿರುಪತಿಗೆ ಬಂದು, ದೇವರ ದರ್ಶನ ಪಡೆದರು.

ವಿಶೇಷ ಪೂಜೆ ಸಲ್ಲಿಸಿದ ಬಳಿಕ ಟಿಟಿಡಿ ಆಡಳಿತ ಮಂಡಳಿಗೆ ಪಾರ್ವತಮ್ಮ ಅವರ ಆಸ್ತಿ ಪತ್ರಗಳನ್ನು ದಾನವಾಗಿ ನೀಡಿದರು. ಟಿಟಿಡಿ ಅಧ್ಯಕ್ಷ ವೈವಿ ಸುಬ್ಬಾ ರೆಡ್ಡಿ ಅವರಿಗೆ ದಾಖಲೆಗಳನ್ನು ಹಸ್ತಾಂತರಿಸಿದರು.

ಇದನ್ನೂ ಓದಿ: ಇಲ್ಲಿ Hijab ಗಲಾಟೆ, ಅಲ್ಲಿ ಹಿಂದೂ-ಮುಸ್ಲಿಂ ಭಾಯಿ ಭಾಯಿ! ಮಾದರಿಯಾಯ್ತು ಕೇರಳದ ಈ ಗ್ರಾಮ

ಸಮಾಜ ಸೇವೆಗೆ, ಬಡವರ ಆಸ್ಪತ್ರೆಗೆ ಬಳಸಲು ಮನವಿ

ಸಮಾಜಸೇವೆ ಮಾಡಬೇಕು ಎಂಬುದು ಪಾರ್ವತಮ್ಮನವರ ಕನಸಾಗಿತ್ತು. ಹೀಗಾಗಿ ಅವರು ನೀಡಿರುವ ಆಸ್ತಿಯನ್ನು ಸಮಾಜಸೇವೆಗೆ ಬಳಸುವಂತೆ ಟಿಟಿಡಿಗೆ ಪಾರ್ವತಮ್ಮ ಸಹೋದರಿ ರೇವತಿ ಮನವಿ ಮಾಡಿದ್ದಾರೆ.

ಬಡವರಿಗೆ ಮತ್ತು ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಚಿಕಿತ್ಸೆ ನೀಡುವ ಉದ್ದೇಶಕ್ಕಾಗಿ ಪೀಡಿಯಾಟ್ರಿಕ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಿಂದ ಧನಸಹಾಯ ಪಡೆದ ಎಸ್‌ವಿ ಪ್ರಾಣದಾನ ಟ್ರಸ್ಟ್‌ಗೆ ದೇಣಿಗೆ ನೀಡಬೇಕಾಗಿ ಮನವಿ ಮಾಡಿದರು.

ಈ ಹಿಂದೆಯೂ ಈ ಫ್ಯಾಮಿಲಿಯಿಂದ ದಾನ

ತಿರುಪತಿ ತಿಮ್ಮಪ್ಪನ ಭಕ್ತೆಯಾಗಿದ್ದ ಪಾರ್ವತಮ್ಮ ಈ ಹಿಂದೆಯೂ ಸಾಕಷ್ಟು ಬಾರಿ ದಾನ, ಧರ್ಮ ಮಾಡಿದ್ದಾರೆ. ಅವರು ತಮ್ಮ ಆಸ್ತಿಯನ್ನು ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ದಾನ ಮಾಡಿದ್ದಾರೆ. ಇನ್ನು ರೇವತಿ ಅವರ ಪತಿ ವಿಶ್ವನಾಥಂ ಅವರು ಈ ಹಿಂದೆ ಎಸ್‌ವಿ ಪ್ರಾಣದಾನ ಟ್ರಸ್ಟ್ ಮತ್ತು ಟಿಟಿಡಿಯ ಶ್ರೀ ಬಾಲಾಜಿ ಆರೋಗ್ಯ ವರಪ್ರಸಾದಿನಿ ಯೋಜನೆ (ಸ್ವಿಮ್ಸ್) ಗೆ ದೇಣಿಗೆ ನೀಡಿದ್ದರು.

ಇದನ್ನೂ ಓದಿ: Grandmother Spirit: 79ರ ವಯಸ್ಸಲ್ಲಿ AK-47 ಹಿಡಿದ ಉಕ್ರೇನ್‌ ಅಜ್ಜಿ..! ಇದರ ಹಿಂದಿದೆ ಇಂಟ್ರೆಸ್ಟಿಂಗ್ ಕಹಾನಿ

ಟಿಟಿಡಿ ಮಂಡಳಿಯ ಅಧ್ಯಕ್ಷ ವೈ.ವಿ. ಸುಬ್ಬಾರೆಡ್ಡಿ ಅವರಿಗೆ ₹3.2 ಕೋಟಿಯ ಡಿಮ್ಯಾಂಡ್ ಡ್ರಾಫ್ಟ್‌ನೊಂದಿಗೆ ₹6 ಕೋಟಿ ಮೌಲ್ಯದ ಸ್ಥಿರಾಸ್ತಿಯ ದಾಖಲೆಗಳನ್ನು ಹಸ್ತಾಂತರಿಸಲಾಗಿದೆ. ದೇಗುಲದ ಆಡಳಿತ ಮಂಡಳಿ ನಿರ್ಮಿಸುತ್ತಿರುವ ಮಕ್ಕಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ₹3.2 ಕೋಟಿ ನಗದು ಬಳಸಿಕೊಳ್ಳುವಂತೆ ಮಹಿಳೆ ಟಿಟಿಡಿಗೆ ಮನವಿ ಮಾಡಿದ್ದಾರೆ ಎಂದು ದೇವಸ್ಥಾನದ ಅಧಿಕಾರಿ ತಿಳಿಸಿದ್ದಾರೆ.
Published by:Annappa Achari
First published: