Fact Check: ಅಫ್ಘನ್​​​ನಲ್ಲಿ ಸ್ಫೋಟಗೊಂಡ ಅಮೆರಿಕದ ಸೇನಾ ವಿಮಾನ.. ವೈರಲ್ ಫೋಟೋ ಅಸಲಿಯತ್ತೇನು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

US military aircraft crash : ಇದು 13 ವರ್ಷದ ಚಿತ್ರವಾಗಿದ್ದು, ಇರಾಕ್‌ನ ವಾಯುನೆಲೆಯಲ್ಲಿ ಹಾನಿಗೊಳಗಾದ ಯುಎಸ್ ವಿಮಾನದ ನಿಯಂತ್ರಿತ ಸ್ಫೋಟವನ್ನು ತೋರಿಸುತ್ತದೆ. ಆದರೆ ಈ ಚಿತ್ರ 13 ವರ್ಷಗಳಷ್ಟು ಹಳೆಯದಾಗಿದ್ದು ಇರಾಕ್ ವಾಯುನೆಲೆಯಲ್ಲಿ ಸ್ಫೋಟಗೊಂಡ ಯುಎಸ್ ವಿಮಾನದ್ದಾಗಿದೆ

  • Share this:

ಅಮೆರಿಕದ ಯುದ್ಧ ವಿಮಾನವು ಅಫ್ಘಾನಿಸ್ತಾನದಲ್ಲಿ (Afghanistan ) ಪತನಗೊಂಡಿದ್ದು ನೂರಾರು ನಾಗರಿಕರು ಮತ್ತು ಸೈನಿಕರನ್ನು ಕೊಂದಿದೆ ಎಂಬ ಉರಿಯುತ್ತಿರುವ ವಿಮಾನದ ಚಿತ್ರವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಯುಎಸ್ ಮಿಲಿಟರಿ ಸಿ 130 ಪ್ಲೇ ಫರಾಹ್ ಪ್ರಾಂತ್ಯದಲ್ಲಿ ಪತನಗೊಂಡು ನೂರಾರು ಜನರನ್ನು ಹಾಗೂ ಸೈನಿಕರನ್ನು ಕೊಂದಿದೆ ಹಾಗೂ ಗಾಯಗೊಳಿಸಿದೆ ಎಂಬ ವೈರಲ್ ಸುದ್ದಿ ಹರಿದಾಡಿದ್ದು ಈ ವಿಮಾನವು ಕಾಬೂಲ್ ವಿಮಾನ ನಿಲ್ದಾಣದಿಂದ ಕತಾರ್‌ಗೆ ಪ್ರಯಾಣಿಸುತ್ತಿತ್ತು ಎಂಬ ಶೀರ್ಷಿಕೆಯನ್ನು ಸುದ್ದಿಯು ಒಳಗೊಂಡಿದೆ.


13 ವರ್ಷ ಹಿಂದಿನ ಫೋಟೋ..! 


ಇಂಡಿಯಾ ಟುಡೇ ಆಂಟಿ ಫೇಕ್ ನ್ಯೂಸ್ ವಾರ್ ರೂಮ್ (ಎಎಫ್‌ಡಬ್ಲ್ಯೂಎ) ಇತ್ತೀಚೆಗೆ ಯಾವುದೇ ವಿಶ್ವಾಸಾರ್ಹ ಮಾಧ್ಯಮ ಸಂಸ್ಥೆ ಪ್ರಕಟಿಸಿದ ಯಾವುದೇ ಸುದ್ದಿಯನ್ನು ಕಂಡುಕೊಂಡಿಲ್ಲ. ಇದು 13 ವರ್ಷದ ಚಿತ್ರವಾಗಿದ್ದು, ಇರಾಕ್‌ನ ವಾಯುನೆಲೆಯಲ್ಲಿ ಹಾನಿಗೊಳಗಾದ ಯುಎಸ್ ವಿಮಾನದ ನಿಯಂತ್ರಿತ ಸ್ಫೋಟವನ್ನು ತೋರಿಸುತ್ತದೆ. ಆದರೆ ಈ ಚಿತ್ರ 13 ವರ್ಷಗಳಷ್ಟು ಹಳೆಯದಾಗಿದ್ದು ಇರಾಕ್ ವಾಯುನೆಲೆಯಲ್ಲಿ ಸ್ಫೋಟಗೊಂಡ ಯುಎಸ್ ವಿಮಾನದ್ದಾಗಿದೆ ಎಂಬುದು ನಂತರ ಗೊತ್ತಾಗಿರುವ ಸುದ್ದಿಯಾಗಿದೆ.


ಜುಲೈ 7, 2008 ರಂದು ತೆಗೆದ ಚಿತ್ರ


ರಿವರ್ಸ್ ಇಮೇಜ್ ಸರ್ಚ್ ಬಳಸಿ ಚಿತ್ರವನ್ನು ಕೂಲಂಕುಷವಾಗಿ ಪರಿಶೀಲನೆ ನಡೆಸಿದಾಗ ಇದು ಜುಲೈ 7, 2008 ರಂದು ತೆಗೆದ ಚಿತ್ರ ಎಂಬುದು ಪತ್ತೆಯಾಗಿದೆ. ಇರಾಕ್‌ನ ಸಾದರ್ ಏಸ್‌ಬೇಸ್‌ನಲ್ಲಿರುವ 447 ನೇ ಎಕ್ಸ್‌ಪಿಡಿಶನರಿ ಸಿವಿಲ್ ಇಂಜಿನಿಯರ್ ಸ್ಕ್ವಾಡ್ರನ್ ಸ್ಫೋಟಕ ಆರ್ಡಿನೆನ್ಸ್ ವಿಲೇವಾರಿ ಸಿಬ್ಬಂದಿ ಸಿ-130 ಹರ್ಕ್ಯುಲಸ್ ರಚನೆಗಳ ರೆಕ್ಕೆಗಳನ್ನು ಬೇರ್ಪಡಿಸಲು ಸ್ಫೋಟಕಗಳನ್ನು ಸಿಡಿಸುತ್ತಾರೆ. ಇಓಡಿ ತಂಡವು ನಿಯಂತ್ರಿತ ಸ್ಫೋಟಗಳ ಸರಣಿಗಳನ್ನು ಬಳಸಿಕೊಂಡು ವಿಮಾನವನ್ನು ಸಣ್ಣ ತುಂಡುಗಳಾಗಿ ಮಾಡುತ್ತಾರೆ. ಸಿ-130 ತುರ್ತು ಭೂಸ್ಪರ್ಶವನ್ನು ಬಾಗ್ದಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಉತ್ತರದ ಮೈದಾನದಲ್ಲಿ ಜೂನ್ 27 ರಂದು ಮಾಡಿತು.


ಇರಾಕ್‌ನ ವಾಯುನೆಲೆಯಲ್ಲಿ ಹಾನಿಗೊಳಗಾದ ಯುಎಸ್ ವಿಮಾನ


ಇಂಡಿಯಾ ಟುಡೇಯ ಆ್ಯಂಟಿ ಫೇಕ್ ನ್ಯೂಸ್ ರೂಮ್ (AFWA) ಇಂತಹ ಸುದ್ದಿಗಳನ್ನು ಪ್ರಕಟಿಸಿದ ಯಾವುದೇ ವಿಶ್ವಾಸಾರ್ಹ ಸುದ್ದಿಮೂಲಗಳು ಪತ್ತೆಯಾಗಿಲ್ಲ ಎಂಬುದಾಗಿ ತಿಳಿಸಿದೆ. ಇದು 13 ವರ್ಷಗಳ ಹಳೆಯ ಫೋಟೋ ಆಗಿದ್ದು ಇರಾಕ್‌ನ ವಾಯುನೆಲೆಯಲ್ಲಿ ಹಾನಿಗೊಳಗಾದ ಯುಎಸ್ ವಿಮಾನದ ನಿಯಂತ್ರಿತ ಸ್ಫೋಟವನ್ನು ತೋರಿಸುತ್ತದೆ.  ಅಮೆರಿಕಾ ಸೇನೆಯ ವಿಮಾನದ ಅದೇ ವರದಿ ಹಾಗೂ ಘಟನೆಯನ್ನು ವೆಬ್‌ಸೈಟ್‌ನಲ್ಲಿ ಕಂಡುಕೊಂಡೆವು. ಚಿತ್ರಗಳಿಗಾಗಿ Tech. Sgt. Jeffrey Allen ಅವರಿಗೆ ಕ್ರೆಡಿಟ್ ಅನ್ನು ನೀಡಲಾಗಿತ್ತು. ಇದನ್ನು ಜುಲೈ 11, 2008 ರಂದು ಪ್ರಕಟಿಸಲಾಯಿತು.


ಈ ವೆಬ್‌ಸೈಟ್‌ನ ಪ್ರಕಾರ, ಏರ್‌ಮೆನ್ ಜುಲೈ 7 ರಂದು ಬಾಗ್ದಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಈಶಾನ್ಯದಲ್ಲಿರುವ ಬಂಜರು ಮೈದಾನದಲ್ಲಿ ಸಿ -130 ಹರ್ಕ್ಯುಲಸ್ ಅನ್ನು ಸಿಡಿಸಲು ಸ್ಫೋಟಕಗಳನ್ನು ಬಳಸಿದರು. ಜೂನ್ 27 ರಿಂದ ಇದ್ದ ಸಾರಿಗೆ ವಿಮಾನವನ್ನು ತುರ್ತು ಲ್ಯಾಂಡಿಂಗ್ ಮಾಡಲು ಒತ್ತಾಯಿಸಲಾಯಿತು. ಭದ್ರತೆಯ ಕಾಳಜಿ ಎಂಬುದಾಗಿ ವಿಮಾನವನ್ನು ಪರಿಗಣಿಸಲಾಗಿದ್ದು ಅದನ್ನು ಕೆಡವಿದರೆ ಸಾಗಿಸಲು ಸುಲಭ ಎಂಬುದಾಗಿ ತೀರ್ಮಾನಿಸಿ ವಿಮಾನವನ್ನು ಸ್ಫೋಟಿಸಲಾಯಿತು ಎಂದು ವರದಿ ತಿಳಿಸಿದೆ.


ಇದನ್ನೂ ಓದಿ: Soldiers in Burqas: ಬುರ್ಕಾ ತೊಟ್ಟು ಅಫ್ಘಾನಿಸ್ತಾನ ತೊರೆದಿದ್ದ ಬ್ರಿಟನ್ ಸೈನಿಕರು.. ಡೆಡ್ಲಿ ಎಸ್ಕೇಪ್, ರೋಚಕ ಕಾರ್ಯಾಚರಣೆ!


ಅಫ್ಘಾನಿಸ್ತಾನದಲ್ಲಿ ಇದೂವರೆಗೆ ಯಾರಿಗೂ ತಲೆಬಾಗದೇ ಸ್ವತಂತ್ರವಾಗಿದ್ದ ಅಫ್ಘಾನಿಸ್ತಾನದ ಪಂಜಶಿರ್ ಪ್ರಾಂತ್ಯವನ್ನು ತಾಲಿಬಾನ್ ಪಡೆಗಳು ವಶಪಡಿಸಿಕೊಂಡಿವೆ ಎನ್ನಲಾಗಿದೆ. ಪಂಜಶಿರ್​ನ ನ್ಯಾಷನಲ್ ರೆಸಿಸ್ಟೆನ್ಸ್ ಫೋರ್ಸ್ ತಾವು ಸೋತಿಲ್ಲ, ಇನ್ನೂ ಪ್ರಮುಖ ಆಯಕಟ್ಟು ಜಾಗಗಳು ನಮ್ಮ ನಿಯಂತ್ರಣದಲ್ಲೇ ಇವೆ ಎಂದು ಹೇಳಿದೆಯಾದರೂ ಪಂಜಶಿರ್​ನ ಬಹುತೇಕ ಪ್ರದೇಶಗಳು ತಾಲಿಬಾನ್  ಸುಪರ್ದಿಯಲ್ಲಿವೆ ಎಂದು ವಿವಿಧ ಮಾಧ್ಯಮಗಳ ವರದಿಗಳು ಖಚಿಪಡಿಸಿವೆ. ಪಂಜಶಿರ್ ಸಂಪೂರ್ಣವಾಗಿ ತನ್ನ ವಶಕ್ಕೆ ಬಂದಿದೆ ಎಂದು ತಾಲಿಬಾನ್ ಹೇಳಿಕೊಂಡಿದೆ. ಅಫ್ಘಾನಿಸ್ತಾನದಲ್ಲಿ ಇದರೊಂದಿಗೆ ಯುದ್ಧದ ರಗಳೆ ಅಂತ್ಯಗೊಂಡಿದೆ ಎಂದು ತಾಲಿಬಾನ್ ಘೋಷಿಸಿದೆ.

top videos
    First published: