• ಹೋಂ
 • »
 • ನ್ಯೂಸ್
 • »
 • ದೇಶ-ವಿದೇಶ
 • »
 • Old Couple: ಮದ್ವೆಗೆ ಪೋಷಕರ ವಿರೋಧ; 60 ವರ್ಷದ ನಂತರ ಒಂದಾದ ಜೋಡಿ; ಇಲ್ಲಿದೆ ನೋಡಿ ರಿಯಲ್ ಲವ್ ಸ್ಟೋರಿ

Old Couple: ಮದ್ವೆಗೆ ಪೋಷಕರ ವಿರೋಧ; 60 ವರ್ಷದ ನಂತರ ಒಂದಾದ ಜೋಡಿ; ಇಲ್ಲಿದೆ ನೋಡಿ ರಿಯಲ್ ಲವ್ ಸ್ಟೋರಿ

60 ವರ್ಷಗಳ ಬಳಿಕ ಮದುವೆ (ಸಾಂದರ್ಭಿಕ ಚಿತ್ರ)

60 ವರ್ಷಗಳ ಬಳಿಕ ಮದುವೆ (ಸಾಂದರ್ಭಿಕ ಚಿತ್ರ)

"ವೈವಾಹಿಕ ಜೀವನವು ತುಂಬಾನೇ ಅದ್ಭುತವಾಗಿದೆ, ನನ್ನನ್ನು ಗೌರವದಿಂದ ಕಾಣುವ ವ್ಯಕ್ತಿಯನ್ನು ನಾನು ಮದುವೆಯಾಗಿದ್ದೇನೆ. ಲೆನ್ ಅವರೊಂದಿಗೆ ನನ್ನ ಮಿಕ್ಕಿರುವ ಜೀವನವನ್ನು ಸಂತೋಷದಿಂದ ಕಳೆಯಲು ಬಯಸುತ್ತೇನೆ" ಅಂತ ಜಿನೇಟ್ ಹೇಳಿದರು.

 • Trending Desk
 • 5-MIN READ
 • Last Updated :
 • New Delhi, India
 • Share this:

ಅನೇಕ ಪ್ರೀತಿ, ಪ್ರೇಮದ ಕತೆಗಳು (Love Story) ಕಾಲೇಜಿನಲ್ಲಿ ಶುರುವಾಗಿ ಕಾಲೇಜು (Collage) ಬಿಟ್ಟು ಹೋದ ನಂತರ ಮಾಯವಾಗಿರುವ ಅನೇಕ ಉದಾಹರಣೆಗಳನ್ನು ನಾವು ಕೇಳಿರುತ್ತೇವೆ ಮತ್ತು ನೋಡಿರುತ್ತೇವೆ. ಕಾಲೇಜಿನಲ್ಲಿ ಕಾಟಾಚಾರಕ್ಕೆ ಅಂತ ಮತ್ತು ತನಗೂ ಒಬ್ಬ ಪ್ರಿಯಕರ ಅಥವಾ ಪ್ರಿಯತಮೆ (Boyfriend Or Girlfriend) ಇರಲಿ ಅಂತ ಲವ್ (Love) ಮಾಡುವವರೆ ಹೆಚ್ಚು ಈ ಕಾಲದಲ್ಲಿ. ಆದರೆ ಈ ಮಾತು ಎಲ್ಲರ ಪ್ರೀತಿಗೆ ಅನ್ವಯಿಸುವುದಿಲ್ಲ ಅಂತ ಹೇಳುವುದು ಇಲ್ಲಿ ತುಂಬಾನೇ ಮುಖ್ಯವಾಗುತ್ತದೆ.


ಏಕೆಂದರೆ ಕೆಲವರು ತಮ್ಮ ಪ್ರೀತಿಯಲ್ಲಿ ಎಷ್ಟರ ಮಟ್ಟಿಗೆ ನಿಷ್ಠೆಯನ್ನು ಹೊಂದಿರುತ್ತಾರೆ ಎಂದರೆ ತಮ್ಮ ಪ್ರಿಯಕರ ಅಥವಾ ಪ್ರಿಯತಮೆ ತಮ್ಮನ್ನು ಬಿಟ್ಟು ಬೇರೆಯವರ ಜೊತೆ ಮದುವೆಯಾಗಿ ಹೋದರೂ ಸಹ ಅವರ ಮನಸ್ಸಿನ ಯಾವುದೋ ಒಂದು ಮೂಲೆಯಲ್ಲಿ ಆ ಹಳೆಯ ಪ್ರೀತಿ ಇನ್ನೂ ಹಾಗೆಯೇ ಮಾಸದೆ ಉಳಿದಿರುತ್ತದೆ ಅಂತ ಹೇಳಬಹುದು.


ಈ ಪ್ರೀತಿ, ಪ್ರೇಮದ ಕತೆಗಳಲ್ಲಿ ತುಂಬಾನೇ ಅಪರೂಪದ ಕತೆಗಳನ್ನು ಸಹ ನಾವು ನೋಡಬಹುದು. ಇಲ್ಲಿ ಇಂತಹದೇ ಒಂದು ಕತೆಯನ್ನು ನಿಮಗೆ ಹೇಳುತ್ತೇವೆ ಕೇಳಿ.


ಅಸಾಮಾನ್ಯ ಪ್ರೇಮಕಥೆಯಲ್ಲಿ, ಒಂದಲ್ಲ, ಎರಡಲ್ಲ ಬರೋಬ್ಬರಿ ಆರು ದಶಕಗಳ ಹಿಂದೆ ಬೇರ್ಪಟ್ಟ ಇಬ್ಬರು ಬ್ರಿಟಿಷ್ ಹದಿಹರೆಯದ ಜೋಡಿ ಈಗ ಮತ್ತೆ ಒಂದಾಗಿದ್ದಾರೆ ನೋಡಿ.


60 ವರ್ಷಗಳ ಬಳಿಕೆ ಮದುವೆಯಾದ ಹಳೆಯ ಪ್ರೇಮಿಗಳು


ಹೌದು, ಇದನ್ನು ಕೇಳಿ ನಿಮಗೆ ಶಾಕ್ ಆಗಬಹುದು, ಆದರೆ ಇದು ನಡೆದಿದ್ದು ಮಾತ್ರ ನಿಜವಂತೆ. 60 ವರ್ಷಗಳ ಹಿಂದೆ ಬೇರ್ಪಟ್ಟ ಹುಡುಗ ಹುಡುಗಿ ಇಬ್ಬರು ಈಗ ಮದುವೆಯಾಗಿದ್ದಾರೆ. ಅರವತ್ತು ವರ್ಷಗಳ ಹಿಂದೆ, ಅವರ ಪೋಷಕರು ಅವರ ಪ್ರೀತಿಗೆ ಒಪ್ಪಿಗೆ ಸೂಚಿಸದೆ ಅವರ ನಿಶ್ಚಿತಾರ್ಥವನ್ನು ರದ್ದುಗೊಳಿಸಿದ್ದರು.


old couple marry 60 years after parents opposed their marriage stg mrq
60 ವರ್ಷಗಳ ಬಳಿಕ ಮದುವೆ (ಸಾಂದರ್ಭಿಕ ಚಿತ್ರ)


ದಿ ಮೆಟ್ರೋ ನ್ಯೂಸ್ ಪ್ರಕಾರ, 79 ವರ್ಷದ ಲೆನ್ ಆಲ್ಬ್ರೈಟನ್ ಮತ್ತು 78 ವರ್ಷದ ಜೀನೆಟ್ ಸ್ಟೀರ್ ತಮ್ಮ ಜೀವನದಲ್ಲಿ ಮತ್ತೆ ಒಂದಾಗುತ್ತೇವೆ ಅಂತ ಬಹುಶಃ ಅಂದುಕೊಂಡಿರಲಿಲ್ಲ ಅಂತ ಕಾಣುತ್ತೆ.


ಆದರೆ ಇವರು ಅರವತ್ತು ವರ್ಷಗಳ ನಂತರ ಈ ಇಬ್ಬರು ಪ್ರೇಮಿಗಳು ಮದುವೆಯಾಗಿದ್ದಾರೆ ನೋಡಿ. ಇವರಿಬ್ಬರು ಈ ಹಿಂದೆಂದಿಗಿಂತಲೂ ತುಂಬಾನೇ ಖುಷಿಯಾಗಿದ್ದಾರೆ ಅಂತ ಹೇಳುತ್ತಿದ್ದಾರೆ.


ಮೊದಲ ಬಾರಿಗೆ 1963 ರಲ್ಲಿ ಭೇಟಿಯಾಗಿದ್ರಂತೆ


ಲೆನ್ 19 ಮತ್ತು ಜೀನೆಟ್ 18 ವರ್ಷದವರಿದ್ದಾಗ ಇಬ್ಬರು 1963 ರಲ್ಲಿ ಮೊದಲ ಬಾರಿಗೆ ಭೇಟಿಯಾಗಿದ್ರಂತೆ. ವೈಟ್ ದ್ವೀಪದ ನ್ಯೂಪೋರ್ಟ್ ನ ಸೇಂಟ್ ಮೇರಿಸ್ ಆಸ್ಪತ್ರೆಯಲ್ಲಿ ನರ್ಸಿಂಗ್ ವಿದ್ಯಾರ್ಥಿಗಳಾಗಿ ಕೆಲಸ ಮಾಡುತ್ತಿರುವಾಗ ಅವರಿಬ್ಬರ ಮಧ್ಯೆ ಮೊದಲ ನೋಟದಲ್ಲೇ ಪ್ರೀತಿ ಶುರುವಾಗಿತ್ತಂತೆ ಎಂದು ಹೇಳಿಕೊಂಡಿದ್ದಾರೆ.


ಅವರು ಆರಂಭದಲ್ಲಿ ಭೇಟಿಯಾದ ಕೆಲವು ತಿಂಗಳ ನಂತರ ಮದುವೆಯಾಗಲು ನಿರ್ಧರಿಸಿದ್ದರಂತೆ, ಆದರೆ ಹುಡುಗಿಯ ಪೋಷಕರು ಆ ಸಮಯದಲ್ಲಿ ಅವರ ಪ್ರೀತಿಗೆ ಮತ್ತು ಮದುವೆಗೆ ಒಪ್ಪಿಗೆ ನೀಡಲಿಲ್ಲವಂತೆ ಮತ್ತು ಆ ಸಮಯದಲ್ಲಿ, ಜೀನೆಟ್ ಗೆ ಇನ್ನೂ 21 ವರ್ಷ ವಯಸ್ಸಾಗಲು ಮೂರು ವರ್ಷಗಳು ಕಡಿಮೆ ಇತ್ತಂತೆ ಎಂದು ಹೇಳಲಾಗಿದೆ.
ನಂತರ ಅವರಿಬ್ಬರು ತಮ್ಮ ಮುಂದಿನ 50 ವರ್ಷಗಳಲ್ಲಿ, ವಿಭಿನ್ನ ಜನರನ್ನು ಮದುವೆಯಾಗಿ ತಮ್ಮ ಜೀವನವನ್ನು ಪ್ರತ್ಯೇಕವಾಗಿ ನಡೆಸಿದರು. ಆದರೆ ಇಷ್ಟು ವರ್ಷಗಳ ನಂತರ ಜೀನೆಟ್ ನನ್ನು ಹುಡುಕುವ ನಿರ್ಧಾರವನ್ನು ಲೆನ್ ಮಾಡಿದರು. ಅವರು ಅಂತಿಮವಾಗಿ ತಮ್ಮ ಹೆಳೆಯ ಪ್ರಿಯತಮೆಯನ್ನು ಮರು ಸಂಪರ್ಕಿಸಿದರು ಮತ್ತು ಈಗ ಇಬ್ಬರು ಮದುವೆಯಾಗಿದ್ದಾರೆ.


ಇದನ್ನೂ ಓದಿ:  Beautiful Place: ರಸ್ತೆಗಳೇ ಇಲ್ಲದ ಹಳ್ಳಿಯಿದು! ಕಾರು, ಬೈಕ್‌ಗಳ ಬದಲು ದೋಣಿಯಲ್ಲೇ ಪ್ರಯಾಣಿಸುತ್ತಾರೆ ಇಲ್ಲಿನ ಜನರು


ಹಳೆಯ ಪ್ರೇಮಿಗಳು ತಮ್ಮ ಹೊಸ ಮದುವೆ ಬಗ್ಗೆ ಏನ್ ಹೇಳ್ತಾರೆ?


"ವೈವಾಹಿಕ ಜೀವನವು ತುಂಬಾನೇ ಅದ್ಭುತವಾಗಿದೆ, ನನ್ನನ್ನು ಗೌರವದಿಂದ ಕಾಣುವ ವ್ಯಕ್ತಿಯನ್ನು ನಾನು ಮದುವೆಯಾಗಿದ್ದೇನೆ. ಲೆನ್ ಅವರೊಂದಿಗೆ ನನ್ನ ಮಿಕ್ಕಿರುವ ಜೀವನವನ್ನು ಸಂತೋಷದಿಂದ ಕಳೆಯಲು ಬಯಸುತ್ತೇನೆ" ಅಂತ ಜಿನೇಟ್ ಹೇಳಿದರು.

top videos


  "ಇಷ್ಟು ವರ್ಷಗಳ ನಂತರ ಮತ್ತೆ ನಮ್ಮ ನಡುವೆ ಆ ಪ್ರೀತಿ ಶುರುವಾಯಿತು" ಎಂದು ಜಿನೇಟ್ ಅವರ ಹೊಸ ಪತಿ ಹೇಳಿದರು. "ನಾವು ಪರಸ್ಪರ ಕವಿತೆಗಳನ್ನು ಓದಿದೆವು ಮತ್ತು ಉಂಗುರಗಳನ್ನು ಬದಲಾಯಿಸಿಕೊಂಡೆವು. ನನ್ನದನ್ನು ಓದಿದಾಗ ನಾನು ತುಂಬಾನೇ ಭಾವುಕನಾದೆ. ಅವಳ ಮೇಲಿನ ನನ್ನ ಪ್ರೀತಿಯಿಂದ ನಾನು ಭಾವಪರವಶನಾದೆ" ಎಂದು ಲೆನ್ ಹೇಳಿದರು.

  First published: