ಕೇರಳದ ಪ್ರವಾಹ ಸಂತ್ರಸ್ತರಿಗೆ ತನ್ನಲ್ಲಿದ್ದ 94 ರೂಪಾಯಿಯನ್ನೇ ದಾನ ಮಾಡಿದ ಬಡ ಭಿಕ್ಷುಕ!

Precilla Olivia Dias
Updated:September 3, 2018, 4:38 PM IST
ಕೇರಳದ ಪ್ರವಾಹ ಸಂತ್ರಸ್ತರಿಗೆ ತನ್ನಲ್ಲಿದ್ದ 94 ರೂಪಾಯಿಯನ್ನೇ ದಾನ ಮಾಡಿದ ಬಡ ಭಿಕ್ಷುಕ!
Precilla Olivia Dias
Updated: September 3, 2018, 4:38 PM IST
ಪ್ರೆಸಿಲ್ಲಾ ಒಲಿವಿಯಾ ಡಾಯಸ್​, ನ್ಯೂಸ್​ 18 ಕನ್ನಡ

ತಿರುವನಂತಪುರಂ(ಸೆ.03): ಕೆಲ ದಿನಗಳ ಹಿಂದಷ್ಟೇ ಕೇರಳದಲ್ಲಿ ಸುರಿದ ಭಾರೀ ಮಳೆಗೆ ನೆರೆ ಬಂದಿದ್ದಿತ್ತು. ಈ ಪ್ರವಾಹದಲ್ಲಿ 300ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, ಹಲವಾರು ಮಂದಿ ತಮ್ಮ ಮನೆಗಳನ್ನು ಕಳೆದುಕೊಂಡಿದ್ದಾರೆ. ಶತಮಾನದ ಬಳಿಕ ಸುರಿದ ಈ ಭಯಾನಕ ಮಳೆಗೆ ನಲುಗಿದ ಕೇರಳದ ಸ್ಥಿತಿ ಕಂಡು ದೇಶವೇ ಮಿಡಿದಿತ್ತು. ಎಲ್ಲರೂ ತಮ್ಮ ಕ್ಷಮತೆಗೆ ತಕ್ಕಂತೆ ಇಲ್ಲಿನ ಜನರಿಗೆ ನೆರವು ನೀಡುತ್ತಿದ್ದಾರೆ. ನಟ/ ನಟಿಯರು, ಜನ ಸಾಮಾನ್ಯರು, ಭಾರತೀಯ ಸೇನಾ ಯೋಧರು, ಎನ್​ಡಿಆರ್​ಎಫ್​ ಹೀಗೆ ಎಲ್ಲರೂ ತಮ್ಮ ಕೈಲಾದಷ್ಟು ಸಹಾಯ ಮಾಡಿದ್ದಾರೆ. ಆದರೆ ಹೀಗೆ ನೆರವು ಸಹಾಯ ಹಸ್ತ ಚಾಚಿರುವುದರಲ್ಲಿ ಓರ್ವ ಭಿಕ್ಷುಕನ ಕಥೆ ಮಾತ್ರ ವಿಶೇಷವಾಗಿದೆ. ಈ ಬಡ ಹಾಗೂ ವೃದ್ಧ ಬಿಕ್ಷುಕ ಬಿಕ್ಷೆ ಬೇಡಿ ಕೂಡಿಟ್ಟಿದ್ದ 94 ರೂಪಾಯಿಗಳನ್ನು ಕೇರಳಕ್ಕೆ ದಾನವಾಗಿ ನೀಡಿದ್ದಾರೆ. ಹಲವಾರು ಮಂದಿ ಲಕ್ಷ ಲಕ್ಷ ನೀಡಿದರೂ, ಇವರೆಲ್ಲರ ನಡುವೆ ಈ ಬಡ ಭಿಕ್ಷುಕ ನೀಡಿರುವ 94 ರೂಪಾಯಿ ನೀಡಿ ಮಾಡಿರುವ ಸಹಾಯ ಸದ್ಯ ಎಲ್ಲರ ಮನ ತಟ್ಟುತ್ತಿದೆ.

ಇಲ್ಲಿನ ಕೊಟ್ಟಾಯಂನಲ್ಲಿ ವಾಸಿಸುವ ಮೋಹನನ್ ಎಂಬವರು ಸುಮಾರು 4 ಕಿ. ಮೀಟರ್​ನಷ್ಟು ದೂರ ಕಾಲ್ನಡಿಗೆಯಲ್ಲೇ ಸಾಗಿ, ಇರಾಟ್ಟೂಪೇಟ್​ನ ನಗರಪಾಲಿಕೆಯ ಮಾಜಿ ಅಧ್ಯಕ್ಷ ಟಿ. ಎಂ ರಶೀದ್​ರವರ ಮನೆಗೆ ತಲುಪಿದ್ದಾರೆ. ರಶೀದ್​ರವರು ಆರಂಭದಲ್ಲಿ ಮೋಹನನ್ ಭಿಕ್ಷೆ ಬೇಡಲು ಬಂದಿದ್ದಾರೆ ಎಂದು ಯೋಚಿಸಿದ್ದಾರೆ, ಹೀಗಾಗಿ 20 ರೂಪಾಯಿ ನೀಡಿದ್ದಾರೆ. ಆದರೆ ಆ ಬಡ ವೃದ್ಧ ಅವರಿಂದ ಹಣ ಸ್ವೀಕರಿಸುವ ಬದಲಾಗಿ ಅಲ್ಲೇ ಇದ್ದ ಮೆಟ್ಟಿಲುಗಳ ಮೇಲೆ ಕುಳಿತು ತಮ್ಮಲ್ಲಿದ್ದ ಹಣ ಎಣಿಸಲಾರಂಭಿಸಿದಾಗ ರಶೀದ್​ ಅಚ್ಚರಿಗೊಳಗಾಗಿದ್ದಾರೆ.

ರಶೀದ್​ ಈ ಇಡೀ ಘಟನೆಯನ್ನು ಫೇಸ್​ಬುಕ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಈ ಮನಮಿಡಿಯುವ ಘಟನೆಯ ಬಗ್ಗೆ ಬರೆದಿರುವ ರಶೀದ್​ "ಮೋಹನನ್ ನನಗೆ 94 ರೂಪಾಯಿ ನೀಡಿ ಅದನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹಾಕುವಂತೆ ಕೇಳಿಕೊಂಡರು. ಮೋಹನನ್​ ತನ್ನ ಬಳಿ ಇದ್ದ ಹಣವನ್ನು ಎಣಿಸಿ ಎಲ್ಲವನ್ನೂ ಸಂತ್ರಸ್ತರಿಗೆ ದಾನ ಮಾಡುವಂತೆ ಹೇಳಿ ಹೋದ" ಎಂದು ಬರೆದುಕೊಂಡಿದ್ದಾರೆ.


ಮನೋರಮಾ ಪತ್ರಿಕೆಯೊಂದಿಗೆ ಮಾತನಾಡಿದ ರಶೀದ್​ "ಮೋಹನನ್ ನನ್ನ ಕೈಯ್ಯಲ್ಲಿ ನಾಣ್ಯಗಳನ್ನಿಟ್ಟು ಒಂದು ಘಟನೆಯು ತನ್ನ ಜೀವನವನ್ನು ಹಾಳು ಮಾಡಿತು. ಹೀಗಾಗಿ ತಮ್ಮಿಂದ ಇಷ್ಟೇ ಸಹಾಯ ಮಾಡಲು ಸಾಧ್ಯ ಎಂದು ಹೇಳಿ ಹೊರಟುಹೋದರು" ಎಂದಿದ್ದಾರೆ.
First published:September 3, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ