Ola and Uber: ಓಲಾ, ಉಬರ್ ವಿಲೀನ; ವದಂತಿಗಳ ಬಗ್ಗೆ ಏನಂದ್ರು ಗೊತ್ತಾ ಓಲಾ ಸಿಇಒ ಭಾವೀಶ್ ಅಗರ್ವಾಲ್

ಓಲಾ, ಉಬರ್

ಓಲಾ, ಉಬರ್

ಸದ್ಯ ಆಪ್‌ ಆಧಾರಿತ ಕ್ಯಾಬ್‌ ಸೇವೆ ನೀಡುವ ಈ ಎರಡು ದೈತ್ಯ ಕಂಪನಿಗಳು ವಿಲೀನಗೊಳ್ಳುತ್ತವೆ ಎಂಬ ಸುದ್ದಿ ಭಾರಿ ಚರ್ಚೆಯಾಗುತ್ತಿದೆ. ಆದರೆ ಈ ವರದಿಯನ್ನು ತಳ್ಳಿಹಾಕಿರುವ ಓಲಾ ಮುಖ್ಯ ಕಾರ್ಯನಿರ್ವಾಹಕ ಭಾವೀಶ್ ಅಗರ್ವಾಲ್ ವಿಲೀನಗೊಳ್ಳುವ ಸಾಧ್ಯತೆಯ ವರದಿಗಳನ್ನು ನಿರಾಕರಿಸಿದ್ದಾರೆ.

  • News18 Kannada
  • 5-MIN READ
  • Last Updated :
  • Olavanna, India
  • Share this:

ಬೆಂಗಳೂರು (Bengaluru) ಸೇರಿದಂತೆ ಮಹಾನಗರಗಳಲ್ಲಿ ಎಲ್ಲಿಯಾದರೂ ಹೋಗಬೇಕು ಅಂದಾಕ್ಷಣ ಮೊದಲು ನೆನಪಾಗೋದೆ ಈ ಓಲಾ (Ola), ಉಬರ್ (Uber) ನಂತಹ ಆ್ಯಪ್ ಆಧಾರಿತ ಸೇವೆಗಳು. ಕ್ಷಣ ಮಾತ್ರದಲ್ಲಿ ಆ್ಯಪ್ ಮೂಲಕ ನಮಗೆ ಬೇಕಾಗದಂತಹ ವಾಹನಗಳನ್ನು ಬುಕ್ಕಿಂಗ್ (Booking) ಮಾಡಿದರೆ ಮುಗಿಯಿತು, ನಿಮ್ಮನ್ನು ಎಲ್ಲಿಗೆ ಕರೆದುಕೊಂಡು ಹೋಗಿ ತಲುಪಿಸಬೇಕೋ ಅದನ್ನು ಈ ಓಲಾ, ಉಬರ್ ಸೇವೆಗಳು ಮಾಡುತ್ತವೆ. ಸದ್ಯ ಆಪ್‌ ಆಧಾರಿತ ಕ್ಯಾಬ್‌ (Cab) ಸೇವೆ ನೀಡುವ ಈ ಎರಡು ದೈತ್ಯ ಕಂಪನಿಗಳು (Company) ವಿಲೀನಗೊಳ್ಳುತ್ತವೆ ಎಂಬ ಸುದ್ದಿ ಭಾರಿ ಚರ್ಚೆಯಾಗುತ್ತಿದೆ. ಆದರೆ ಈ ವರದಿಯನ್ನು ತಳ್ಳಿಹಾಕಿರುವ ಓಲಾ ಮುಖ್ಯ ಕಾರ್ಯನಿರ್ವಾಹಕ ಭಾವೀಶ್ ಅಗರ್ವಾಲ್ ವಿಲೀನಗೊಳ್ಳುವ ಸಾಧ್ಯತೆಯ ವರದಿಗಳನ್ನು ನಿರಾಕರಿಸಿದ್ದಾರೆ.


ವದಂತಿಗಳನ್ನು ತಳ್ಳಿಹಾಕಿದ ಓಲಾ ಸಿಇಒ
ಈ ಎರಡು ರೈಡ್-ಹೇಲಿಂಗ್ ದೈತ್ಯರು ಭಾರತದಲ್ಲಿ ಪರಸ್ಪರ ಸ್ಪರ್ಧಿಸುತ್ತಿದ್ದಾರೆ. ಆದರೆ ಭಾರತದಲ್ಲಿ ಉಬರ್‌ನೊಂದಿಗೆ ಸಂಭವನೀಯ ವಿಲೀನದ ಕುರಿತು ಚರ್ಚಿಸಲು ಅಗರವಾಲ್ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಉಬರ್‌ನ ಉನ್ನತ ಕಾರ್ಯನಿರ್ವಾಹಕರನ್ನು ಭೇಟಿ ಮಾಡಿದ್ದಾರೆ ಎಂದು ವರದಿಯೊಂದು ಹೇಳಿದೆ. ಎರಡು ಕಂಪನಿಗಳು ವಿಲೀನದ ಸಾಧ್ಯತೆಗಳ ಬಗ್ಗೆ ಮೊದಲು ಚರ್ಚಿಸಿದ್ದಾದರೂ, ಒಪ್ಪಂದವು ಕಾರ್ಯರೂಪಕ್ಕೆ ಬರಲಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.


ಎರಡೂ ಕಂಪನಿಗಳು ವಿಲೀನವನ್ನು ಪರಿಗಣಿಸುತ್ತಿರುವ ಕಾರಣ ಕಂಪನಿಗಳು ನಷ್ಟ ಅನುಭವಿಸುತ್ತಿವೆಯೇ ಎಂಬ ಪ್ರಶ್ನೆ ಕೂಡ ಹುಟ್ಟಿಕೊಂಡಿದೆ. ಆದರೆ ಈ ಎಲ್ಲಾ ವದಂತಿಗಳಿಗೆ ಓಲಾ ಸಿಇಒ ಟ್ವೀಟ್ ಮೂಲಕ ತೆರೆ ಎಳೆದಿದ್ದಾರೆ.


“ಯಾವ ಕಂಪನಿ ಜೊತೆಯೂ ವಿಲೀನ ಮಾಡಿಕೊಳ್ಳುತ್ತಿಲ್ಲ”
ಓಲಾ ಮತ್ತು ಉಬರ್ ಸಂಭಾವ್ಯ ವಿಲೀನವನ್ನು ಪರಿಗಣಿಸುತ್ತಿವೆ ಎಂದು ‘ಎಕನಾಮಿಕ್ ಟೈಮ್ಸ್’ ವರದಿ ಮಾಡಿತ್ತು. ಆದರೆ ಈ ವರದಿಯನ್ನು ಓಲಾ ಸಿಇಒ ಭಾವೀಶ್ ಅಗರವಾಲ್ ತಳ್ಳಿಹಾಕಿ ಟ್ವಿಟ್ಟರ್ ನಲ್ಲಿ ಸ್ಪಷ್ಟೀಕರಣ ನೀಡಿದ್ದಾರೆ. “ಈ ವದಂತಿಗಳು ಸುಳ್ಳು, ನಾವು ತುಂಬಾ ಲಾಭದಾಯಕ ಮತ್ತು ಉತ್ತಮವಾಗಿ ಬೆಳೆಯುತ್ತಿದ್ದೇವೆ. ಕೆಲವು ಇತರ ಕಂಪನಿಗಳು ತಮ್ಮ ವ್ಯವಹಾರವನ್ನು ಭಾರತದಿಂದ ನಿರ್ಗಮಿಸಲು ಬಯಸಿದರೆ, ಅವರಿಗೆ ಸ್ವಾಗತ! ನಾವು ಎಂದಿಗೂ ವಿಲೀನಗೊಳ್ಳುವುದಿಲ್ಲ." ಎಂದು ಟ್ವೀಟ್ ಮಾಡಿದ್ದಾರೆ.


ವರದಿಗಳನ್ನು ನಿರಾಕರಿಸಿದ ಉಬರ್
ಓಲಾ ಜೊತೆಗಿನ ವಿಲೀನ ಮಾತುಕತೆಯ ಬಗ್ಗೆ ಉಬರ್ ಕೂಡ ನಿರಾಕರಿಸಿದೆ. ಯುಎಸ್ ಮೂಲದ ಕಾರ್-ಹೇಲಿಂಗ್ ದೈತ್ಯ ಸ್ಪಷ್ಟನೆ ನೀಡಿ, "ಆ ವರದಿಯು ನಿಖರವಾಗಿಲ್ಲ. ನಾವು ಓಲಾ ಜೊತೆ ವಿಲೀನದ ಮಾತುಕತೆಯಲ್ಲಿಲ್ಲ" ಎಂದು ಉಬರ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.


ಇದನ್ನೂ ಓದಿ: Swiggy: ಆಹಾರ ವಿತರಣೆ ವೇಳೆ ಡೆಲಿವರಿ ಸಿಬ್ಬಂದಿ ಅಪಘಾತಕ್ಕೆ ಬಲಿ


ನಾಲ್ಕು ವರ್ಷಗಳ ಹಿಂದೆ, ಎರಡೂ ಸಂಸ್ಥೆಗಳಲ್ಲಿ ಹೂಡಿಕೆದಾರರಾಗಿರುವ ಮಸಯೋಶಿ ಸನ್ ನೇತೃತ್ವದ ಸಾಫ್ಟ್ ಬ್ಯಾಂಕ್ ವಿಲೀನಕ್ಕೆ ಒತ್ತಾಯಿಸಿದಾಗ ಪರಸ್ಪರ ತೀವ್ರವಾಗಿ ಸ್ಪರ್ಧಿಸಿದ ಎರಡು ಕಂಪನಿಗಳು ವಿಲೀನ ಮಾತುಕತೆಗೆ ಕುಳಿತಿವೆ ಎಂದು ವರದಿಯಾಗಿತ್ತು ಆದರೆ ಒಪ್ಪಂದವು ಆಗ ಕಾರ್ಯರೂಪಕ್ಕೆ ಬರಲು ಸಾಧ್ಯವಾಗಲಿಲ್ಲ.


ನಷ್ಟದಲ್ಲಿದ್ದಾವೆಯೇ ಓಲಾ, ಉಬರ್?
ವರದಿಗಳ ಪ್ರಕಾರ, ಎರಡೂ ಕಂಪನಿಗಳು ತೀವ್ರ ಸ್ಪರ್ಧಾತ್ಮಕ ಭಾರತೀಯ ಮಾರುಕಟ್ಟೆಯಲ್ಲಿ ಪರಸ್ಪರ ಪೈಪೋಟಿ ನಡೆಸುತ್ತಿದ್ದು, ಪ್ರಯಾಣಿಕರಿಗೆ ಪ್ರೋತ್ಸಾಹ ಮತ್ತು ರಿಯಾಯಿತಿಗಳ ರೂಪದಲ್ಲಿ ನೂರಾರು ಕೋಟಿ ರೂ. ಖರ್ಚು ಮಾಡಿವೆ. ಆದರೂ ಈ ಎಲ್ಲಾ ಪ್ರಯತ್ನಗಳ ಹೊರತಾಗಿಯೂ ಎರಡೂ ಕಂಪನಿಗಳು ನಷ್ಟ ಅನುಭವಿಸುತ್ತಿವೆ ಎನ್ನಲಾಗುತ್ತಿದೆ.


ಉಬರ್ ತನ್ನ ಆಹಾರ ವಿತರಣಾ ವ್ಯವಹಾರವಾದ ಉಬರ್ ಈಟ್ಸ್ ಅನ್ನು 2020 ರಲ್ಲಿ ಜೊಮಾಟೊಗೆ ಮಾರಾಟ ಮಾಡಿತು ಮತ್ತು ಓಲಾ ತನ್ನ ಕಿರಾಣಿ ವಿತರಣಾ ವ್ಯವಹಾರವನ್ನು ಸ್ಥಗಿತಗೊಳಿಸಿತು.. ಓಲಾ ಈಗ ಎಲೆಕ್ಟ್ರಿಕ್ ಮೊಬಿಲಿಟಿ ವ್ಯವಹಾರದಲ್ಲಿ ಹೂಡಿಕೆ ಮಾಡಿದ್ದು, ಮತ್ತೊಂದು ಪ್ರಯತ್ನಕ್ಕೆ ಮುಂದಾಗಿದೆ. ವೆಚ್ಚ ನಿರ್ವಹಿಸಲು ಓಲಾ ತನ್ನ 1000 ಉದ್ಯೋಗಿಗಳನ್ನು ವಜಾಗೊಳಿಸುವ ಪ್ರಕ್ರಿಯೆಯಲ್ಲಿದೆ ಎಂದು ವರದಿಯಾಗಿದೆ. ಮತ್ತೊಂದು ವರದಿ ಪ್ರಕಾರ, ಎಲೆಕ್ಟ್ರಾನಿಕ್ ಸ್ಪೋರ್ಟ್ ಕಾರು ಯೋಜನೆ ಪ್ರಾರಂಭಿಸಿರುವ ಓಲಾ ಅದಕ್ಕೆ ಹೊಸ ಉದ್ಯೋಗಿಗಳನ್ನು ನೇಮಕಾತಿ ಮಾಡಿಕೊಳ್ಳುತ್ತಿದೆ ಎನ್ನಲಾಗಿದೆ.


ಇದನ್ನೂ ಓದಿ:  Work From Anywhere: ಈ ಕಂಪೆನಿ ಉದ್ಯೋಗಿಗಳು ಎಲ್ಲಿಂದ ಬೇಕಾದರೂ ಕೆಲಸ ಮಾಡ್ಬಹುದು! ಆಫೀಸ್​ಗೆ ಬರಬೇಕು ಅಂತಿಲ್ಲ

top videos


    ರಸ್ತೆಯಲ್ಲಿ ಈ ಆ್ಯಪ್ ಆಧಾರಿತ ಕ್ಯಾಬ್ ಗಳು ಕಡಿಮೆಯಾಗಿರುವುದರ ಜೊತೆಗೆ ಈ ವಿಲೀನ ಮಾತುಕತೆ ಪ್ರಯಾಣಿಕರಿಗೆ ಸ್ವಲ್ಪ ಶಾಕ್ ನೀಡಿತ್ತು. ಆದರೆ ಸದ್ಯ ಈ ಎಲ್ಲಾ ಗೊಂದಲಗಳಿಗೆ ಖುದ್ದಾಗಿ ಓಲಾ ಸಿಇಒ ಸ್ಪಷ್ಟನೆ ನೀಡಿದ್ದು ಪ್ರಯಾಣಿಕರು ನೀರಾಳರಾಗಿದ್ದಾರೆ.

    First published: