2012ರ ನಿರ್ಭಯಾ ಅತ್ಯಾಚಾರ ಪ್ರಕರಣ: ತಿಹಾರ್ ಜೈಲಿನಲ್ಲಿ ನಾಲ್ವರು ಅಪರಾಧಿಗಳ ಗಲ್ಲಿಗೇರಿಸುವ ಅಣಕು ತಾಲೀಮು

ಏಳು ವರ್ಷಗಳ ಹಿಂದಿನ ನಿರ್ಭಯಾ ಅತ್ಯಾಚಾರ ಪ್ರಕರಣದಲ್ಲಿ ನಾಲ್ವರು ಅಪರಾಧಿಗಳಿಗೆ ಪಟಿಯಾಲ ಹೌಸ್ ನ್ಯಾಯಾಲಯವು ಡೆತ್ ವಾರೆಂಟ್ ಜಾರಿಗೊಳಿಸಿ ಜ.7ರಂದೇ ಆದೇಶ ಹೊರಡಿಸಿದೆ. ಅಂದರೆ, ಈ ನಾಲ್ವರನ್ನು ನೇಣಿಗೇರಿಸುವ ಪ್ರಕ್ರಿಯೆ ಪ್ರಾರಂಭಿಸಲು ಕೋರ್ಟ್ ಹಸಿರುನಿಶಾನೆ ತೋರಿದೆ.

news18-kannada
Updated:January 13, 2020, 12:18 PM IST
2012ರ ನಿರ್ಭಯಾ ಅತ್ಯಾಚಾರ ಪ್ರಕರಣ: ತಿಹಾರ್ ಜೈಲಿನಲ್ಲಿ ನಾಲ್ವರು ಅಪರಾಧಿಗಳ ಗಲ್ಲಿಗೇರಿಸುವ ಅಣಕು ತಾಲೀಮು
ನಿರ್ಭಯಾ ಕೇಸ್​​
  • Share this:
ನವದೆಹಲಿ(ಜ.13): ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ನಿರ್ಭಯಾ ಅತ್ಯಾಚಾರ ಕೊಲೆ ಪ್ರಕರಣದಲ್ಲಿ ನಾಲ್ವರು ಅಪರಾಧಿಗಳನ್ನು ಗಲ್ಲಿಗೇರಿಸಲು ದಿನಗಣನೆ ಶುರುವಾಗಿದೆ. ಆದ್ದರಿಂದಲೇ ನಿನ್ನೆಯೇ(ಭಾನುವಾರ) ತಿಹಾರ್ ಜೈಲಿನಲ್ಲಿ ನಾಲ್ವರನ್ನು ಏಕಕಾಲಕ್ಕೆ ನೇಣುಗಂಬಕ್ಕೆ ಏರಿಸುವ ನಕಲಿ ಅಣಕು(Dummy Execution) ತಾಲೀಮು ನಡೆಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಜನವರಿ 22ನೇ ತಾರೀಕಿನಂದು ತಿಹಾರ್ ಜೈಲಿನ ಸೆಲ್​​​ ನಂಬರ್​​​ ಮೂರರಲ್ಲಿ ನೇಣಿಗೆ ಹಾಕಲು ಬಳಸುವ ಹಗ್ಗಗಳನ್ನೇ ಬಳಸಿ ಈ ನಕಲಿ ಅಣಕು ಪ್ರಯೋಗ ಮಾಡಲಾಗಿದೆ. ನಾಲ್ವರ ತೂಕದ ಆಧಾರದ ಮೇಲೆ ಕಲ್ಲು ಮತ್ತು ಮರಳು ತುಂಬಿದ್ದ ಗೋಣಿಚೀಲಗಳನ್ನು ನೇಣಿಗೇರಿಸಿ ತಾಲೀಮು ನಡೆಸಿರುವುದಾಗಿ ವರದಿಯಾಗಿದೆ.

ಏಳು ವರ್ಷಗಳ ಹಿಂದಿನ ನಿರ್ಭಯಾ ಅತ್ಯಾಚಾರ ಪ್ರಕರಣದಲ್ಲಿ ನಾಲ್ವರು ಅಪರಾಧಿಗಳಿಗೆ ಪಟಿಯಾಲ ಹೌಸ್ ನ್ಯಾಯಾಲಯವು ಡೆತ್ ವಾರೆಂಟ್ ಜಾರಿಗೊಳಿಸಿ ಜ.7ರಂದೇ ಆದೇಶ ಹೊರಡಿಸಿದೆ. ಅಂದರೆ, ಈ ನಾಲ್ವರನ್ನು ನೇಣಿಗೇರಿಸುವ ಪ್ರಕ್ರಿಯೆ ಪ್ರಾರಂಭಿಸಲು ಕೋರ್ಟ್ ಹಸಿರುನಿಶಾನೆ ತೋರಿದೆ. ಜನವರಿ 22, ಬೆಳಗ್ಗೆ 7ಕ್ಕೆ ಇವರನ್ನು ನೇಣಿಗೆ ಏರಿಸಲು ಸಮಯ ನಿಗದಿಯಾಗಿದೆ.

ಏನಿದು ರೇಪ್ ಕೇಸ್?

2012ರ ಡಿಸೆಂಬರ್ 16ರಂದು ದಕ್ಷಿಣ ದೆಹಲಿಯಲ್ಲಿ ಅರೆವೈದ್ಯಕೀಯ ವಿದ್ಯಾರ್ಥಿನಿ ಜ್ಯೋತಿ ಸಿಂಗ್ ಅವರನ್ನು ಬರ್ಬರವಾಗಿ ಸಾಮೂಹಿಕ ಅತ್ಯಾಚಾರ ಮಾಡಲಾಗಿತ್ತು. ಒಂದು ಬಸ್ಸಿನೊಳಗೆ ಆರು ಜನರು ಸೇರಿಕೊಂಡು ಜ್ಯೋತಿ ಸಿಂಗ್​ರನ್ನು ಗ್ಯಾಂಗ್ ರೇಪ್ ಮಾಡಿದ್ದರು. ಆಕೆಯ ಜೊತೆಗಿದ್ದ ಸ್ನೇಹಿತನನ್ನ ಕೈಕಾಲು ಕಟ್ಟಿ ಪ್ರಜ್ಞೆ ತಪ್ಪುವಂತೆ ಥಳಿಸಲಾಗಿತ್ತು. ಜ್ಯೋತಿ ಸಿಂಗ್ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಮಾಡಿದ್ದಷ್ಟೇ ಅಲ್ಲ ಅಮಾನುಷವಾಗಿ ದೈಹಿಕ ಹಲ್ಲೆ ಮಾಡಲಾಗಿತ್ತು. ಮರ್ಮಾಂಗಗಳನ್ನು ಘಾಸಿಗೊಳಿಸಲಾಗಿತ್ತು. ಅಷ್ಟೇ ಅಲ್ಲ, ಚಲಿಸುತ್ತಿದ್ದ ಬಸ್ಸಿನಿಂದಲೇ ಅವರಿಬ್ಬರನ್ನೂ ಹೊರಗೆ ಎಸೆದು ಹೋಗಿದ್ದರು.

ಇದನ್ನೂ ಓದಿ: ಕಪಾಲಬೆಟ್ಟದ ಗೋಮಾಳದಲ್ಲೇ ಏಸು ಪ್ರತಿಮೆ ನಿರ್ಮಾಣ; ಡಿ.ಕೆ. ಶಿವಕುಮಾರ್ ಭರವಸೆ

ತೀರಾ ಗಂಭೀರವಾಗಿ ಗಾಯಗೊಂಡಿದ್ದ ಜ್ಯೋತಿ ಸಿಂಗ್ ಕೆಲ ದಿನಗಳ ಕಾಲ ಜೀವನ್ಮರಣ ಹೋರಾಟ ತೋರಿ ನಿಧನರಾದರು. ಆ ಘಟನೆಗೆ ಜ್ಯೋತಿ ಸಿಂಗ್ ಜೊತೆಗಿದ್ದ ಸ್ನೇಹಿತ ಮಾತ್ರ ಸಾಕ್ಷಿಯಾಗಿದ್ದರು. ರಾಮ್ ಸಿಂಗ್, ಅಕ್ಷಯ್, ವಿನಯ್, ಮುಕೇಶ್, ಪವನ್ ಕುಮಾರ್ ಹಾಗೂ ಮತ್ತೋರ್ವ ಅಪ್ರಾಪ್ತ ಹುಡುಗನನ್ನು ಪೊಲೀಸರು ಬಂಧಿಸಿದರು. ಪ್ರಮುಖ ಆರೋಪಿ ರಾಮ್ ಸಿಂಗ್ ತಿಹಾರ್ ಜೈಲಿನಲ್ಲೇ ನೇಣುಬಿಗಿದುಕೊಂಡು ಸಾವನ್ನಪ್ಪಿದ್ದ. ಅಪ್ರಾಪ್ತ ಆರೋಪಿಯನ್ನು ಬಾಲಾಪರಾಧ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಯಿತು. ಉಳಿದ ನಾಲ್ವರು ಆರೋಪಿಗಳ ವಿಚಾರಣೆ ನಡೆದು ಅವರೆಲ್ಲರೂ ತಪ್ಪಿತಸ್ಥರೆಂಬುದು ರುಜುವಾತಾಯಿತು. ಎಲ್ಲರಿಗೂ ಮರಣ ದಂಡನೆ ಶಿಕ್ಷೆ ವಿಧಿಸಲಾಯಿತು.ಆ ಬಳಿಕ ಅಪರಾಧಿಗಳು ಜೀವದಾನ ಪಡೆಯಲು ಮಾಡಿದ ಕೆಲವಾರು ಪ್ರಯತ್ನಗಳು ಫಲಕೊಡಲಿಲ್ಲ. ಮರಣದಂಡನೆ ಶಿಕ್ಷೆ ಜಾರಿಯಾದರೂ ಇನ್ನೂ ನೇಣಿಗೇರಿಸಿಲ್ಲ. ಆದಷ್ಟೂ ಬೇಗ ಗಲ್ಲಿಗೇರಿಸಿ ಎಂದು ಜ್ಯೋತಿ ಸಿಂಗ್ ಪೋಷಕರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಈಗ ಈ ಅರ್ಜಿಯ ಸಂಬಂಧ ಪಟಿಯಾಲ ಹೌಸ್ ಕೋರ್ಟ್ ತೀರ್ಪು ನೀಡಿದ್ದು, ನಾಲ್ವರನ್ನು ನೇಣುಗಂಬಕ್ಕೇರಿಸಲು ಗ್ರೀನ್ ಸಿಗ್ನಲ್ ಕೊಟ್ಟಿದೆ.
Published by: Ganesh Nachikethu
First published: January 13, 2020, 12:11 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading