ಬೆಂಗಳೂರಿನಲ್ಲಿ ಎನ್​ಆರ್​ಸಿ, ಸಿಎಎ ವಿರುದ್ಧ ತಣ್ಣಗಾಗದ ಆಕ್ರೋಶ; ರಾತ್ರೋರಾತ್ರಿ ಅಂಗಡಿ ಮುಂಗಟ್ಟುಗಳಲ್ಲಿ ಆಕ್ಷೇಪಾರ್ಹ ಬರಹ

ಕಬ್ಬನ್​ ಪಾರ್ಟ್​ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಡಿಸಿಪಿ ಚೇತನ್​ ಸಿಂಗ್​ ಸಹ ಸ್ಥಳಕ್ಕೆ ತೆರಳಿ ವಾಸ್ತವ ವರದಿ ಪಡೆದಿದ್ದಾರೆ. ಅಲ್ಲದೆ, ಚರ್ಚ್​ ಸ್ಟ್ರೀಟ್​ನಲ್ಲಿರುವ ಎಲ್ಲಾ ಅಂಗಡಿಗಳ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿರುವ ದೃಶ್ಯಗಳನ್ನೂ ಪರಿಶೀಲಿಸಿ ತಪ್ಪಿತಸ್ಥರನ್ನು ಕೂಡಲೇ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ. 

MAshok Kumar | news18-kannada
Updated:January 14, 2020, 3:56 PM IST
ಬೆಂಗಳೂರಿನಲ್ಲಿ ಎನ್​ಆರ್​ಸಿ, ಸಿಎಎ ವಿರುದ್ಧ ತಣ್ಣಗಾಗದ ಆಕ್ರೋಶ; ರಾತ್ರೋರಾತ್ರಿ ಅಂಗಡಿ ಮುಂಗಟ್ಟುಗಳಲ್ಲಿ ಆಕ್ಷೇಪಾರ್ಹ ಬರಹ
ಪ್ರಾತಿನಿಧಿಕ ಚಿತ್ರ.
  • Share this:
ಬೆಂಗಳೂರು (ಜನವರಿ 14); ಕೇಂದ್ರ ಸರ್ಕಾರದ ವಿವಾದಾತ್ಮಕ ಎನ್​ಆರ್​ಸಿ ಹಾಗೂ ಸಿಎಎ ಕಾಯ್ದೆಯ ವಿರುದ್ಧ ನಗರದಲ್ಲಿ ಹೊತ್ತಿಕೊಂಡಿರುವ ಬೆಂಕಿ ತಣ್ಣಗಾಗುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ರಾಜಧಾನಿ ಬೆಂಗಳೂರಿನಲ್ಲಿ ಕೆಲವು ಕಿಡಿಗೇಡಿಗಳು ಎನ್​ಆರ್​ಸಿ, ಸಿಎಎ ಮತ್ತು ಪ್ರಧಾನಿ ಮೋದಿ, ಅಮಿತ್​ ಶಾ ವಿರುದ್ಧ ಅಂಗಡಿ ಮುಂಗಟ್ಟುಗಳಲ್ಲಿ ರಾತ್ರೋರಾತ್ರಿ ಆಕ್ಷೇಪಾರ್ಹ ಬರವಣಿಗೆಯನ್ನು ಬರೆಯುವ ಮೂಲಕ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡುತ್ತಿದ್ದಾರೆ.

ನಗರದ ಪ್ರತಿಷ್ಠಿತ ಚರ್ಚ್​ ಸ್ಟ್ರೀಟ್​ ರಸ್ತೆಯಲ್ಲಿರುವ ಎಲ್ಲಾ ಅಂಗಡಿ ಶೆಲ್ಟರ್​ಗಳ ಮೇಲೆ ಕೆಲವು ಕಿಡಿಗೇಡಿಗಳು ನಿನ್ನೆ "ನೋ ಸಿಎಎ, ಎನ್​ಆರ್​ಸಿ" ಮತ್ತು "ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್​ ಶಾ ರಾಜೀನಾಮೆ ನೀಡಿ", "ನರೇಂದ್ರ ಮೋದಿ ಒಬ್ಬ ಕೋಮುವಾದಿ", "ಫ್ರೀ ಕಾಶ್ಮೀರ"ಎಂದು ಬರೆದಿದ್ದಾರೆ. ಪರಿಣಾಮ ಇಂದು ಬೆಳಗ್ಗೆ ಚರ್ಚ್​ ಸ್ಟ್ರೀಟ್​ನಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಕಬ್ಬನ್​ ಪಾರ್ಟ್​ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಡಿಸಿಪಿ ಚೇತನ್​ ಸಿಂಗ್​ ಸಹ ಸ್ಥಳಕ್ಕೆ ತೆರಳಿ ವಾಸ್ತವ ವರದಿ ಪಡೆದಿದ್ದಾರೆ. ಅಲ್ಲದೆ, ಚರ್ಚ್​ ಸ್ಟ್ರೀಟ್​ನಲ್ಲಿರುವ ಎಲ್ಲಾ ಅಂಗಡಿಗಳ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿರುವ ದೃಶ್ಯಗಳನ್ನೂ ಪರಿಶೀಲಿಸಿ ತಪ್ಪಿತಸ್ಥರನ್ನು ಕೂಡಲೇ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಸಿಎಎ ವಿಚಾರವಾಗಿ ಭಾರತದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ವಿಷಾದನೀಯ; ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ
Published by: MAshok Kumar
First published: January 14, 2020, 3:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading