Viral Video: ಅಪಾಯಕಾರಿ ಶಾರ್ಕ್ ಮೀನಿನ ಬಾಯಿಯಿಂದ ಹುಡುಗನನ್ನು ಕೂದಲೆಳೆಯಲ್ಲಿ ರಕ್ಷಿಸಿದ ಅಧಿಕಾರಿ
ಈ ವೇಳೆ ಆತ ಕಣ್ಣಿನ ರೆಪ್ಪೆ ಮಿಟುಕಿಸುವುದರಲ್ಲಿ ನೀರಿಗೆ ಹಾರಿ ಮಗುವನ್ನು ಬೆನ್ನಟ್ಟುವ ಪ್ರಯತ್ನದಲ್ಲಿ ಶಾರ್ಕ್ ಸಮುದ್ರದ ಉದ್ದಕ್ಕೂ ಓಡಾಡುತ್ತಿದ್ದಂತೆ ಹುಡುಗನನ್ನು ಅಧಿಕಾರಿ ಆಡ್ರಿಯನ್ ಕೊಸಿಕಿ ಈಜಿ ದಡಕ್ಕೆ ಎಳೆದು ತಂದಿದ್ದಾರೆ.
ಶಾರ್ಕ್ ಮೀನಿನಿಂದ ಹುಡುಗನನ್ನು ಅಧಿಕಾರಿ ಕಾಪಾಡುತ್ತಿರುವ ದೃಶ್ಯ.
ಫ್ಲೋರಿಡಾ (ಜುಲೈ 22); ಅಮೆರಿಕದ ಕೊಕೊ ಬೀಚ್ನಲ್ಲಿ ಸಮುದ್ರದ ದಡದಲ್ಲಿ ಆಟವಾಡುತ್ತಿದ್ದ ಬಾಲಕನೊಬ್ಬ ಕೂದಲೆಳೆಯಲ್ಲಿ ಶಾರ್ಕ್ ಮೀನಿಗೆ ಬಲಿಯಾಗುವವನಿದ್ದ. ಆದರೆ, ಪೊಲೀಸ್ ಅಧಿಕಾರಿಯ ಸಮಯೋಚಿತ ಕಾರ್ಯದಿಂದಾಗಿ ಶಾರ್ಕ್ ಮೀನಿನ ಬಾಯಿಯಿಂದ ಆ ಬಾಲಕ ಬಚಾವಾಗಿದ್ದಾನೆ. ಕೊಕೊ ಬೀಚ್ ಪೊಲೀಸರು ಈ ದೃಶ್ಯವನ್ನು ಸೆರೆಹಿಡಿದಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ವೈರಲ್ ಆಗುತ್ತಿದೆ. ಅಲ್ಲದೆ, ಅಧಿಕಾರಿಯ ಕೆಲಸಕ್ಕೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮುನ್ನ ಕೊಕೊ ಬೀಚ್ ಪೊಲೀಸರು ಘಟನೆಯ ಸಂಪೂರ್ಣ ವಿವರಣೆಯನ್ನು ಶೀರ್ಷಿಕೆಯಲ್ಲೇ ನೀಡಿದ್ದಾರೆ. “ಜುಲೈ 16 ಗುರುವಾರ ಕರ್ತವ್ಯಕ್ಕೆ ರಜೆ ಹಾಕಿದ್ದ ಅಧಿಕಾರಿ ಆಡ್ರಿಯನ್ ಕೊಸಿಕಿ ತನ್ನ ಹೆಂಡತಿಯ ಜೊತೆಗೆ ಪ್ಲೋರಿಡಾದ ಕಡಲ ಕಿನಾರೆಯಲ್ಲಿ ನಡೆಯುತ್ತಾ ಸಾಗಿದ್ದರು. ಈ ವೇಳೆ ನೀರಿನಲ್ಲಿ ಆಡುತ್ತಿದ್ದ ಸಣ್ಣ ಹುಡುಗನ ಕಡೆಗೆ ಶಾರ್ಕ್ ಮೀನೊಂದು ಬರುತ್ತಿರುವುದನ್ನು ಆತ ಗಮನಿಸಿದ್ದಾನೆ.
ಈ ವೇಳೆ ಆತ ಕಣ್ಣಿನ ರೆಪ್ಪೆ ಮಿಟುಕಿಸುವುದರಲ್ಲಿ ನೀರಿಗೆ ಹಾರಿ ಮಗುವನ್ನು ಬೆನ್ನಟ್ಟುವ ಪ್ರಯತ್ನದಲ್ಲಿ ಶಾರ್ಕ್ ಸಮುದ್ರದ ಉದ್ದಕ್ಕೂ ಓಡಾಡುತ್ತಿದ್ದಂತೆ ಹುಡುಗನನ್ನು ಅಧಿಕಾರಿ ಆಡ್ರಿಯನ್ ಕೊಸಿಕಿ ಈಜಿ ದಡಕ್ಕೆ ಎಳೆದು ತಂದಿದ್ದಾರೆ. ಈ ಮೂಲಕ ಹುಡುಗನ ಪ್ರಾಣ ಉಳಿಸಿದ್ದಾರೆ. ಹೀಗಾಗಿ ಕೊಕೊ ಬೀಚ್ ಪೊಲೀಸರು ಆಡ್ರಿಯನ್ಗೆ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇವೆ” ಎಂದು ಆ ಪೋಸ್ಟ್ ಶೀರ್ಷಿಕೆಯಲ್ಲಿ ಬರೆಯಲಾಗಿದೆ.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ