ಅನಾರೋಗ್ಯ ಇದ್ದರೂ ಒಡಿಶಾದಲ್ಲಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಮಹಾನ್‍ ತಾಯಿ

ಅತ್ಯಂತ ಆಶ್ಚರ್ಯಕರ ಸಂಗತಿಯೆಂದರೆ ಚಾಬಿಯ ಅನಾರೋಗ್ಯದ ಸ್ಥಿತಿಯ ಹೊರತಾಗಿಯೂ, ಯಾವುದೇ ಶಸ್ತ್ರಚಿಕಿತ್ಸೆ ಇಲ್ಲದೆ ಸಾಮಾನ್ಯ ವಿಧಾನ ಅಂದರೆ ನಾರ್ಮಲ್​ ಡೆಲಿವರಿ ಹೆರಿಗೆ ಮಾಡಲಾಯಿತು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:

  ಇತ್ತೀಚಿನ ದಿನಗಳಲ್ಲಿ ಅವಳಿ-ಜವಳಿ, ತ್ರಿವಳಿ ಮಕ್ಕಳ ಜನನದ ಬಗ್ಗೆ ಹೆಚ್ಚು ವರದಿಗಳು ಬರುತ್ತಿದೆ. ಇದೇ ರೀತಿ ಇದೀಗ ಇಲ್ಲೊಬ್ಬರು ಮಹಿಳೆ ಏಕಕಾಲದಲ್ಲಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾರೆ.


  ಈ ವಿಸ್ಮಯಕಾರಿ ಘಟನೆ ಒಡಿಶಾದ ಭುವನೇಶ್ವರದಲ್ಲಿ ನಡೆದಿದೆ. ಚಾಬಿ ನಾಯಕ್ ಎಂಬ ಮಹಿಳೆಯೇ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಮಹಾನ್ ತಾಯಿ. ಈಕೆ ಭುವನೇಶ್ವರದ ಗಂಜಾಂ ಜಿಲ್ಲೆಯ ಭಂಜನಗರ ಬ್ಲಾಕ್‍ನ ಸರಂಕುಲ್ ಮೂಲದವರು.ಆದರೆ ಇವರದ್ದು ಕಿತ್ತು ತಿನ್ನುವ ಬಡತನ. ಗರ್ಭಿಣಿಯಾಗಿದ್ದ ವೇಳೆ ಸಂಪೂರ್ಣವಾದ ಪೋಷಕಾಂಶ ಸಿಗದೆ ಕಾಮಾಲೆ, ರಕ್ತ ಹೀನತೆಯಿಂದ ಬಳಲುತ್ತಿದ್ದರು. ಪರಿಸ್ಥಿತಿ ಗಂಭೀರತೆ ಮತ್ತು ಆಕೆಯ ಆರ್ಥಿಕ ಸ್ಥಿತಿ ಅರಿತು ಆಕೆಯನ್ನು ಕಟಕ್‍ನ ಎಸ್‍ಬಿ ಮೆಡಿಕಲ್ ಆಸ್ಪತ್ರೆಗೆ ವರ್ಗಾಯಿಸಲಾಯಿತು. ನಂತರ ಪರೀಕ್ಷೆಗೆ ಒಳಪಡಿಸಿದಾಗ ಆಕೆ ಬಳಲುತ್ತಿರುವ ಕಾಯಿಲೆ ಅರಿವಾಯಿತು.


  ಈ ಮೆಡಿಕಲ್ ಪ್ರಕರಣ ನಿಜವಾಗಿಯೂ ವೈದ್ಯಕೀಯ ಲೋಕದಲ್ಲೇ ದೊಡ್ಡ ಸವಾಲೆನಿಸಿತು. ಏಕೆಂದರೆ ಬರೋಬ್ಬರಿ ಐದು ಜೀವಗಳನ್ನು ಉಳಿಸಲೇಬೇಕಾಗಿತ್ತು. ಹಾಗಾಗಿ ಎಸ್‍ಸಿಬಿ ವೈದ್ಯಕೀಯವು ಇದನ್ನು ಸವಾಲಾಗಿ ತೆಗೆದುಕೊಂಡಿದೆ ಮತ್ತು ಸ್ತ್ರೀರೋಗ ಶಾಸ್ತ್ರ, ಹೆಮಟಾಲಜಿ ಮತ್ತು ಹೆಪಟಾಲಜಿ ವಿಭಾಗಗಳ ವೈದ್ಯರು ಹಾಗೂ ತಜ್ಞರು ಒಟ್ಟಾಗಿ ಬಹುಶಿಸ್ತೀಯ ವಿಧಾನವನ್ನು ತೆಗೆದುಕೊಂಡರು ಮತ್ತು 5 ಜೀವಗಳನ್ನು ಉಳಿಸಲು ಒಂದು ಅನನ್ಯ ವಿಧಾನ ಅನುಸರಿಸಿದರು.


  ಡಾ.ತುಷಾರ್ ಕರ್ (ಎಚ್ ಒಡಿ, ಸ್ತ್ರೀರೋಗ ವಿಭಾಗ, ಎಸ್‌ಸಿಬಿ) ನೇತೃತ್ವದಲ್ಲಿ ವೈದ್ಯರ ತಂಡವು ಚಾಬಿ ನಾಯಕ್ ಹೆರಿಗೆ ವಿಚಾರದಲ್ಲಿ ದೊಡ್ಡ ಪವಾಡವನ್ನೇ ಮಾಡಿತು ಮತ್ತು ಈ ವೈದ್ಯರ ಶ್ರಮ ಮತ್ತು ಚಾಕಚಕ್ಯತೆಯಿಂದ 4 ಹೆಣ್ಣು ಮಕ್ಕಳು ಯಾವುದೇ ತೊಂದರೆಯಿಲ್ಲದೇ ಜನಿಸಿವೆ.


  ಅತ್ಯಂತ ಆಶ್ಚರ್ಯಕರ ಸಂಗತಿಯೆಂದರೆ ಚಾಬಿಯ ಅನಾರೋಗ್ಯದ ಸ್ಥಿತಿಯ ಹೊರತಾಗಿಯೂ, ಯಾವುದೇ ಶಸ್ತ್ರಚಿಕಿತ್ಸೆ ಇಲ್ಲದೆ ಸಾಮಾನ್ಯ ವಿಧಾನ ಅಂದರೆ ನಾರ್ಮಲ್​ ಡೆಲಿವರಿ ಹೆರಿಗೆ ಮಾಡಲಾಯಿತು. ಆಕೆಯು ತನ್ನ ತಾಯ್ತನವನ್ನು ಸಂತೋಷದಿಂದ ಸ್ವೀಕರಿಸುವಂತಾಯಿತು. ದೇವರ ಕೃಪೆಯಿಂದ, ಎಲ್ಲಾ 4 ಹೆಣ್ಣು ಮಕ್ಕಳ ಆರೋಗ್ಯ ಉತ್ತಮ ಸ್ಥಿತಿಯಲ್ಲಿದೆ ಮತ್ತು ತಾಯಿ ಎಲ್ಲಾ ಚಿಕಿತ್ಸೆಗಳಿಗೂ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ.


  ಈ ಹಿಂದೆ ಚಂಡೀಗಢದಲ್ಲಿಯೂ ವೈದ್ಯಕೀಯ ಲೋಕಕ್ಕೆ ಸವಾಲೆನಿಸುವ ಘಟನೆ ನಡೆದಿತ್ತು. ಅಂದರೆ 8 ವರ್ಷದ ಬಾಲಕಿಯೊಬ್ಬಳು ಹುಲ್ಲು ಕತ್ತರಿಸುವ ಯಂತ್ರಕ್ಕೆ ಕೈಯೊಡ್ಡಿ ಕೈ ಸಂಪೂರ್ಣವಾಗಿ ತುಂಡಾಗಿ ಹೋಗಿತ್ತು. ಆಕೆಯ ದೇಹದಿಂದ ಸಂಪೂರ್ಣವಾಗಿ ತುಂಡಾಗಿದ್ದ ಹುಡುಗಿಯ ಕೈಯನ್ನು ಶಸ್ತ್ರಚಿಕಿತ್ಸೆಯ ನಂತರ ಪುನಃ ಜೋಡಿಸಲಾಗಿತ್ತು.ಚಂಡೀಗಢದ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ಪ್ಲಾಸ್ಟಿಕ್ ಸರ್ಜರಿ ವಿಭಾಗದ ವೈದ್ಯರು 11 ಗಂಟೆಗಳ ಸುದೀರ್ಘ ಶಸ್ತ್ರಚಿಕಿತ್ಸೆ ನಂತರ ಹಿಮಾಚಲ ಪ್ರದೇಶದ ಹಮೀರ್‌ಪುರಕ್ಕೆ ಸೇರಿದ ಹುಡುಗಿಯ ಕೈಯನ್ನು ಪುನಃ ಜೋಡಿಸಿದರು.


  ಇದನ್ನೂ ಓದಿ: ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿಗೆ ಮುಳುವಾಗಲಿದೆಯೇ ಸಿಎಂ ಬೊಮ್ಮಾಯಿ ನಿರ್ಧಾರ; ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು?

  ಪಿಜಿಐಎಮ್‍ಇಆರ್‌ನ ಪ್ಲಾಸ್ಟಿಕ್ ಸರ್ಜರಿ ವಿಭಾಗದ ಮುಖ್ಯಸ್ಥರಾದ ಡಾ. ಆರ್. ಕೆ ಶರ್ಮಾ, ಹಿಮಾಚಲ ಪ್ರದೇಶದ ಹಮೀರ್‍ಪುರ್‍ನಿಂದ ಎಂಟು ವರ್ಷದ ಹುಡುಗಿ ಜೂನ್ 25 ರಂದು ಅಡ್ವಾನ್ಸ್ ಟ್ರಾಮಾ ಸೆಂಟರ್‌ಗೆ ಬಂದಳು. ಶಸ್ತ್ರಚಿಕಿತ್ಸೆಯ ನಂತರ 10 ದಿನಗಳವರೆಗೆ ಚಿಕಿತ್ಸೆ ಮುಂದುವರೆಯಿತು, ನಂತರ ಹುಡುಗಿಗೆ ಹೊಸ ಜೀವನ ಸಿಕ್ಕಿತು. ಶಸ್ತ್ರಚಿಕಿತ್ಸೆಯ ಸಮಯದಲ್ಲಿ, ಹುಡುಗಿ ಕೈಗೆ 20 ಸ್ಥಳಗಳಲ್ಲಿ ಹೊಲಿಗೆಗಳನ್ನು ಹಾಕಲಾಗಿದೆ. ಇದರಿಂದ ನರಗಳು ಮತ್ತು ಮೂಳೆಗಳು ಮಣಿಕಟ್ಟಿನಲ್ಲಿದ್ದವುಗಳೊಂದಿಗೆ ಮರುಸಂಪರ್ಕಿಸಲ್ಪಟ್ಟವು. ಕಸಿ ಮಾಡುವ ಮೂಲಕ ಚರ್ಮವನ್ನು ಸಹ ಮತ್ತೆ ಬೆಳೆಯುವಂತೆ  ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: