Petrol price: ಒಡಿಶಾದಲ್ಲಿ ದಾಖಲೆ ಬರೆದ ಪೆಟ್ರೋಲ್​ ಬೆಲೆ: ಲೀಟರ್​ಗೆ​ 105 ರೂ, ಬೆಂಗಳೂರಿನಲ್ಲಿ ಎಷ್ಟಿದೆ ದರ?

ಒಡಿಶಾದ ಮಲ್ಕಂಗಿರಿಯಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 105 ರೂ ಇದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ನವದೆಹಲಿ (ಜು. 2): ಈಗಾಗಲೇ ದೇಶದಲ್ಲಿ ಸೆಂಚುರಿ ಬಾರಿಸಿರುವ ಪೆಟ್ರೋಲ್​ ಬೆಲೆ ಇನ್ನು ಏರಿಕೆ ಕಾಣುತ್ತಲೇ ಇದೆ. ಪೆಟ್ರೋಲ್​ ಏರಿಕೆಯಿಂದ ದೈನಂದಿನ ಅಗತ್ಯವಸ್ತುಗಳ ಬೆಲೆ ಕೂಡ ಹೆಚ್ಚಾಗುತ್ತಿದ್ದು, ಮದ್ಯಮವರ್ಗದವರಿಗೆ ಈ ಬಿಸಿ ಮುಟ್ಟಿದೆ. ಈ ಮದುವೆ ಒಡಿಶಾದ ಮಲ್ಕಂಗಿರಿಯಲ್ಲಿ ಪೆಟ್ರೋಲ್​ ಬೆಲೆ 105 ರೂ ಆಗುವ ಮೂಲಕ ಮತ್ತೊಮ್ಮೆ ದೇಶದ ಜನರನ್ನು ಚಿಂತೆಗೆ ಒಳಗಾಗುವಂತೆ ಮಾಡಿದೆ. ಒಡಿಯಾದ ಮಲ್ಕಂಗಿರಿ ಶುಕ್ರವಾರ ಪೆಟ್ರೋಲ್​ ಬೆಲೆ 105. 02 ರೂ ಆಗುವ ಮೂಲಕ ದಾಖಲೆ ಬರೆದಿದೆ, ಇನ್ನು ಎಕ್ಸ್​ಟ್ರಾ ಪ್ರಿಮೀಯಂ ಪೆಟ್ರೋಲ್​ ಬೆಲೆ 108.86 ರೂ ಇದೆ. ಡಿಸೇಲ್​ ಬೆಲೆ 102.10 ರೂ ಇದೆ.

  ಒಡಿಶಾದ ಮಲ್ಕಂಗಿರಿಯಲ್ಲಿ ಪೆಟ್ರೋಲ್​ ಬೆಲೆ ದಾಖಲು ಬರೆದಿರುವ ಕುರಿತು ಮಾತನಾಡಿದ ಇಲ್ಲಿನ ಬಂಕ್​ ಮಾಲೀಕರು, ಬುಡಕಟ್ಟು ಪ್ರದೇಶವಾದ ಇಲ್ಲಿ ಸಾರಿಗೆ ಶುಲ್ಕ ಹೆಚ್ಚಳವಾಗಿದ್ದು, ದುಬಾರಿ ಎನಿಸಿದೆ ಎಂದಿದ್ದಾರೆ

  ಭುವನೇಶ್ವರದಲ್ಲಿ ಇಂದು ಪೆಟ್ರೋಲ್ ಬೆಲೆ 100 ರೂ ಇದ್ದು, ಡೀಸೆಲ್ ಪ್ರತಿ ಲೀಟರ್​ಗೆ 97.25 ರೂ. ಇದೆ.

  ಇನ್ನು ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಈಗಾಗಲೇ ಪೆಟ್ರೋಲ್ ಬೆಲೆ 100 ರೂ. ದಾಟಿದೆ. ಕರ್ನಾಟಕ ಮಾತ್ರವಲ್ಲದೆ ರಾಜಸ್ಥಾನ, ಹೈದರಾಬಾದ್ನಲ್ಲಿ 1 ಲೀಟರ್ ಪೆಟ್ರೋಲ್ ಬೆಲೆ 102 ರೂ. ದಾಟಿದೆ. ಜೈಪುರದಲ್ಲಿ 1 ಲೀಟರ್ ಪೆಟ್ರೋಲ್ ಬೆಲೆ 106 ರೂ. ಆಗುವ ಮೂಲಕ ಹೊಸ ದಾಖಲೆ ಬರೆದಿದೆ. ಬೆಂಗಳೂರಿನಲ್ಲೂ 1 ಲೀಟರ್ ಪೆಟ್ರೋಲ್ 102 ರೂ. ಆಗಿದೆ.ಇಂದು ಮತ್ತೆ ಪೆಟ್ರೋಲ್ ಬೆಲೆಯನ್ನು ಏರಿಸಲಾಗಿದೆ.

  ಪೆಟ್ರೋಲ್​, ಡಿಸೇಲ್​ ಬೆಲೆ ಏರಿಕೆ ಕಾರಣ

  ಡಾಲರ್​ ಎದುರು ರೂಪಾಯಿ ಮೌಲ್ಯ ಕುಸಿತ ಕೂಡ ಇಂಧನದ ಬೇಡಿಕೆಯಲ್ಲಿ ಹೆಚ್ಚಳ ಕಂಡುಬಂದಿದೆ. ಇದರ ಜೊತೆಗೆ ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಸ್ಥೆ (ಒಪೆಕ್) ಉತ್ಪಾದನೆಯನ್ನು ಹೆಚ್ಚಿಸುತ್ತಿಲ್ಲ, ಇದು ಬೇಡಿಕೆ ಮತ್ತು ಇಂಧನದ ಪೂರೈಕೆಯ ನಡುವೆ ಕೃತಕ ಅಂತರವನ್ನು ಉಂಟುಮಾಡಿದೆ

  ಇದನ್ನು ಓದಿ: ಸೋಮವಾರದಿಂದ ಮತ್ತಷ್ಟು ನಿಯಮ ಸಡಿಲಿಕೆ; ಮಾಲ್​, ಥಿಯೇಟರ್​​​ ಓಪನ್​ ಸಾಧ್ಯತೆ

  ಕೋವಿಡ್​ ಸೋಂಕು ಒಪೆಕ್ ದೇಶಗಳು ಪ್ರತಿಕೂಲ ಪರಿಣಾಮ ಬೀರಿತು. ಇದರಿಂದ ಪ್ರತಿ ಬ್ಯಾರೆಲ್ ಅಂತರರಾಷ್ಟ್ರೀಯ ಕಚ್ಚಾ ತೈಲವನ್ನು ಕಳೆದ ವರ್ಷ ಏಪ್ರಿಲ್‌ನಲ್ಲಿ 19 ಡಾಲರ್‌ಗೆ ಮಾರಾಟ ಮಾಡಲಾಯಿತು. ಜೂನ್ ಅಂತ್ಯದ ವೇಳೆಗೆ ದೇಶಗಳು ಉತ್ಪಾದನೆಯನ್ನು ಹೆಚ್ಚಿಸಬೇಕಿತ್ತು ಆದರೆ ಅವರು ಇಲ್ಲಿಯವರೆಗೆ ಮಾಡಿಲ್ಲ

  ಇದನ್ನು ಓದಿ: 100 ಕಾಫಿ ಮಾರುತ್ತಿದ್ದ ಹಟ್ಟಿ ಕಾಪಿ ಲಾಭಾ ಇಂದು 15 ಕೋಟಿ; ಬೆಂಗಳೂರಿನ ಫಿಲ್ಟರ್​ ಕಾಫಿಯ ಯಶಸ್ಸಿನ ಕಥೆ ಇದು

  ಇಂಧನ ಬೆಲೆ ಏರಿಕೆಗೆ ಅಂತರರಾಷ್ಟ್ರೀಯ ಅಂಶಗಳು ಮಾತ್ರವಲ್ಲ, ಕೇಂದ್ರವು ಅಬಕಾರಿ ಸುಂಕವನ್ನು ವಿಧಿಸಿರುವುದು ಕೂಡ ಕಾರಣವಾಗಿದೆ. ಪೆಟ್ರೋಲ್‌ನಲ್ಲಿ 9.92 ರೂ ಮತ್ತು ಡೀಸೆಲ್‌ನಲ್ಲಿ 12.97 ರೂ. ಅಬಕಾರಿ ಸುಂಕ ಹಾಕಲಾಗಿದೆ

  ಕೊರೋನಾ ಮಹಾಮಾರಿಯಿಂದ ಜನ ಸಾಯುತ್ತಿದ್ದಾರೆ. ಲಾಕ್ಡೌನ್ನಿಂದ ಕೋಟ್ಯಾಂತರ ಜನಕ್ಕೆ ನಿತ್ಯದ ಜೀವನ ನಿರ್ವಹಣೆಯೇ ದುಸ್ತರವಾಗಿದೆ. ದೇಶದ ಆರ್ಥಿಕ ಚಟುವಟಿಕೆಗೆ ಪಾರ್ಶ್ವವಾಯು ಬಡಿದಿದೆ. ಆದರೂ ಪೆಟ್ರೋಲ್ ಬೆಲೆ ಮಾತ್ರ ಕಡಿಮೆಯಾಗಿಲ್ಲ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾದರೆ ಸಹಜವಾಗಿ ನಿತ್ಯ ಬಳಕೆಯ ಬೇರೆಲ್ಲಾ ವಸ್ತುಗಳ ಬೆಲೆ ಹೆಚ್ಚಳವಾಗುತ್ತದೆ. ಇದರಿಂದ ಜನಸಾಮಾನ್ಯರಿಗೆ ಮತ್ತಷ್ಟು ಹೊರೆಯಾದಂತಾಗಿದೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು
  Published by:Seema R
  First published: