Crime News: ಹೆಡ್​​ಮಾಸ್ಟರ್​ನಿಂದಲೇ ಲೈಂಗಿಕ ಕಿರುಕುಳ, ಹಾಸ್ಟೆಲ್ ಮಹಡಿಯಿಂದ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆ

ಒಡಿಶಾದ (Odisha) ಸುಂದರ್‌ಗಢ್ ಜಿಲ್ಲೆಯ ಸರ್ಕಾರಿ ಪ್ರೌಢಶಾಲೆಯ (Govt Highschool) ಮುಖ್ಯೋಪಾಧ್ಯಾಯರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಶಾಲೆಯ 10 ನೇ ತರಗತಿಯ ವಿದ್ಯಾರ್ಥಿನಿ (Student) ಶಾಲೆಯ ಕಟ್ಟಡದ ಮೇಲ್ಛಾವಣಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯ ಘಟನೆಗಳು ಪ್ರತಿನಿತ್ಯ ವರದಿಯಾಗುತ್ತಲೇ ಇರುತ್ತದೆ. ಶಾಲೆ, ಕಾಲೇಜು, ಕೆಲಸದ ಸ್ಥಳ ಸೇರಿದಂತೆ ಇತ್ತೀಚೆಗೆ ವರದಿಯಾಗುವ ಘಟನೆಗಳಲ್ಲಿ ಮನೆಗಳಲ್ಲಿಯೂ ಹೆಣ್ಣು ಸುರಕ್ಷಿತವಲ್ಲ ಎನ್ನುವುದು ಸಾಬೀತಾಗಿದೆ. ಇದೀಗ ಇಂಥದ್ದೇ ಒಂದು ಘಟನೆಯಲ್ಲಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ಒಡಿಶಾದ (Odisha) ಸುಂದರ್‌ಗಢ್ ಜಿಲ್ಲೆಯ ಸರ್ಕಾರಿ ಪ್ರೌಢಶಾಲೆಯ (Govt Highschool) ಮುಖ್ಯೋಪಾಧ್ಯಾಯರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಶಾಲೆಯ 10 ನೇ ತರಗತಿಯ ವಿದ್ಯಾರ್ಥಿನಿ (Student) ಶಾಲೆಯ ಕಟ್ಟಡದ ಮೇಲ್ಛಾವಣಿಯಿಂದ ಜಿಗಿದು ಸಾವನ್ನಪ್ಪಿದ ನಂತರ ಶುಕ್ರವಾರದಂದು ಮುಖ್ಯೋಪಾಧ್ಯಾಯರು (Headmaster) ಮತ್ತು ವಾರ್ಡನ್ ಅವರನ್ನು ಬಂಧಿಸಲಾಯಿತು.

ಮಧ್ಯಾಹ್ನ 1 ಗಂಟೆ ಸುಮಾರಿಗೆ ಹಾಸ್ಟೆಲ್ ಕಟ್ಟಡದ ಟೆರೇಸ್‌ನಿಂದ ಬಾಲಕಿ ಜಿಗಿದ ನಂತರ ಜಿಲ್ಲೆಯ ಲೆಫ್ರಿಪಾಡಾ ಬ್ಲಾಕ್‌ನಲ್ಲಿರುವ ಶಾಲೆಯ ಮುಖ್ಯ ಶಿಕ್ಷಕ ಶ್ಯಾಮ್ ಸುಂದರ್ ಪಟೇಲ್ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು (Police Officer) ತಿಳಿಸಿದ್ದಾರೆ.

ಆಸ್ಪತ್ರೆಗೆ ದಾಖಲಿಸಿದರೂ ಬದುಕುಳಿಯಲಿಲ್ಲ

"ಬಾಲಕಿಯನ್ನು ಸುಂದರ್‌ಗಢ್ ಜಿಲ್ಲಾ ಪ್ರಧಾನ ಆಸ್ಪತ್ರೆಗೆ (District Hospital) ಸಾಗಿಸಲಾಯಿತಾದರೂ, ಬರುವಷ್ಟರಲ್ಲಿ ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದರು. ಆಕೆಯ ತಲೆಗೆ ಗಾಯಗಳಾಗಿವೆ ಎಂದು ಸುಂದರ್‌ಗಢ ಎಸ್ಪಿ ಸಾಗರಿಕಾ ನಾಥ್ ಹೇಳಿದ್ದಾರೆ.

ಮುಖ್ಯೋಪಾಧ್ಯಾಯರಿಂದ ಕಿರುಕುಳ

ಮೃತ ಬಾಲಕಿಯ ಕುಟುಂಬದಿಂದ ಇನ್ನೂ ಎಫ್‌ಐಆರ್ ದಾಖಲಾಗಿಲ್ಲವಾದರೂ, ಮುಖ್ಯೋಪಾಧ್ಯಾಯರು ಬಾಲಕಿಗೆ ಸ್ವಲ್ಪ ಸಮಯದಿಂದ ಕಿರುಕುಳ ನೀಡುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಎಸ್‌ಪಿ ಹೇಳಿದರು.

ಲೈಂಗಿಕ ಕಿರುಕುಳದ ಪರಿಣಾಮ

ಆರಂಭದಲ್ಲಿ, ಶಾಲೆಯ ಅಧಿಕಾರಿಗಳು ಘಟನೆಯನ್ನು ಅಪಘಾತ ಎಂದು ಹೇಳಿದ್ದಾರೆ. ಆದರೆ ಇದು ಲೈಂಗಿಕ ಕಿರುಕುಳದ ಪರಿಣಾಮವಾಗಿದೆ ಎಂದು ಎಸ್ಪಿ ಹೇಳಿದರು. "ಶಾಲೆಯಲ್ಲಿ ಮುಖ್ಯೋಪಾಧ್ಯಾಯರು ಇತರ ಹುಡುಗಿಯರಿಗೆ ಕಿರುಕುಳ ನೀಡಿದ್ದಾರೆಯೇ ಎಂದು ಕಂಡುಹಿಡಿಯಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದಿದ್ದಾರೆ.

ಮನೆಯವರಿಗೆ ಕಿರುಕುಳದ ಬಗ್ಗೆ ತಿಳಿಸಿದ್ದ ಬಾಲಕಿ

ಮುಖ್ಯೋಪಾಧ್ಯಾಯರಿಂದ ಕಿರುಕುಳದ ಬಗ್ಗೆ ಬಾಲಕಿ ಹಿಂದಿನ ಸಂದರ್ಭಗಳಲ್ಲಿ ತನ್ನ ಮನೆಯವರಿಗೆ ತಿಳಿಸಿದ್ದಳು. ಇತರ ಬಾಲಕಿಯರೊಂದಿಗೆ ಮಾತನಾಡಿದ ಪೊಲೀಸ್ ಅಧಿಕಾರಿಗಳು ಶಾಲೆಯ ಹಲವಾರು ವಿದ್ಯಾರ್ಥಿಗಳು ಸಹ ಮುಖ್ಯೋಪಾಧ್ಯಾಯರಿಂದ ಲೈಂಗಿಕ ಕಿರುಕುಳದ ಬಗ್ಗೆ ಆರೋಪಿಸಿದ್ದಾರೆ.

ಒಡಿಶಾದಲ್ಲಿ ಹೆಚ್ಚುತ್ತಿದೆ ಲೈಂಗಿಕ ಕಿರುಕುಳ

ಒಡಿಶಾದಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ. 2019 ರಲ್ಲಿ 2,124 ಕ್ಕೆ ಹೋಲಿಸಿದರೆ 2020 ರಲ್ಲಿ ರಾಜ್ಯದಲ್ಲಿ ಸುಮಾರು 2,202 ಮಕ್ಕಳು ಲೈಂಗಿಕ ಕಿರುಕುಳವನ್ನು ಎದುರಿಸಿದ್ದಾರೆ.

ಇದನ್ನೂ ಓದಿ: Rape Case: ಮಂಗಳೂರಲ್ಲಿ ನಾಚಿಕೆಗೇಡಿನ ಘಟನೆ.. ತಾಯಿಯ ಮೇಲೆ ಮಗನಿಂದಲೇ ಅತ್ಯಾಚಾರ!

13 ವರ್ಷದ ಬಾಲಕನೋರ್ವ 35 ವರ್ಷದ ಮಹಿಳೆಯನ್ನು ಅತ್ಯಾಚಾರವೆಸಗಿದ (Rape) ಆಘಾತಕಾರಿ ಪ್ರಕರಣವೊಂದು ಲಂಡನ್​ನಲ್ಲಿ (London) ಬೆಳಕಿಗೆ ಬಂದಿದೆ. ಲಂಡನ್‌ನಲ್ಲಿರುವ ಪಾರ್ಕ್‌ನಲ್ಲಿ ಈ ಘಟನೆ ನಡೆದಿದೆ. ಘಟನೆ ಸಂಬಂಧಿಸಿದಂತೆ 13 ವರ್ಷದ ಯುವಕನನ್ನು ಪೊಲೀಸರು (Police) ಬಂಧಿಸಿದ್ದಾರೆ. ಆದರೆ ಆತನ ಜೊತೆಗಿದ್ದ ಎರಡನೇ ಆರೋಪಿ ತಲೆಮರೆಸಿಕೊಂಡಿದ್ದು, ಪೊಲೀಸರು ಆತನಿಗೆ ಬಲೆ ಬೀಸಿದ್ದಾರೆ. ಮಹಿಳೆಯ ದೂರಿನ ಅನ್ವಯ 13 ವರ್ಷದ ಯವಕಕನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: Child Rape| ಮಹಾರಾಷ್ಟ್ರದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಿರಂತರವಾಗಿ ಅತ್ಯಾಚಾರ; ಆರೋಪಿ ಬಂಧನ

ದೂರಿನ ಪತ್ರದಲ್ಲಿ ಲಂಡನ್‌ನ ಪ್ಲಮ್‌ಸ್ಟೆಡ್‌ನಲ್ಲಿರುವ ವಿನ್ಸ್ ಕಾಮನ್‌ನಲ್ಲಿ ಮಂಗಳವಾರ ರಾತ್ರಿ 11 ಗಂಟೆಗೆ ಇಬ್ಬರು ಶಂಕಿತರು ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆ ಬರೆದಿದ್ದಾಳೆ. ಈ ವೇಳೆ ವ್ಯಕ್ತಿಯೋರ್ವ ತನ್ನ ನಾಯಿಯನ್ನು ವಾಕಿಂಗ್​ ಕರೆದುಕೊಂಡು ಹೋಗುತ್ತಿದ್ದ. ನನ್ನ ಮೇಲೆ ಅತ್ಯಾಚಾರವಾಗುತ್ತಿರುವುದನ್ನು ಗಮನಿಸಿ ಬಂದ ಆತ 13 ವರ್ಷದ ಬಾಲಕನನ್ನು ಹಿಡಿದಿದ್ದಾನೆ. ನಂತರ ಬಾಲಕನಿಗೂ ಆತನಿಗೂ ಜಗಳವಾಗಿದೆ. ಈ ವೇಳೆ ನಾಯಿ ಬಾಲಕನ ಬೆರಳಿಗೆ ಕಚ್ಚಿದೆ. ಆದರೆ ಅತ್ಯಾಚಾರವೆಸಗಿದ ಎರಡನೇ ಆರೋಪಿ ಅಲ್ಲಿಂದ ತಪ್ಪಿಸಿಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಳು.
Published by:Divya D
First published: