News18 India World Cup 2019

ಲೋಕಸಭಾ ಚುನಾವಣೆಗೆ ತಯಾರಿ; ಒಡಿಶಾ ಸಂಸದರಿಂದ ಮಾಜಿ ಪ್ರಧಾನಿ ದೇವೇಗೌಡರ ಭೇಟಿ

ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಪ್ರಾದೇಶಿಕ ಪಕ್ಷಗಳು ಒಂದಾಗುತ್ತಿವೆ. ಜಾತ್ಯಾತೀತ ಶಕ್ತಿಗಳು ಒಂದಾಗುವ ನಿಟ್ಟಿನಲ್ಲಿ ಒಡಿಶಾ ಸಂಸದರು ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Latha CG | news18india
Updated:January 11, 2019, 4:45 PM IST
ಲೋಕಸಭಾ ಚುನಾವಣೆಗೆ ತಯಾರಿ; ಒಡಿಶಾ ಸಂಸದರಿಂದ ಮಾಜಿ ಪ್ರಧಾನಿ ದೇವೇಗೌಡರ ಭೇಟಿ
ದೇವೇಗೌಡರ ಜೊತೆ ಚರ್ಚಿಸುತ್ತಿರುವ ಒಡಿಶಾ ಸಂಸದರು
Latha CG | news18india
Updated: January 11, 2019, 4:45 PM IST
ಜನಾರ್ದನ ಹೆಬ್ಬಾರ್​

ಬೆಂಗಳೂರು,(ಜ.11): ಬಿ​ಜೆಡಿ ಪಕ್ಷವು ಮಹಾಘಟ್​ ಬಂಧನ್​ಗೆ ಸೇರುವುದಿಲ್ಲ ಎಂದು ಒಡಿಶಾ ಸಿಎಂ ನವೀನ್​ ಪಟ್ನಾಯಕ್​ ಸ್ಪಷ್ಟಪಡಿಸಿದ ಬೆನ್ನಲ್ಲೇ ಒಡಿಶಾ ಸಂಸದರು  ಗುರುವಾರ ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡರನ್ನು ಭೇಟಿ ಮಾಡಿದ್ದಾರೆ.

ನಾಗೇಂದ್ರ ಪ್ರಧಾನ್ ಹಾಗೂ ರಬೀಂದ್ರ ಕುಮಾರ್ ಜೇನಾ ಸಂಸದರು ಸಿಎಂ ನವೀನ್ ಪಟ್ನಾಯಕ್​ ಸೂಚನೆ ಮೇರೆಗೆ ದೇವೇಗೌಡರನ್ನು ಭೇಟಿಯಾಗಿದ್ದಾರೆ ಎನ್ನಲಾಗಿದೆ. ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಪ್ರಾದೇಶಿಕ ಪಕ್ಷಗಳು ಒಂದಾಗುತ್ತಿವೆ. ಜಾತ್ಯಾತೀತ ಶಕ್ತಿಗಳು ಒಂದಾಗುವ ನಿಟ್ಟಿನಲ್ಲಿ ಒಡಿಶಾ ಸಂಸದರು ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಗುರುವಾರ ಸುಮಾರು ಒಂದು ಗಂಟೆಯ ಕಾಲ ದೇವೇಗೌಡರ ಜೊತೆ ಚರ್ಚೆ ನಡೆಸಿದ್ದಾರೆ. ಎಲ್ಲಾ ಪ್ರಾದೇಶಿಕ ಪಕ್ಷಗಳು ಒಂದಾಗುವ ವೇದಿಕೆ ನಿರ್ಮಾಣಕ್ಕೆ ಮಾತುಕತೆ ನಡೆದಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಮಹಾಘಟ್​ಬಂಧನ್​ನಿಂದ ಹಿಂದೆ ಸರಿದ ಬಿಜೆಡಿ ಮುಖ್ಯಸ್ಥ ನವೀನ್ ಪಾಟ್ನಾಯಕ್

ಬಿ​ಜೆಡಿ ಪಕ್ಷ ಮಹಾಘಟ್​ ಬಂಧನ್​ಗೆ ಸೇರುವುದಿಲ್ಲ. ಬಿಜೆಪಿ ಮತ್ತು ಕಾಂಗ್ರೆಸ್​ನೊಂದಿಗೆ ​ ಸಮಾನ ಅಂತರ ಕಾಯ್ದುಕೊಳ್ಳುತ್ತದೆ ಎಂದು ನವೀನ್​ ಪಟ್ನಾಯಕ್ ಬುಧವಾರ ಹೇಳಿದ್ದರು. ರೈತರ ರ್ಯಾಲಿಯಲ್ಲಿ ಭಾಗವಹಿಸಿ, ಮೋದಿ ಸರ್ಕಾರ 2014ರ ಚುನಾವಣೆ ವೇಳೆ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ ಎಂದು ಸಹ​ ಆರೋಪಿಸಿದ್ದರು.
Loading...

ಇತ್ತೀಚೆಗೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್​.ಚಂದ್ರಬಾಬು ನಾಯ್ಡು, ತೆಲಂಗಾಣ ಸಿಎಂ ಕೆ.ಚಂದ್ರಶೇಖರ್ ರಾವ್ ಸೇರಿದಂತೆ ಪ್ರಾದೇಶಿಕ ಪಕ್ಷಗಳ ಕೆಲ ಪ್ರಮುಖರು ದೇವೇಗೌಡರನ್ನು ಭೇಟಿಯಾಗಿದ್ದರು.

ಬಿಜೆಪಿಯನ್ನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸೋಲಿಸಿ ಅಧಿಕಾರದಿಂದ ದೂರವಿಡಲು ಎಲ್ಲ ರಾಜ್ಯಗಳ ಪ್ರಾದೇಶಿಕ ಪಕ್ಷಗಳು ಸೇರಿದಂತೆ ಕಾಂಗ್ರೆಸ್‌ ನೇತೃತ್ವದ ಮಹಾಘಟಬಂಧನ್‌ ಮಹಾಮೈತ್ರಿಯನ್ನು ಮಾಡಿಕೊಳ್ಳಲಾಗಿದೆ.

First published:January 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...