Marriage: ಉಂಡೂ ಹೋದ, ಕೊಂಡೂ ಹೋದ! 17 ಮದುವೆಯಾದವನಿಗೆ ಈಗ 'ಗಂಡಾಂ'ತರ!

ಈತ ಹೋದಲ್ಲಿ ಬಂದಲ್ಲಿ ಎಲ್ಲಾ ಮದ್ವೆಯಾಗ್ತಿದ್ದ. ಒಂದಲ್ಲ, ಎರಡಲ್ಲ, 17 ಮಹಿಳೆಯರ ಜೊತೆ ಮಧುಚಂದ್ರಕ್ಕೆ ಹೋಗಿ ಬಂದಿದ್ದಾನೆ! ಪ್ರೇಮಿಗಳ ದಿನ ಈತನ ಅದೃಷ್ಟ ಕೆಟ್ಟಿತ್ತು. ಇನ್ನಾರೋ ಮಹಿಳೆಗೆ ಗಾಳ ಹಾಕುತ್ತಿದ್ದಾಗಲೇ ಪೊಲೀಸರ ಬಲೆಗೆ ಬಿದ್ದಿದ್ದಾನೆ!

17 ಮಹಿಳೆಯರನ್ನು ಮದುವೆಯಾದ ಭೂಪ

17 ಮಹಿಳೆಯರನ್ನು ಮದುವೆಯಾದ ಭೂಪ

  • Share this:
ಒಡಿಶಾ: “ಮದುವೆ ಸ್ವರ್ಗದಲ್ಲಿ ನಿಶ್ಚಯವಾಗುತ್ತೆ” ಅಂತಾರೆ. ಆದ್ರೆ ಇಲ್ಲೊಬ್ಬ ಭೂಪ, ಹೋದಲ್ಲಿ ಬಂದಲ್ಲಿ, ರಾಜ್ಯದಲ್ಲಿ (State), ಪರರಾಜ್ಯದಲ್ಲಿ, ಎಲ್ಲಿ ಹೋದರೆ ಅಲ್ಲಿ ಮದುವೆ (Marriage) ನಿಶ್ಚಯ ಮಾಡಿಕೊಳ್ಳುತ್ತಿದ್ದ. ಒಂದು ಮದ್ವೆ ಆಗಿಯೇ ಸಂಸಾರದಲ್ಲಿ ಏಗೋದು ಕಷ್ಟ ಅಂತ ಹಲವರು ಹೇಳಿರೋದನ್ನು ನೀವು ಕೇಳಿರುತ್ತೀರಿ. ಆದ್ರೆ ಈ ಮಹಾನುಭಾವ ಒಂದಲ್ಲ ಎರಡಲ್ಲ, ಕಣ್ಣಿಗೆ ಕಂಡವರನ್ನೇಲ್ಲ ಮದುವೆ ಆಗಿದ್ದ. ಅದೂ ಬೇರೆ ಬೇರೆ ರಾಜ್ಯದ ಮಹಿಳೆಯರನ್ನ ಕೈ ಹಿಡಿದಿದ್ದ. ಬರೀ ಅಷ್ಟೇ ಅಲ್ಲ, ಅವರ ಜೊತೆ ಸಂಸಾರ ನಡೆಸಿ, ಕೆಲವರಿಗೆ ಮಕ್ಕಳನ್ನೂ (Children) ಕರುಣಿಸಿದ್ದ. ಇಷ್ಟೆಲ್ಲಾ ಮಾಡಿದ್ಮೇಲೆ ಸುಮ್ನೆ ಇರುತ್ತಾನಾ? ಒನ್ ಫೈನ್ ಡೇ (One Fine Day), ಚಿನ್ನ (Gold), ಹಣ (Money) ಎಲ್ಲವನ್ನೂ ದೋಚಿಕೊಂಡು, ಟಾಟಾ, ಬೈಬೈ ಹೇಳದೇ ಎಸ್ಕೇಪ್ (Escape) ಆಗ್ತಿದ್ದ. ಕೊನೆಗೂ ಆ 17 ನಾರಿಯರ ಗಂಡನಿಗೆ ‘ಗಂಡಾಂತರ’ ಶುರುವಾಗಿತ್ತು. ಕೊನೆಗೂ ಆ ಭೂಪ ಅರೆಸ್ಟ್ (Arrest) ಆಗಿದ್ದಾನೆ. ಈ ರಸಿಕ ಮಹಾಶಯನ ಕುರಿತು ಇಂಟ್ರಸ್ಟಿಂಗ್ ಸ್ಟೋರಿ ಇಲ್ಲಿದೆ ಓದಿ…

 ಗಂಡು ಒಬ್ಬನೇ, ನಾಮ ಹಲವು!

ಈ ರಸಿಕ ಮಹಾಶಯನಿಗೆ 17 ಹೆಂಡತಿಯರು ಇದ್ದ ಹಾಗೇ ಹಲವು ಹೆಸರುಗಳೂ ಇವೆ. ಮೂಲ ಹೆಸರು ರಮೇಶ್ ಚಂದ್ರ ಸ್ವೈನ್. ಆದರೆ ಮದುವೆ ಆಗುವಾಗ ಒಂದೊಂದು ಕಡೆ ಒಂದೊಂದು ಹೆಸರು ಹೇಳುತ್ತಿದ್ದ. ಡಾ. ಬಿಬು ಪ್ರಕಾಶ್, ಡಾ. ರಮಣಿ ರಂಜನಿ ಹೀಗೆ ಸಿಕ್ಕ ಸಿಕ್ಕ ಹೆಸರು ಹೇಳುತ್ತಿದ್ದ. ಅಂದಹಾಗೆ ಈತ ಒಡಿಶಾ ನಿವಾಸಿ. ಇವನ ವಯಸ್ಸು 60.

ಮ್ಯಾಟ್ರಿಮೊನಿಯಲ್ಲಿ ಮಹಿಳೆಯರಿಗೆ ಗಾಳ

ಈತ ಮಹಿಳೆಯರನ್ನು ಮರಳು ಮಾಡುವುದರಲ್ಲಿ ನಿಸ್ಸೀಮನಾಗಿದ್ದ. ಬೇರೆ ಬೇರೆ ಮ್ಯಾಟ್ರಿಮೊನಿಯಲ್ ಸೈಟ್‌ನಲ್ಲಿ ನಕಲಿ ಖಾತೆ ತೆರೆದಿದ್ದ. ಅಲ್ಲಿ ಮಧ್ಯ ವಯಸ್ಸಿನ ಹಾಗೂ ಶ್ರೀಮಂತ ಮಹಿಳೆಯರನ್ನು ಟಾರ್ಗೆಟ್ ಮಾಡ್ತಿದ್ದ. ನಾನು ವೈದ್ಯ ಅಂತ ಹೇಳಿಕೊಂಡು ಅವರ ಸ್ನೇಹ ಗಳಿಸುತ್ತಿದ್ದ. ಬಳಿಕ ಅವರನ್ನು ವಿಶ್ವಾಸಕ್ಕೆ ತೆಗೆದಿಕೊಂಡು ಪ್ರೀತಿಯ ಗಾಳ ಹಾಕುತ್ತಿದ್ದ.

 ಇದುವರೆಗೂ 17 ಮದುವೆಯಾಗಿರುವ ಭೂಪ

ಈ ರಸಿಕ ರಮೇಶ್ ಮದುವೆಯಾಗಿದ್ದು ಒಂದೆರಡಲ್ಲ, ಬರೋಬ್ಬರಿ 17 ಮಹಿಳೆಯರನ್ನು ಮದುವೆಯಾಗಿದ್ದಾನೆ. ಒಡಿಶಾ ಸೇರಿದಂತೆ ಅಕ್ಕಪಕ್ಕದ 7 ರಾಜ್ಯಗಳ, ಒಟ್ಟು 17 ಮಹಿಳೆಯರನ್ನು ಮದುವೆಯಾಗಿದ್ದಾನೆ. ಈತ ಮೊದಲು 1982 ರಲ್ಲಿ ವಿವಾಹವಾಗಿದ್ದರು. ಇದರ ನಂತರ, ಅವರು 2002ರಲ್ಲಿ ಎರಡನೇ ಬಾರಿಗೆ ಮದುವೆಯಾದನು. ಅಲ್ಲಿಂದ ಈವರೆಗೆ ಸುಮಾರು 17 ಮಂದಿಯನ್ನು ಮದುವೆಯಾಗಿದ್ದಾನೆ. ಸದ್ಯ ಐವರು ಮಕ್ಕಳು ಇರೋದು ಮಾತ್ರ ಲೆಕ್ಕಕ್ಕೆ ಸಿಕ್ಕಿದೆ.

ಇದನ್ನೂ ಓದಿ: Shocking News: ಜೀವ ಕೊಟ್ಟವಳ ಜೀವವನ್ನೇ ತೆಗೆದ ಪಾಪಿ, ಜೀಪ್ ಹತ್ತಿಸಿ ತಾಯಿಯನ್ನೇ ಕೊಂದ ಪುತ್ರ!

ಉಂಡೂ ಹೋಗುತ್ತಿದ್ದ ಕೊಂಡೂ ಹೋಗುತ್ತಿದ್ದ ಖದೀಮ!

ಈತ ಮಹಿಳೆಯರನ್ನು ಮದುವೆಯಾಗಿ ಚೆನ್ನಾಗಿಯೇ ಇರುತ್ತಿದ್ದ. ಸುಮಾರು ಕಾಲ ಅವರ ಜೊತೆ ಸಂಸಾರ ಮಾಡುತ್ತಿದ್ದ. ಅವರ ಬಂಗಾರ, ಹಣ ತನ್ನ ಕೈಗೆ ಬರುವವರೆಗೂ ತಾಳ್ಮೆಯಿಂದ ಕಾಯುತ್ತಿದ್ದ. ಅವೆಲ್ಲ ಸಿಕ್ಕದ ತಕ್ಷಣವೇ ಹೇಳದೇ ಕೇಳದೇ ಅಲ್ಲಿಂದ ಜಾಗ ಖಾಲಿ ಮಾಡುತ್ತಿದ್ದ.

ಪ್ರೇಮಿಗಳ ದಿನದಂದೇ ಕೆಟ್ಟಿತ್ತು ಈತನ ಅದೃಷ್ಟ

ಮೊನ್ನೆಯಷ್ಟೇ ಪ್ರೇಮಿಗಳ ದಿನದಂದು ಮಹಿಳೆಯೊಬ್ಬರು ಈತನ ವಿರುದ್ಧ ಪಂಜಾಬ್‌ನಲ್ಲಿ ದೂರು ನೀಡಿದ್ದರು. ಆ ದೂರನ್ನು ಆಧರಿಸಿ, ಆರೋಪಿಯ ಜಾಡು ಹಿಡಿದ ಪೊಲೀಸರು ಆತನನ್ನು ಬಲೆಗೆ ಕೆಡವಿದ್ದಾರೆ. ಈತ ಈ ಮಹಿಳೆಯಿಂದ 10 ಲಕ್ಷ ರೂಪಾಯಿ ಪಡೆದು ಎಸ್ಕೇಪ್ ಆಗಿದ್ದನಂತೆ.

ಇದನ್ನೂ ಓದಿ: Viral Video: ಹಾರಾಡುತ್ತಲೇ ಬಿದ್ದು ಪ್ರಾಣಬಿಟ್ಟವು ಸಾವಿರಾರು ಪಕ್ಷಿಗಳು! ಮುಂದಿದೆಯಾ ಮಹಾವಿಪತ್ತು?

17  ಹೆಂಡಿರ ಗಂಡನ ವಿರುದ್ಧ ತನಿಖೆ 

ಇದೀಗ ಪೊಲೀಸರು ಈತನ ಜನ್ಮ ಜಾಲಾಡುತ್ತಿದ್ದಾರೆ. ಸದ್ಯ ಆರೋಪಿ ಬಳಿ ಮೂರು ಪ್ಯಾನ್ ಕಾರ್ಡ್‌ಗಳು ಮತ್ತು 11 ಎಟಿಎಂ ಕಾರ್ಡ್‌ಗಳು ಪತ್ತೆಯಾಗಿದೆ. ಇದೀಗ ತನಿಖೆ ಮುಂದುವರೆದಿದ್ದು, ಈತನ ಬಣ್ಣ ಮತ್ತಷ್ಟು ಬಯಲಾಗಲಿದೆ.
Published by:Annappa Achari
First published: