ಕಾಡಾನೆ ದಾಳಿಗೆ ಮನೆ ನಾಶ; ಜೀವ ಉಳಿಸಿಕೊಳ್ಳಲು ಅಪ್ಪ-ಮಗ ಮರದ ಮೇಲೆ ವಾಸ

ಒಡಿಶಾದ ಅನೇಕ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಮನೆ ಹಾಗೂ ಬೆಳೆಗಳನ್ನು ಧ್ವಂಸಗೊಳಿಸಿವೆ ಎಂದು ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡಿದ್ದಾರೆ.

Latha CG | news18
Updated:August 13, 2019, 1:34 PM IST
ಕಾಡಾನೆ ದಾಳಿಗೆ ಮನೆ ನಾಶ; ಜೀವ ಉಳಿಸಿಕೊಳ್ಳಲು ಅಪ್ಪ-ಮಗ ಮರದ ಮೇಲೆ ವಾಸ
ಮರದ ಮೇಲೆ ವಾಸವಿರುವ ವ್ಯಕ್ತಿ
  • News18
  • Last Updated: August 13, 2019, 1:34 PM IST
  • Share this:
ಒಡಿಶಾ,(ಆ.13): ಕಾಡಾನೆಗಳ ದಾಳಿಗೆ ಮನೆಯೊಂದು ನಾಶವಾಗಿತ್ತು. ಆ ಮನೆಯಲ್ಲಿದ್ದ ಅಪ್ಪ-ಮಗ ಜೀವ ಭಯದಿಂದ ಈಗ ಮನೆ ತೊರೆದು ಮರವೊಂದನ್ನು ಆಶ್ರಯಿಸಿದ್ದಾರೆ. ಒಡಿಶಾದ ಕುಸುಮಿತಾ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಸುದ್ಯಾ ಮಹಕುಡ್​ ಒಡಿಶಾದ ಕೆಂಜ್ಹಾರ್​ ಜಿಲ್ಲೆಯ ಕುಸುಮಿತಾ ಗ್ರಾಮದ ನಿವಾಸಿ. ಈತನ ಮನೆಗೆ ಕಾಡಾನೆಗಳು ನುಗ್ಗಿ ಧ್ವಂಸಗೊಳಿಸಿವೆ. ಈಗ ಮರವನ್ನೇ ಮನೆ ಮಾಡಿಕೊಂಡು ಅಲ್ಲಿಯೇ  ವಾಸವಾಗಿದ್ದಾರೆ. "ಕಳೆದ ಮೂರು ದಿನಗಳ ಹಿಂದೆ ಕಾಡಾನೆಗಳು ನನ್ನ ಮನೆಯನ್ನು ಸಂಪೂರ್ಣವಾಗಿ ನಾಶ ಮಾಡಿದವು. ನಾನು ಮತ್ತು ನನ್ನ ಮಗ ಪ್ರಾಣ ಉಳಿಸಿಕೊಳ್ಳಲು ಮರದ ಮೇಲೆ ತಾತ್ಕಾಲಿಕವಾಗಿ ಶೆಡ್​​ವೊಂದನ್ನು ಹಾಕಿಕೊಂಡು ಜೀವನ ನಡೆಸುತ್ತಿದ್ದೇವೆ," ಎಂದು ಸುದ್ಯಾ ತಮ್ಮ ಅಳಲು ತೋಡಿಕೊಂಡಿದ್ಧಾರೆ.ಅಷ್ಟೇ ಅಲ್ಲದೇ, ಕಾಡಾನೆಗಳು ಮತ್ತೆ ಬರುವ ಸಾಧ್ಯತೆ ಇದ್ದು, ಅವರ ಜೀವಕ್ಕೆ ಅಪಾಯ ಉಂಟುಮಾಡುವ ಸಾಧ್ಯತೆ ಇದೆ. ಇದರಿಂದ ಭಯಭೀತಗೊಂಡಿರುವ ತಂದೆ-ಮಗ ನಿದ್ದೆ ಇಲ್ಲದ ರಾತ್ರಿಗಳನ್ನು ಕಳೆದಿದ್ದಾರೆ. ಕೊನೆಗೆ ಮರವೊಂದನ್ನು ಆಶ್ರಯಿಸಿ ಅಲ್ಲಿಯೇ ತಾತ್ಕಾಲಿಕವಾಗಿ ವಾಸವಿದ್ಧಾರೆ.ಕಾಡಾನೆಗಳ ಹಾವಳಿ ಹೆಚ್ಚಾಗಿದ್ದರಿಂದ ಈಗಾಗಲೇ ಸುದ್ಯಾ ರಾಜ್ಯ ಸರ್ಕಾರದ ಮೊರೆ ಕೂಡ ಹೋಗಿದ್ದಾರೆ. ಪರಿಹಾರ ನೀಡುವಂತೆ ಮನವಿ ಮಾಡಿದ್ಧಾರೆ. ಆದರೆ ಸರ್ಕಾರ ಈವರೆಗೆ ಯಾವುದೇ ಪರಿಹಾರ ನೀಡಿಲ್ಲ ಎಂದು ಸುದ್ಯಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಕಾಲುವೆಗೆ ಉರುಳಿದ ಬಸ್​; 14 ವಿದ್ಯಾರ್ಥಿಗಳಿಗೆ ಗಾಯ

ಕಾಡಾನೆಗಳ ಚಲನವಲನ ತಿಳಿಯಲು ಸ್ಕ್ವಾಡ್​ಗಳನ್ನು ನೇಮಿಸಿರುವುದಾಗಿ  ಕೆಂಜ್ಹಾರ್​ ಜಿಲ್ಲೆಯ ಅರಣ್ಯಾಧಿಕಾರಿ ತಿಳಿಸಿದ್ದಾರೆ.  "ಕಾಡಾನೆ ಹಾವಳಿಗೆ ಒಳಗಾಗಿರುವ ವ್ಯಕ್ತಿಗೆ ಪರಿಹಾರ ಒದಗಿಸಲು ನಾವು ಸಹ ಪ್ರಯತ್ನಿಸುತ್ತಿದ್ದೇವೆ. ಸರ್ಕಾರಕ್ಕೆ ಮನವಿ ಪತ್ರ ನೀಡಿದ್ದೇವೆ. ಸುದ್ಯಾ ಜೊತೆ ಮಾತನಾಡಿ ಪರಿಸ್ಥಿತಿ ಅರ್ಥ ಮಾಡಿಸಿದ್ದೇವೆ. ಈಗ ಆ ವ್ಯಕ್ತಿ ಮರ ಬಿಟ್ಟು ಗ್ರಾಮಕ್ಕೆ ಹಿಂತಿರುಗಿದ್ಧಾನೆ. ಕಾಡಾನೆಗಳ ಚಲನವಲನ ತಿಳಿಯಲು ಸ್ಕ್ವಾಡ್​ಗಳನ್ನು  ನೇಮಿಸಿದ್ಧೇವೆ" ಎಂದು ಅರಣ್ಯಾಧಿಕಾರಿ ಸುಶಾಂತ ಕುಮಾರ್​​ ಪ್ರಧಾನ್​ ಹೇಳಿದ್ಧಾರೆ.

ಒಡಿಶಾದ ಅನೇಕ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಮನೆ ಹಾಗೂ ಬೆಳೆಗಳನ್ನು ಧ್ವಂಸಗೊಳಿಸಿವೆ ಎಂದು ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡಿದ್ದಾರೆ.

First published:August 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ