ಭುವನೇಶ್ವರ: ಒಡಿಶಾದಲ್ಲಿ ಭೀಕರ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಮಹಾನದಿ ನದಿಯಲ್ಲಿ ಪ್ರವಾಹದ ನೀರು ಒಡಿಶಾದ ಕರಾವಳಿ (Mahanadi Flood Situation) ಪ್ರದೇಶಕ್ಕೆ ಅಪ್ಪಳಿಸಿದ್ದು, 10 ವಿವಿಧ ಜಿಲ್ಲೆಗಳ ದೊಡ್ಡ ಸಂಖ್ಯೆಯ ಹಳ್ಳಿಗಳನ್ನು(Odisha Flood Situation) ಮುಳುಗಿಸಿದೆ. ಎರಡು ಲಕ್ಷಕ್ಕೂ ಹೆಚ್ಚು ಜನರು ತೊಂದರೆಗೀಡಾಗಿದ್ದಾರೆ ಎಂದು ಒಡಿಶಾ ರಾಜ್ಯ ಸರ್ಕಾರ ಬುಧವಾರ ತಿಳಿಸಿದೆ. ಒಡಿಶಾ ಮಹಾನದಿ ಪ್ರಾಂತ್ಯದ ಹಲವಾರು ನದಿ ಮತ್ತು ಕಾಲುವೆ ಒಡ್ಡುಗಳು ಒಡೆದುಹೋದವು. ನೂರಾರು ಜನರು ಇದ್ದಕ್ಕಿದ್ದಂತೆ ಪ್ರವಾಹದಲ್ಲಿ ಸಿಲುಕಿಹೋಗಿದ್ದಾರೆ ಎಂದು ವರದಿಯಾಗಿದೆ. ಸಾವಿರಾರು ಎಕರೆ ಪ್ರದೇಶದಲ್ಲಿ ಖಾರಿಫ್ ಬೆಳೆ ನೀರು ಪಾಲಾಗಿದ್ದು ನೂರಾರು ಮನೆಗಳು ಹಾನಿಗೀಡಾಗಿವೆ.
50 ಬ್ಲಾಕ್‌ಗಳಲ್ಲಿ 369 ಗ್ರಾಮ ಪಂಚಾಯಿತಿಗಳು ಮತ್ತು 10 ಜಿಲ್ಲೆಗಳ, ಒಂಬತ್ತು ನಗರ ಸ್ಥಳೀಯ ಸಂಸ್ಥೆಗಳ, 1366 ಗ್ರಾಮಗಳ ಸುಮಾರು 2 ಲಕ್ಷ ಜನರು ತೊಂದರೆಗೀಡಾಗಿದ್ದಾರೆ. ಅದೇ ರೀತಿ, 237 ಗ್ರಾಮಗಳಲ್ಲಿ 1.2 ಲಕ್ಷ ಜನರು ಪ್ರವಾಹದಿಂದ ಕಂಗೆಟ್ಟಿದ್ದಾರೆ ಎಂದು ವಿಶೇಷ ಪರಿಹಾರ ಆಯುಕ್ತ ಪಿ.ಕೆ.ಜೆನಾ ತಿಳಿಸಿದ್ದಾರೆ.
ಒಡಿಶಾ ರಾಜ್ಯದಲ್ಲಿ ಸಂಭವಿಸಿದ ಮಹಾನದಿ ಪ್ರವಾಹದಲ್ಲಿ ಯಾವುದೇ ಸಾವು ನೋವು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.
ಭುವನೇಶ್ವರಕ್ಕೂ ಆಪತ್ತು
ಕಟಕ್, ಖೋರ್ಧಾ, ಪುರಿ, ಕೇಂದ್ರಪಾರ, ಜಗತ್‌ಸಿಂಗ್‌ಪುರ, ಬೌಧ್, ಸಂಬಲ್‌ಪುರ್ ಮತ್ತು ಅಂಗುಲ್ ಜಿಲ್ಲೆಗಳು ಪ್ರವಾಹದ ಪ್ರಭಾವಕ್ಕೆ ಒಳಗಾಗಿವೆ. ಒಡಿಶಾ ರಾಜಧಾನಿ ಭುವನೇಶ್ವರದ ಹಲವು ತಗ್ಗು ಪ್ರದೇಶಗಳು ಪ್ರವಾಹದಿಂದ ಮುಳುಗಡೆಯಾಗಿವೆ. ಪುರಿ, ಕಟಕ್ ಮತ್ತು ಖೋರ್ಧಾ ಜಿಲ್ಲೆಯಲ್ಲಿ ರಸ್ತೆಗಳು ಕಡಿತಗೊಂಡಿವೆ.
ಇದನ್ನೂ ಓದಿ: Sabarimala Temple: ಭಕ್ತಾದಿಗಳೇ ಗಮನಿಸಿ, ಶಬರಿಮಲೆ ಅಯ್ಯಪ್ಪ ದೇವಸ್ಥಾನ ದರ್ಶನಕ್ಕೆ ಇಂದಿನಿಂದ ಅವಕಾಶ
ವಿವಿಧ ಜಲಾಶಯಗಳಿಂದ ನೀರು ಬಿಡುಗಡೆ
ಹಿರಾಕುಡ್ ಜಲಾಶಯದ ಪ್ರಸ್ತುತ ಮಟ್ಟವನ್ನು 626.56 ಅಡಿಗಳಿಗೆ ಅಳೆಯಲಾಗಿದೆ, ಪೂರ್ಣ ಜಲಾಶಯದ ಮಟ್ಟ 630 ಅಡಿ. ಸುಮಾರು 5.97 ಲಕ್ಷ ಕ್ಯೂಸೆಕ್ ನೀರು ಜಲಾಶಯಕ್ಕೆ ಸೇರುತ್ತಿದ್ದು, 40 ಗೇಟ್‌ಗಳ ಮೂಲಕ 6.79 ಕ್ಯೂಸೆಕ್ ನೀರನ್ನು ಬಿಡಲಾಗುತ್ತಿದೆ. ಕೊನೆಯ ಪ್ರಮುಖ ನದಿ ಮಾಪನ ಕೇಂದ್ರ ಎಂದು ವರದಿಯಾದ ಮುಂಡಲಿಯಲ್ಲಿ ಗರಿಷ್ಠ ಪ್ರವಾಹವು ಈಗಾಗಲೇ ದಾಟಿದೆ.
ಮತ್ತೆ ಭರ್ಜರಿ ಮಳೆಯಾಗುವ ಸಾಧ್ಯತೆ
ಅದೃಷ್ಟವಶಾತ್ ಮಹಾನದಿ ಪ್ರವಾಹದ ನೀರಿನ ಮಟ್ಟ ಕ್ರಮೇಣ ಇಳಿಯುತ್ತಿದೆ. ಒಡಿಶಾ ರಾಜ್ಯ ಸರ್ಕಾರವು 100 ಕ್ಕೂ ಹೆಚ್ಚು ವಿವಿಧ ಸ್ಥಳಗಳಲ್ಲಿ ಆಹಾರ ವಿತರಣಾ ಕೇಂದ್ರವನ್ನು ಆರಂಭ ಮಾಡಿದೆ. ಮುಂದಿನ ಕೆಲ ದಿನಗಳಲ್ಲಿ ಒಡಿಶಾ ರಾಜ್ಯದ ಎಲ್ಲಾ ಭಾಗಗಳಲ್ಲಿ ಭರ್ಜರಿ ಮಳೆಯಾಗುವ ಲಕ್ಷಣಗಳಿವೆ. ಅಲ್ಲದೇ ಉತ್ತರ ಒಡಿಶಾ ಪ್ರದೇಶದಲ್ಲಿ ಕಡಿಮೆ ಒತ್ತಡ ರೂಪುಗೊಂಡಿದ್ದು ಈ ಪ್ರದೇಶದಲ್ಲಿ ಅತಿ ಹೆಚ್ಚಿನ ಮಳೆಯನ್ಜು ನಿರೀಕ್ಷಿಸಲಾಗಿದೆ.
ಇದನ್ನೂ ಓದಿ: Dalit Boy Death: ದಲಿತ ಬಾಲಕನ ಸಾವಿಂದ ಕಂಗೆಟ್ಟ ಕಾಂಗ್ರೆಸ್; ಏನಿದು ಪ್ರಕರಣ?
ತಗ್ಗು ಪರಿಸ್ಥಿತಿಯಲ್ಲಿ ನೀರು ನಿಲ್ಲುವ ಪರಿಸ್ಥಿತಿಯಿಂದ ನಾವು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಬೆಳೆಗಳು ಪ್ರವಾಹದಲ್ಲಿ ಮುಳುಗಿರುವುದರಿಂದ ಕುಟುಂಬವನ್ನು ಹೇಗೆ ನಿರ್ವಹಿಸುವುದು ಎಂಬುದು ನಮಗೆ ತಲೆನೋವಾಗಿ ಪರಿಣಮಿಸಿದೆ ಎಂದು ಸ್ಥಳೀಯ ನಿವಾಸಿಯೊಬ್ಬರು ನ್ಯೂಸ್ 18 ಇಂಗ್ಲೀಷ್ಗೆ ಸಮಸ್ಯೆ ವಿವರಿಸಿದ್ದಾರೆ.
ಪ್ರವಾಹದಲ್ಲಿ ವಧು
ದಾಂಪದಾ ಬ್ಲಾಕ್‌ನ ಕೈನ್‌ಮುಂಡ ಎಂಬ ಗ್ರಾಮದಲ್ಲಿ ಪ್ರವಾಹದಲ್ಲಿ ವಧು ಸಿಲುಕಿಕೊಂಡ ಹಿನ್ನೆಲೆಯಲ್ಲಿ ಮದುವೆಯನ್ನು ಮುಂದೂಡಲಾಗಿದೆ. ನಂತರ ಸ್ಥಳೀಯ ಶಾಸಕ ದೇಬಿ ರಂಜನ್ ತ್ರಿಪಾಠಿ ಮತ್ತು ರಕ್ಷಣಾ ತಂಡ ವಧುವನ್ನು ರಕ್ಷಿಸಿದೆ. ಜಗತ್‌ಸಿಂಗ್‌ಪುರ ಜಿಲ್ಲೆಯ ಗೋರೆಖಾಂತ್ ದೇವಸ್ಥಾನದಲ್ಲಿ ಮದುವೆ ನಡೆಯಲಿದೆ. ಪ್ರವಾಹ ಪರಿಸ್ಥಿತಿಯ ಬಗ್ಗೆ ಸ್ಥಳೀಯ ಆಡಳಿತ ಮತ್ತು ಪ್ರತಿನಿಧಿಗಳು ಜಾಗೃತರಾಗಿದ್ದಾರೆ. ನಾವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಜೀವ ಮತ್ತು ಆಸ್ತಿಯನ್ನು ಉಳಿಸುವುದು ನಮ್ಮ ಮುಖ್ಯ ಗುರಿಯಾಗಿದೆ ಎಂದು ಶಾಸಕ ತ್ರಿಪಾಠಿ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ