ಭೂಮಿ(Earth) ಮೇಲೆ ಎಂಥೆಂಥಾ ಜನರಿದ್ದಾರೆ ಎಂದು ಆ ದೇವರೇ ಬಲ್ಲ. ಕೆಲವೊಂದು ಘಟನೆಗಳನ್ನು ಕೇಳಿದಾಗ, ನೋಡಿದಾಗ, ಹೀಗೂ ಜನ ಇರುತ್ತಾರಾ ಎಂಬ ಪ್ರಶ್ನೆ(Question) ಮೂಡದೆ ಇರದು. ಆ ರೀತಿ ಚಿತ್ರ ವಿಚಿತ್ರ ಮನಸ್ಥಿತಿಯುಳ್ಳ ಮಾನವರು(Humans) ಈ ಭೂಮಿ ಮೇಲೆ ಇದ್ದಾರೆ. ಚಿಕ್ಕ ವಯಸ್ಸಿಗೆ ಮದುವೆ ಮಾಡಿದರೆ ಏನಾಗುತ್ತೆ ಅನ್ನುವುದಕ್ಕೆ ಈ ಘಟನೆಯೆ ಸಾಕ್ಷಿ. 17 ವರ್ಷದ ವ್ಯಕ್ತಿಯೊಬ್ಬ ಮದುವೆಯಾಗಿ ಒಂದು ತಿಂಗಳಿಗೆ ಹೆಂಡತಿಯನ್ನು ಬೇರೆಯವರಿಗೆ ಮಾರಾಟ( Sold Wife) ಮಾಡಿದ್ದಾನೆ. ಅದರಿಂದ ಬಂದ ಹಣ(Money)ದಲ್ಲಿ ಮೊಬೈಲ್(Mobile) ಖರೀದಿಸಿದ್ದಾನೆ. ಹೌದು, ಒಡಿಶಾದಲ್ಲಿ ಈ ರೀತಿಯ ವಿಚಿತ್ರ ಘಟನೆ ನಡೆದಿದೆ. 17 ವರ್ಷದ ಅಪ್ರಾಪ್ತ ತನ್ನ 26 ವರ್ಷದ ಪತ್ನಿಯನ್ನು 55 ವರ್ಷದ ವ್ಯಕ್ತಿಯೊಬ್ಬನಿಗೆ ಮಾರಾಟ ಮಾಡಿದ್ದಾನೆ. ಅದರಿಂದ ಬಂದ ಹಣ್ಣದಲ್ಲಿ ಮೊಬೈಲ್ ಖರೀದಿಸಿ ಆರಾಮಾಗಿದ್ದ ಪಾಪಿ ಪತಿಯನ್ನು ಪೊಲೀಸರು(Police) ಬಂಧಿಸಿದ್ದು, ಕಂಬಿ ಹಿಂದೆ ಕಳಿಸಿದ್ದಾರೆ.
ಜುಲೈನಲ್ಲಿ ಮದುವೆಯಾಗಿದ್ದ ಜೋಡಿ
ಈ ಅಪ್ರಾಪ್ತ ಬಾಲಕನಿಗೂ 26 ವರ್ಷದ ಯುವತಿಗೆ ಜುಲೈನಲ್ಲಿ ಮದುವೆಯಾಗಿತ್ತು. ಮನೆಯವರ ಒತ್ತಾಯದ ಮೇರೆಗೆ ಯುವತಿ ವಯಸ್ಸಿನಲ್ಲಿ ಅಂತರವಿದ್ದರೂ ಆತನ ಜೊತೆ ವಿವಾಹವಾಗಿದ್ದಳು. ಮದುವೆಯಾದ ಬಳಿಕ ಕೆಲ ದಿನ ಎಲ್ಲವೂ ಚೆನ್ನಾಗಿತ್ತು. ಕೆಲಸ ಹುಡುಕಿಕೊಂಡು ಜೋಡಿ ರಾಜಸ್ಥಾನಕ್ಕೆ ಬಂದಿದ್ದರು. ಇಲ್ಲಿನ ಒಂದು ಇಟ್ಟಿಗೆ ಫ್ಯಾಕ್ಟರಿಯಲ್ಲಿ ಪತಿಗೆ ಕೆಲಸ ಸಿಕ್ಕಿತ್ತು. ಇದಾದ ಬಳಿಕ ಪತಿ, ಪತ್ನಿಯ ಕಡೆ ಹೆಚ್ಚು ಗಮನಕೊಡುವುದನ್ನು ನಿಲ್ಲಿಸಿದ್ದ. ಪ್ರತಿದಿನ ಕುಡಿದು ಬಂದು ಹೆಂಡತಿ ಜೊತೆ ಗಲಾಟೆ ಮಾಡುತ್ತಿದ್ದ.
ಇದನ್ನು ಓದಿ : ಪ್ರೀತಿ ನಿರಾಕರಿಸಿದ್ದಕ್ಕೆ ಪ್ರಿಯತಮನಿಂದ ಖತರ್ನಾಕ್ ಪ್ಲ್ಯಾನ್!: ಹುಡುಗಿಯನ್ನು ತಗಲಾಕಿಸಲು ಹೋಗಿ ತಾನೇ ಲಾಕ್!
1.8 ಲಕ್ಷ ರೂಪಾಯಿಗೆ ಪತ್ನಿ ಮಾರಾಟ
ಇದಾದ ಬಳಿಕ ಇಲ್ಲಿನ ಬರನ್ ಜಿಲ್ಲೆಯ 55 ವರ್ಷದ ವ್ಯಕ್ತಿಗೆ ತನ್ನ ಪತ್ನಿಯನ್ನು ಮಾರಾಟ ಮಾಡಿದ್ದಾನೆ. ಆತನಿಂದ 1.8 ಲಕ್ಷ ಹಣ ಪಡೆದು ಪತ್ನಿಯನ್ನು ಬಲವಂತದಿಂದ ಬರನ್ ಜಿಲ್ಲೆಗೆ ಕರೆತಂದು ಬಿಟ್ಟುಹೋಗಿದ್ದಾನೆ. ಪತ್ನಿ ಎಷ್ಟೇ ಬೇಡಿಕೊಂಡರು, ಪತಿ ಮನಸ್ಸು ಕರಗಿಲ್ಲ. ಆರಾಮಾಗಿ ಪತ್ನಿಯನ್ನು ಮಾರಿ ಬಂದಿದ್ದ ಹಣದಲ್ಲಿ ಹೊಸ ಮೊಬೈಲ್ ಖರೀದಿಸಿದ್ದಾನೆ . ಮಿಕ್ಕ ಹಣದಲ್ಲಿ ಪರಿಚಯಸ್ಥರೊಂದಿಗೆ ಕುಡಿದು ಪಾರ್ಟಿ ಮಾಡಿದ್ದಾನೆ. ಕೆಲ ದಿನಗಳ ನಂತರ ಇದ್ದ ಹಣದಲ್ಲಿ ಫುಲ್ ಎಂಜಾಯ್ ಮಾಡಿದ್ದಾನೆ. ದುಡ್ಡು ಖಾಲಿಯಾದ ಬಳಿಕ ಮರಳಿ ಊರಿಗೆ ವಾಪಸ್ ಬಂದಿದ್ದ.
ಕಲರ್ ಕಲರ್ ಕಾಗೆ ಹಾರಿಸಿದ್ದ ಪತಿ
ಮರಳಿ ಊರಿಗೆ ಬಂದ ಪತಿಯನ್ನು, ಪತ್ನಿ ಕಡೆಯವರು ನನ್ನ ಮಗಳು ಎಲ್ಲಿ ಎಂದು ಕೇಳಿದ್ದಾರೆ. ಏನು ಹೇಳಬೇಕೆಂದು ತಿಳಿಯದೇ ಹೆಂಡತಿ ನನಗೆ ಮೋಸ ಮಾಡಿ ಬಿಟ್ಟು ಹೊಗಿದ್ದಾಳೆ ಎಂದು ಕಲರ್ ಕಲರ್ ಕಾಗೆ ಹಾರಿಸಿದ್ದಾನೆ. ಈತನ ಮಾತು ನಂಬದ ಪತ್ನಿ ಕುಟುಂಬಸ್ಥರು ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಪೊಲೀಸರು ತಮ್ಮದೇ ಶೈಲಿಯಲ್ಲಿ ಕೇಳಲು ಶುರು ಮಾಡುತ್ತಿದ್ದಂತೆ ನಡೆದ ಘಟನೆಯನ್ನೆಲ್ಲ ಪತಿ ಹೇಳಿದ್ದಾನೆ. ಹೆಂಡತಿಯನ್ನು 55 ವರ್ಷದ ವ್ಯಕ್ತಿಗೆ ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಇದನ್ನು ಓದಿ : ಪ್ರೇಯಸಿ ಮೇಲೆ ಪ್ರಿಯಕರನಿಂದ ಅತ್ಯಾಚಾರ, 4 ವರ್ಷದ ಮಗುವಿನ ಮೇಲೆ ರೇಪ್; ಎರಡು ಕೃತ್ಯದಿಂದ ಬೆಚ್ಚಿಬಿದ್ದ ನಗರಿ
ಯುವತಿಯನ್ನು ಕಳಿಸಲ್ಲ ಎಂದು ಗಲಾಟೆ ಮಾಡಿದ ಜನ
ಇನ್ನೂ ಪತಿಯಿಂದ ಸಂಪೂರ್ಣ ಮಾಹಿತಿ ಪಡೆದ ಪೊಲೀಸರ ತಂಡ ರಾಜಸ್ಥಾನಕ್ಕೆ ಆಗಮಿಸಿತ್ತು. ಬಳಿಕ ಬರನ್ ಜಿಲ್ಲೆಗೆ ಬಂದು ತನಿಖೆ ಶುರುಮಾಡಿದ್ದರು. ಯುವತಿ ಇರುವ ಸ್ಥಳ ತಿಳಿದು, ಕರೆದುಕೊಂಡು ಹೋಗಲು ಪೊಲೀಸರು ಮುಂದಾಗಿದ್ದರು. ಆದರೆ ಆ ಗ್ರಾಮದ ಜನ ಯುವತಿಯನ್ನು ವಾಪಸ್ ಕಳಿಸಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಆಕೆಯನ್ನು ದುಡ್ಡು ಕೊಟ್ಟು ಕರೆತರಲಾಗಿದೆ ಕಳಿಸಲ್ಲ ಎಂದು ಗಲಾಟೆ ಮಾಡಿದ್ದಾರೆ. ಕೊಟ್ಟ ಹಣವನ್ನು ಹಿಂದಿರುಗಿಸಿ ಆಕೆಯನ್ನು ಕರೆದುಕೊಂಡು ಹೋಗಿ ಎಂದಿದ್ದಾರೆ. ನಂತರ ಪೊಲೀಸರು ಅವರ ಮನವೊಲಿಸಿ ಯುವತಿಯನ್ನು ರಕ್ಷಿಸಿ ಕರೆತಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ