ಭುವನೇಶ್ವರ: ಒಡಿಶಾದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ (Odisha's Health and Family Welfare Minister) ನಬಾ ಕಿಶೋರ್ ದಾಸ್ (Naba Kishore Das) ಮೇಲೆ ಸಹಾಯಕ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (Assistant Sub-Inspector) ಗುಂಡು ಹಾರಿಸಿರುವ ಘಟನೆ ಝಾರ್ಸುಗುಡಾ (Jharsuguda) ಜಿಲ್ಲೆಯಲ್ಲಿ ನಡೆದಿದೆ. ಎದೆಗೆ ಗುಂಡು ತಗುಲಿ ತೀವ್ರವಾಗಿ ಗಾಯಗೊಂಡಿದ್ದ ನಬಾ ದಾಸ್ ಅವರನ್ನು ಇದೀಗ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ನಬಾ ಕಿಶೋರ್ ದಾಸ್ ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದ್ದು, ಇದೀಗ ಅವರನ್ನು ಜಾರ್ಸುಗುಡಾ ವಿಮಾನ ನಿಲ್ದಾಣಕ್ಕೆ ಕರೆದೊಯ್ಯಲಾಗುತ್ತಿದೆ. ನಂತರ ಅಲ್ಲಿಂದ ನಬಾ ದಾಸ್ ಅವರನ್ನು ವಿಮಾನದ ಮೂಲಕ ಭುವನೇಶ್ವರಕ್ಕೆ (Bhubaneswar) ಕರೆದೊಯ್ದು ಹೆಚ್ಚಿನ ಚಿಕಿತ್ಸೆಗಾಗಿ ಅಪೋಲೋ ಆಸ್ಪತ್ರೆಗೆ (Apollo hospital) ಸ್ಥಳಾಂತರಿಸಲಾಗುವುದು.
ಸಚಿವರ ಮೇಲೆ ಎಎಸ್‌ಐ ಗುಂಡಿನ ದಾಳಿ
ಗಾಂಧಿ ಚೌಕದಲ್ಲಿ ಸಚಿವರು ತಮ್ಮ ಕಾರಿನಿಂದ ಇಳಿಯುತ್ತಿದ್ದಂತೆಯೇ ಪೊಲೀಸ್ ಅಧಿಕಾರಿ ಇದ್ದಕ್ಕಿದ್ದಂತೆ ನಾಲ್ಕೈದು ಬಾರಿ ಗುಂಡುಗಳನ್ನು ಹಾರಿಸಿದ್ದಾನೆ. ಜಿಲ್ಲೆಯ ಬ್ರಜರಾಜನಗರ ಪಟ್ಟಣದಲ್ಲಿ ಸಚಿವರು ಸಭೆಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಗುಂಡು ಹಾರಿಸಿದ ಪೊಲೀಸ್ ಅಧಿಕಾರಿಯನ್ನು ಎಎಸ್‌ಐ ಗೋಪಾಲ್ ದಾಸ್ ಎಂದು ಗುರುತಿಸಲಾಗಿದ್ದು, ಗುಂಡಿನ ದಾಳಿ ನಡೆಸಿರುವುದರ ಹಿಂದಿನ ಉದ್ದೇಶವೇನು ಎಂದು ಇನ್ನೂ ತಿಳಿದುಬಂದಿಲ್ಲ.ಇಂದಿನ ಕಾರ್ಯಕ್ರಮದ ಭದ್ರತಾ ವ್ಯವಸ್ಥೆಗಳನ್ನು ನೋಡಿಕೊಳ್ಳಲು ಎಎಸ್‌ಐ ನಿಯೋಜಿಸಲಾಗಿತ್ತು. ಆದರೆ ಗುಂಡಿನ ದಾಳಿ ವೇಳೆ, ಎಎಸ್‌ಐ ಸಚಿವರ ಹತ್ತಿರದಲ್ಲಿಯೇ ಇದ್ದರು.
LIVE: Odisha minister Naba Das shot at, injured
Read @ANI | https://t.co/DDlNqiUHr1#Odisha #NabaDas #HealthMinister pic.twitter.com/SlX4r6J0sf
— ANI Digital (@ani_digital) January 29, 2023
ಗುಂಡಿನ ದಾಳಿಯ ಹಿಂದಿನ ಉದ್ದೇಶ ಬಗ್ಗೆ ಮಾಹಿತಿ ಇಲ್ಲ
ಈ ಘಟನೆ ಸಂಬಂಧ ಪ್ರತಿಕ್ರಿಯಿಸಿದ ಬ್ರಜರಾಜನಗರ ಎಸ್‌ಡಿಪಿಒ ಗುಪ್ತೇಶ್ವರ ಭೋಯ್ ಅವರು, ಸಹಾಯಕ ಪೊಲೀಸ್ ಉಪನಿರೀಕ್ಷಕ (ಎಎಸ್‌ಐ) ಗೋಪಾಲ್ ದಾಸ್ ರಿವಾಲ್ವರ್‌ನಿಂದ ಸಚಿವರ ಮೇಲೆ ಗುಂಡು ಹಾರಿಸಿದ್ದಾರೆ. ಇದರಿಂದ ಸಚಿವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಗುಂಡಿನ ದಾಳಿಯ ಹಿಂದಿನ ಉದ್ದೇಶದ ಬಗ್ಗೆ ಮಾಹಿತಿ ಇಲ್ಲ. ಆದರೀಗ ಎಎಸ್‌ಐ ಅನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಯಾರ ಸೂಚನೆ ಮೇರೆಗೆ ಎಎಸ್‌ಐ ಸಚಿವರ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಆರೋಪಿಯನ್ನು ಪ್ರಶ್ನಿಸಲಾಗಿದೆ. ಆದರೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಬೇಕಿದ್ದ ನಬಾ ದಾಸ್
ಮೆಗಾ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಬೇಕಿದ್ದ ನಬಾ ದಾಸ್‌ಗೆ ಪೊಲೀಸ್ ಬೆಂಗಾವಲು ಸಹ ಒದಗಿಸಲಾಗಿರುವುದರಿಂದ ಈ ಘಟನೆಯು ಭದ್ರತಾ ಕ್ರಮಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
"At a public grievance office opening, Naba Das was the chief guest. When he arrived, crowd gathered to welcome him. Suddenly, a gunshot was heard. We saw a police personnel running away after shooting from close range; Minister to be air lifted to Bhubaneswar," says eye witness https://t.co/IUtmORV2oL pic.twitter.com/7udTvCIVm0
— ANI (@ANI) January 29, 2023
ಸಚಿವರ ಮೇಲೆ ಗುಂಡು ಹಾರಿಸಿ ಓಡಿಹೋಗುತ್ತಿದ್ದ ಎಎಸ್‌ಐ
ಸಾರ್ವಜನಿಕ ಕುಂದುಕೊರತೆಗಳ ಕಚೇರಿ ಉದ್ಘಾಟನೆಗೊಳಿಸಲು ನಬಾ ದಾಸ್ ಮುಖ್ಯ ಅತಿಥಿಯಾಗಿ ಆಗಮಿಸುತ್ತಿದ್ದರು. ಅಲ್ಲದೇ ಅವರನ್ನು ಸ್ವಾಗತಿಸಲು ಸಾಕಷ್ಟು ಜನರು ಜಮಾಯಿಸಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಗುಂಡಿನ ಸದ್ದು ಕೇಳಿಸಿತು. ಪೊಲೀಸ್ ಸಿಬ್ಬಂದಿ ಸಚಿವರ ಮೇಲೆ ಗುಂಡು ಹಾರಿಸಿ ಓಡಿಹೋಗುತ್ತಿರುವುದನ್ನು ನಾವು ನೋಡಿದ್ದೇವೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.
ಘಟನೆ ಬಳಿಕ ಬಿಜೆಡಿ ಕಾರ್ಯಕರ್ತರ ಧರಣಿ
ಈ ಘಟನೆ ಬಳಿಕ ಬಿಜೆಡಿ ಕಾರ್ಯಕರ್ತರು ಧರಣಿ ನಡೆಸಿದ್ದು, ಸ್ಥಳದಲ್ಲಿ ಕೊಂಚ ಉದ್ವಿಗ್ನ ವಾತಾವರಣ ಉಂಟಾಯಿತು. ಸಚಿವರ ಮೇಲೆ ಹತ್ತಿರದಿಂದಲೇ ಗುಂಡು ಹಾರಿಸಲಾಗಿದ್ದು, ಇದೊಂದು ಪೂರ್ವನಿಯೋಜಿತ ಕೃತ್ಯ ಎಂದು ಶಂಕಿಸಲಾಗಿದೆ.
ಒಡಿಶಾ ಚುನಾವಣೆ ಹೊತ್ತಲ್ಲೇ ಈ ಹಿಂಸಾತ್ಮಕ ಘಟನೆ
ನಬಾ ದಾಸ್ ಪ್ರಮುಖ ಬಿಜೆಡಿ ನಾಯಕರಾಗಿದ್ದು, 2024 ರ ಚುನಾವಣೆಗೂ ಮುನ್ನವೇ ಅವರ ಮೇಲೆ ಗುಂಡಿನ ದಾಳಿ ನಡೆಸಿರುವುದು ಆತಂಕಕಾರಿ ವಿಚಾರವಾಗಿದೆ. ಒಡಿಶಾ ಚುನಾವಣೆ ಹೊತ್ತಲ್ಲೇ ಈ ಹಿಂಸಾತ್ಮಕ ಘಟನೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದೆ. ನಬಾ ದಾಸ್ ಜಾರ್ಸುಖ್ಡಾದಿಂದ ಅತ್ಯಂತ ಪ್ರಭಾವಿ ನಾಯಕರಾಗಿದ್ದು, ಕೆಲವು ವರ್ಷಗಳ ಹಿಂದೆ ಬಿಜೆಪಿ ಸೇರಲು ಕಾಂಗ್ರೆಸ್ ಅನ್ನು ತ್ಯಜಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ