Condom Gift: ಮಗಾ ಲಡ್ಡು ಬಂದು ಬಾಯಿಗ್ ಬಿತ್ತಾ? ನವ ದಂಪತಿಗೆ ಸರ್ಕಾರದಿಂದ ಕಾಂಡೋಮ್, ಮಾತ್ರೆ ಗಿಫ್ಟ್!

ನವ ದಂಪತಿಗೆ ಎಲ್ಲಿಯಾದರೂ ಕಾಂಡೋಮ್, ಗರ್ಭ ನಿರೋಧಕ ಮಾತ್ರೆ, ಕನ್ನಡಿ, ಎರಡು ಟೆವಲ್, ಕರ್ಚೀಫ್, ಬಾಚಣಿಗೆ ಜೊತೆಗೆ ಮ್ಯಾರೇಜ್ ಸರ್ಟಿಫಿಕೇಟ್ ಇತ್ಯಾದಿಗಳನ್ನು ಕೊಡ್ತಾರೆ ಅಂದ್ರೆ ನೀವು ನಂಬುತ್ತೀರಾ? ಈ ಸುದ್ದಿ ಓದಿದ ಮೇಲೆ ನೀವು ನಂಬಲೇಬೇಕು....

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಒಡಿಶಾ: ಮದುವೆಯಲ್ಲಿ (Wedding) ನವ ದಂಪತಿಗೆ (New Couple) ಬೆಲೆಬಾಳುವ ವಸ್ತುಗಳನ್ನು (Valuables Things) ಉಡುಗೊರೆಯಾಗಿ (Gift) ಕೊಡ್ತಾರೆ. ಸಂಬಂಧಿಕರಾದರೆ (Relatives) ಚಿನ್ನ, ಬೆಳ್ಳಿ, ಒಡವೆ, ಮನೆಗೆ ಬೇಕಾಗುವ ವಸ್ತು, ಹೂವು, ಹೂಗುಚ್ಛ, ಅಲಂಕಾರಿಕ ವಸ್ತುಗಳು, ಬಟ್ಟೆಗಳು, ಕೊನೆಗೆ ಹಣ ಕೂಡ ಉಡುಗೊರೆಯಾಗಿ ವಧು (Bride), ವರರಿಗೆ (Groom) ಕೊಡ್ತಾರೆ. ಕೆಲವೊಂದು ಕಡೆ ಸರ್ಕಾರದ (Government) ವತಿಯಿಂದಲೇ ವಧು, ವರರಿಗೆ ಚಿನ್ನ, ಹಣ, ಬಟ್ಟೆ, ದವಸ ಧಾನ್ಯ ಇತ್ಯಾದಿ ಉಡುಗೊರೆ ಕೊಡುವ ಯೋಜನೆಯೂ ಕೆಲ ರಾಜ್ಯಗಳಲ್ಲಿ ಇದೆ. ಆದ್ರೆ ನವ ದಂಪತಿಗೆ ಎಲ್ಲಿಯಾದರೂ ಕಾಂಡೋಮ್ (Condom), ಗರ್ಭ ನಿರೋಧಕ ಮಾತ್ರೆ (Pills), ಕನ್ನಡಿ, ಎರಡು ಟೆವಲ್, ಕರ್ಚೀಫ್, ಬಾಚಣಿಗೆ ಜೊತೆಗೆ ಮ್ಯಾರೇಜ್ ಸರ್ಟಿಫಿಕೇಟ್ ಇತ್ಯಾದಿಗಳನ್ನು ಕೊಡ್ತಾರೆ ಅಂದ್ರೆ ನೀವು ನಂಬುತ್ತೀರಾ? ನಂಬಲೇ ಬೇಕು ಕಣ್ರೀ, ಒಡಿಶಾ ಸರ್ಕಾರವೇ ಇಂಥದ್ದೊಂದು ಯೋಜನೆ ಜಾರಿಗೆ ತಂದಿದೆ.

ಸರ್ಕಾರದಿಂದಲೇ ದಂಪತಿಗೆ ಕಾಂಡೋಮ್ ಗಿಫ್ಟ್!

ಒಡಿಶಾ ರಾಜ್ಯ ಸರ್ಕಾರ ಇಂಥದ್ದೊಂದು ಯೋಜನೆಯನ್ನು ಹೊಸದಾಗಿ ಜಾರಿಗೆ ತಂದಿದೆ. ಕೇಂದ್ರ ಸರ್ಕಾರದ ಸಹಭಾಗಿತ್ವದೊಂದಿಗೆ ನವದಂಪತಿಗೆ ಸರ್ ಪ್ರೈಸ್ ಗಿಫ್ಟ್ ನೀಡುವ ಈ ವಿಶೇಷ ಯೋಜನೆ ಜಾರಿಯಾಗಿದ್ಯಂತೆ. ನವದಂಪತಿಗೆ ಸರ್ಕಾರದಿಂದಲೇ ಉಡುಗೊರೆಗಳ ಕಿಟ್ ನೀಡಲಾಗುತ್ತದೆ.

ಉಡುಗೊರೆ ಕಿಟ್‌ನಲ್ಲಿ ಏನಿರುತ್ತದೆ?

'ನಯೀ ಪಹಲ್' ಅಥವಾ 'ನಬದಂಪತಿ' ಕಿಟ್ ಎಂದು ಸರ್ಕಾರ ಇದಕ್ಕೆ ಹೆಸರು ನೀಡಿದೆ. ಈ ಉಡುಗೊರೆಯ ಕಿಟ್‌ನಲ್ಲಿ ಉಚಿತ ಕಾಂಡೋಮ್, ಮಾತ್ರೆ, ಕನ್ನಡಿ, ಎರಡು ಟೆವಲ್, ಕರ್ಚೀಫ್, ಬಾಚಣಿಗೆ, ಉಗುರು ಕತ್ತರಿಸುವ ಚಿಕ್ಕ ಸಾಧನ ಜೊತೆಗೆ ಮ್ಯಾರೇಜ್ ಸರ್ಟಿಫಿಕೇಟ್ ಸೇರಿದಂತೆ ಕೆಲ ಸರ್ಪ್ರೈಸ್ ಕೂಡ ಇರಲಿದೆಯಂತೆ.

ಇದನ್ನೂ ಓದಿ: Commonwealth Games: ‘ಕಾಮ’ನ್​​ವೆಲ್ತ್​​ ರಹಸ್ಯ: ಸಾವಿರಾರು ಬಳಸಿದ ಕಾಂಡೋಮ್​​ಗಳಿಂದ ಚರಂಡಿಯೇ ಬ್ಲಾಕ್!

ಆಶಾ ಕಾರ್ಯಕರ್ತರಿಂದ ಹಂಚಿಕೆ

ಆಶಾ ಕಾರ್ಯಕರ್ತರು ಈ ಕಿಟ್‌ಗಳನ್ನು ಹೊಸದಾಗಿ ಮದುವೆಯಾಗುವ ಜೋಡಿಗೆ ವಿತರಿಸಲಿದ್ದಾರೆ. ಈ ಕಿಟ್‌ನಲ್ಲಿ ಸುರಕ್ಷಿತ ಲೈಂಗಿಕತೆ, ಕುಟುಂಬ ಯೋಜನೆ ಸೇರಿದಂತೆ ಹಲವು ವಿಚಾರಗಳ ಕುರಿತು ಮಾಹಿತಿಗಳ ಕೈಪಿಡಿಯು ಇರಲಿದೆ. ಇಷ್ಟೇ ಅಲ್ಲ ಆಶಾ ಕಾರ್ಯಕರ್ತರು ಈ ಕುರಿತು ನವ ದಂಪತಿಗಳಿಗೆ ಮಾಹಿತಿ ನೀಡಲಿದ್ದಾರೆ.

ಈ ಯೋಜನೆ ಜಾರಿಯಾಗುವುದು ಯಾವಾಗ?

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ದೇಶಕ ಬಿಜಯ್ ಪಾಣಿಗ್ರಾಹಿ ಮಾತನಾಡಿ, ರಾಜ್ಯದಲ್ಲಿ ಕುಟುಂಬ ಯೋಜನಾ ಕಾರ್ಯಕ್ರಮವನ್ನು ಬಲಪಡಿಸಲು ರಾಜ್ಯ ಸರ್ಕಾರವು ಕಿಟ್ ಅನ್ನು ವಿತರಿಸುತ್ತದೆ ಅಂತ ಹೇಳಿದ್ದಾರೆ. ಈ ಯೋಜನೆಯ ಮೂಲಕ ನವದಂಪತಿಗಳಿಗೆ ಕುಟುಂಬ ಯೋಜನೆ ಕುರಿತು ಆರೋಗ್ಯ ಇಲಾಖೆ ಜಾಗೃತಿ ಮೂಡಿಸಲಿದೆ ಎಂದ ಅವರು, ರಾಜ್ಯದ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದಿದ್ದಾರೆ. ಈ ವರ್ಷ ಸೆಪ್ಟೆಂಬರ್‌ನಲ್ಲಿ ಈ ಯೋಜನೆ ಒಡಿಶಾ ರಾಜ್ಯದಲ್ಲಿ ಜಾರಿಯಾಗಲಿದೆ ಎಂದು ಮೂಲಗಳು ತಿಳಿಸಿವೆ.

ಕೊಲ್ಕತ್ತಾದಲ್ಲಿ ದಿಢೀರ್ ಏರಿಕೆ ಕಂಡ ಕಾಂಡೋಮ್ ಮಾರಾಟ

ಪಶ್ಚಿಮ ಬಂಗಾಳದಲ್ಲಿ (West Bengal) ಕಾಂಡೋಮ್​ಗಳು ಹೆಚ್ಚಾಗಿ ಸೇಲ್​ ಆಗುತ್ತಿವೆ. ಇಲ್ಲಿಮ ದುರ್ಗಾಪುರದ ವಿದ್ಯಾರ್ಥಿಗಳು ಕಾಂಡೋಮ್‌ಗಳನ್ನು ಖರೀದಿಸುತ್ತಿದ್ದಾರೆ; ಆದರೆ ಗರ್ಭನಿರೋಧಕವಾಗಿ ಬಳಸಲು ಅಲ್ಲ. ಮತ್ತು ಬದಲಿಗೆ ಅದನ್ನು ಮಾದಕತೆಯಾಗಿ ಬಳಸುತ್ತಿದ್ದಾರೆ. ಈ ವಿಲಕ್ಷಣ ಪ್ರವೃತ್ತಿಯು ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

 ಇದನ್ನೂ ಓದಿ: Condom Sale Hike: ಡ್ರಗ್ಸ್​ ಅಲ್ಲ ಕಾಂಡೋಮ್​ಗೆ ದಾಸರಾದ ಯುವಕರು! ಮಾರಾಟದಲ್ಲಿ ದಿಢೀರ್ ಹೆಚ್ಚಳ

 ಕಾಂಡೋಮ್ನಲ್ಲಿರುವ "ನಶೆ" ಯಾವುದು?

ರಸಾಯನಶಾಸ್ತ್ರದ ಶಿಕ್ಷಕರ ಪ್ರಕಾರ, ಕಾಂಡೋಮ್‌ಗಳನ್ನು ಬಿಸಿ ನೀರಿನಲ್ಲಿ ದೀರ್ಘಕಾಲ ನೆನೆಸುವುದರಿಂದ ದೊಡ್ಡ ಸಾವಯವ ಅಣುಗಳನ್ನು ಒಡೆಯುತ್ತದೆ. ಆಲ್ಕೋಹಾಲ್ ಸಂಯುಕ್ತಗಳನ್ನು ರಚಿಸುತ್ತದೆ. ಈ ಸಂಯುಕ್ತ ಯುವಕರನ್ನು ನಶೆಯಲ್ಲಿಡುತ್ತಿದೆ. ಕಾಂಡೋಮ್‌ನಲ್ಲಿರುವ ಆರೊಮ್ಯಾಟಿಕ್ ಸಂಯುಕ್ತವು ಅಮಲೇರಿಸುವ ಅಂಶವಾಗಿದೆ. ಈ ಸಂಯುಕ್ತವು ಡೆಂಡ್ರೈಟ್‌ಗಳಲ್ಲಿಯೂ ಸಹ ಇರುತ್ತದೆ, ಇದು ಮತ್ತೆ ಮಾದಕತೆಗಾಗಿ ಸಾಮಾನ್ಯವಾಗಿ ಬಳಸುವ ಉತ್ಪನ್ನವಾಗಿದೆ. ಮಾದಕತೆಯ ಕೆಳದರ್ಜೆಯ ವಿಧಾನವೆಂದು ಪರಿಗಣಿಸಲಾಗಿದೆ, ಡೆಂಡ್ರೈಟ್ ಬಳಕೆ ತುಂಬಾ ಸಾಮಾನ್ಯವಾಗಿದೆ ಮತ್ತು ಹೆಚ್ಚಾಗಿ ಯುವ ಜನರಲ್ಲಿ ಕಂಡುಬರುತ್ತದೆ.
Published by:Annappa Achari
First published: