ಅನ್ನ-ದಾಲ್ ತಿನ್ನುತ್ತಿದ್ದ ಶಾಲಾ ಮಕ್ಕಳೆದುರೇ ಚಿಕನ್ ತಿಂದ ಶಿಕ್ಷಣಾಧಿಕಾರಿ; ಬಳಿಕ ಆಗಿದ್ದೇನು ಗೊತ್ತಾ?

ಈ ಘಟನೆ ದಸರಾ ರಜೆ ಶುರುವಾಗುವ 3 ದಿನ ಮುಂಚಿತವಾಗಿ ಶಿಕ್ಷಣಾಧಿಕಾರಿ ಪ್ರೈಮರಿ ಶಾಲೆಗೆ ಭೇಟಿ ನೀಡಿದಾಗ ನಡೆದಿದೆ. ಸಾಯ್​ ಬಿಸಿಯೂಟ ಯೋಜನೆಯ ಕಾರ್ಯವೈಖರಿಯನ್ನು ಪರಿಶೀಲಿಸಲು ಶಾಲೆಗೆ ತೆರಳಿದ್ದರು.

Latha CG | news18-kannada
Updated:October 12, 2019, 3:53 PM IST
ಅನ್ನ-ದಾಲ್ ತಿನ್ನುತ್ತಿದ್ದ ಶಾಲಾ ಮಕ್ಕಳೆದುರೇ ಚಿಕನ್ ತಿಂದ ಶಿಕ್ಷಣಾಧಿಕಾರಿ; ಬಳಿಕ ಆಗಿದ್ದೇನು ಗೊತ್ತಾ?
ಮಧ್ಯಾಹ್ನದ ಬಿಸಿಯೂಟ
  • Share this:
ಭುವನೇಶ್ವರ(ಅ.12): ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಕೊಟ್ಟಿದ್ದ ವೇಳೆ, ಅವರ ಜೊತೆಯಲ್ಲೇ ಚಿಕನ್​ ಊಟ ತಿಂದ ಶಿಕ್ಷಣಾಧಿಕಾರಿಯನ್ನು ಅಮಾನತು ಮಾಡಲಾಗಿದೆ. ಈ ಘಟನೆ ಒಡಿಶಾದ ಸುಂದರ್​ಗರ್​ ಜಿಲ್ಲೆಯ ತಿಲೈಮಲ್​ ಶಾಲೆಯಲ್ಲಿ ನಡೆದಿದೆ.

ಸರ್ಕಾರದ ಬಿಸಿಯೂಟ ಯೋಜನೆಯನ್ವಯ ಶಾಲೆಯಲ್ಲಿ ಮಕ್ಕಳಿಗೆ ಅನ್ನ ಮತ್ತು ದಾಲ್ ನೀಡಲಾಗಿತ್ತು. ಈ ವೇಳೆ ಶಾಲೆಗೆ ಭೇಟಿ ನೀಡಿದ್ದ ಬೋನಾಯ್​​​ ಕ್ಷೇತ್ರ ಶಿಕ್ಷಣ ಅಧಿಕಾರಿ ಬಿನಯ್​ ಪ್ರಕಾಶ್​ ಸಾಯ್ ಮಕ್ಕಳ ಜೊತೆಯಲ್ಲೇ ಹೊರಗಡೆಯಿಂದ ಚಿಕನ್ ತರಿಸಿಕೊಂಡು ಊಟ ಮಾಡಿದ್ದಾರೆ.  ಈ  ವಿಡಿಯೋ ಎಲ್ಲೆಡೆ ಭಾರೀ ವೈರಲ್ ಆಗಿದೆ. ವಿಷಯ ತಿಳಿದ ಕೂಡಲೇ ಸುಂದೇರ್​ಗರ್ ಜಿಲ್ಲಾಧಿಕಾರಿ ನಿಖಿಲ್ ಪವನ್​ ಕಲ್ಯಾಣ್​ ಕ್ಷೇತ್ರ ಶಿಕ್ಷಣಾಧಿಕಾರಿಯನ್ನು ಅಮಾನತುಗೊಳಿಸಿದ್ದಾರೆ.

IT Raid: ಐಟಿ ದಾಳಿ ಬೆನ್ನಲ್ಲೇ ಡಾ.ಜಿ.ಪರಮೇಶ್ವರ್​​ ಪಿಎ ರಮೇಶ್​ ಆತ್ಮಹತ್ಯೆ

ಸಾರ್ವಜನಿಕ ಸೇವೆಯಲ್ಲಿದ್ದುಕೊಂಡು ಅನುಚಿತವಾಗಿ ವರ್ತಿಸಿದ ಶಿಕ್ಷಣಾಧಿಕಾರಿಯನ್ನು ಕೂಡಲೇ ಅಮಾನತುಗೊಳಿಸಲಾಗಿದೆ. ಕರ್ತವ್ಯದ ವೇಳೆ ಶಾಲಾ ಮಕ್ಕಳ ಮುಂದೆ ಅನುಚಿತವಾಗಿ ವರ್ತಿಸಿರುವುದರಿಂದ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

ಈ ಘಟನೆ ದಸರಾ ರಜೆ ಶುರುವಾಗುವ 3 ದಿನ ಮುಂಚಿತವಾಗಿ ಶಿಕ್ಷಣಾಧಿಕಾರಿ ಪ್ರೈಮರಿ ಶಾಲೆಗೆ ಭೇಟಿ ನೀಡಿದಾಗ ನಡೆದಿದೆ. ಸಾಯ್​ ಬಿಸಿಯೂಟ ಯೋಜನೆಯ ಕಾರ್ಯವೈಖರಿಯನ್ನು ಪರಿಶೀಲಿಸಲು ಶಾಲೆಗೆ ತೆರಳಿದ್ದರು. ಶಾಲೆಯ ಹೆಡ್​ ಮಾಸ್ಟರ್ ತುಪಿ ಚಂದನ್​ ಕಿಸನ್​ ಹಾಗೂ ಇತರೆ ಶಿಕ್ಷಕರು ​ ಶಿಕ್ಷಣಾಧಿಕಾರಿಗೆ ಅದ್ದೂರಿ ಸ್ವಾಗತ ಕೋರಿದ್ದರು.

ಐಟಿ ದಾಳಿ ಪ್ರಕರಣ; ಮಾಜಿ ಡಿಸಿಎಂ ಪರಮೇಶ್ವರ್ ಖಜಾನೆಯಲ್ಲಿತ್ತು 100 ಕೋಟಿಗೂ ಅಧಿಕ ಅಕ್ರಮ ಹಣ!

ಬಳಿಕ ಕಾರ್ಯವೈಖರಿ ಪರಿಶೀಲಿಸಲು ಅಡುಗೆ ಮನೆಗೆ ತೆರಳಿದಾಗ, ಮಕ್ಕಳ ಜೊತೆ ಕೂತು ಊಟ ಮಾಡುವುದಾಗಿ ಸಾಯ್​ ಹೇಳಿದ್ದರು. ಶಿಕ್ಷಣಾಧಿಕಾರಿ ನಮ್ಮ ಜೊತೆ ಕೂತು ಊಟ ಮಾಡುತ್ತಾರೆಂದು ವಿದ್ಯಾರ್ಥಿಗಳು ಬಹಳ ಉತ್ಸುಕರಾಗಿದ್ದರು. ಊಟದಲ್ಲಿ ವಿದ್ಯಾರ್ಥಿಗಳಿಗೆ ಮಾಮೂಲಿಯಾಗಿ ಅನ್ನ ಮತ್ತು ದಾಲ್​ ಬಡಿಸಲಾಯಿತು. ಆದರೆ ಅಧಿಕಾರಿ ಹಾಗೂ ಶಿಕ್ಷಕರಿಗೆ ಹೊರಗಡೆಯಿಂದ ತಂದ ಚಿಕನ್​ ಕರಿ ಮತ್ತು ಸಲಾಡ್ಸ್​ ಬಡಿಸಲಾಗಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್​ ಆಗಿತ್ತು.ಆದಾಗ್ಯೂ, ತನ್ನ ಮೇಲಿನ ಆರೋಪವನ್ನು ಅಲ್ಲಗಳೆದಿರುವ  ಶಿಕ್ಷಣಾಧಿಕಾರಿ ಸಾಯ್​, ಊಟದಲ್ಲಿ ನನಗೆ ಚಿಕನ್ ಕರಿ ಬಡಿಸಿರಲಿಲ್ಲ. ಶಿಕ್ಷಕಿಯೊಬ್ಬರ ಮನೆಯಿಂದ ಕೊಟ್ಟ ವೆಜ್​ ಊಟ ಅದಾಗಿತ್ತು ಎಂದು ಹೇಳಿದ್ಧಾರೆ.

ಈ ಘಟನೆಯ ಬಗ್ಗೆ ಸ್ಥಳೀಯರು ತೀವ್ರ  ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಕರಣ ಕುರಿತು ತನಿಖೆಗೆ ಆದೇಶಿಸಲು ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದ್ದಾರೆ.

First published: October 12, 2019, 3:44 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading