Naxals Surrendered: 700 ಸಕ್ರಿಯ ನಕ್ಸಲರು, ಮಾವೋವಾದಿ ಬೆಂಬಲಿಗರಿಂದ ಶರಣಾಗತಿ

ಶರಣಾದ ಬಂಡುಕೋರರು ಮತ್ತು ಬೆಂಬಲಿಗರು ಮಾವೋವಾದಿ ಸಂಕೇತದ ಬಟ್ಟೆ, ಸಾಮಗ್ರಿಗಳು ಮತ್ತು ಪ್ರತಿಕೃತಿಗಳನ್ನು ಸುಟ್ಟುಹಾಕಿದ್ದಾರೆ. ಅಧಿಕಾರಿಗಳು ಮತ್ತು ಮಾಧ್ಯಮದವರ ಮುಂದೆ ‘ಮಾವೋವಾದಿ ಮುರ್ದಾಬಾದ್ ಅಮ ಸರ್ಕಾರ್ ಜಿಂದಾಬಾದ್’ ಘೋಷಣೆ ಕೂಗಿದ್ದಾರೆ.

ಶರಣಾಗತಿ ಪ್ರಕ್ರಿಯೆ

ಶರಣಾಗತಿ ಪ್ರಕ್ರಿಯೆ

  • Share this:
ಭುವನೇಶ್ವರ: 300ಕ್ಕೂ ಹೆಚ್ಚು ಸಶಸ್ತ್ರ ಬಂಡುಕೋರರು ಸೇರಿದಂತೆ 700ಕ್ಕೂ ಹೆಚ್ಚು ನಕ್ಸಲರು (Naxals Surrendered) ಮತ್ತು ಮಾವೋವಾದಿ ಬೆಂಬಲಿಗರು (Maoist Supporters) ಪೊಲೀಸರಿಗೆ ಶರಣಾಗಿದ್ದಾರೆ. ಈ ಶರಣಾಗತಿಯಿಂದಾಗಿ ನಿಷೇಧಿತ ಸಿಪಿಐ (ಮಾವೋವಾದಿ) ಸಂಘಟನೆಗೆ ಭಾರಿ ಹಿನ್ನಡೆಯಾಗಿದೆ.  ಭದ್ರತಾ ಪಡೆಗಳು ಮತ್ತು ನಾಗರಿಕರ ಹತ್ಯೆಯಲ್ಲಿ ಭಾಗಿಯಾಗಿದ್ದ ಬಂಡುಕೋರರಿಗೆ ಮಾವೋವಾದಿ ಬೆಂಬಲಿಗರು ಸಹಾಯ ಮಾಡುತ್ತಿದ್ದರು. ಬಂಡುಕೋರರ ಸಂಚಾರಕ್ಕೆ ಬೆಂಬಲವನ್ನೂ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಶರಣಾದ ಬಂಡುಕೋರರು ಮತ್ತು ಬೆಂಬಲಿಗರು ಮಾವೋವಾದಿ ಸಂಕೇತದ ಬಟ್ಟೆ, ಸಾಮಗ್ರಿಗಳು ಮತ್ತು ಪ್ರತಿಕೃತಿಗಳನ್ನು ಸುಟ್ಟುಹಾಕಿ ಅಧಿಕಾರಿಗಳು ಮತ್ತು ಮಾಧ್ಯಮದವರ ಮುಂದೆ ‘ಮಾವೋವಾದಿ ಮುರ್ದಾಬಾದ್ ಅಮ ಸರ್ಕಾರ್ ಜಿಂದಾಬಾದ್’ ಘೋಷಣೆ ಕೂಗಿದ್ದಾರೆ.

ಹೊಸ ರಸ್ತೆಗಳು, ಸೇತುವೆಗಳು, ವೈದ್ಯಕೀಯ ಸೌಲಭ್ಯಗಳ ನಿರ್ಮಾಣ, ಮೊಬೈಲ್ ಟವರ್‌ಗಳ ಅಳವಡಿಕೆ, ಎಲ್ಲಾ ಮನೆಗಳಿಗೆ ಕುಡಿಯುವ ನೀರು ಮತ್ತು ವಿದ್ಯುತ್ ಸರಬರಾಜು ಮಾಡುವ ಯೋಜನೆಗಳಂತಹ ಅಭಿವೃದ್ಧಿ ಕಾರ್ಯಗಳ ಸರಣಿಯನ್ನು ಈ ಪ್ರದೇಶದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಈ ಅಭಿವೃದ್ಧಿ ಕಾರ್ಯಗಳು ಮಾವೋವಾದಿ ಬೆಂಬಲಿಗರು ಸಂಘಟನೆಗೆ ವಿದಾಯ ಹೇಳಿ ಮುಖ್ಯವಾಹಿನಿಗೆ ಸೇರಲು ಪ್ರೇರೇಪಿಸಿದೆ ಎಂದು  ಹಿರಿಯ ಅಧಿಕಾರಿಯೋರ್ವರು ತಿಳಿಸಿದ್ದಾರೆ.

ಇನ್ನೂ ಹೆಚ್ಚಿನ ಮಾವೋವಾದಿ ಬೆಂಬಲಿಗರು ಮುಖ್ಯವಾಹಿನಿಗೆ
ಅಲ್ಲದೇ ಶೀಘ್ರದಲ್ಲೇ ಇನ್ನೂ ಹೆಚ್ಚಿನ ಜನರು ಮುಖ್ಯವಾಹಿನಿಗೆ ಸೇರಲಿದ್ದಾರೆ ಎಂದು ಸಹ ಅವರು ಮಾಹಿತಿ ನೀಡಿದ್ದಾರೆ. ಈ ವರ್ಷದ ಜೂನ್‌ನಲ್ಲಿ 50 ಸಕ್ರಿಯ ಹಾರ್ಡ್‌ಕೋರ್ ಮಾವೋವಾದಿ ಬೆಂಬಲಿಗರು ಡಿಜಿಪಿ ಮುಂದೆ ಶರಣಾಗಿದ್ದರು.

ಇದನ್ನೂ ಓದಿ: Mukesh Ambani: ಗುರುವಾಯೂರಪ್ಪನ ದರ್ಶನ ಪಡೆದ ಮುಖೇಶ್ ಅಂಬಾನಿ, ದೇಗುಲಕ್ಕೆ 1.51 ಕೋಟಿ ರೂಪಾಯಿ ದೇಣಿಗೆ

ಇವರೆಲ್ಲ ಎಲ್ಲಿಯವರು?
ಶರಣಾದ 300 ಸೇನಾಪಡೆಗಳ ಪೈಕಿ 13 ಮಂದಿ ಆಂಧ್ರ ಪ್ರದೇಶದವರಾಗಿದ್ದಾರೆ.  ಇವರನ್ನು ಮಲ್ಕನ್‌ಗಿರಿ ಜಿಲ್ಲೆಯ ಖೈರ್‌ಪುಟ್ ಬ್ಲಾಕ್‌ನ ಆಂಧ್ರಹಾಲ್ ಪಂಚಾಯತ್​ನ ಭಜಗುಡ, ಬಿಸೇಗುಡ, ಖಾಲ್‌ಗುಡ, ಪತ್ರಾಪುಟ್, ಒಂಡೆಪದಾರ್, ಸಂಬಲ್‌ಪುರ್ ಮತ್ತು ಸಿಂಧಿಪುಟ್ ಗ್ರಾಮಗಳು ಮತ್ತು ಆಂಧ್ರಪ್ರದೇಶದ ಅಲ್ಲೂರಿ ಸೀತಾರಾಮ್ ರಾಜು ಜಿಲ್ಲೆಯ ರಂಗಬೆಲ್ ಪಂಚಾಯಿತಿಯ ಪಡಲ್‌ಪುಟ್, ಕುಸುಂಪುಟ್, ಮಟಂಪುಟ್ ಮತ್ತು ಜೋಡಿಗುಮ್ಮ ಗ್ರಾಮಗಳ ನಿವಾಸಿಗಳಾಗಿದ್ದರು ಎಂದು ಗುರುತಿಸಲಾಗಿದೆ. ನೈಋತ್ಯ ವಲಯದ ಡಿಐಜಿ ರಾಜೇಶ್ ಪಂಡಿತ್, ಕೋರಾಪುಟ್ ಬಿಎಸ್‌ಎಫ್ ಡಿಐಜಿ ಮದನ್ ಲಾಲ್ ಮತ್ತು ಎಸ್‌ಪಿ ನಿತೇಶ್ ವಾಧ್ವಾನಿ ಅವರ ಮುಂದೆ ಶನಿವಾರ ಬೊಂಡಾ ಹಿಲ್‌ನಲ್ಲಿ ಶರಣಾಗಿದ್ದಾರೆ. 

ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ನಗೆಪಾಟಲಿಗೆ

ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ (Pakistan PM Shehbaz Sharif) ಜಾಗತಿಕ ಮಟ್ಟದಲ್ಲಿ ನಗೆಪಾಟಲಿಗೆ ಈಡಾಗಿದ್ದಾರೆ. ಉಜ್ಬೇಕಿಸ್ತಾನ್‌ನಲ್ಲಿ ನಡೆದ ಪ್ರಾದೇಶಿಕ ಶೃಂಗಸಭೆ ನಡೆಯುತ್ತಿದ್ದು ನಿನ್ನೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೊತೆಗಿನ ಸಭೆಯಲ್ಲಿ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಹೆಡ್​ಫೋನ್ ಹಾಕಿಕೊಳ್ಳಲು ಬರದೇ ಪರದಾಡಿದ ಘಟನೆ ನಡೆದಿದೆ. ರಷ್ಯಾದ ನೆಟ್ಟಿಗರು ಸಾಮಾಜಿಕ ಮಾಧ್ಯಮಗಳಲ್ಲಿ ಈ ವಿಡಿಯೋ ವೈರಲ್ (Viral Video) ಆಗಿದ್ದು ಟ್ರೋಲ್ (Shehbaz Sharif Troll) ಮಾಡುತ್ತಾ ನಗುತ್ತಿದ್ದಾರೆ.

ಇದನ್ನೂ ಓದಿ: Relationship: ಮನೆಗೆ ಬರುತ್ತಿದ್ದ ಅಪ್ರಾಪ್ತ ಅಳಿಯನ ಮೇಲೆ 35ರ ಅತ್ತೆಗೆ ಲವ್, ಗಂಡ, ಮಕ್ಕಳಿಗೆ ಗುಡ್​ಬೈ!

ಉಜ್ಬೇಕಿಸ್ತಾನ್‌ನ ಸಮರ್ಕಂಡ್‌ನಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆ (SCO) ಶೃಂಗಸಭೆಯ ಸಂದರ್ಭದಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆಯ ಸಂದರ್ಭದಲ್ಲಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಹೆಡ್‌ಫೋನ್‌ಧರಿಸಲು ತಿಣುಕಾಡಿದ್ದಾರೆ. ಅವರ ಸ್ಥಿತಿ ನೋಡಿದ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್​ ಮುಖದಲ್ಲೂ ಕೊಂಚ ನಗು ಮೂಡಿದೆ
Published by:ಗುರುಗಣೇಶ ಡಬ್ಗುಳಿ
First published: