ಮಾಲಿನ್ಯ ನಿಯಂತ್ರಣಕ್ಕಾಗಿ ದೆಹಲಿಯಲ್ಲಿ ಮತ್ತೆ ಸಮ-ಬೆಸ ವಾಹನ ಸಂಚಾರಕ್ಕೆ ಚಾಲನೆ; ಅರವಿಂದ್​ ಕೇಜ್ರಿವಾಲ್​​

ಚಳಿಗಾಲದಲ್ಲಿ ದೆಹಲಿ ಜನರನ್ನು ಕಾಡುವ ವಾಯುಮಾಲಿನ್ಯ ಅಪಾಯದಮಟ್ಟ ತಲುಪುತ್ತದೆ. ಈ ಹಿನ್ನೆಲೆ ನ.4 ರಿಂದ 15ರವರೆಗೆ ರಾಜಧಾನಿಯ ರಸ್ತೆಗಳಲ್ಲಿ ಸಮ-ಬೆಸಸಂಖ್ಯೆಯ ವಾಹನ ಸಂಚಾರವನ್ನು ಪುನಾರಾರಂಭಿಸಲಾಗುವುದು ಎಂದು ಸಿಎಂ ಅರವಿಂದ್​ ಕೇಜ್ರಿವಾಲ್​ ತಿಳಸಿದರು

Seema.R | news18-kannada
Updated:September 13, 2019, 12:56 PM IST
ಮಾಲಿನ್ಯ ನಿಯಂತ್ರಣಕ್ಕಾಗಿ ದೆಹಲಿಯಲ್ಲಿ ಮತ್ತೆ ಸಮ-ಬೆಸ ವಾಹನ ಸಂಚಾರಕ್ಕೆ ಚಾಲನೆ; ಅರವಿಂದ್​ ಕೇಜ್ರಿವಾಲ್​​
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ (ಸೆ.13): ರಾಜ್ಯ ರಾಜಧಾನಿಯಲ್ಲಿನ ವಾಯು ಮಾಲಿನ ಸಮಸ್ಯೆ ನಿಯಂತ್ರಿಸಲು ಮುಂದಾಗಿರುವ ಅರವಿಂದ್​ ಕೇಜ್ರೀವಾಲ್​ ಮತ್ತೆ ಸಮ-ಬೆಸ ಸಂಚಾರ ಯೋಜನೆ ಮರುಚಾಲನೆಗೆ ಮುಂದಾಗಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು, ನಗರದಲ್ಲಿ ವಾಯುಮಾಲಿನ್ಯ ಹೆಚ್ಚುತ್ತಿದ್ದು, ಈ ಸಮಸ್ಯೆ ನಿವಾರಣೆಗೆ ಮತ್ತೆ ಈ ಯೋಜನೆಗೆ ಚಾಲನೆ ನೀಡಲಾಗುತ್ತಿದೆ ಎಂದರು.

ಚಳಿಗಾಲದಲ್ಲಿ ದೆಹಲಿ ಜನರನ್ನು ಕಾಡುವ ವಾಯುಮಾಲಿನ್ಯ ಅಪಾಯದಮಟ್ಟ ತಲುಪುತ್ತದೆ. ಈ ಹಿನ್ನೆಲೆ ಇದರ ವಿರುದ್ಧ ಹೋರಾಡಲು ಅಲ್ಪಾವಧಿಯ ಮಾಪನದ ಫೇಸ್​ ಮಾಸ್ಕ್​​ ಬಳಸುವಂತೆ ಪರಿಸರ ತಜ್ಞರು ಶಿಫಾರಸ್ಸು ಮಾಡಿದ್ದರು.

ಈ ಬೆನ್ನಲ್ಲೇ  ಸಿಎಂ ಕೇಜ್ರೀವಾಲ್​ ನ.4 ರಿಂದ 15ರವರೆಗೆ ರಾಜಧಾನಿಯ ರಸ್ತೆಗಳಲ್ಲಿ ಸಮ-ಬೆಸಸಂಖ್ಯೆಯ ವಾಹನ ಸಂಚಾರವನ್ನು ಪುನಾರಾರಂಭಿಸಲಾಗುವುದು ಎಂದು ತಿಳಿಸಿದ್ದಾರೆ.

ಇದೇ ವೇಳೆ ಬೆಳೆ ಸುಡುವುದರಿಂದ ಉಂಟಾಗುವ ಮಾಲಿನ್ಯ ತಡೆಗೆ ಏಳು ಅಂಶಗಳ ಕ್ರಮವನ್ನು ತಿಳಿಸಿದರು. ಅಲ್ಲದೇ ದೀಪಾವಳಿಯ ಸಂದರ್ಭದಲ್ಲಿ ಪಟಾಕಿಗಳನ್ನು ಸುಡದಂತೆ ಮನವಿ ಮಾಡಿದರು.

ಇನ್ನು ಈ ಕುರಿತು ಪರಿಸರ ತಜ್ಞರನ್ನು ಭೇಟಿಯಾದ ಅವರು ಚಳಿಗಾಲದ ವಾಯುಮಾಲಿನ್ಯದ ವಿರುದ್ಧ ಹೋರಾಡಲು ಕ್ರಮದ ಕುರಿತು ಚರ್ಚೆ ನಡೆಸಿದ್ದಾರೆ.

ಇದನ್ನು ಓದಿ: ಕಾನೂನು ವಿದ್ಯಾರ್ಥಿನಿ ಅತ್ಯಾಚಾರ ಆರೋಪ; ಬಿಜೆಪಿ ನಾಯಕ ಸ್ವಾಮಿ ಚಿನ್ಮಯಾನಂದರ ಸುದೀರ್ಘ ವಿಚಾರಣೆಈ ಹಿಂದೆ ಕೂಡ ಈ ಸಮ –ಬೆಸಸಂಖ್ಯೆಗಳ ವಾಹನ ಸಂಚಾರದ ಕುರಿತು ಕೇಜ್ರೀವಾಲ್​ ಯೋಜನೆ ರೂಪಿಸಿದ್ದರು, ಆದರೆ ಈ ಕುರಿತು ಬಂದ ಭಿನ್ನಾಭಿಪ್ರಾಯಗಳಿಂದ ಈ ಯೋಜನೆ ಸ್ಥಗಿತಗೊಂಡಿತು.

2016ರಲ್ಲಿ ಮೊದಲ ಬಾರಿ ಈ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಸಮ ಸಂಖ್ಯೆಯ ನಂಬರ್​ ಹೊಂದಿದಂತಹ ವಾಹನಗಳು ಪರ್ಯಾಯ ದಿನ(ದಿನ ಬಿಟ್ಟು ದಿನ) ಸಂಚಾರ ಮಾಡುವ ಈ ಯೋಜನೆ ವಿವಾದಕ್ಕೆ ಕಾರಣವಾಗಿತ್ತು.

First published:September 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading