ಬಿಜೆಪಿಗೆ ತಲೆನೋವಾಗಿದ್ದ ಅಲ್ಪೇಶ್ ಠಾಕೂರ್ ಕಾಂಗ್ರೆಸ್​ನಿಂದ ಹೊರಕ್ಕೆ

ಬಿಜೆಪಿಗೆ ತಲೆನೋವಾಗಿದ್ದ ಗುಜರಾತ್​ನ ಮೂವರು ಯುವ ಮುಖಂಡರಲ್ಲಿ ಅಲ್ಪೇಶ್ ಠಾಕೂರ್ ಕೂಡ ಒಬ್ಬರು. ಒಂದೂವರೆ ವರ್ಷದ ಹಿಂದೆ ಕಾಂಗ್ರೆಸ್ ಸೇರಿದ್ದ ಅಲ್ಪೇಶ್ ಇದೀಗ ಅಲ್ಲಿಂದ ಹೊರಬಂದಿದ್ಧಾರೆ.

Vijayasarthy SN | news18
Updated:April 10, 2019, 2:38 PM IST
ಬಿಜೆಪಿಗೆ ತಲೆನೋವಾಗಿದ್ದ ಅಲ್ಪೇಶ್ ಠಾಕೂರ್ ಕಾಂಗ್ರೆಸ್​ನಿಂದ ಹೊರಕ್ಕೆ
ಅಲ್ಪೇಶ್ ಠಾಕೂರ್
Vijayasarthy SN | news18
Updated: April 10, 2019, 2:38 PM IST
ನವದೆಹಲಿ(ಏ. 10): ಗುಜರಾತ್​ನ ಪ್ರಬಲ ಹಿಂದುಳಿದ ವರ್ಗಗಳ ಯುವ ನೇತಾರ ಅಲ್ಪೇಶ್ ಠಾಕೂರ್ ಅವರು ಕಾಂಗ್ರೆಸ್ ಪಕ್ಷಕ್ಕೆ ತಿಲಾಂಜಲಿ ಹೇಳಿದ್ದಾರೆ. ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಒಂದು ದಿನ ಮುಂಚೆ ನಡೆದಿರುವ ಈ ಬೆಳವಣಿಗೆಯು ತನಗೆ ಲಾಭವಾಗಬಹುದಾ ಎಂಬ ನಿರೀಕ್ಷೆಯಲ್ಲಿ ಬಿಜೆಪಿ ಇದೆ. ಆದರೆ, ಅಲ್ಪೇಶ್ ಠಾಕೂರ್ ಅವರು ಬೇರೆ ಪಕ್ಷ ಸೇರಲಿದ್ದಾರಾ ಎಂಬುದು ಇನ್ನೂ ಗೊತ್ತಾಗಿಲ್ಲ. ಅವರೂ ಕೂಡ ಈ ಬಗ್ಗೆ ವಿವರ ನೀಡಿಲ್ಲ. ಕೋಲಿ ಠಾಕೂರ್ ಸಮುದಾಯಕ್ಕೆ ಸೇರಿದ ಅಲ್ಪೇಶ್ ಠಾಕೂರ್ ಅವರು 2017ರ ಅಕ್ಟೋಬರ್ ತಿಂಗಳಲ್ಲಿ ಕಾಂಗ್ರೆಸ್ ಪಕ್ಷ ಸೇರಿದ್ದರು. ಇತ್ತೀಚೆಗೆ ಆ ಪಕ್ಷದೊಂದಿಗಿನ ಅವರ ಸಂಬಂಧ ಹಳಸಿತ್ತು.

ಇದನ್ನೂ ಓದಿ: ಬಿಜೆಪಿ ಪ್ರಣಾಳಿಕೆಗೆ 100ಕ್ಕೆ200 ಅಂಕ: ಶಿವಸೇನೆ ಮುಖವಾಣಿ ಸಾಮ್ನಾ ಸಂಪಾದಕೀಯದಲ್ಲಿ ಮೋದಿಯನ್ನು ಹಾಡಿಹೊಗಳಿದ ಠಾಕ್ರೆ

ಕೆಲ ವರ್ಷಗಳ ಹಿಂದಿನಿಂದಲೂ ಬಿಜೆಪಿಗೆ ತಲೆನೋವು ತಂದಿದ್ದ ತ್ರಿವಳಿ ಯುವ ಮುಖಂಡರಲ್ಲಿ ಅಲ್ಪೇಶ್ ಠಾಕೂರ್ ಕೂಡ ಒಬ್ಬರು. ಹಾರ್ದಿಕ್ ಪಟೇಲ್, ಜಿಗ್ನೇಶ್ ಮೇವಾನಿ ಮತ್ತು ಅಲ್ಪೇಶ್ ಠಾಕೂರ್ ಅವರು ಬಿಜೆಪಿ ವಿರುದ್ಧ ಪ್ರಬಲ ಹೋರಾಟ ನಡೆಸಿ ಕಂಗೆಡಿಸಿದ್ದರು. ಹಾರ್ದಿಕ್ ಪಟೇಲ್ ಅವರು ಪಾಟೀದಾರ್ ಆಂದೋಲನದ ಮೂಲಕ ಬೃಹತ್ ಹೋರಾಟ ಹಮ್ಮಿಕೊಂಡರೆ, ಜಿಗ್ನೇಶ್ ಮೇವಾನಿ ಅವರು ದಲಿತರನ್ನು ಒಗ್ಗೂಡಿಸುವ ಕೆಲಸ ಮಾಡಿದ್ದರು. ಅಲ್ಪೇಶ್ ಠಾಕೂರ್ ಅವರು 2011ರಲ್ಲಿ ಗುಜರಾತ್ ಕ್ಷತ್ರಿಯ ಠಾಕೂರ್ ಸೇನಾ ಎಂಬ ಸಂಘಟನೆ ಕಟ್ಟಿ ಹೋರಾಟ ಮಾಡಿದರು. ಹಾಗೆಯೇ ಓಬಿಸಿ, ಎಸ್​ಸಿ-ಎಸ್​ಟಿ ಏಕತಾ ವೇದಿಕೆ ನಿರ್ಮಿಸಿ ಹಿಂದುಳಿದ ಹಾಗೂ ಶೋಷಿತ ಸಮುದಾಯಗಳಿಗೆ ಮೀಸಲಾತಿ ದೊರಕಿಸುವ ಆಂದೋಲನ ನಡೆಸಿದ್ದರು.

ಇದನ್ನೂ ಓದಿ: ಬಿಜೆಪಿ ಗೆಲುವು ಸಾಧಿಸಿದರೆ ಮಾತ್ರ ಜಮ್ಮು- ಕಾಶ್ಮೀರದ ಶಾಂತಿ ಮಾತುಕತೆ ಸಾಧ್ಯ :  ಇಮ್ರಾನ್ ಖಾನ್

ಈ ಮೂವರು ಯುವ ಮುಖಂಡರ ಪೈಕಿ ಹಾರ್ದಿಕ್ ಮತ್ತು ಅಲ್ಪೇಶ್ ಅವರು ಕಾಂಗ್ರೆಸ್ ಸೇರ್ಪಡೆಯಾದರು. ಹಾರ್ದಿಕ್ ಅವರು ಹಳೆಯ ಪ್ರಕರಣವೊಂದರಲ್ಲಿ ಸಿಲುಕಿಕೊಂಡಿದ್ದರಿಂದ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನಿರಾಕರಿಸಲಾಗಿದೆ. ಜಿಗ್ನೇಶ್ ಮೇವಾನಿ ಅವರು ಗುಜರಾತ್​ನ ವಡಗಾಮ್ ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲಿತ ಪಕ್ಷೇತರ ಅಭ್ಯರ್ಥಿಯಾಗಿ ಜಯಿಸಿ ಸಂಸದರಾಗಿದ್ಧಾರೆ.

ಕಾಂಗ್ರೆಸ್ ಪಕ್ಷದಲ್ಲಿ ಅಲ್ಪೇಶ್ ಠಾಕೂರ್ ಅವರ ಹಾದಿ ಸುಗಮವಾಗಿರಲಿಲ್ಲ. ಗುಜರಾತ್ ಘಟಕದ ಕಾಂಗ್ರೆಸ್ ನಾಯಕತ್ವದ ಬಗ್ಗೆ ಅಸಮಾಧಾನ ಹೊಂದಿದ್ದ ಅಲ್ಪೇಶ್ ಅವರು ಯುವ ಮುಖಂಡರಿಗೆ ಸರಿಯಾದ ಅವಕಾಶ ಸಿಗುತ್ತಿಲ್ಲ ಎಂದು ಅನೇಕ ಬಾರಿ ಬೇಸರ ತೋಡಿಕೊಂಡಿದ್ದರು.ಇದನ್ನೂ ಓದಿ: ಗುಜರಾತ್​​ ಹಿಂಸಾಚಾರ: ವಲಸಿಗರ ಮೇಲೆ ಹಲ್ಲೆ, ‘ಠಾಕೂರ್​​ ಸೇನೆ’ ಕೈವಾಡವಿಲ್ಲ ಎಂದು ಅಲ್ಪೇಶ್​​ ಸ್ಪಷ್ಟನೆ..

ಅಲ್ಪೇಶ್ ವರ್ತನೆಯು ಕಾಂಗ್ರೆಸ್ ನಾಯಕರಿಗೂ ಇರಿಸುಮುರಿಸು ತಂದಿತ್ತು. ಅಲ್ಪೇಶ್ ಅವರು ಬಿಜೆಪಿಯ ಬಿ-ಟೀಮ್​ನಂತೆ ವರ್ತಿಸುತ್ತಿದ್ದಾರೆ. ಸಲ್ಲದ ಬೇಡಿಕೆ ಮುಂದಿಡುತ್ತಿದ್ದಾರೆ. ಪಕ್ಷದೊಳಗೆ ಠಾಕೂರ್ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಎಂಬ ಭಾವನೆ ಮೂಡಿಸಿ ಬಿಜೆಪಿ ಸೇರಲು ಚಿತಾವಣಿ ನಡೆಸಿದ್ದಾರೆಂದು ಹಿರಿಯ ಕಾಂಗ್ರೆಸ್ ಮುಖಂಡರೊಬ್ಬರು ಕಳೆದ ತಿಂಗಳು ಹೇಳಿದ್ದರು. ಆಗಲೇ ಅಲ್ಪೇಶ್ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರುವ ಸುದ್ದಿಗಳು ಹರಡಿದ್ದವು. ಆದರೆ, ಅಲ್ಪೇಶ್ ತಾನು ಕಾಂಗ್ರೆಸ್​ನಲ್ಲಿದ್ದುಕೊಂಡೇ ಠಾಕೂರ್ ಸಮುದಾಯದ ಪರ ಕೆಲಸ ಮಾಡುವುದಾಗಿ ಹೇಳಿ, ಬಿಜೆಪಿ ಸೇರುವ ವದಂತಿಯನ್ನು ತಳ್ಳಿಹಾಕಿದ್ದರು. ಆದರೆ, ಇದೀಗ ಅವರು ಕಾಂಗ್ರೆಸ್​ನಿಂದ ಹೊರಬಂದಿದ್ದಾರೆ.
First published:April 10, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ