ಸಾಂತಾ ಕ್ಲಾಸ್​ ವೇಷದಲ್ಲಿ ಬರಾಕ್​ ಒಬಾಮಾ..!

Latha CG | news18india
Updated:December 20, 2018, 12:47 PM IST
ಸಾಂತಾ ಕ್ಲಾಸ್​ ವೇಷದಲ್ಲಿ ಬರಾಕ್​ ಒಬಾಮಾ..!
ಸಾಂತಾ ಕ್ಲಾಸ್​ ವೇಷದಲ್ಲಿ ಬರಾಕ್​ ಒಬಾಮಾ
  • Share this:
ವಾಷಿಂಗ್ಟನ್​,(ನ.20): ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್​ ಒಬಾಮಾ ಅವರದು ಸರಳ ವ್ಯಕ್ತಿತ್ವ. ಉದಾರ ಜೀವಿಯೂ ಹೌದು. ಅಮೆರಿಕಾ ಸಂಸ್ಥಾನದ ಅಧ್ಯಕ್ಷರಾಗಿದ್ದರೂ ಸಹ, ಯಾವ ಅಮ್ಮು-ಬಿಮ್ಮುಗಳಿಲ್ಲದೇ ಜನಸಾಮಾನ್ಯರಂತೆ ಜೀವನ ನಡೆಸುತ್ತಿದ್ದಾರೆ. ಒಬಾಮಾ ಮಕ್ಕಳೊಂದಿಗೆ ಹೆಚ್ಚಾಗಿ ಬೆರೆಯುತ್ತಾರೆ. ಇಂದು ಸಾಂತಾ ಕ್ಲಾಸ್​ ವೇಷ ಧರಿಸಿ ವಾಷಿಂಗ್ಟನ್​ನ ಮಕ್ಕಳ ಆಸ್ಪತ್ರೆಗೆ ಅಚ್ಚರಿ ಭೇಟಿ ನೀಡಿ ಮಕ್ಕಳ ಮೊಗದಲ್ಲಿ ಹೊಸ ಚೈತನ್ಯ ಮೂಡಿಸಿದ್ದಾರೆ.

ಸಾಂತಾ ಟೋಪಿ ತೊಟ್ಟು, ಸಾಕಷ್ಟು ಗಿಫ್ಟ್​ಗಳ ಚೀಲದೊಂದಿಗೆ ಆಗಮಿಸಿದ ಅವರು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳೊಂದಿಗೆ ಬೆರೆತು ಅವರೂ ಕೂಡ ಮಗುವಾದರು. ಎಲ್ಲಾ ಮಕ್ಕಳಿಗೂ ಉಡುಗೊರೆಗಳನ್ನು ನೀಡಿ, ತಮ್ಮ ಅಪ್ಪುಗೆಯಿಂದ ಮಕ್ಕಳ ಖುಷಿಯನ್ನು ದುಪ್ಪಟ್ಟು ಮಾಡಿದರು.

ಇದನ್ನೂ ಓದಿ: ನಾಳೆಯಿಂದ ಐದು ದಿನ ಬ್ಯಾಂಕ್​ಗಳಿಗೆ ರಜೆ; ಎಟಿಎಂನಲ್ಲಿ ಇಂದೇ ಅಗತ್ಯ ಹಣ ಪಡೆದುಕೊಳ್ಳಿ

ಇದೇ ವೇಳೆ ಅವರು ಆಸ್ಪತ್ರೆಯ ಸಿಬ್ಬಂದಿಗೆ ಧನ್ಯವಾದಗಳನ್ನು ತಿಳಿಸಿದರು. 'ನಾನು ಎಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ. ಅದ್ಭುತ ಮಕ್ಕಳು ಮತ್ತು ಅವರ ಕುಟುಂಬದವರೊಂದಿಗೆ ಮಾತನಾಡಲು ನನಗೆ ಅವಕಾಶ ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಇಬ್ಬರು ಹೆಣ್ಣು ಮಕ್ಕಳ ತಂದೆಯಾಗಿ ನಾನು ಮಾತ್ರ ಈ ಸಂದರ್ಭದಲ್ಲಿ ನಿಮ್ಮ ಪರಿಸ್ಥಿತಿಯನ್ನು ಊಹಿಸಿಕೊಳ್ಳಲು ಸಾಧ್ಯ. ಮಕ್ಕಳ ಕಾಳಜಿ ವಹಿಸಿ ಅವರನ್ನು ಹಾರೈಕೆ ಮಾಡುತ್ತಿರುವ ನರ್ಸ್​, ಸಿಬ್ಬಂದಿ ಮತ್ತು ಡಾಕ್ಟರ್​​​ಗಳ ಕಾರ್ಯ ಮಹತ್ವವಾದದ್ದು ಎಂದು ಶ್ಲಾಘನೆ ವ್ಯಕ್ತಪಡಿಸಿದರು.

ಅಮೆರಿಕಾದ 44 ನೇ ಅಧ್ಯಕ್ಷರಾಗಿದ್ದ ಬರಾಕ್​ ಒಬಾಮಾ ವಾಷಿಂಗ್ಟನ್​ನಲ್ಲಿ ವಾಸವಾಗಿದ್ದಾರೆ. ಕಳೆದ ವರ್ಷಕೂಡ ಫಾದರ್​ ಸಾಂತಾ ವೇಷ ತೊಟ್ಟು ಶಾಲೆಯೊಂದಕ್ಕೆ ಭೇಟಿ ನೀಡಿ ಮಕ್ಕಳ ಜೊತೆ ಸಮಯ ಕಳೆದಿದ್ದರು.

ಇದನ್ನೂ ನೋಡಿ:
First published:December 20, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ