Nusrat Jahan: ಕೊರೋನಾ ವೈರಸ್​ಗಿಂತಲೂ ಅಪಾಯಕಾರಿ ಬಿಜೆಪಿ; ಟಿಎಂಸಿ ಸಂಸದೆ ನುಸ್ರತ್ ಜಹಾನ್

ನಿಮ್ಮ ಸುತ್ತಲೂ ಇರುವ ಕೆಲವು ಜನರು ಕೊರೋನಾಗಿಂತ ಹೆಚ್ಚು ಅಪಾಯಕಾರಿ.  ಅವರಿಗೆ ನಮ್ಮ ಸಂಸ್ಕೃತಿ ಅರ್ಥವಾಗುವುದಿಲ್ಲ. ಯಾಕೆಂದರೆ ಅವರಿಗೆ ಮಾನವೀಯತೆ ತಿಳಿದಿಲ್ಲ.

ಟಿಎಂಸಿ ಸಂಸದೆ ನುಸ್ರತ್ ಜಹಾನ್

ಟಿಎಂಸಿ ಸಂಸದೆ ನುಸ್ರತ್ ಜಹಾನ್

  • Share this:
    ​ ಕೊಲ್ಕತ್ತಾ (ಜ. 15): ಕೊರೋನಾ ವೈರಸ್​ ಸೋಂಕಿಗಿಂತಲೂ ಅಪಾಯಕಾರಿ  ಬಿಜೆಪಿ  ಎಂದು ಬೆಂಗಾಲಿ ನಟಿ, ತೃಣಮೂಲ ಕಾಂಗ್ರೆಸ್​ ಸಂಸದೆಯಾಗಿರುವ ನುಸ್ರತ್​ ಜಹಾನ್ ಟೀಕಿಸಿದ್ದಾರೆ.  ಬಹುಸಂಖ್ಯಾತ  ಮುಸ್ಲಿಂರಿರುವ ದೇಗಂಗಾ ಮಾತನಾಡಿದ ಸಂಸದೆ ನುಸ್ರತ್​ ಜಹಾನ್​ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.  ಕೊರೋನಾಗಿಂತಲೂ ಹೆಚ್ಚು ಅಪಾಯಕಾರಿ ಯಾವುದು ಗೊತ್ತೆ? ಎಂದು ಪ್ರಶ್ನಿಸಿದ್ದರು. ಅಲ್ಲದೇ, ನಿಮ್ಮ ಸುತ್ತಲೂ ಇರುವ ಕೆಲವು ಜನರು ಕೊರೋನಾಗಿಂತ ಹೆಚ್ಚು ಅಪಾಯಕಾರಿ.  ಅವರಿಗೆ ನಮ್ಮ ಸಂಸ್ಕೃತಿ ಅರ್ಥವಾಗುವುದಿಲ್ಲ. ಯಾಕೆಂದರೆ ಅವರಿಗೆ ಮಾನವೀಯತೆ ತಿಳಿದಿಲ್ಲ. ನಮ್ಮ ಕಠಿಣ ಪ್ರರಿಶ್ರಮದ ಮೌಲ್ಯ ತಿಳಿದಿಲ್ಲ. ಅವರ ಬಳಿ ಸಾಕಷ್ಟು ಹಣವಿದೆ. ಅದನ್ನು ಎಲ್ಲೆಡೆ ಹಂಚುತ್ತಿದ್ದಾರೆ. ಧರ್ಮದ ಆಧಾರದ ಮೇಲೆ ಜನರ ಮಧ್ಯೆ ಭಿನ್ನಾಭಿಪ್ರಾಯ ಮೂಡಿಸುತ್ತಿದ್ದಾರೆ ಎಂದು ಕುಟುಕಿದ್ದಾರೆ

    ಇದಕ್ಕೆ ಟೀಕಿಸಿರುವ ಬಿಜೆಪಿ ಅಮಿತ್​ ಮಾಳ್ವಿಯಾ, ಪಶ್ಚಿಮ ಬಂಗಾಳದಲ್ಲಿ ಲಸಿಕೆಯ ರಾಜಕಾರಣ ನಡೆದಿದೆ. ಮೊದಲಿಗೆ ಮಮತಾ ಬ್ಯಾನರ್ಜಿ ಸಂಪುಟ ಸಚಿವ ಸಿದ್ದಿಕುಲ್ಲಾ ಚೌಧರಿ, ಲಸಿಕೆಗಳನ್ನು ಹೊತ್ತ ಟ್ರಕ್​ಗಳನ್ನು ತಡೆದರು.



    ಈಗ ಟಿಎಂಸಿ ಸಂಸದೆ ನುಸ್ರತ್​ ಜಹಾನ್​ ಮುಸ್ಲಿಂ ಬಹುಸಂಖ್ಯಾತ ದೇಗಂಗಾದಲ್ಲಿ ಬಿಜೆಪಿಯನ್ನು ಕೊರೋನಾಗೆ ಹೋಲಿಸಿ ಟೀಕೆ ಮಾಡುತ್ತಿದ್ದಾರೆ. ಇವೆಲ್ಲವನ್ನು ಕೇಳಿಸಿಕೊಂಡು ಕೂಡ ಮಮತಾ ಬ್ಯಾನರ್ಜಿಮೌನವಾಗಿದ್ದಾರೆ ಯಾಕೆ ಎಂದು ಟ್ವೀಟ್​ ಮೂಲಕ ಪ್ರಶ್ನಿಸಿದ್ದಾರೆ.

    ವಿಧಾನಸಭಾ ಚುನಾವಣೆ ಹಿನ್ನಲೆ ರಾಜ್ಯದಲ್ಲಿ ಬಿಜೆಪಿ ಮತ್ತು ಟಿಎಂಸಿ ನಾಯಕರ ನಡುವಿನ ಪರಸ್ಪರ ವಾಕ್ಸಮರಗಳು ತಾರಕಕ್ಕೇರಿದೆ. ಈಗಾಗಲೇ ಬಿಜೆಪಿ ಈ ಬಾರಿ ಪಶ್ಚಿಮ ಬಂಗಾಳದಲ್ಲಿ ಸರ್ಕಾರ ರಚಿಸುವುದು ಸಿದ್ಧ ಎಂದು ವಿಶ್ವಾಸ ವ್ಯಕ್ತಪಡಿಸಿದೆ. ಈ ಕುರಿತು ಮಾತನಾಡಿ ಅಮಿತ್​ ಶಾ, ದೀದಿ ಆಡಳಿತದಿಂದ ಜನ ಬೇಸತ್ತಿತ್ತು, ಬಿಜೆಪಿ ಹೊಸ ಪರ್ವ ಶುರುವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.
    Published by:Seema R
    First published: