ಹಾನಿಗಾಗಿ 3 ಸಾವಿರ ಕೋಟಿ ಪ್ರಕರಣ ಸೇರಿ ರತನ್ ಟಾಟಾ ವಿರುದ್ಧದ ಎಲ್ಲ ಮಾನನಷ್ಟ ಮೊಕದ್ದಮೆಗಳನ್ನು ಹಿಂಪಡೆದ ನುಸ್ಲಿ ವಾಡಿಯಾ

2016ರಲ್ಲಿ ನುಸ್ಲಿ ವಾಡಿಯಾ ಅವರು ರತನ್ ಟಾಟಾ ಮತ್ತು ಟಾಟಾ ಸನ್ಸ್​ನ ಆಡಳಿತ ಮಂಡಳಿ ನಿರ್ದೇಶಕರ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

HR Ramesh | news18-kannada
Updated:January 13, 2020, 4:18 PM IST
ಹಾನಿಗಾಗಿ 3 ಸಾವಿರ ಕೋಟಿ ಪ್ರಕರಣ ಸೇರಿ ರತನ್ ಟಾಟಾ ವಿರುದ್ಧದ ಎಲ್ಲ ಮಾನನಷ್ಟ ಮೊಕದ್ದಮೆಗಳನ್ನು ಹಿಂಪಡೆದ ನುಸ್ಲಿ ವಾಡಿಯಾ
ರತನ್ ಟಾಟಾ.
  • Share this:
ನವದೆಹಲಿ: ಟಾಟಾ ಗ್ರೂಪ್ ಅಧ್ಯಕ್ಷ ರತನ್ ಟಾಟಾ ಮತ್ತು ಇತರರ ವಿರುದ್ಧ ಹಾನಿಗಾಗಿ ಮೂರು ಸಾವಿರ ಕೋಟಿಯ ಪ್ರಕರಣ ಸೇರಿದಂತೆ ಇತರೆ ಎಲ್ಲ ಮಾನಹಾನಿ ಪ್ರಕರಣಗಳನ್ನು ಬಾಂಬೆ ಡೈಯಿಂಗ್ ಸಂಸ್ಥೆಯ ಅಧ್ಯಕ್ಷ ನುಸ್ಲಿ ವಾಡಿಯಾ ಹಿಂಪಡೆದಿದ್ದಾರೆ.

ರತನ್ ಟಾಟಾ ಮತ್ತು ಇತರರಿಗೆ ನುಸ್ಲಿ ವಾಡಿಯಾ ಅವರ ಮಾನಹಾನಿ ಮಾಡುವ ಉದ್ದೇಶವಿರಲಿಲ್ಲ ಎಂದು ನ್ಯಾಯಾಲಯ ದಾಖಲಿಸಿತು. ಆ ಬಳಿಕ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಎಸ್​.ಎ.ಬೋಬ್ಡೆ ನೇತೃತ್ವದ ನ್ಯಾಯಪೀಠ ವಾಡಿಯಾ ಅವರಿಗೆ ಪ್ರಕರಣಗಳನ್ನು ಹಿಂಪಡೆಯಲು ಅವಕಾಶ ನೀಡಿತು.

ರತನ್ ಟಾಟಾ ಅವರ ಹೇಳಿಕೆಯಲ್ಲಿ ವಾಡಿಯಾ ಅವರ ಮಾನಹಾನಿ ಮಾಡುವ ಯಾವ ಉದ್ದೇಶವೂ ಇಲ್ಲ. ಅರ್ಜಿದಾರರ ಹಾಲಿ ಎಲ್ಲ ಪ್ರಕರಣಗಳು ಅದೇ ರೀತಿ ಹಾನಿಗಾಗಿ 3 ಸಾವಿರ ಕೋಟಿ ರೂಪಾಯಿ tataಪ್ರಕರಣವನ್ನು ಹಿಂಪಡೆಯಲು ಅವಕಾಶ ಮಾಡಿಕೊಡಲಾಗಿದೆ ಎಂದು ನ್ಯಾಯಪೀಠ ಹೇಳಿತು.

ವಾಡಿಯಾ ಪರ ಸುಪ್ರೀಂಕೋರ್ಟ್​ನಲ್ಲಿ ಹಿರಿಯ ವಕೀಲ ಸಿಎ ಸುಂದರಂ ಅವರು ವಾದ ಮಂಡಿಸಿದ್ದರು. ಮತ್ತು ಅರ್ಜಿದಾರರು ಕೋರ್ಟ್ ಸೂಚನೆಯಂತೆ ನಡೆದುಕೊಂಡಿದ್ದಕ್ಕೆ ಪ್ರಶಂಸೆ ವ್ಯಕ್ತಪಡಿಸಿತು. ಮಾನಹಾನಿ ಪ್ರಕರಣವನ್ನು ಇಬ್ಬರು ಒಟ್ಟಿಗೆ ಕುಳಿತು ಬಗೆಹರಿಸಿಕೊಳ್ಳುವಂತೆ ಸುಪ್ರೀಂಕೋರ್ಟ್ ಜನವರಿ 6ರಂದು ರತನ್ ಟಾಟಾ ಮತ್ತು ನುಸ್ಲಿ ವಾಡಿಯಾ ಅವರಿಗೆ ಹೇಳಿತ್ತು.

ಇದನ್ನು ಓದಿ: ಎನ್​ಸಿಎಲ್​ಎಟಿ ತೀರ್ಪು ತಡೆಹಿಡಿದ ಸುಪ್ರೀಂಕೋರ್ಟ್​​: ಟಾಟಾ ಸನ್ಸ್​ ಹೋರಾಟಕ್ಕೆ ಆರಂಭಿಕ ಜಯ

2016ರಲ್ಲಿ ನುಸ್ಲಿ ವಾಡಿಯಾ ಅವರು ರತನ್ ಟಾಟಾ ಮತ್ತು ಟಾಟಾ ಸನ್ಸ್​ನ ಆಡಳಿತ ಮಂಡಳಿ ನಿರ್ದೇಶಕರ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.
First published:January 13, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ