• Home
  • »
  • News
  • »
  • national-international
  • »
  • ಕೋವಿಡ್ ಸೋಂಕಿತ ರೋಗಿಯೊಂದಿಗೆ ಆಸ್ಪತ್ರೆ ಶೌಚಾಲಯದಲ್ಲಿ ಸೆಕ್ಸ್ ಮಾಡಿ ಸಿಕ್ಕಿ ಬಿದ್ದ ನರ್ಸ್!

ಕೋವಿಡ್ ಸೋಂಕಿತ ರೋಗಿಯೊಂದಿಗೆ ಆಸ್ಪತ್ರೆ ಶೌಚಾಲಯದಲ್ಲಿ ಸೆಕ್ಸ್ ಮಾಡಿ ಸಿಕ್ಕಿ ಬಿದ್ದ ನರ್ಸ್!

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಬಹಿರಂಗವಾದ ನಂತರ ಘಟನೆ ಬೆಳಕಿಗೆ ಬಂದಿದೆ. ಬಳಿಕ ಇಬ್ಬರನ್ನೂ ವಿಚಾರಣೆಗ ಒಳಪಡಿಸಿದಾಗ, ಪಿಪಿಇ ಕಿಟ್ ಕಳಚಿ, ಕೊರೋನಾ ಸೋಂಕಿತನೊಂದಿಗೆ ಸೆಕ್ಸ್ ಮಾಡಿದ್ದು ಸತ್ಯ ಎಂದು ನರ್ಸ್ ತಪ್ಪೊಪ್ಪಿಕೊಂಡಿದ್ದಾಳೆ.  

  • Share this:

    ಇಡೀ ಜಗತ್ತು ಕೊರೋನಾ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುತ್ತಿದೆ. ಒಂದು ಸೋಂಕು ಇಡೀ ಮಾನವ ಕುಲವನ್ನೇ ಅಲುಗಾಡಿಸಿದೆ. ಸೋಂಕನ್ನು ಹೆಡೆಮುರಿ ಕಟ್ಟಲು ವಿಶ್ವದ ಎಲ್ಲಾ ರಾಷ್ಟ್ರಗಳು ಹಗಲು ರಾತ್ರಿ ಶ್ರಮಿಸುತ್ತಿವೆ. ಇಂತಹ ಸಂದರ್ಭದಲ್ಲಿ ಹಲವು ಬೇಜವಾಬ್ದಾರಿಯುತ ಕೃತ್ಯಗಳು ಸಹ ನಡೆಯುತ್ತಿವೆ. ಕೆಲವು ಆಸ್ಪತ್ರೆಗಳಲ್ಲಿ ಸೋಂಕಿನ ಹೆಸರೇಳಿಕೊಂಡು ಹಣ ಲೂಟಿ ಮಾಡುತ್ತಿದ್ದರೆ, ಇನ್ನು ಕೆಲವು ಕಡೆ ಅಶ್ಲೀಲ ಘಟನೆಗಳು ನಡೆಯುತ್ತಿವೆ. 


    ನರ್ಸ್ ಒಬ್ಬರು ಆಸ್ಪತ್ರೆಯ ಶೌಚಾಲಯದಲ್ಲಿ ತನ್ನ ಪಿಪಿಇ ಕಿಟ್ ಕಳಚಿ, ಅದೇ ಆಸ್ಪತ್ರೆಗೆ ದಾಖಲಾಗಿದ್ದ ಕೋವಿಡ್ ಸೋಂಕಿತ ರೋಗಿಯೊಂದಿಗೆ ಸೆಕ್ಸ್ ಮಾಡಿರುವುದು ರುಜುವಾತಾಗಿದ್ದು, ತಪ್ಪಿತಸ್ಥ ನರ್ಸ್ ಅನ್ನು ಕೆಲಸದಿಂದ ವಜಾಗೊಳಿಸಲಾಗಿದೆ.


    ಇಂಡೋನೇಷ್ಯಾದ ಆಸ್ಪತ್ರೆಯಲ್ಲಿ ಇಂತಹ ಘಟನೆ ನಡೆದಿದೆ. ಕೃತ್ಯದಲ್ಲಿ ಭಾಗಿಯಾದ ನರ್ಸ್ ಮತ್ತು ರೋಗಿ ಇಬ್ಬರನ್ನು ಅಲ್ಲಿನ ಅಶ್ಲೀಲ ವಿರೋಧಿ ಕಾನೂನಿನ ಅಡಿ ವಿಚಾರಣೆಗೆ ಒಳಪಡಿಸಲಾಗಿದೆ.


    ಇದನ್ನು ಓದಿ: 11ನೇ ವರ್ಷದ ವಿಷ್ಣುವರ್ಧನ್ ಸ್ಮರಣೆ; ನಾಯಿ ಬೊಗಳಿದರೆ ದೇವಲೋಕ ಹಾಳಾಗಲ್ಲ, ಸಿಂಹ ಯಾವತ್ತಿದ್ದರೂ ಸಿಂಹವೇ: ಪುತ್ರಿ ಕೀರ್ತಿ




    ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಬಹಿರಂಗವಾದ ನಂತರ ಘಟನೆ ಬೆಳಕಿಗೆ ಬಂದಿದೆ. ಬಳಿಕ ಇಬ್ಬರನ್ನೂ ವಿಚಾರಣೆಗ ಒಳಪಡಿಸಿದಾಗ, ಪಿಪಿಇ ಕಿಟ್ ಕಳಚಿ, ಕೊರೋನಾ ಸೋಂಕಿತನೊಂದಿಗೆ ಸೆಕ್ಸ್ ಮಾಡಿದ್ದು ಸತ್ಯ ಎಂದು ನರ್ಸ್ ತಪ್ಪೊಪ್ಪಿಕೊಂಡಿದ್ದಾಳೆ.

    Published by:HR Ramesh
    First published: