4.5 ಕೆಜಿ ತೂಕದ ಮಗು ಹೆರಿಗೆ ಮಾಡಿಸಲಾಗದೆ, ಯಾಕಿಷ್ಟು ತಿನ್ನಿಸಿದ್ರಿ ಎಂದು ಗರ್ಭಿಣಿ ಅಜ್ಜಿಗೆ ಹೊಡೆದ ನರ್ಸ್​​

ತಾಯಿಯ ಗರ್ಭದಲ್ಲಿದ್ದ ಮಗು ಅತಿ ತೂಕವುಳ್ಳದ್ದಾಗಿದ್ದು, ಹೆರಿಗೆ ಮಾಡಿಸಲು ಕಷ್ಟವಾಗಿದೆ. ಇದರಿಂದ ಸಿಟ್ಟಾದ ನರ್ಸ್ ಗರ್ಭಿಣಿಗೆ ಇಷ್ಟೊಂದು ಯಾಕೆ ತಿನ್ನಿಸಿದ್ದೀರಿ ಎಂದು ಆಕೆಯ ಅಜ್ಜಿ ಕೆನ್ನೆಗೆ ಬಾರಿಸಿದ್ದಾಳೆ.

Seema.R
Updated:July 13, 2019, 4:26 PM IST
4.5 ಕೆಜಿ ತೂಕದ ಮಗು ಹೆರಿಗೆ ಮಾಡಿಸಲಾಗದೆ, ಯಾಕಿಷ್ಟು ತಿನ್ನಿಸಿದ್ರಿ ಎಂದು ಗರ್ಭಿಣಿ ಅಜ್ಜಿಗೆ ಹೊಡೆದ ನರ್ಸ್​​
ಸಾಂದರ್ಭಿಕ ಚಿತ್ರ
 • Share this:

 ಹುಟ್ಟುವ ಮಕ್ಕಳು ಆರೋಗ್ಯಯುತವಾಗಿ ದಷ್ಟಪುಷ್ಟವಾಗಿ ಬೆಳೆಯಲಿ ಎಂಬುದು ತಾಯಂದಿರ ಆಸೆ. ಅದಕ್ಕಾಗಿಯೇ ಗರ್ಭಿಣಿಯರಿಗೆ ವಿಶೇಷ ಆರೈಕೆ ಮಾಡಲಾಗುತ್ತದೆ. ಇದೇ ರೀತಿ ಉತ್ತಮ ಪೋಷಕಾಂಶ ಸೇವಿಸಿದ ಗರ್ಭಿಣಿಯೊಬ್ಬಳು 4.5 ಕೆಜಿ ತೂಕದ ಮಗು ಹೆತ್ತು, ನರ್ಸ್​ ಕೈಯಿಂದ ಪೆಟ್ಟು ತಿಂದಿದ್ದಾಳೆ.


ಆಶ್ಚರ್ಯ ಆದರೂ ಸತ್ಯ. ಮಧ್ಯಪ್ರದೇಶದ ಇಂದೋರ್​ನ ಗರ್ಭಿಣಿಗೆ ಪ್ರಸವ ನೋವು ಕಾಣಿಸಿಕೊಂಡಿದೆ. ಈ ವೇಳೆ ಹೆರಿಗೆಗೆಂದು ಆಕೆಯನ್ನು ಆಸ್ಪತ್ರೆಗೆ ಕರೆತಂದಾಗ ಗರ್ಭಿಣಿಯ ಪರೀಕ್ಷೆ ನಡೆಸಿದ ನರ್ಸ್​ವೊಬ್ಬರು ಆಕೆಯ ಅಜ್ಜಿ ಕೆನ್ನೆಗೆ ಬಾರಿಸಿದ್ದಾರೆ. ಇದಕ್ಕೆ ಕಾರಣ ಮಗುವಿನ ತೂಕ. ತಾಯಿಯ ಗರ್ಭದಲ್ಲಿದ್ದ ಮಗು ಅತಿ ತೂಕವುಳ್ಳದ್ದಾಗಿದ್ದು, ಹೆರಿಗೆ ಮಾಡಿಸಲು ಕಷ್ಟವಾಗಿದೆ. ಇದರಿಂದ ಸಿಟ್ಟಾದ ನರ್ಸ್​ ಈ ರೀತಿಯ ಕ್ರಮಕ್ಕೆ ಮುಂದಾಗಿದ್ದಾಳೆ. 
ಸಾಂದರ್ಭಿಕ ಚಿತ್ರ


ಇನ್ನು ಅಜ್ಜಿ ಮೇಲೆ ಹಲ್ಲೆ ಮಾಡಲಾದ ನರ್ಸ್​ ವಿರುದ್ಧ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ಈ ಕುರಿತು ತನಿಖೆಗೆ ಪೊಲೀಸರು ಮುಂದಾಗಿದ್ದಾರೆ.


ಬದುಕುಳಿಯದ ಕಂದಮ್ಮ


ಇಂದೋರ್​ ನಿವಾಸಿ ನೇಹಾ ಸರ್ದಾಗೆ ಗುರುವಾರ ರಾತ್ರಿ ಹೆರಿಗೆ ನೋವು ಕಾಣಿಸಿಕೊಂಡಿದೆ, ಈ ವೇಳೆ ಕುಟುಂಬಸ್ಥರು ಆಕೆಯನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ವೇಳೆ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೇ ನರ್ಸ್​ಗಳೇ ಹೆರಿಗೆ ಮಾಡಿಸಲು ಮುಂದಾಗಿದ್ದಾರೆ. ಗರ್ಭಿಣಿ ನೋವಿನಿಂದ ನರಳಾಡುತ್ತಿದ್ದರಿಂದ 16 ಇಂಜೆಕ್ಷನ್​ ನೀಡಿದ್ದಾರೆ. ಆದರೆ ಮಗುವಿನ ತೂಕ ಹೆಚ್ಚಿದ್ದರಿಂದ ಆಕೆಗೆ ಹೆರಿಗೆ ವಿಳಂಬವಾಗಿದೆ.


ಇದನ್ನು ಓದಿ: ಸಂಸತ್ ಭವನದ ಮುಂದೆ ಕನಸಿನ ಕನ್ಯೆ ಹೇಮಾಮಾಲಿನಿ ಕಸ ಗುಡಿಸುವ ಸ್ಟೈಲ್​ ಕಂಡು ಬೆಕ್ಕಸ ಬೆರಗಾದ ಸಂಸದರು!

ಹೆರಿಗೆ ಮಾಡಿಸಿದ ಬಳಿಕ ಬಂದ ನರ್ಸ್​ ಗರ್ಭಿಣಿಯ ಪತಿಗೆ ಮಗುವಿನ ತೂಕ ಹೆಚ್ಚಳದ ಕುರಿತು ಕ್ಲಾಸ್​ ತೆಗೆದುಕೊಂಡಿದ್ದಾರೆ. ಅಲ್ಲದೇ ಮಗು ಹೃದಯ ಬಡಿಯುತ್ತಿದೆ. ಆದರೆ, ಕೈ, ಕಾಲು ಆಡಿಸುತ್ತಿಲ್ಲ. ಅಳುತ್ತಿಲ್ಲ ಎಂದಿದ್ದಾರೆ.


ಆಗ ತಕ್ಷಣಕ್ಕೆ ಕುಟುಂಬಸ್ಥರು ತಾಯಿ,ಮಗುವನ್ನು ಮತ್ತೊಂದು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.  ಹೆರಿಗೆ ಸಮಯದಲ್ಲಿ ಆದ ನಿರ್ಲಕ್ಷ್ಯದಿಂದ ಮಗುವು  ಬದುಕುಳಿಯಲಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.


First published:July 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
 • India
 • World

India

 • Active Cases

  6,039

   
 • Total Confirmed

  6,761

   
 • Cured/Discharged

  515

   
 • Total DEATHS

  206

   
Data Source: Ministry of Health and Family Welfare, India
Hospitals & Testing centres

World

 • Active Cases

  1,205,178

   
 • Total Confirmed

  1,680,527

  +76,875
 • Cured/Discharged

  373,587

   
 • Total DEATHS

  101,762

  +6,070
Data Source: Johns Hopkins University, U.S. (www.jhu.edu)
Hospitals & Testing centres