Fraud Case: ಪ್ರಜ್ಞಾಹೀನವಾಗಿದ್ದ ರೋಗಿಯ ಏಟಿಯಂನಿಂದ ಲಕ್ಷಾಂತರ ರೂಪಾಯಿ ಹಣ ಎಗರಿಸಿದ ನರ್ಸ್​! ಈಗ ಕಂಬಿ ಎಣಿಸುತ್ತಿದ್ದಾಳೆ

ಅನಾರೋಗ್ಯ ಕಾಡಿದಾಗ ರೋಗಿಯನ್ನು ಆಸ್ಪತ್ರೆಗೆ ಸೇರಿಸುತ್ತೇವೆ. ಈ ವೇಳೆ ವೈದ್ಯರ ಸಲಹೆಯ ಮೇರೆಗೆ ನರ್ಸ್​ಗಳ ಸಹಾಯ ಪಡೆದುಕೊಂಡು ರೋಗಿಯ ಉಪಚಾರ ಮಾಡಲಾಗುತ್ತದೆ. ಆದರೆ ಇಲ್ಲೊಬ್ಬಳು ಡ್ಯೂಟಿಯಲ್ಲಿದ್ದ ನರ್ಸ್ ರೋಗಿಯು ಪ್ರಜ್ಞಾಹೀನತೆಯ ಲಾಭವನ್ನು ಪಡೆದುಕೊಂಡು ರೋಗಿಯ ಖಾತೆಯಿಂದ ಲಕ್ಷಗಟ್ಟಲೆ ಹಣವನ್ನು ತೆಗೆದಿದ್ದಾಳೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
    ಅನಾರೋಗ್ಯ ಕಾಡಿದಾಗ ವೈದ್ಯರನ್ನು (Doctor) ಸಂಪರ್ಕಿಸುತ್ತೇವೆ. ನಂತರ ವೈದ್ಯರ ಮಾಹಿತಿಯಂತೆಯೇ ಆಸ್ಪತ್ರೆಯಲ್ಲಿ ಉಳಿದುಕೊಂಡು ಚಿಕಿತ್ಸೆ (Treatment) ಪಡೆಯಬೇಕಾದ ಸನ್ನಿವೇಶ ಕೆಲವೊಮ್ಮೆ ಎದುರಾಗುತ್ತದೆ. ಈ ವೇಳೆ ರೋಗಿಗೆ ನರ್ಸ್ (Nurse)​ ಸರಿಯಾಗಿ ಔಷಧಿ ನೀಡುವ ಮೂಲಕ ಉಪಚರಿಸುತ್ತಾಳೆ. ಆದರೆ ಇಲ್ಲೊಂದು ಘಟನೆಯು ದಾದಿಯರ ವರ್ಗಕ್ಕೆ ಮುಜುಗರ ತಂದಂತಿದೆ. ಅದೇನೆಂದರೆ ನರ್ಸ್​ವೊಬ್ಬಳು ರೋಗಿಯ ಏಟಿಯಂನಿಂದ ಹಣ (Money) ಕದ್ದಿದ್ದಾಳೆ. ರೋಗಿಗೆ ಅನಾರೋಗ್ಯ ಕಾಡಿರುವುದನ್ನೇ ಉಪಾಯವಾಗಿಟ್ಟುಕೊಂಡು ದೊಡ್ಡ ಮೊತ್ತದ ಹಣವನ್ನು ಏಟಿಯಂನಿಂದ (ATM) ಎಗರಿಸಿದ್ದಾಳೆ. ಆದರೆ ಕೊನೆಗೆ ಸಿಕ್ಕಿಬಿದ್ದು, ಜೈಲು (Jail) ಸೇರಿದ್ದಾಳೆ. ಅಂದಹಾಗೆಯೇ ಈ ಘಟನೆ ನಡೆದಿರುವುದು ಎಲ್ಲಿ ನೋಡೋಣ

    ಅನಾರೋಗ್ಯ ಕಾಡಿದಾಗ ರೋಗಿಯನ್ನು ಆಸ್ಪತ್ರೆಗೆ ಸೇರಿಸುತ್ತೇವೆ. ಈ ವೇಳೆ ವೈದ್ಯರ ಸಲಹೆಯ ಮೇರೆಗೆ ನರ್ಸ್​ಗಳ ಸಹಾಯ ಪಡೆದುಕೊಂಡು ರೋಗಿಯ ಉಪಚಾರ ಮಾಡಲಾಗುತ್ತದೆ. ಆದರೆ ಇಲ್ಲೊಬ್ಬಳು ಡ್ಯೂಟಿಯಲ್ಲಿದ್ದ ನರ್ಸ್ ರೋಗಿಯು ಪ್ರಜ್ಞಾಹೀನತೆಯ ಲಾಭವನ್ನು ಪಡೆದುಕೊಂಡು ರೋಗಿಯ ಖಾತೆಯಿಂದ ಲಕ್ಷಗಟ್ಟಲೆ ಹಣವನ್ನು ತೆಗೆದಿದ್ದಾಳೆ.

    ಬ್ರಿಟನ್‌ನಲ್ಲಿ ರೋಗಿಯೊಬ್ಬರನ್ನು ನೋಡಿಕೊಳ್ಳುತ್ತಿದ್ದ 57 ವರ್ಷದ ನರ್ಸ್, ರೋಗಿಯ ಎಟಿಎಂ ಕಾರ್ಡ್ ಅನ್ನು ಕದ್ದು ಲಕ್ಷಾಂತರ ರೂಪಾಯಿ ತೆಗೆದಿದ್ದಾಳೆ. ಈ ವಿಚಾರವಾಗಿ ಅನುಮಾನಗೊಂಡ ರೋಗಿಯ ಸಂಬಂಧಿಕರು ಕೂಡಲೇ ಪೊಲೀಸರಿಗೆ ದೂರು ನೀಡಿದ್ದಾರೆ. ನಂತರ ನಿಜಾಂಶ ಏನೆಂದು ಬೆಳಕಿಗೆ ಬಂದಿದೆ. ನರ್ಸ್​ ರೋಗಿಯ ಪರ್ಸ್​ನಿಂದ ಹಣ ಎಗರಿಸಿದ್ದಾಳೆ ಎಂದು ಗೊತ್ತಾಗಿದೆ. ಆರೋಪಿ ನರ್ಸ್ ಅನ್ನು ಜೈಲಿಗೆ ಹಾಕಲಾಗಿದೆ. ಇರುವ ಕೆಲಸವನ್ನು ಕಳೆದುಕೊಂಡು ಇದೀಗ ನರ್ಸ್​ ಕಂಬಿ ಎಣಿಸುತ್ತಿದ್ದಾಳೆ.

    ರೋಗಿಯ ಪ್ರಜ್ಞಾಹೀನತೆಯ ಲಾಭವನ್ನು ಪಡೆದ ನರ್ಸ್

    84 ವರ್ಷದ ಮಹಿಳೆಯೊಬ್ಬರು ಬುದ್ಧಿಮಾಂದ್ಯತೆಯಿಂದ ಬಳಲುತ್ತಿದ್ದರು. ಕುಟುಂಬದವರು ಆಕೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆಕೆ ಆಗಾಗ ಪ್ರಜ್ಞಾಹೀನಳಾಗುತ್ತಿದ್ದುದನ್ನು ಸದುಪಯೋಗಪಡಿಸಿಕೊಂಡ 57ರ ಹರೆಯದ ನರ್ಸ್ ಡೊರೊಥಿ ಹೊವೆಲ್ ವೃದ್ಧೆಯ ಎಟಿಎಂ ಕಾರ್ಡ್ ಕದ್ದು ನಿಧಾನವಾಗಿ ಆಕೆಯ ಖಾತೆಯಿಂದ 2,83,000 ರೂ ಎಗರಿಸಿದ್ದಾಳೆ.

    ಇದನ್ನೂ ಓದಿ: Intelligent: ಇದೇ ಕಾರಣಕ್ಕೆ ಬುದ್ಧಿವಂತರು ಸಂತೋಷವಾಗಿ ಇರುವುದೇ ಇಲ್ಲ!

    ಆರೋಪಿ ನರ್ಸ್ ಮಹಿಳೆಯ ಎಟಿಯಂ ಕಾರ್ಡ್​ನಿಂದ ಮೊದಲಿಗೆ ಹಣ ತೆಗೆದಳು. ಬಳಿಕ ಇದನ್ನೇ ದಾರಿಯಗಿಟ್ಟುಕೊಂಡು ಹಣ ತೆಗೆಯುತ್ತಾ ಬಂದಿದ್ದಾಳೆ, ಕದ್ದ ಹಣದಿಂದ ಲಕ್ಷಾಂತರ ಮೌಲ್ಯದ ವಸ್ತುಗಳನ್ನು ಖರೀದಿ ಮಾಡಿದ್ದಾಳೆ. ಈ ವಿಷಯ ತಿಳಿದ ಮನೆಯವರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ತನಿಖೆಯಲ್ಲಿ ತೊಡಗಿದ್ದ ಪೊಲೀಸರು ಬ್ಯಾಂಕ್ ಪರಿಶೀಲಿಸಿದಾಗ ಹಣ ಡ್ರಾ ಆಗಿರುವುದು ತಿಳಿದುಬಂದಿದೆ. ಬಳಿಕ ನರ್ಸ್ ಡೊರೊಥಿ ಹೊವೆಲ್ ಮಹಿಳೆಯ ಹಣವನನ್ನು ಎಗರಿಸಿದ್ದಾಳೆ ಎಂದು ಗೊತ್ತಾಗಿದೆ. ವಿಚಾರಣೆ ವೇಳೆ ಎಲ್ಲ ಹಣ ಮಹಿಳೆಯ ಖಾತೆಯಿಂದ ಡ್ರಾ ಮಾಡಿರುವುದಾಗಿ ನರ್ಸ್ ಡೊರೊಥಿ ಹೊವೆಲ್ ಹೇಳಿದ್ದಾಳೆ,

    ಇದನ್ನೂ ಓದಿ: Plastic Skin: ಬರೀ ಅರ್ಧ ಗಂಟೆ ಬಿಸಿಲಿನಲ್ಲಿ ಮಲಗಿದ ಮಹಿಳೆ! ಈಕೆಯ ಮುಖ ಹೇಗಾಗಿದೆ ನೋಡಿ

    ಎಟಿಎಂನಿಂದ 12 ಬಾರಿ ಹಣ ಡ್ರಾ ಮಾಡಿದ ನರ್ಸ್​

    ಆರೋಪಿ ನರ್ಸ್ ಧೈರ್ಯ ಮಾಡಿ ಒಟ್ಟು 12 ಬಾರಿ ಮಹಿಳೆಯ ಎಟಿಎಂನಿಂದ ಹಣ ಡ್ರಾ ಮಾಡಿ ಶಾಪಿಂಗ್ ಮಾಡಿದ್ದಾಳೆ. ಪೊಲೀಸರ ತನಿಖೆಯಲ್ಲೂ ಈ ವಿಷಯ ಸ್ಪಷ್ಟವಾಗಿದೆ. ತನಿಖೆಯಲ್ಲಿ ಮಹಿಳೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಅವಳ ದುರಾಸೆಯಿಂದಾಗಿ, ಜೈಲಿಗೆ ಹೋಗಬೇಕಾದ ಪರಿಸ್ಥಿತಿ ಒದಗಿದೆ. ಇನ್ನೊಂದು ಕಡೆ ಕೆಲಸವನ್ನು ಕಳೆದುಕೊಳ್ಳುವ ಮೂಲಕ ಜೈಲು ಸೇರಿದ್ದಾಳೆ.
    Published by:Harshith AS
    First published: