ರಾಹುಲ್​ ನನ್ನ ಮಗ; ಕಾಂಗ್ರೆಸ್​ ನಾಯಕನ ಕೈ ಹಿಡಿದು ಭಾವುಕರಾದ ನರ್ಸ್​ ರಾಜಮ್ಮ

ರಾಹುಲ್​ ಗಾಂಧಿ ಹುಟ್ಟಿದ ಸಂದರ್ಭದಲ್ಲಿ ಮೊದಲು ಎತ್ತಿಕೊಂಡವರು ನರ್ಸ್​ ರಾಜಮ್ಮ. ಅವರು ಆಗ ದೆಹಲಿಯ ಹೋಲಿ ಫ್ಯಾಮಿಲಿ ಆಸ್ಪತ್ರೆಯಲ್ಲಿ ಟ್ರೈನಿ ನರ್ಸ್​ ಆಗಿ ಕಾರ್ಯನಿರ್ವಹಿಸುತ್ತಿದ್ದರು.

ರಾಜಮ್ಮ ಅಮ್ಮ ಜೊತೆ ರಾಹುಲ್​ ಗಾಂಧಿ

ರಾಜಮ್ಮ ಅಮ್ಮ ಜೊತೆ ರಾಹುಲ್​ ಗಾಂಧಿ

 • Share this:
  ವಯನಾಡು (ಆ. 17):  ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಹುಟ್ಟಿದ ಕ್ಷಣದಲ್ಲಿ ಅವರನ್ನು ಎತ್ತಿಕೊಂಡು ಮುದ್ದಾಡಿದವರು ನರ್ಸ್​​ ರಾಜಮ್ಮ ಅಮ್ಮ. ಅವರನ್ನು ಇಂದು ಮತ್ತೆ ವಯನಾಡು ಸಂಸದ ಭೇಟಿಯಾಗಿದ್ದು, ಅವರೊಂದಿಗಿನ ಹೃದಯ ಸ್ಪರ್ಶಿ ಕ್ಷಣಗಳನ್ನು ಕೇರಳ ಕಾಂಗ್ರೆಸ್​ ಟ್ವಿಟರ್​ ಖಾತೆ ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ನರ್ಸ್​ ರಾಜಮ್ಮ ಅವರು, ರಾಹುಲ್​ ಗಾಂಧಿ ಅವರನ್ನು ತಮ್ಮ ಮಗ ಎಂದು ತಮ್ಮ ಮಕ್ಕಳು ಮತ್ತು ಭದ್ರತಾ ಸಿಬ್ಬಂದಿಗೆ ಖುಷಿಯಿಂದ ಹೇಳುವ ಮೂಲಕ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೇ ಇದೇ ವೇಳೆ ಅವರ ಕೈಗೆ ಸ್ವೀಟ್​ ಬಾಕ್ಸ್​ ಇಟ್ಟು ಸಂತಸ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಈಗ ಎಲ್ಲರ ಮನಸೆಳೆದಿದೆ.

  ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ತಮ್ಮ ಕ್ಷೇತ್ರವಾದ ವಯನಾಡ್​ನಲ್ಲಿ ಎರಡು ದಿನಗಳ ಪ್ರವಾಸ ನಡೆಸಿದ್ದಾರೆ. ಈ ವೇಳೆ ತಾವು 51 ವರ್ಷಗಳ ಹಿಂದೆ ಅಂದರೆ ಜೂನ್​ 15 1970ರಂದು ದೆಹಲಿಯ ಹೋಲಿ ಆಸ್ಪತ್ರೆಯಲ್ಲಿ ತಾವು ಹುಟ್ಟಿದ ಸಂದರ್ಭದಲ್ಲಿ ನರ್ಸ್​ ಆಗಿ ಕಾರ್ಯ ನಿರ್ವಹಿಸುತ್ತಿದ್ದ ರಾಜಮ್ಮ ಅವರನ್ನು ಭೇಟಿಯಾಗಿದ್ದಾರೆ.

  ಕೇರಳ ಮೂಲದ ರಾಜಮ್ಮ ಆ ಸಂದರ್ಭದಲ್ಲಿ ದೆಹಲಿಯ ಹೋಲಿ ಫ್ಯಾಮಿಲಿ ಆಸ್ಪತ್ರೆಯಲ್ಲಿ ಟ್ರೈನಿ ನರ್ಸ್​​ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಆಗ ಅವರಿಗೆ 23 ವರ್ಷ ವಯಸ್ಸಾಗಿತ್ತು. ಈ ವೇಳೆ ಸೋನಿಯಾ ಗಾಂಧಿ ಹೆರಿಗೆ ಸಂದರ್ಭದಲ್ಲಿ ಅವರ ಚಿಕಿತ್ಸೆಯಲ್ಲಿ ಭಾಗಿಯಾಗಿದ್ದರು  ಕೇರಳ ಕಾಂಗ್ರೆಸ್​ ಹಂಚಿಕೊಂಡಿರುವ ವಿಡಿಯೋದಲ್ಲಿ ವಯನಾಡು ಸಂಸದರ ಕೈ ಹಿಡಿದು ಭಾವುಕರಾಗಿ ಮಾತನಾಡಿರುವ ನರ್ಸ್​ ರಾಜಮ್ಮ, ರಾಹುಲ್​ ಗಾಂಧಿಯನ್ನು ಎಲ್ಲರಿಗಿಂತ ತಾವು ಮೊದಲು ನೋಡಿದ್ದು, ಅವರು ನನ್ನ ಮಗ ಎಂದು ಅವರ ಭದ್ರತಾ ಸಿಬ್ಬಂದಿಗೆ ತಿಳಿಸಿದ್ದಾರೆ. ಇದೇ ವೇಳೆ ರಾಜಮ್ಮ ಕಾಂಗ್ರೆಸ್​ ಅಧ್ಯಕ್ಷೆ ಸೋನಿಯಾ ಗಾಂಧಿ, ಸಹೋದರಿ ಪ್ರಿಯಾಂಕಾ ಅವರ ಬಗ್ಗೆ ಕೂಡ ಕೇಳಿ ತಮ್ಮ ಶುಭಾಶಯ ತಿಳಿಸುವಂತೆ ಹೇಳಿದ್ದಾರೆ. ಕೊನೆಯಲ್ಲಿ ಕೂಡ ರಾಜಮ್ಮ, ರಾಹುಲ್​ ಗಾಂಧಿ ತಮ್ಮ ಕ್ಷೇತ್ರದ ಸಂಸದ, ಕಾಂಗ್ರೆಸ್​ ನಾಯಕ ಎನ್ನುವುದಕ್ಕಿಂತ ಹೆಚ್ಚಿನ ಅವಿನಾಭಾವ ಸಂಬಂಧ ಅವರೊಟ್ಟಿಗೆ ತಮಗಿರುವುದನ್ನು ತಮ್ಮ ಭಾವನೆಗಳ ಮೂಲಕ ಅಭಿವ್ಯಕ್ತಪಡಿಸಿದ್ದಾರೆ.

  ತಮ್ಮ ಕ್ಷೇತ್ರದಲ್ಲಿನ ವಿವಿಧ ಅಭಿವೃದ್ಧಿ ಯೋಜನೆಗಳ ಪರಿಶೀಲನಾ ಸಭೆ ಕುರಿತು ಚರ್ಚೆ ಸೇರಿದಂತೆ ಪಕ್ಷದ ಸಂಘಟನೆಗೆ ಎರಡು ದಿನಗಳ ಪ್ರವಾಸದಲ್ಲಿ ರಾಹುಲ್​ ಗಾಂಧಿ ಇದ್ದಾರೆ.

  ಇದನ್ನು ಓದಿ: ಬೆಂಗಳೂರಿನಲ್ಲಿ ಸಂಬಂಧಿ ಮದುವೆಯಲ್ಲಿ ಐಶ್ವರ್ಯಾ ರೈ; ಫೋಟೋಸ್​ ವೈರಲ್​

  ಈ ಹಿಂದೆ ಕೂಡ ವಯನಾಡು ಕ್ಷೇತ್ರದಲ್ಲಿ ಗೆಲುವು ದಾಖಲಿಸಿದ ಬಳಿಕ ಅವರು  ನರ್ಸ್​ ರಾಜಮ್ಮ ಅವರನ್ನು ಭೇಟಿಯಾಗಿ ಆತ್ಮೀಯವಾಗಿ ಮಾತನಾಡಿಸಿದ್ದರು.

  ಅಷ್ಟೇ ಅಲ್ಲದೇ ರಾಹುಲ್ ಗಾಂಧಿ ಬ್ರಿಟಿಷ್​ ಪೌರತ್ವದ ವಿವಾದ ಸಂದರ್ಭದಲ್ಲಿ ಕೂಡ ಮಾತನಾಡಿದ್ದ ರಾಜಮ್ಮ, ತಾವು ದೆಹಲಿಯ ಹೋಲಿ ಫ್ಯಾಮಿಲಿ ಆಸ್ಪತ್ರೆಯಲ್ಲಿ ನರ್ಸ್​ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ ರಾಹುಲ್​​ ಗಾಂಧಿಯನ್ನು ಎತ್ತಿಕೊಂಡಿದ್ದು ನಾನು. ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಮೊಮ್ಮಗುವನ್ನು ಎತ್ತಿಕೊಳ್ಳಲು ನಾವೆಲ್ಲ ಕಾತುರತಾಗಿದ್ದೇವು. ಆಗ ರಾಹುಲ್​ ತುಂಬಾ ಮುದ್ದಾಗಿದ್ದರು ಎಂದಿದ್ದರು.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:Seema R
  First published: