• Home
  • »
  • News
  • »
  • national-international
  • »
  • Lucy Letby: ನವಜಾತ ಶಿಶುಗಳಿಗೆ ಇನ್ಸುಲಿನ್ ರೂಪದಲ್ಲಿ ವಿಷವುಣಿಸಿದ ನರ್ಸ್: ಹೀಗೆ ಬಯಲಾಯ್ತು ಈ ನಿಗೂಢ ರಹಸ್ಯ!

Lucy Letby: ನವಜಾತ ಶಿಶುಗಳಿಗೆ ಇನ್ಸುಲಿನ್ ರೂಪದಲ್ಲಿ ವಿಷವುಣಿಸಿದ ನರ್ಸ್: ಹೀಗೆ ಬಯಲಾಯ್ತು ಈ ನಿಗೂಢ ರಹಸ್ಯ!

ಲೂಸಿ ಲೆಟ್ಬಿ

ಲೂಸಿ ಲೆಟ್ಬಿ

ಲೂಸಿ ಲೆಟ್ಬಿ ಚೆಸ್ಟರ್ ಆಸ್ಪತ್ರೆಯ ನವಜಾತ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಮಯದಲ್ಲಿ ಐದು ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಕೊಂದಿದ್ದಾರೆ. ಚೆಸ್ಟರ್ ಆಸ್ಪತ್ರೆಯ ಕೌಂಟೆಸ್‌ನಲ್ಲಿ ಇತರ 10 ಶಿಶುಗಳನ್ನು ಕೊಲ್ಲಲು ಪ್ರಯತ್ನಿಸಿದ್ದಾರೆ ಎಂದು ತೀರ್ಪಿತ್ತಿದೆ. 

  • Share this:

ಆರೋಗ್ಯವಂತ ಶಿಶುಗಳು (Healthy Babies) ಆಸ್ಪತ್ರೆಯಲ್ಲಿ ಸಾವನ್ನುಪ್ಪುತ್ತಿರುವ ಗಮನಾರ್ಹ ಏರಿಕೆ ಕಂಡುಬಂದ ಹಿನ್ನಲೆಯಲ್ಲಿ ನ್ಯಾಯಾಲಯವು ಆಸ್ಪತ್ರೆಯ ಸಿಬ್ಬಂದಿಗಳೇ ಶಿಶುಗಳಿಗೆ ಇನ್ಸುಲಿನ್ (Insulin) ಮೂಲಕ ವಿಷವುಣಿಸಿದ್ದಾರೆ ಎಂದು ಆಪಾದಿಸಿದೆ. ಲೂಸಿ ಲೆಟ್ಬಿ ಚೆಸ್ಟರ್ ಆಸ್ಪತ್ರೆಯ ನವಜಾತ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಮಯದಲ್ಲಿ ಐದು ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಕೊಂದಿದ್ದಾರೆ ಮತ್ತು ಚೆಸ್ಟರ್ ಆಸ್ಪತ್ರೆಯ (Chester Hospital) ಕೌಂಟೆಸ್‌ನಲ್ಲಿ ಇತರ 10 ಶಿಶುಗಳನ್ನು ಕೊಲ್ಲಲು ಪ್ರಯತ್ನಿಸಿದ್ದಾರೆ ಎಂದು ತೀರ್ಪಿತ್ತಿದೆ. ನ್ಯಾಯಾಧೀಶರಾದ ನಿಕ್ ಜಾನ್ಸನ್ ಕೆಸಿ, ಆಸ್ಪತ್ರೆಯ ನವಜಾತ ಶಿಶು ಘಟಕದಲ್ಲಿ ಶಿಶುಗಳ ಹತ್ಯೆಯು ಉದ್ದೇಶಿತ ಕೃತ್ಯವಾಗಿದ್ದು ದಾದಿಯ (Nurse) ನಿರಂತರ ದುರುದ್ದೇಶಪೂರಿತ ಉಪಸ್ಥಿತಿ ಎಂದು ಹೇಳಿಕೆ ನೀಡಿದ್ದಾರೆ. 


ಆಸ್ಪತ್ರೆಯ ದಾದಿಯೇ ಪಾತಕಿ
ಹೆರೆಫೋರ್ಡ್‌ನ 32 ವರ್ಷದ ಲೂಸಿ ಲೆಟ್ಬಿ, ಮ್ಯಾಂಚೆಸ್ಟರ್ ಕ್ರೌನ್ ಕೋರ್ಟ್‌ನಲ್ಲಿ 22 ಆರೋಪಗಳನ್ನು ನಿರಾಕರಿಸಿದರು. ಲೂಸಿ ಲೆಟ್ಬಿ ಒಂದು ಮಗುವನ್ನು ಮೂರು ಬಾರಿ ಕೊಲ್ಲಲು ಪ್ರಯತ್ನಿಸಿದ್ದಾರೆ ಎಂದು ನ್ಯಾಯಾಧೀಶರು ಆರೋಪಿಸಿದ್ದು, ಇನ್ನೊಂದು ಚುಚ್ಚುಮದ್ದಿನ ಪರಿಣಾಮವಾಗಿ ಸಾವನ್ನಪ್ಪಿದೆ ಎಂಬುದಾಗಿ ತಿಳಿಸಿದ್ದಾರೆ.


ವಿಷವರ್ತುಲವಾಗಿ ಮಾರ್ಪಾಡಾದ ದಾದಿ
ನ್ಯಾಯಾಧೀಶರಾದ ಜಾನ್ಸನ್ ಪ್ರಕರಣಗಳ ಕೂಲಂಕುಷ ವಿಚಾರಣೆ ನಡೆಸುತ್ತಿದ್ದಂತೆ ಪ್ರಕರಣಕ್ಕೆ ಸಂಬಂಧಿಸಿದ ಶಿಶುಗಳ ಕುಟುಂಬಸ್ಥರು ಕೂಡ ನ್ಯಾಯಾಲಯದಲ್ಲಿ ಹಾಜರಿದ್ದರು. ಯುಕೆಯಲ್ಲಿ ಕಾರ್ಯನಿರ್ವಹಿಸುವ ಇತರ ಸಾಮಾನ್ಯ ಆಸ್ಪತ್ರೆಯಂತೆಯೇ ಚೆಸ್ಟರ್ ಸಂಸ್ಥೆ ಕೂಡ ಮಾನ್ಯತೆ ಪಡೆದಿದೆ. ಆದರೆ ಈ ಆಸ್ಪತ್ರೆಯ ನವಜಾತ ಶಿಶು ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ದಾದಿಯೇ ವಿಷವರ್ತುಲವಾಗಿ ಪರಿಣಮಿಸಿದ್ದಾರೆ ಎಂಬುದಾಗಿ ತಿಳಿಸಿದ್ದಾರೆ.


ಜನವರಿ 2015 ಕ್ಕೂ ಮುನ್ನ ನವಜಾತ ಘಟಕದಲ್ಲಿನ ಶಿಶು ಮರಣದ ಅಂಕಿ ಅಂಶಗಳನ್ನು ಇತರ ಘಟಕಗಳಲ್ಲಿದ್ದ ಮರಣ ಪ್ರಮಾಣಗಳಿಗೆ ಹೋಲಿಸಬಹುದು ಎಂದು ನ್ಯಾಯಾಧೀಶರು ಹೇಳಿದ್ದಾರೆ. ಇಷ್ಟೊಂದು ಪ್ರಮಾಣದಲ್ಲಿ ಆರೋಗ್ಯವಂತ ಶಿಶುಗಳ ಮರಣ ನಿಜಕ್ಕೂ ಕಳವಳಕಾರಿ ಅಂಶ ಎಂಬುದು ನ್ಯಾಯಾಧೀಶರ ಉಲ್ಲೇಖವಾಗಿದೆ.


ಶಿಶುಗಳ ಆರೋಗ್ಯದಲ್ಲಿ ಏರುಪೇರು
18 ತಿಂಗಳುಗಳಲ್ಲಿ ಶಿಶುಗಳ ಮರಣ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆ ಕಂಡಿದ್ದು, ಇದೊಂದು ದುರಂತವಾಗಿದೆ ಎಂದು ತಿಳಿಸಿದ್ದಾರೆ. ಸಾಯುತ್ತಿರುವ ಶಿಶುಗಳ ಆರೋಗ್ಯದಲ್ಲಿ ಏರುಪೇರಾಗಿರುವುದನ್ನು ಆಸ್ಪತ್ರೆಯ ಅಧಿಕಾರಿಗಳು ಗಮನಿಸಿದ್ದಾರೆ. ಹಠಾತ್ ಆಗಿ ಕುಸಿದು ಬಿದ್ದ ಶಿಶುಗಳು ಸೂಕ್ತ ಚಿಕಿತ್ಸೆಗೆ ಪ್ರತಿಕ್ರಿಯಿಸಲಿಲ್ಲ ಇನ್ನು ಕೆಲವೊಂದು ಶಿಶುಗಳು ಬೇಗನೇ ಚೇತರಿಸಿಕೊಂಡವು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟಕದಲ್ಲಿದ್ದ ಒಬ್ಬ ದಾದಿ ಲೂಸಿ ಲೆಟ್ಬಿಯ ಅನುಪಸ್ಥಿತಿ ಇನ್ನಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತು ಎಂಬುದಾಗಿ ಸಿಬ್ಬಂದಿಗಳು ತಿಳಿಸಿದ್ದಾರೆ.


ಇದನ್ನೂ ಓದಿ: Sar Tan Se Juda: ಪಾಕಿಸ್ತಾನದಲ್ಲಿ ಭಯಂಕರ ಉದ್ಯಮ, ಏನಿದು ಸರ್ ತನ್ ಸೇ ಜುದಾ?


ಶಿಶುಗಳ ಮರಣಕ್ಕೆ ವೈದ್ಯರು ಹಾಗೂ ವೈದ್ಯಕೀಯ ಚಿಕಿತ್ಸೆಗಳು ಕಾರಣವಲ್ಲ ಎಂಬುದಾಗಿ ಪರಿಗಣನೆಗೊಂಡ ಶೀಘ್ರವೇ ಪೊಲೀಸರನ್ನು ಕರೆಸಲಾಯಿತು ಹಾಗೂ ಪರಿಶೀಲನೆ ನಡೆಸಲಾಯಿತು ಎಂದು ನ್ಯಾಯಾಧೀಶರು ಸ್ಪಷ್ಟಪಡಿಸಿದ್ದಾರೆ. ಶಿಶುಗಳಿಗೆ ಇನ್ಸುಲಿನ್ ರೂಪದಲ್ಲಿ ವಿಷವುಣಿಸಿರುವುದು ಪತ್ತೆಯಾಗಿದೆ ಎಂಬುದು ತನಿಖೆಯಿಂದ ತಿಳಿದು ಬಂದಿದೆ ಎಂದು ನ್ಯಾಯಾಲಯ ತಿಳಿಸಿದೆ. ಇನ್ನು ಕೆಲವು ಅವಳಿ ಜವಳಿ ನವಜಾತ ಶಿಶುಗಳಿಗೆ ಹುಟ್ಟಿದ ಒಡನೆಯೇ ವಿಷವುಣಿಸಿರುವುದು ಪತ್ತೆಯಾಗಿದೆ ಎಂಬುದು ತನಿಖೆಗಳಿಂದ ತಿಳಿದು ಬಂದಿರುವುದಾಗಿ ನ್ಯಾಯಾಲಯ ಉಲ್ಲೇಖಿಸಿದೆ.


ತನಿಖೆ ನಡೆಸಿದ ಪೊಲೀಸರು
ಪ್ರಕರಣದ ತನಿಖೆ ನಡೆಸಿದ ಪೊಲೀಸ್ ಅಧಿಕಾರಿಗಳು ತಿಳಿಸಿರುವಂತೆ, ಶಿಶುಗಳ ಮೇಲೆ ದಾಳಿ ನಡೆಸಿದ ವಿಧಾನವನ್ನು ಪರಿಶೀಲಿಸಿದಾಗ ದಾದಿ ಲೂಸಿ ಲೆಟ್ಬಿಯ ಉಪಸ್ಥಿತಿ ಇನ್ನಷ್ಟು ಸಂದೇಹಕ್ಕೆ ಕಾರಣವಾಯಿತು ಎಂದು ತಿಳಿಸಿದ್ದಾರೆ. ಈ ಘಟನೆಗಳೆಲ್ಲವೂ ರಾತ್ರಿಪಾಳಿಯಲ್ಲಿ ಸಂಭವಿಸಿದೆ ಎಂಬುದಾಗಿ ನ್ಯಾಯಾಧೀಶರು ತಿಳಿಸಿದ್ದಾರೆ.


ಈ ಸಮಯದಲ್ಲಿ ದಾದಿ ಲೂಸಿ ಲೆಟ್ಬಿ ರಾತ್ರಿ ಪಾಳಿಯಿಂದ ದಿನದ ಪಾಳಿಗೆ ವರ್ಗಾವಣೆಗೊಂಡಾಗ ದಿನದ ಪಾಳಿಯಲ್ಲಿ ಕೂಡ ಸಾವುಗಳು ಸಂಭವಿಸಿರುವುದು ಗಮನಕ್ಕೆ ಬಂದಿದೆ ಎಂಬುದು ನ್ಯಾಯಾಲಯ ತಿಳಿಸಿದೆ. ಇನ್ನು ಲೂಸಿ ಲೆಟ್ಬಿಯು ಒಂದೇ ಮಗುವನ್ನು ಒಂದಕ್ಕಿಂತ ಹೆಚ್ಚು ಬಾರಿ ಹತ್ಯೆಗೈಯ್ಯಲು ಪ್ರಯತ್ನಿಸಿರುವುದು ಕಂಡುಬಂದಿದೆ ಎಂದು ನ್ಯಾಯಾಧೀಶರಾದ ಜಾನ್ಸನ್ ತಿಳಿಸಿದ್ದಾರೆ.


ಇದನ್ನೂ ಓದಿ:  Iran Violence: ಇರಾನ್‌ನಲ್ಲಿ ಇದ್ದಾನೆ ಒಬ್ಬ ಸುಪ್ರೀಂ ಲೀಡರ್, ಈತ ಹೇಳಿದ್ದೇ ಅಲ್ಲಿ ಫೈನಲ್!


ಲೂಸಿ ಲೆಟ್ಬಿಯ ನರ್ಸಿಂಗ್ ಪದವಿಯನ್ನು ನ್ಯಾಯಾಲಯ ಪರಿಶೀಲಿಸಿದ್ದು ದಾದಿಯಾಗಿ ಲೂಸಿ ಹೇಗೆ ಅರ್ಹತೆಯನ್ನು ಪಡೆದುಕೊಂಡರು ಅಂತೆಯೇ ಹಿಂದಿನ ಆಸ್ಪತ್ರೆಗಳಲ್ಲಿ ಆಕೆ ಹೇಗೆ ಕಾರ್ಯನಿರ್ವಹಿಸಿದ್ದರು ಎಂಬುದನ್ನು ಅವಲೋಕಿಸಿದೆ.

Published by:Ashwini Prabhu
First published: