Nupur Sharma: ನೂಪುರ್ ಶರ್ಮಾ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು; ಸುಪ್ರೀಂಕೋರ್ಟ್

ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೆಬಿ ಪರ್ದಿವಾಲಾ ಅವರ ಪೀಠವು ನೂಪುರ್ ಶರ್ಮಾ ವಿರುದ್ಧ ಸದ್ಯ ದಾಖಲಾಗಿರುವ ಎಫ್‌ಐಆರ್​ಗಳಿಗೆ ಸಂಬಂಧಿಸಿ ಯಾವುದೇ ಬಲವಂತದ ಕ್ರಮಗಳನ್ನು ಕೈಗೊಳ್ಳಬಾರದು ಎಂದು ಆದೇಶಿಸಿದೆ.

ನೂಪುರ್ ಶರ್ಮಾ

ನೂಪುರ್ ಶರ್ಮಾ

  • Share this:
    ದೆಹಲಿ: ತಮ್ಮ ವಿರುದ್ಧದ ಎಲ್ಲಾ9 ಎಫ್‌ಐಆರ್‌ಗಳನ್ನು ಒಟ್ಟುಗೂಡಿಸುವಂತೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ಭಾರತೀಯ ಜನತಾ ಪಕ್ಷದ ಮಾಜಿ ವಕ್ತಾರ ನೂಪುರ್ ಶರ್ಮಾ (Nupur Sharma) ಅವರ ಅರ್ಜಿಗೆ ಸುಪ್ರೀಂ ಕೋರ್ಟ್ (Supreme Court) ಮಂಗಳವಾರ, ಜುಲೈ 19 ರಂದು ಮಧ್ಯಂತರ ಆದೇಶವನ್ನು ನೀಡಿದೆ. ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೆಬಿ ಪರ್ದಿವಾಲಾ ಅವರ ಪೀಠವು ನೂಪುರ್ ಶರ್ಮಾ ವಿರುದ್ಧ ಸದ್ಯ ದಾಖಲಾಗಿರುವ ಎಫ್‌ಐಆರ್​ಗಳಿಗೆ (FIR On Nupur Sharma) ಸಂಬಂಧಿಸಿ ಯಾವುದೇ ಬಲವಂತದ ಕ್ರಮಗಳನ್ನು ಕೈಗೊಳ್ಳಬಾರದು ಎಂದು ಆದೇಶಿಸಿದೆ. ಈ ಮೂಲಕ ಮಧ್ಯಂತರ ಆದೇಶವನ್ನು ಸುಪ್ರೀಂಕೋರ್ಟ್ ಸೂಚಿಸಿದೆ. 

    ದೆಹಲಿ, ಮಹಾರಾಷ್ಟ್ರ, ತೆಲಂಗಾಣ, ಪಶ್ಚಿಮ ಬಂಗಾಳ, ಕರ್ನಾಟಕ, ಉತ್ತರ ಪ್ರದೇಶ, ಜಮ್ಮು ಮತ್ತು ಕಾಶ್ಮೀರ ಮತ್ತು ಅಸ್ಸಾಂ ರಾಜ್ಯಗಳನ್ನು ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರ ಮನವಿಗೆ ಉತ್ತರಿಸುವಂತೆ ಕೇಳಲಾಗಿದೆ.

    ನೂಪುರ್ ಶರ್ಮಾ ಬಗ್ಗೆ ಸುಪ್ರೀಂಕೋರ್ಟ್ ಜಡ್ಜ್ ಅಭಿಪ್ರಾಯಕ್ಕೆ ನಿವೃತ್ತ ಜಡ್ಜ್​ಗಳ ವಿರೋಧ
    ನೂಪುರ್ ಶರ್ಮಾ ದೇಶದ ಕ್ಷಮೆ ಯಾಚಿಸಬೇಕು ಎಂದು ಸುಪ್ರೀಂಕೋರ್ಟ್ ಇತ್ತೀಚಿಗೆ ಆದೇಶ ನೀಡಿತ್ತು. ಸುಪ್ರೀಂ ಕೋರ್ಟ್​ ನೀಡಿದ್ದ ಈ ಆದೇಶದ ವಿರುದ್ಧ 15 ನಿವೃತ್ತ ನ್ಯಾಯಾಧೀಶರು, 77 ಮಾಜಿ ಅಧಿಕಾರಿಗಳು ಮತ್ತು ಸಶಸ್ತ್ರ ಪಡೆಗಳ 25 ನಿವೃತ್ತ ಅಧಿಕಾರಿಗಳು ಟೀಕಿಸಿ ಸಿಜೆಐ ಎನ್.ವಿ. ರಮಣ  ಅವರಿಗೆ ಪತ್ರ ಬರೆದಿದ್ದಾರೆ. ನೂಪೂರ್ ಶರ್ಮಾ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದ ಸುಪ್ರೀಂ ಕೋರ್ಟ್ ಜಡ್ಜ್​ಗಳ ಅಭಿಪ್ರಾಯದ  ವಿರುದ್ಧ15 ನಿವೃತ್ತ ನ್ಯಾಯಾಧೀಶರು, 77 ಮಾಜಿ ಅಧಿಕಾರಿಗಳು ಮತ್ತು ಸಶಸ್ತ್ರ ಪಡೆಗಳ 25 ನಿವೃತ್ತ ಅಧಿಕಾರಿಗಳು ಪತ್ರ ಬರೆದಿದ್ದರು.

    ಇದನ್ನೂ ಓದಿ: Nupur Sharma: ಕೋರ್ಟ್ ಟೀಕೆಯ ನಂತರ ರೇಪ್, ಮರ್ಡರ್ ಬೆದರಿಕೆ! ಸುಪ್ರೀಂ ಮೊರೆ ಹೋದ ನೂಪುರ್ ಶರ್ಮಾ

    ಇಡೀ ದೇಶದ ಕ್ಷಮೆಯಾಚಿಸಬೇಕು ಎಂದಿದ್ದ ಸುಪ್ರೀಂ ಕೋರ್ಟ್
    ದೇಶದಲ್ಲಿ ಇಷ್ಟೆಲ್ಲಾ ನಡೆಯಲು ಅವರು ಒಬ್ಬರೇ ಕಾರಣ ಎಂದು ಕೋರ್ಟ್​ ಹೇಳಿತ್ತು. ಅವರ ಹೇಳಿಕೆ ಹೇಗೆ ಪ್ರಚೋದಿಸಲಾಗಿದೆ ಎಂಬ ಚರ್ಚೆಯನ್ನು ನಾವು ನೋಡಿದ್ದೇವೆ. ಆದರೆ ಅವರು ಇದನ್ನೆಲ್ಲ ಹೇಳಿದ ರೀತಿ ಮತ್ತು ನಂತರ ತಾನು ವಕೀಲೆ ಎಂದು ಹೇಳುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಅವರು ಇಡೀ ದೇಶದ ಕ್ಷಮೆಯಾಚಿಸಬೇಕು ಎಂದು ನ್ಯಾಯಮೂರ್ತಿ ಸೂರ್ಯ ಕಾಂತ್ ಸೂಚಿಸಿದ್ದರು.

    ಇದನ್ನೂ ಓದಿ: Nupur Sharma Row: ಅಂಗಡಿಗಳಲ್ಲಿ ಆಯುಧ ಇಡ್ಕೊಳ್ಳಿ ಎಂದ ಬಿಜೆಪಿ ಶಾಸಕ! ವಿವಾದ ಸೃಷ್ಟಿಸಿದ ಹೇಳಿಕೆ

    ನೂಪುರ್ ಶರ್ಮಾ ಅವರು ತಮ್ಮ ವಿರುದ್ಧ ದಾಖಲಾಗಿರುವ ಎಲ್ಲಾ ಎಫ್‌ಐಆರ್‌ಗಳನ್ನು ದೆಹಲಿಗೆ ವರ್ಗಾಯಿಸುವಂತೆ ಸಲ್ಲಿಸಿದ ಮನವಿಗೆ ಸುಪ್ರೀಂ ಕೋರ್ಟ್ ಪ್ರತಿಕ್ರಿಯಿಸಿದೆ. ಮಾಜಿ ಬಿಜೆಪಿ ವಕ್ತಾರೆ ತಮ್ಮ ಹೇಳಿಕೆ ವೈರಲ್ ಆದ ನಂತರ ಬೆದರಿಕೆಗಳನ್ನು ಎದುರಿಸುತ್ತಿದ್ದರು ಎಂದು ಆಕೆಯ ವಕೀಲರು ತಿಳಿಸಿದ್ದಾರೆ.

    ನೂಪುರ್ ಶರ್ಮಾ ತಲೆ ತಂದ್ರೆ ಬಂಗಲೆ, ಆಸ್ತಿ ಎಲ್ಲ ಕೊಡ್ತೀನಿ ಎಂದಿದ್ದ ವ್ಯಕ್ತಿ!
    ಪ್ರವಾದಿ ಮೊಹಮ್ಮದ್ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ ಅಮಾನತುಗೊಂಡಿರುವ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರ ಶಿರಚ್ಛೇದ ಮಾಡುವವರಿಗೆ ಬಹುಮಾನವಾಗಿ ತನ್ನ ಮನೆ ಮತ್ತು ಆಸ್ತಿಯನ್ನು ನೀಡುವುದಾಗಿ ರಾಜಸ್ಥಾನದ ಅಜ್ಮೀರ್‌ನ ವ್ಯಕ್ತಿ ಸೋಮವಾರ ಘೋಷಿಸಿದ್ದಾರೆ. ಈ ವ್ಯಕ್ತಿಯನ್ನು ಸಲ್ಮಾನ್ ಚಿಶ್ತಿ ಎಂದು ಗುರುತಿಸಲಾಗಿದೆ ಎಂದು ವರದಿಯಾಗಿದೆ. ನೂಪುರ್ ಶರ್ಮಾ ಅವರ ತಲೆಯನ್ನು ಯಾರಿಗಾದರೂ ತಂದುಕೊಟ್ಟರೆ ಅವರಿಗೆ ತಮ್ಮ ಮನೆ ಮತ್ತು ಆಸ್ತಿಯನ್ನು ನೀಡುವುದಾಗಿ ಅವರು ಹೇಳಿರುವುದು ವಿಡಿಯೋದಲ್ಲಿ ಕೇಳಿಬಂದಿದೆ.
    Published by:guruganesh bhat
    First published: