Nupur Sharma: ಕೋರ್ಟ್ ಟೀಕೆಯ ನಂತರ ರೇಪ್, ಮರ್ಡರ್ ಬೆದರಿಕೆ! ಸುಪ್ರೀಂ ಮೊರೆ ಹೋದ ನೂಪುರ್ ಶರ್ಮಾ

ಸುಪ್ರೀಂ ಕೋರ್ಟ್‌ನಿಂದ ಅನಿರೀಕ್ಷಿತ ಮತ್ತು ಕಟುವಾದ ಟೀಕೆಗಳ ನಂತರ, ತನಗೆ ಜೀವ ಬೆದರಿಕೆ ಮತ್ತು ಅತ್ಯಾಚಾರ ಬೆದರಿಕೆಗಳು ಬಂದಿವೆ ಎಂದು ಆರೋಪಿಸಿ ಶರ್ಮಾ ತನ್ನ ವಿರುದ್ಧ ದಾಖಲಾಗಿರುವ 9 ಎಫ್‌ಐಆರ್‌ಗಳಲ್ಲಿ ಬಂಧನದಿಂದ ರಕ್ಷಣೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ನೂಪುರ್ ಶರ್ಮಾ

ನೂಪುರ್ ಶರ್ಮಾ

  • Share this:
ದೆಹಲಿ(ಜು.19): ಅಮಾನತುಗೊಂಡಿರುವ ಬಿಜೆಪಿ ವಕ್ತಾರೆ (BJP Spokesperson) ನೂಪುರ್ ಶರ್ಮಾ (Nupur Sharma) ಅವರು ಪ್ರವಾದಿ ಮೊಹಮ್ಮದ್ ಅವರ ಹೇಳಿಕೆಗೆ ಸಂಬಂಧಿಸಿ ಈಗಾಗಲೇ ದೇಶದ ಹೊರಗೂ ಸುದ್ದಿಯಾಗಿದ್ದಾರೆ. ಒಂದು ಹೇಳಿಕೆಯಿಂದ ಆದ ಅವಾಂತರಗಳನ್ನು ರಾಷ್ಟ್ರವೇ ನೋಡಿದೆ. ಈ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್​ (Supreme Court) ನೂಪುರ್ ಶರ್ಮಾಗೆ ಚಾಟಿ ಬೀಸಿತ್ತು. ಕಳೆದ ವಿಚಾರಣೆಯಲ್ಲಿ ನೂಪುರ್ ಅವರ ಹೇಳಿಕೆಗಳೇ ಇಷ್ಟೆಲ್ಲಾ ರಾದ್ಧಾಂತಗಳಿಗೆ ಕಾರಣ ಎಂದು ಸುಪ್ರೀಂ ನೇರವಾಗಿಯೇ ಟೀಕೆ ಮಾಡಿತ್ತು. ಇದೀಗ ನೂಪುರ್ ಅವರು ಎಲ್ಲಾ ಪ್ರಕರಣಗಳಲ್ಲಿ ತಮ್ಮ ಬಂಧನದ ಅವಲೋಕನಗಳನ್ನು ಪ್ರಶ್ನಿಸಿ ಸೋಮವಾರ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಕಳೆದ ಬಾರಿ ನೂಪುರ್ ಅವರ ಅರ್ಜಿ ವಿಚಾರಣೆ ಸಂದರ್ಭ ಸುಪ್ರೀಂ ಕೋರ್ಟ್‌ನಿಂದ ಅನಿರೀಕ್ಷಿತ ಮತ್ತು ಕಟುವಾದ ಟೀಕೆಗಳ ನಂತರ, ತನಗೆ ಜೀವ ಬೆದರಿಕೆ ಮತ್ತು ಅತ್ಯಾಚಾರ ಬೆದರಿಕೆಗಳು ಬಂದಿವೆ ಎಂದು ಆರೋಪಿಸಿ ಶರ್ಮಾ ತನ್ನ ವಿರುದ್ಧ ದಾಖಲಾಗಿರುವ 9 ಎಫ್‌ಐಆರ್‌ಗಳಲ್ಲಿ ಬಂಧನದಿಂದ ರಕ್ಷಣೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಶರ್ಮಾ ದೇಶಾದ್ಯಂತ ತನ್ನ ವಿರುದ್ಧ ದಾಖಲಾಗಿರುವ ಎಲ್ಲಾ ಎಫ್‌ಐಆರ್‌ಗಳನ್ನು ಕ್ಲಬ್ ಮಾಡಲು ಈ ಹಿಂದೆ ಮನವಿ ಸಲ್ಲಿಸಿದ್ದರು. ತನ್ನ ವಿರುದ್ಧದ ಎಫ್‌ಐಆರ್ ದೆಹಲಿಯಲ್ಲಿ ದಾಖಲಾಗಿರುವುದರಿಂದ, ಇತರ ಸ್ಥಳಗಳಲ್ಲಿ ದಾಖಲಾಗಿರುವ ಪ್ರಕರಣಗಳನ್ನು ದೆಹಲಿ ಪ್ರಕರಣದೊಂದಿಗೆ ಜೋಡಿಸಬೇಕು. ಈ ಮೂಲಕ ವಿಚಾರಣೆ ಎದುರಿಸಲು ಸುಲಭವಾಗುವಂತೆ ಅವರು ಕೋರ್ಟ್​ಗೆ ಮನವಿ ಮಾಡಿದ್ದರು.

ನೂಪುರ್​ಗೆ ಟೀಕೆ

ಶರ್ಮಾ ಅವರ ಅರ್ಜಿ ವಿಚಾರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ. ಕುತೂಹಲಕಾರಿಯಾಗಿ, ಜುಲೈ 1 ರಂದು ಜಸ್ಟಿಸ್ ಜೆ ಬಿ ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಸೂರ್ಯ ಕಾಂತ್ ಅವರ ಅದೇ ಪೀಠದ ಮುಂದೆ ಈ ವಿಷಯವನ್ನು ಪಟ್ಟಿ ಮಾಡಲಾಗಿದೆ. ಅದು ಜುಲೈ 1 ರಂದು ಕೋರ್ಟ್​ ಪ್ರವಾದಿ ವಿರುದ್ಧದ "ವಿವಾದಾತ್ಮಕ" ಟೀಕೆಗಳಿಗಾಗಿ ಶರ್ಮಾ ಅವರನ್ನು ಖಂಡಿಸಿತು.

ವಿವಾದಾತ್ಮಕ ಹೇಳಿಕೆ

ಬಿಜೆಪಿಯ ಅಂದಿನ ವಕ್ತಾರೆಯಾಗಿದ್ದ ನೂಪುರ್ ಶರ್ಮಾ ಅವರು ಟಿವಿ ಚರ್ಚೆಯೊಂದರಲ್ಲಿ ಪ್ರವಾದಿ ಮೊಹಮ್ಮದ್ ಬಗ್ಗೆ ವಿವಾದಾತ್ಮಕ ಕಾಮೆಂಟ್ ಮಾಡುವ ಮೂಲಕ ಭಾರೀ ವಿವಾದಕ್ಕೆ ನಾಂದಿ ಹಾಡಿದ್ದರು. ಶರ್ಮಾ ಅವರ ಹೇಳಿಕೆಗಳು ದೇಶಾದ್ಯಂತ ಗಲಭೆಗೆ ಕಾರಣವಾಯಿತು. ಅನೇಕ ಗಲ್ಫ್ ದೇಶಗಳಿಂದ ತೀಕ್ಷ್ಣವಾದ ಟೀಕೆಗೆ ದಾರಿ ಮಾಡಿತು.

ಇದನ್ನೂ ಓದಿ: Nupur Sharma: ನೂಪುರ್ ಶರ್ಮಾ ಬಗ್ಗೆ ಸುಪ್ರೀಂಕೋರ್ಟ್ ಜಡ್ಜ್ ಅಭಿಪ್ರಾಯಕ್ಕೆ ನಿವೃತ್ತ ಜಡ್ಜ್​ಗಳ ವಿರೋಧ

ದೇಶದಲ್ಲಿ ಪ್ರತಿಭಟನೆಗಳನ್ನು (Protest) ಉಂಟುಮಾಡಿದೆ. ಬಿಜೆಪಿ (BJP) ನಾಯಕಿ ನೂಪುರ್ ಶರ್ಮಾ (Nupur Sharma) ಅವರು ಇಡೀ ದೇಶದ ಕ್ಷಮೆ (Apology) ಯಾಚಿಸಬೇಕು ಎಂದು ಸುಪ್ರೀಂ ಕೋರ್ಟ್ (Supreme Court) ಇಂದು ಹೇಳಿದೆ. ದೇಶದಲ್ಲಿ ಇಷ್ಟೆಲ್ಲಾ ನಡೆಯಲು ಅವರು ಒಬ್ಬರೇ ಕಾರಣ ಎಂದು ಕೋರ್ಟ್​ ಹೇಳಿದೆ.

ಸ್ರಪ್ರೀಂ ಚಾಟಿ

ಅವರ ಹೇಳಿಕೆ ಹೇಗೆ ಪ್ರಚೋದಿಸಲಾಗಿದೆ ಎಂಬ ಚರ್ಚೆಯನ್ನು ನಾವು ನೋಡಿದ್ದೇವೆ. ಆದರೆ ಅವರು ಇದನ್ನೆಲ್ಲ ಹೇಳಿದ ರೀತಿ ಮತ್ತು ನಂತರ ತಾನು ವಕೀಲೆ ಎಂದು ಹೇಳುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಅವರು ಇಡೀ ದೇಶದ ಕ್ಷಮೆಯಾಚಿಸಬೇಕು ಎಂದು ನ್ಯಾಯಮೂರ್ತಿ ಸೂರ್ಯ ಕಾಂತ್ ಹೇಳಿದ್ದಾರೆ.

ಇದನ್ನೂ ಓದಿ: Nupur Sharma: ನೂಪುರ್ ಶರ್ಮಾ ತಲೆ ತಂದ್ರೆ ಬಂಗಲೆ, ಆಸ್ತಿ ಎಲ್ಲ ಕೊಡ್ತೀನಿ ಎಂದ ವ್ಯಕ್ತಿ!

ನೂಪುರ್ ಶರ್ಮಾ ಅವರು ತಮ್ಮ ವಿರುದ್ಧ ದಾಖಲಾಗಿರುವ ಎಲ್ಲಾ ಎಫ್‌ಐಆರ್‌ಗಳನ್ನು ದೆಹಲಿಗೆ ವರ್ಗಾಯಿಸುವಂತೆ ಸಲ್ಲಿಸಿದ ಮನವಿಗೆ ಸುಪ್ರೀಂ ಕೋರ್ಟ್ ಪ್ರತಿಕ್ರಿಯಿಸಿದೆ. ಮಾಜಿ ಬಿಜೆಪಿ ವಕ್ತಾರೆ ತಮ್ಮ ಹೇಳಿಕೆ ವೈರಲ್ ಆದ ನಂತರ ಬೆದರಿಕೆಗಳನ್ನು ಎದುರಿಸುತ್ತಿದ್ದರು ಎಂದು ಆಕೆಯ ವಕೀಲರು ತಿಳಿಸಿದ್ದಾರೆ.
Published by:Divya D
First published: