ದೆಹಲಿ: ನೂಪುರ್ ಶರ್ಮಾ ದೇಶದ ಕ್ಷಮೆ ಯಾಚಿಸಬೇಕು ಎಂದು ಸುಪ್ರೀಂಕೋರ್ಟ್ ಇತ್ತೀಚಿಗೆ ಆದೇಶ ನೀಡಿತ್ತು. ಸುಪ್ರೀಂ ಕೋರ್ಟ್ ನೀಡಿದ್ದ ಈ ಆದೇಶದ ವಿರುದ್ಧ15 ನಿವೃತ್ತ ನ್ಯಾಯಾಧೀಶರು, 77 ಮಾಜಿ ಅಧಿಕಾರಿಗಳು ಮತ್ತು ಸಶಸ್ತ್ರ ಪಡೆಗಳ 25 ನಿವೃತ್ತ ಅಧಿಕಾರಿಗಳು ಟೀಕಿಸಿ ಸಿಜೆಐ ಎನ್.ವಿ. ರಮಣ (CJI NV Ramana) ಅವರಿಗೆ ಪತ್ರ ಬರೆದಿದ್ದಾರೆ. ನೂಪೂರ್ ಶರ್ಮಾ (Nupur Sharma Controversy) ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದ ಸುಪ್ರೀಂ ಕೋರ್ಟ್ ಜಡ್ಜ್ಗಳ ಅಭಿಪ್ರಾಯದ ವಿರು (Supreme Court Comments On Nupur Sharma) ವಿರುದ್ಧ15 ನಿವೃತ್ತ ನ್ಯಾಯಾಧೀಶರು, 77 ಮಾಜಿ ಅಧಿಕಾರಿಗಳು ಮತ್ತು ಸಶಸ್ತ್ರ ಪಡೆಗಳ 25 ನಿವೃತ್ತ ಅಧಿಕಾರಿಗಳು ಪತ್ರ ಬರೆದಿದ್ದಾರೆ.
An open letter has been sent to CJI NV Ramana, signed by 15 retired judges, 77 retd bureaucrats & 25 retd armed forces officers, against the observation made by Justices Surya Kant & JB Pardiwala while hearing Nupur Sharma's case in the Supreme Court. pic.twitter.com/ul5c5PedWU
ಪ್ರವಾದಿ ಮುಹಮ್ಮದ್ ಅವರ ಹೇಳಿಕೆಗಳು ಗಲ್ಫ್ ರಾಷ್ಟ್ರಗಳಲ್ಲಿ ಭಾರೀ ಆಕ್ರೋಶ ಮತ್ತು ದೇಶದಲ್ಲಿ ಪ್ರತಿಭಟನೆಗಳನ್ನು ಉಂಟುಮಾಡಿದೆ. ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವರು ಇಡೀ ದೇಶದ ಕ್ಷಮೆ ಯಾಚಿಸಬೇಕು ಎಂದು ಸುಪ್ರೀಂ ಕೋರ್ಟ್ ಸೂಚನೆ ನೀಡಿತ್ತು.
ಇಡೀ ದೇಶದ ಕ್ಷಮೆಯಾಚಿಸಬೇಕು ಎಂದಿದ್ದ ಸುಪ್ರೀಂ ಕೋರ್ಟ್ ದೇಶದಲ್ಲಿ ಇಷ್ಟೆಲ್ಲಾ ನಡೆಯಲು ಅವರು ಒಬ್ಬರೇ ಕಾರಣ ಎಂದು ಕೋರ್ಟ್ ಹೇಳಿತ್ತು. ಅವರ ಹೇಳಿಕೆ ಹೇಗೆ ಪ್ರಚೋದಿಸಲಾಗಿದೆ ಎಂಬ ಚರ್ಚೆಯನ್ನು ನಾವು ನೋಡಿದ್ದೇವೆ. ಆದರೆ ಅವರು ಇದನ್ನೆಲ್ಲ ಹೇಳಿದ ರೀತಿ ಮತ್ತು ನಂತರ ತಾನು ವಕೀಲೆ ಎಂದು ಹೇಳುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಅವರು ಇಡೀ ದೇಶದ ಕ್ಷಮೆಯಾಚಿಸಬೇಕು ಎಂದು ನ್ಯಾಯಮೂರ್ತಿ ಸೂರ್ಯ ಕಾಂತ್ ಸೂಚಿಸಿದ್ದರು.‘
ನೂಪುರ್ ಶರ್ಮಾ ಅವರು ತಮ್ಮ ವಿರುದ್ಧ ದಾಖಲಾಗಿರುವ ಎಲ್ಲಾ ಎಫ್ಐಆರ್ಗಳನ್ನು ದೆಹಲಿಗೆ ವರ್ಗಾಯಿಸುವಂತೆ ಸಲ್ಲಿಸಿದ ಮನವಿಗೆ ಸುಪ್ರೀಂ ಕೋರ್ಟ್ ಪ್ರತಿಕ್ರಿಯಿಸಿದೆ. ಮಾಜಿ ಬಿಜೆಪಿ ವಕ್ತಾರೆ ತಮ್ಮ ಹೇಳಿಕೆ ವೈರಲ್ ಆದ ನಂತರ ಬೆದರಿಕೆಗಳನ್ನು ಎದುರಿಸುತ್ತಿದ್ದರು ಎಂದು ಆಕೆಯ ವಕೀಲರು ತಿಳಿಸಿದ್ದರು.
ನೂಪುರ್ ಶರ್ಮಾ ತಲೆ ತಂದ್ರೆ ಬಂಗಲೆ, ಆಸ್ತಿ ಎಲ್ಲ ಕೊಡ್ತೀನಿ ಎಂದ ವ್ಯಕ್ತಿ! ಪ್ರವಾದಿ ಮೊಹಮ್ಮದ್ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ ಅಮಾನತುಗೊಂಡಿರುವ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರ ಶಿರಚ್ಛೇದ ಮಾಡುವವರಿಗೆ ಬಹುಮಾನವಾಗಿ ತನ್ನ ಮನೆ ಮತ್ತು ಆಸ್ತಿಯನ್ನು ನೀಡುವುದಾಗಿ ರಾಜಸ್ಥಾನದ ಅಜ್ಮೀರ್ನ ವ್ಯಕ್ತಿ ಸೋಮವಾರ ಘೋಷಿಸಿದ್ದಾರೆ. ಈ ವ್ಯಕ್ತಿಯನ್ನು ಸಲ್ಮಾನ್ ಚಿಶ್ತಿ ಎಂದು ಗುರುತಿಸಲಾಗಿದೆ ಎಂದು ವರದಿಯಾಗಿದೆ. ನೂಪುರ್ ಶರ್ಮಾ ಅವರ ತಲೆಯನ್ನು ಯಾರಿಗಾದರೂ ತಂದುಕೊಟ್ಟರೆ ಅವರಿಗೆ ತಮ್ಮ ಮನೆ ಮತ್ತು ಆಸ್ತಿಯನ್ನು ನೀಡುವುದಾಗಿ ಅವರು ಹೇಳಿರುವುದು ವಿಡಿಯೋದಲ್ಲಿ ಕೇಳಿಬಂದಿದೆ.
ಬಿಜೆಪಿ ನಾಯಕಿ ಖ್ವಾಜಾ ಸಾಹೇಬ್ ಮತ್ತು ಮೊಹಮ್ಮದ್ ಸಾಹೇಬ್ ಅವರ ಹೆಮ್ಮೆಗೆ ದ್ರೋಹ ಬಗೆದಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಅವರು ನೂಪುರ್ ಶರ್ಮಾ ತಲೆಯನ್ನು ತರುವವರಿಗೆ ಅವರ ಮನೆ ಮತ್ತು ಅವರ ಜಮೀನು ಆಸ್ತಿಯನ್ನು ನೀಡುತ್ತಾರೆ ಎಂದು ಅವರು ಹೇಳುವುದನ್ನು ಸಹ ಕೇಳಬಹುದು.
Published by:guruganesh bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ