ಭಾರತದಲ್ಲಿರುವ ಸಸ್ಯಾಹಾರಿಗಳ ಸಂಖ್ಯೆ ಕೇವಲ 15 %, ಮಿಕ್ಕವರೆಲ್ಲ ಬಾಡೂಟ ಪ್ರಿಯರು!

ಇನ್ನು ಕರ್ನಾಟಕದಲ್ಲಿ ಶೇ.21.1 ರಷ್ಟು ಸಸ್ಯಹಾರಿಗಳಿದ್ದಾರೆ. ಜತೆಗೆ ನಮ್ಮ ನೆರೆಯ ರಾಜ್ಯ ಆಂಧ್ರಪ್ರದೇಶದಲ್ಲಿ ಅತೀ ಹೆಚ್ಚು ಶೇ.98.25 ರಷ್ಟು ಮಾಂಸಹಾರಿಗಳಿದ್ದಾರೆ.

Ganesh Nachikethu | news18
Updated:February 20, 2019, 7:54 PM IST
ಭಾರತದಲ್ಲಿರುವ ಸಸ್ಯಾಹಾರಿಗಳ ಸಂಖ್ಯೆ ಕೇವಲ 15 %, ಮಿಕ್ಕವರೆಲ್ಲ ಬಾಡೂಟ ಪ್ರಿಯರು!
ಮಾಂಸಹಾರ
  • News18
  • Last Updated: February 20, 2019, 7:54 PM IST
  • Share this:
ನವದೆಹಲಿ(ಫೆ.20): ದೇಶದಲ್ಲಿ ದಿನೇದಿನೇ ಮಾಂಸಹಾರಿಗಳು ಹೆಚ್ಚಾಗುತ್ತಿದಂತೆ ಸಸ್ಯಾಹಾರಿಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬುದು ಹಳೆಯ ವಾದ. ಇಂದಿನ ಆಧುನಿಕ ಸಮಾಜಕ್ಕೆ ಆಹಾರ ಪದ್ಧತಿಯ ಬಗ್ಗೆ ಎಷ್ಟು ಹೇಳಿದರು ಕಡಿಮೆಯೇ. ಮನುಷ್ಯ ಬದುಕಲು, ಹಸಿವು ನೀಗಿಸಿಕೊಳ್ಳಲು ಆಹಾರ ಅತ್ಯಗತ್ಯ. ಇತ್ತೀಚೆಗಿನ ಜನಗಣತಿ ವರದಿ ಪ್ರಕಾರ ಭಾರತದಲ್ಲಿ ಶೇ.70 ಮಾಂಸಹಾರಿಗಳಿದ್ದರೆ, ಶೇ. 15 ರಷ್ಟು ಮಾತ್ರ ಸಸ್ಯಾಹಾರಿಗಳಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿಯಾದ ಸುಮಲತಾ ಅಂಬರೀಷ್​; ಮಂಡ್ಯ ಲೋಕಸಭಾ ಚುನಾವಣೆ ಸ್ಪರ್ಧೆ ವಿಚಾರ ಚರ್ಚೆ

ಹೀಗಾಗಿ ಈ ಸಮೀಕ್ಷೆ ಆಧಾರದ ಮೇರೆಗೆ ಸಸ್ಯಾಹಾರ ಉತ್ತಮವೋ ಅಥವಾ ಮಾಂಸಹಾರವೋ ಎಂಬ ಅಂಶಗಳನ್ನು ನಾವು ಲೆಕ್ಕ ಹಾಕಬೇಕಾಗುತ್ತದೆ. ಸದ್ಯ ಬಿಡುಗಡೆ ಆಗಿರುವ ಜನಗಣತಿ ದಾಖಲೆ ಹೇಳುವಂತೆ ರಾಜಸ್ಥಾನದಲ್ಲಿ ಅತೀ ಹೆಚ್ಚು ಶೇ.74.9 ಸಂಸ್ಯಹಾರಿಗಳಿದ್ದಾರೆ. ಅಲ್ಲದೇ ಅತೀ ಕಡಿಮೆ ಸಸ್ಯಹಾರಿಗಳನ್ನು ಹೊಂದಿರುವ ರಾಜ್ಯ ಕೇರಳ ಎಂದು ಸಮೀಕ್ಷೆ ಹೇಳಿದೆ.


ಇನ್ನು ಕರ್ನಾಟಕದಲ್ಲಿ ಶೇ.21.1 ರಷ್ಟು ಸಸ್ಯಹಾರಿಗಳಿದ್ದಾರೆ. ಜತೆಗೆ ನಮ್ಮ ನೆರೆಯ ರಾಜ್ಯ ಆಂಧ್ರಪ್ರದೇಶದಲ್ಲಿ ಅತೀ ಹೆಚ್ಚು ಶೇ.98.25 ರಷ್ಟು ಮಾಂಸಹಾರಿಗಳಿದ್ದಾರೆ. ಈ ಪೈಕಿ ಶೇ. 98.8 ಪುರುಷರು ಮತ್ತು ಶೇ. 98.6 ರಷ್ಟು ಜನ ಮಹಿಳೆಯರು ಮಾಂಸಹಾರಿಗಳು ಎನ್ನುತ್ತಿವೆ ಮೂಲಗಳು.

ಇಲ್ಲಿದೆ ರಾಜ್ಯವಾರು ಮಾಂಸ ಮತ್ತು ಸಸ್ಯಹಾರಿಗಳ ಪಟ್ಟಿ..

ರಾಜ್ಯಗಳು ಮಾಂಸಾಹಾರಿಗಳು ಸಸ್ಯಾಹಾರಿಗಳು
1. ಜಮ್ಮು ಕಾಶ್ಮೀರ 68.55 31.45
2. ಪಂಜಾಬ್ 33.25 66.75
3. ಉತ್ತರಾಖಂಡ್​ 72.65 27.35
4. ಹರಿಯಾಣ 30.75 69.25
5. ರಾಜಸ್ತಾನ 25.1 74.9
6. ನವದೆಹಲಿ 60. 5 39.5
7. ಉತ್ತರ ಪ್ರದೇಶ 52.9 47.1
8. ಬಿಹಾರ 92.45 7.55
9. ಅಸ್ಸಾಂ 79.4 20.6
10. ಗುಜರಾತ್ 39.5 60.95
11. ಮಧ್ಯಪ್ರದೇಶ 49.4 50.6
12. ಜಾರ್ಖಾಂಡ್ 96.75 3.25
13. ಛತ್ತೀಸ್​ಗಢ 82.05 17.95
14. ಪಶ್ಚಿಮ ಬಂಗಾಳ 98.6 1.4
15. ಒರಿಸ್ಸಾ 97.35 2.65
16. ಮಹಾರಾಷ್ಟ್ರ 59.8 40.2
17. ತೆಲಂಗಾಣ 98.7 1.3
18. ಕರ್ನಾಟಕ 78.9 21.1
19. ಆಂಧ್ರಪ್ರದೇಶ 98.25 1.75
20. ತಮಿಳುನಾಡು 97.65 2.35
21. ಕೇರಳ 97 1

 

----------------
First published:February 20, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ