India Poverty Rate 2020: 2020ರಲ್ಲಿ ಭಾರತದಲ್ಲಿ ಬಡವರ ಸಂಖ್ಯೆ ಡಬಲ್​; ಮಧ್ಯಮ ವರ್ಗದ ಸಂಖ್ಯೆಯಲ್ಲೂ ಮೂರನೇ ಒಂದು ಭಾಗದಷ್ಟು ಕುಸಿತ!

ಕೊರೋನಾ ಪ್ರೇರಿತ ಆರ್ಥಿಕ ಹಿಂಜರಿತದಿಂದಾಗಿ ಭಾರತದಲ್ಲಿ ಬಡವರ ಸಂಖ್ಯೆ (ದೈನಂದಿನ ಆದಾಯ 145 ರೂ. ಅಥವಾ ಅದಕ್ಕಿಂತ ಕಡಿಮೆ) 75 ಮಿಲಿಯನ್‌ಗೆ ಏರಿಕೆಯಾಗಿದೆ ಎಂದು ಅಂದಾಜಿಸಲಾಗಿದೆ. ಇದು ಬಡತನದ ಜಾಗತಿಕ ಹೆಚ್ಚಳದ ಶೇ.60 ರಷ್ಟಿದೆ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

 • Share this:
  ಕೊರೋನಾ ಸಾಂಕ್ರಾಮಿಕ ರೋಗದಿಂದಾಗಿ ಪ್ರಸ್ತುತ ಇಡೀ ವಿಶ್ವದ ಆರ್ಥಿಕತೆ ಕುಸಿತ ಕಂಡಿದೆ. ಅದರಲ್ಲೂ ಅಭಿವೃದ್ಧಿ ಶೀಲ ರಾಷ್ಟ್ರಗಳ ಕಥೆ ಹೇಳ ತೀರದಂತಾಗಿದೆ. ಲಾಕ್​ಡೌನ್ ಸಂದರ್ಭದಲ್ಲಿ ಭಾಗಶಃ ಎಲ್ಲಾ ದೇಶಗಳ ಆರ್ಥಿಕತೆ ಪಾತಾಳಕ್ಕೆ ಕುಸಿದಿತ್ತು. ಇದಕ್ಕೆ ಭಾರತವೂ ಹೊರತಾಗಿರಲಿಲ್ಲ. ಪರಿಣಾಮ ಸಾಂಕ್ರಾಮಿಕ ರೋಗ ಕೊರೊನಾ ಕಾರಣದಿಂದ ಉಂಟಾದ ಆರ್ಥಿಕ ಹಿಂಜರಿತದಿಂದಾಗಿ ಭಾರತದ ಮಧ್ಯಮ ವರ್ಗವು 2020 ರಲ್ಲಿ ಮೂರನೇ ಒಂದು ಭಾಗದಷ್ಟು ಕುಗ್ಗಿದೆ. ದೇಶದ ಬಡವರ ಸಂಖ್ಯೆ ದ್ವಿಗುಣಗೊಂಡಿದೆ ಎಂದು ವಾಷಿಂಗ್ಟನ್ ಮೂಲದ ಪ್ಯೂ ರಿಸರ್ಚ್ ಸಂಸ್ಥೆಯ ವರದಿ ತಿಳಿಸಿದೆ ಎಂದು ಟೆಲಿಗ್ರಾಫ್ ವರದಿ ಮಾಡಿದೆ.

  ವಾಷಿಂಗ್ಟನ್ ಮೂಲದ ಎನ್‌ಜಿಒ ಪ್ಯೂ ರಿಸರ್ಚ್ ಗುರುವಾರ ಬಿಡುಗಡೆ ಮಾಡಿರುವ ತನ್ನ ವರದಿಯಲ್ಲಿ ಕೊರೊನಾ ಸಾಂಕ್ರಾಮಿಕದಿಂದಾಗಿ ಆರ್ಥಿಕ ಹಿಂಜರಿತ ಹೆಚ್ಚಾಗಿದ್ದು ಬಡವರ ಸಂಖ್ಯೆಗೆ ದುಪ್ಪಟ್ಟುಗೊಳ್ಳಲು ಕಾರಣ ಎಂದು ಉಲ್ಲೇಖಿಸಿದೆ.

  ಆರ್ಥಿಕ ಕುಸಿತದ ಪರಿಣಾಮವಾಗಿ, ಭಾರತದ ಮಧ್ಯಮ ವರ್ಗವು ಯಾವುದೇ ಸಾಂಕ್ರಾಮಿಕ ರೋಗಗಳಿಲ್ಲದಿದ್ದರೆ ಅದು ತಲುಪಬಹುದಾದ ಸಂಖ್ಯೆಯಿಂದ 32 ಮಿಲಿಯನ್ಂತಲೂ ಕಡಿಮೆಯಾಗಿದೆ (ದೈನಂದಿನ ಆದಾಯವು 725 ರಿಂದ 1,450 ರೂಪಾಯಿ ಇರುವ ವರ್ಗ).

  ಸಾಂಕ್ರಾಮಿಕ ರೋಗದ ಮೊದಲು, 2020 ರಲ್ಲಿ ಭಾರತದಲ್ಲಿ 99 ಮಿಲಿಯನ್ ಜನರು ಮಧ್ಯಮ ವರ್ಗಕ್ಕೆ ಸೇರಿದವರು ಎಂದು ಅಂದಾಜಿಸಲಾಗಿದೆ. ಪ್ಯೂ ವರದಿ ಪ್ರಕಾರ, ಈ ಸಂಖ್ಯೆ ಈಗ 66 ಮಿಲಿಯನ್ ಹತ್ತಿರದಲ್ಲಿದೆ ಎಂದು ಅಂದಾಜಿಸಲಾಗಿದೆ.

  ಕೊರೋನಾ ಪ್ರೇರಿತ ಆರ್ಥಿಕ ಹಿಂಜರಿತದಿಂದಾಗಿ ಭಾರತದಲ್ಲಿ ಬಡವರ ಸಂಖ್ಯೆ (ದೈನಂದಿನ ಆದಾಯ 145 ರೂ. ಅಥವಾ ಅದಕ್ಕಿಂತ ಕಡಿಮೆ) 75 ಮಿಲಿಯನ್‌ಗೆ ಏರಿಕೆಯಾಗಿದೆ ಎಂದು ಅಂದಾಜಿಸಲಾಗಿದೆ. ಇದು ಬಡತನದ ಜಾಗತಿಕ ಹೆಚ್ಚಳದ ಶೇ.60 ರಷ್ಟಿದೆ.

  ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೆಲಸಕ್ಕೆ ಬೇಡಿಕೆ ಈಗ ಎಂದಿಗಿಂತ ಹೆಚ್ಚಾಗಿದೆ ಎಂದು ವರದಿ ಹೇಳುತ್ತದೆ. ಭಾರತದಲ್ಲಿ ಬಡವರ ಸಂಖ್ಯೆ 134 ಮಿಲಿಯನ್ ತಲುಪುವ ನಿರೀಕ್ಷೆಯಿದೆ. ಇದು ಆರ್ಥಿಕ ಹಿಂಜರಿತದ ಮೊದಲು ಅಂದಾಜು ಮಾಡಲಾದ 59 ದಶಲಕ್ಷಕ್ಕಿಂತ ಎರಡು ಪಟ್ಟು ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ.

  ಇದನ್ನೂ ಓದಿ: CoronaVirus: ಕೊರೋನಾ ಎರಡನೇ ಅಲೆ: ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾದ ಕೇಂದ್ರ ಸರ್ಕಾರ

  ಭಾರತ ಮತ್ತು ಚೀನಾ ಒಟ್ಟಾಗಿ ವಿಶ್ವದ ಜನಸಂಖ್ಯೆಯ ಮೂರನೇ ಒಂದು ಭಾಗವನ್ನು ಹೊಂದಿರುವುದರಿಂದ, ಪ್ಯೂ ರಿಸರ್ಚ್ ಎರಡೂ ದೇಶಗಳನ್ನು ಒಟ್ಟಿಗೆ ಅಧ್ಯಯನ ಮಾಡಿದೆ. ಭಾರತವು ಆಳವಾದ ಆರ್ಥಿಕ ಹಿಂಜರಿತದಲ್ಲಿ ಮುಳುಗಿತು. ಆದರೆ ಚೀನಾವು ಆರ್ಥಿಕ ಸಂಕುಚಿತತೆಯನ್ನು ತಡೆಯಲು ಸಾಧ್ಯವಾಯಿತು ಎಂದು ವರದಿ ವಿವರಿಸಿದೆ.

  ಸಾಂಕ್ರಾಮಿಕ ರೋಗದ ಮೊದಲು, ವಿಶ್ವಬ್ಯಾಂಕ್ 2020 ರಲ್ಲಿ ಭಾರತದಲ್ಲಿ ನೈಜ ಜಿಡಿಪಿಯಲ್ಲಿ (ಶೇ. 5.8) ಮತ್ತು ಚೀನಾದಲ್ಲಿ (ಶೇ. 5.9) ಬಹುತೇಕ ಸಮಾನ ಬೆಳವಣಿಗೆಯನ್ನು ಅಂದಾಜಿಸಿತ್ತು.
  Published by:MAshok Kumar
  First published: