ಚೀನಾದಲ್ಲಿ (China) ಕಳೆದ ತಿಂಗಳು ಓಮಿಕ್ರಾನ್ (Omicron) ಉಪತಳಿ ದೇಶದಾದ್ಯಂತ ಅಲ್ಲೋಲ ಕಲ್ಲೋಲ ಎಬ್ಬಿಸಿತ್ತು ಮತ್ತು ಸಾವಿರಾರು ಜನರ (People) ಸಾವಿಗೆ (Death) ಕಾರಣವಾಗಿತ್ತು. ಚೀನಾ ಜೊತೆಗೆ ಯುಎಸ್ನಲ್ಲೂ (US) ಸಹ ಕೋವಿಡ್ ಪ್ರಕರಣಗಳು ಹೆಚ್ಚಾಗಿದ್ದವು. ಆದರೆ ಈ ಪರಿಣಾಮಗಳು ಭಾರತಕ್ಕೆ ಹೆಚ್ಚಿನ ರೀತಿಯಲ್ಲಿ ತಟ್ಟಿದಂತೆ ಕಾಣುತ್ತಿಲ್ಲ. ಏಕೆಂದರೆ ಭಾರತದಲ್ಲಿ (India) ಹಲವು ತಿಂಗಳುಗಳಿಂದ COVID-19 ಪ್ರಕರಣಗಳಲ್ಲಿ ಯಾವುದೇ ರೀತಿಯ ಏರಿಕೆಗಳು ಕಂಡು ಬಂದಿಲ್ಲ.
ಭಾರತದಲ್ಲಿ ಇಳಿಮುಖವಾದ ಕೋವಿಡ್
ಭಾರತದಲ್ಲಿ ಕೇರಳ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳಲ್ಲಿ ಅಲ್ಪ ಏರಿಕೆ ಕಂಡು ಬಂದಿತ್ತು. ಅದನ್ನು ಹೊರತುಪಡಿಸಿದಂತೆ ಯಾವುದೇ ರಾಜ್ಯದಲ್ಲಿ ಈವರೆಗೆ ಪ್ರಕರಣಗಳಲ್ಲಿ ಏರಿಕೆ ಕಂಡು ಬಂದಿಲ್ಲ.2022ರ ಜನವರಿ 21 ರಂದು ಸುಮಾರು 3,38,000 ಹೊಸ ಸೋಂಕುಗಳ ದಾಖಲಾಗಿದ್ದವು ಮತ್ತು ಮಾರ್ಚ್ ಮೊದಲ ವಾರದ ವೇಳೆಗೆ ಈ ಸಂಖ್ಯೆ ಇಳಿಮುಖವಾಗಿತ್ತು.
ತದನಂತರ ಜೂನ್ ಮಧ್ಯದಿಂದ ಆಗಸ್ಟ್ವರೆಗೆ 2022 ರಲ್ಲಿ ಹೊಸ ಸೋಂಕುಗಳ ಏರಿಕೆಗೆ ಕಂಡಿಲ್ಲ. ಹೊಸ ಒಮಿಕ್ರಾನ್ ಸಬ್ವೇರಿಯಂಟ್ಗಳು ಮತ್ತು ಮರುಸಂಯೋಜಕಗಳು ಹೆಚ್ಚುತ್ತಿದ್ದರೂ ಭಾರತದಲ್ಲಿ ಇದು ಪರಿಣಾಮ ಬೀರಿಲ್ಲ ಎನ್ನುತ್ತಿವೆ ವರದಿಗಳು.
ಕಳೆದ ವರ್ಷ ದಾಖಲಾದ ಪ್ರಕರಣಗಳೆಷ್ಟು?
ಡಿಸೆಂಬರ್ ಎರಡನೇ ವಾರದಿಂದ, ಭಾರತದಲ್ಲಿ 1,500 ಕ್ಕಿಂತ ಕಡಿಮೆ ಕೋವಿಡ್ ಪ್ರಕರಣಗಳು ವರದಿಯಾಗಿವೆ ಎಂದು ಕೇರಳದ ಕೋವಿಡ್ ಡೇಟಾ ವಿಶ್ಲೇಷಕ ಎನ್ಸಿ ಕೃಷ್ಣಪ್ರಸಾದ್ ಹೇಳಿದ್ದಾರೆ."ಭಾರತದಾದ್ಯಂತ ಕೋವಿಡ್ ಪ್ರಕರಣಗಳು ಮತ್ತು ಸಾವುಗಳಲ್ಲಿ ಗಮನಾರ್ಹ ಏರಿಕೆ ಕಂಡುಬಂದಿಲ್ಲ" ಎಂದು ತಿಳಿಸಿದರು.
ಕಳೆದ ವರ್ಷ ಡಿಸೆಂಬರ್ 15 ರಿಂದ 21 ರವರೆಗೆ ಭಾರತದಲ್ಲಿ 1069 ಕೋವಿಡ್ ಪ್ರಕರಣಗಳು ಮತ್ತು 16 ಸಾವುಗಳು ವರದಿಯಾಗಿವೆ. ಅದೇ ರೀತಿ ಡಿಸೆಂಬರ್ 22 ರಿಂದ 28 ರವರೆಗೆ 1399 ಕೋವಿಡ್ ಪ್ರಕರಣಗಳು ಮತ್ತು 17 ಸಾವುಗಳು ದಾಖಲಾಗಿವೆ. ಡಿಸೆಂಬರ್ 29 ರಿಂದ ಜನವರಿ 4ರವರೆಗೆ 1404 ಕೋವಿಡ್ ಪ್ರಕರಣಗಳು ಮತ್ತು 12 ಸಾವುಗಳು ವರದಿಯಾಗಿವೆ.
ಜನವರಿ 5 ರಿಂದ ಜನವರಿ 10 ರವರೆಗೆ 896 ಕೋವಿಡ್ ಪ್ರಕರಣಗಳು ದಾಖಲಾಗಿದ್ದು, ಇದುವರೆಗೆ 12 ಸಾವುಗಳು ವರದಿಯಾಗಿವೆ ಎಂದು ಅವರು ಹೇಳಿದರು.
ಪ್ರಕರಣ ಏರಿಕೆ ಆಗದೇ ಇರಲು ಕಾರಣ ಏನಿರಬಹುದು?
ನೆರೆಯ ಚೀನಾ ಮತ್ತು ಪೂರ್ವ ಏಷ್ಯಾದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಭಾರತದ ಅಧಿಕಾರಿಗಳು ಕೆಲವು ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡರು.
ಅಂತರರಾಷ್ಟ್ರೀಯ ಪ್ರಯಾಣಿಕರನ್ನು ಪರೀಕ್ಷೆಗೆ ಒಳಪಡಿಸುವುದು ಮತ್ತು ಚೀನಾ, ಜಪಾನ್, ದಕ್ಷಿಣ ಕೊರಿಯಾ, ಥೈಲ್ಯಾಂಡ್ ಮತ್ತು ಹಾಂಗ್ ಕಾಂಗ್ನಂತಹ ಹಾಟ್ಸ್ಪಾಟ್ ದೇಶಗಳಿಂದ ಕೋವಿಡ್ ನಕಾರಾತ್ಮಕ ವರದಿಗಳನ್ನು ಪಡೆಯುವುದು ಸೇರಿದಂತೆ ಹಲವಾರು ಕ್ರಮಗಳನ್ನು ತೆಗೆದುಕೊಂಡರು. ಹೀಗಾಗಿ ಈ ಎಲ್ಲಾ ಕ್ರಮಗಳು ಭಾರತವನ್ನು ಕೊರೋನಾ ಕೂಪದಿಂದ ಕೊಂಚ ಮಟ್ಟಿಗೆ ಮುಕ್ತಿಗೊಳಿಸಿತು ಎನ್ನಬಹುದು.
ಈ ಅಂಶದ ಜೊತೆಗೆ ತಜ್ಞರು ಲಸಿಕೆಗಳು ಸಹ ಪ್ರಕರಣಗಳ ಇಳಿಕೆಗೆ ಸಂಭವನೀಯ ಕಾರಣವಾಗಿದೆ ಎಂದಿದ್ದಾರೆ.
ಇದನ್ನೂ ಓದಿ:Covid 19: ಕೊರೊನಾದ ಹೊಸ ತಳಿ ಬಲು ಅಪಾಯಕಾರಿ, ಲಸಿಕೆ ಪಡೆದವರಿಗೂ ಕೆಟ್ಟ ಸುದ್ದಿ!
ವ್ಯಾಕ್ಸಿನೇಷನ್ ಕಾರಣ ಎಂದ ತಜ್ಞರು
ದಿ ಲ್ಯಾನ್ಸೆಟ್ನಲ್ಲಿ ಇತ್ತೀಚೆಗೆ ಪ್ರಕಟವಾದ ವ್ಯವಸ್ಥಿತ ವಿಮರ್ಶೆಯನ್ನು ಉಲ್ಲೇಖಿಸಿ, ಬೆಂಗಳೂರಿನ ಪಬ್ಲಿಕ್ ಹೆಲ್ತ್ ಫೌಂಡೇಶನ್ ಆಫ್ ಇಂಡಿಯಾದ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಡಾ. ಗಿರಿಧರ ಬಾಬು, ಮಾತನಾಡಿ ವ್ಯಾಕ್ಸಿನೇಷನ್ನಿಂದ ಹೈಬ್ರಿಡ್ ರೋಗನಿರೋಧಕ ಶಕ್ತಿ ಮತ್ತು ಹಿಂದಿನ ಸೋಂಕು ಮರುಸೋಂಕಿನ ವಿರುದ್ಧ ಭಾರತದ ಜನರಿಗೆ ಸಾಕಷ್ಟು ರಕ್ಷಣೆಯನ್ನು ಒದಗಿಸಿದೆ ಎಂದು ತಿಳಿಸಿದರು
ಅಶೋಕ ವಿಶ್ವವಿದ್ಯಾನಿಲಯದ ಜೀವಶಾಸ್ತ್ರ ಮತ್ತು ಭೌತಶಾಸ್ತ್ರದ ಪ್ರಾಧ್ಯಾಪಕ ಗೌತಮ್ ಮೆನನ್ ಮಾತನಾಡಿ, ಹಿಂದಿನ ಡೆಲ್ಟಾ ಮತ್ತು ಓಮಿಕ್ರಾನ್ ಸೋಂಕುಗಳು ಮತ್ತು ವ್ಯಾಕ್ಸಿನೇಷನ್ ಪ್ರಮಾಣಗಳ ಸಂಯೋಜನೆಯಿಂದ ಹೈಬ್ರಿಡ್ ರೋಗನಿರೋಧಕ ಶಕ್ತಿಯಿಂದಾಗಿ ಭಾರತದಲ್ಲಿ ಈ ಉಪತಳಿಗಳ ಉಲ್ಬಣ ಕಂಡು ಬಂದಿಲ್ಲ ಎಂದರು.
ಇನ್ನೋರ್ವ ತಜ್ಞೆ ಡಾ. ಲಹರಿಯಾ ಮಾತನಾಡಿ, ಹೈಬ್ರಿಡ್ ಇಮ್ಯುನಿಟಿ ಜೊತೆಗೆ, ಓಮಿಕ್ರಾನ್ ಸಬ್ವೇರಿಯಂಟ್ಗಳು ಮತ್ತು ರಿಕಾಂಬಿನೆಂಟ್ಗಳ ಕಾರಣದಿಂದಾಗಿ ದೈನಂದಿನ ಹೊಸ ಪ್ರಕರಣಗಳು ಇಳಿಕೆ ಆಗಿವೆ ಎಂದು ಮತ್ತೊಂದು ಸಂಭವನೀಯ ಕಾರಣವನ್ನು ಉಲ್ಲೇಖಿಸಿದರು.
ಓಮಿಕ್ರಾನ್ BA.1 ಮತ್ತು/ಅಥವಾ BA.2.75 ಗೆ ಒಡ್ಡಿಕೊಂಡ ಜನರು ಇತರ ಓಮಿಕ್ರಾನ್ ಉಪವ್ಯತ್ಯಯಗಳ ವಿರುದ್ಧ ನಿರ್ದಿಷ್ಟ ರೀತಿಯ ಪ್ರತಿಕಾಯಗಳನ್ನು ಹೊಂದಿರಬಹುದು. ಅವರು ಮತ್ತೆ ಸೋಂಕಿಗೆ ಒಳಗಾಗಿದ್ದರೆ, ಅವರ ಮೂಗು ಮತ್ತು ಗಂಟಲಿನಲ್ಲಿ ವೈರಸ್ ಗುಣಿಸುವ ಸಾಮರ್ಥ್ಯವು ಶ್ವಾಸಕೋಶದಲ್ಲಿರುತ್ತದೆ. ಇದು ವೈರಸ್ ಅಪಾಯದ ಪ್ರಮಾಣವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ ಎಂದಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯ ಅಂಕಿಅಂಶಗಳಲ್ಲೇನಿದೆ?
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಆಗ್ನೇಯ ಏಷ್ಯಾ (SEARO) ಪ್ರದೇಶದಲ್ಲಿ ಡಿಸೆಂಬರ್ 26 ರಿಂದ ಜನವರಿ 1 ರವರೆಗೆ ಕೋವಿಡ್ ಪ್ರಕರಣಗಳಲ್ಲಿ ಶೇಕಡಾ 26 ರಷ್ಟು ಇಳಿಕೆ ಕಂಡುಬಂದಿದೆ ಎಂದಿದೆ.
ವಿಶ್ವ ಆರೋಗ್ಯ ಸಂಸ್ಥೆಯು ಈ ಪ್ರದೇಶದಲ್ಲಿ, ಟಿಮೋರ್-ಲೆಸ್ಟೆ, ನೇಪಾಳ ಮತ್ತು ಮ್ಯಾನ್ಮಾರ್ನಿಂದ ಹೊಸ ಪ್ರಕರಣಗಳಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಹೆಚ್ಚಳ ವರದಿಯಾಗಿದೆ ಎಂದು ಹೇಳಿದೆ. ಜಾಗತಿಕವಾಗಿ, ಈ ಅವಧಿಯಲ್ಲಿ ಸಾಪ್ತಾಹಿಕ ಪ್ರಕರಣಗಳಲ್ಲಿ ಶೇಕಡಾ 22 ರಷ್ಟು ಇಳಿಕೆ ಕಂಡು ಬಂದಿದೆ.
ಕೋವಿಡ್ -19 ಸಾಂಕ್ರಾಮಿಕವು ಇನ್ನೂ ಜಾಗತಿಕ ತುರ್ತುಸ್ಥಿತಿಯನ್ನು ಪ್ರತಿನಿಧಿಸುತ್ತದೆಯೇ ಎಂದು ಪರಿಗಣಿಸಲು WHO ತುರ್ತು ಸಮಿತಿಯು ಜನವರಿ 27 ರಂದು ಸಭೆ ಸೇರಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ