NTA NEET Result 2020: 720ಕ್ಕೆ 720 ಅಂಕ ಪಡೆಯುವ ಮೂಲಕ ದಾಖಲೆ ನಿರ್ಮಿಸಿದ ಒಡಿಶಾ ಯುವಕ ಶೋಯೆಬ್​

NTA NEET Result 2020: ಕಠಿಣ ಪರೀಕ್ಷೆಗಳಲ್ಲಿ ಒಂದಾಗಿರುವ ನೀಟ್​ ಪರೀಕ್ಷೆಯಲ್ಲಿ ಶೇ 50 ರಷ್ಟು ಅಂಕ ಗಳಿಸಿದರೆ ದೊಡ್ಡ ಸಾಧನೆ. ಅಂತಹದರಲ್ಲಿ ಶೋಯೆಬ್​ ಪೂರ್ಣ ಅಂಕ ಗಳಿಸುವ ಮೂಲಕ ದಾಖಲೆ ಸೃಷ್ಟಿಸಿದ್ದಾನೆ.

 • Share this:
  ನವದೆಹಲಿ (ಅ.16):  ವೈದ್ಯಕೀಯ ಪ್ರವೇಶಕ್ಕೆ ನಡೆಸಲಾಗುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷಾ (NEET​) ಫಲಿತಾಂಶ ಪ್ರಕಟವಾಗಿದೆ. ಈ ಪರೀಕ್ಷೆಯಲ್ಲಿ ಒಡಿಶಾದ ಶೋಯೆಬ್​​ ಆಫ್ತಬ್​ ಟಾಪರ್​ ಆಗಿ ಹೊರ ಹೊಮ್ಮಿದ್ದಾರೆ. ಅಷ್ಟೇ ಅಲ್ಲದೇ, 720ಕ್ಕೆ 720 ಅಂಕ  ಪಡೆಯುವ ಮೂಲಕ ಈತ ಇತಿಹಾಸ ಸೃಷ್ಟಿಸಿದ್ದಾನೆ ಎಂದು ವರದಿಗಳು ತಿಳಿಸಿವೆ. ಒಡಿಶಾದಿಂದ ನೀಟ್​ ಪರೀಕ್ಷೆ ಬರೆದ ಮೊದಲ ವಿದ್ಯಾರ್ಥಿ ಕೂಡ ಈತನಾಗಿದ್ದಾನೆ. ನ್ಯೂಸ್​ ಎಜೆನ್ಸಿಗೆ ಮಾತನಾಡಿರುವ ಈತ, ಕಾಲೇಜ್​ ಮುಗಿದು ಬಳಿಕ ನೇರವಾಗಿ ನಾನು ಕೊಚಿಂಗ್​ಗೆ ತೆರಳುತ್ತಿದ್ದೆ. ಇದಾದ ಬಳಿಕ ದಿನಕ್ಕೆ ಎರಡು ಮೂರು ಗಂಟೆಗಳ ಕಾಲ ಸ್ವಯಂ ಅಭ್ಯಾಸ ಮಾಡುತ್ತಿದ್ದೆ. ಕಠಿಣ ಪರಿಶ್ರಮ ನನ್ನ ಯಶಸ್ಸಿಗೆ ಕಾರಣ ಎಂದಿದ್ದಾನೆ.

  ಶೋಯೆಬ್​ ಪೂರ್ಣ ಅಂಕ ಗಳಿಸುವ ಬಗ್ಗೆ ಈತ ಕೋಚಿಂಗ್​ ಪಡೆಯುತ್ತಿದ್ದ  ಸಂಸ್ಥೆಗೆ ವಿಶ್ವಾಸವಿತ್ತು ಎಂದು ತಿಳಿದು ಬಂದಿದೆ. ಕಾರಣ ಈತ ಕೀ ಉತ್ತರ ಬಿಡುಗಡೆಯಾದಾಗ ಈತ ಬರೆದಿದ್ದನ್ನು ತಾಳೆಹಾಕಲಾಗಿತ್ತು ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

  ಕಠಿಣ ಪರೀಕ್ಷೆಗಳಲ್ಲಿ ಒಂದಾಗಿರುವ ನೀಟ್​ ಪರೀಕ್ಷೆಯಲ್ಲಿ ಶೇ 50 ರಷ್ಟು ಅಂಕ ಗಳಿಸಿದರೆ ದೊಡ್ಡ ಸಾಧನೆ. ಅಂತಹದರಲ್ಲಿ ಶೋಯೆಬ್​ ಪೂರ್ಣ ಅಂಕ ಗಳಿಸುವ ಮೂಲಕ ದಾಖಲೆ ಸೃಷ್ಟಿಸಿದ್ದಾನೆ.

  ವೈದ್ಯಕೀಯ ಮತ್ತು ದಂತವೈದ್ಯಕೀಯ ಕಾಲೇಜು ಪ್ರವೇಶಕ್ಕೆ ರಾಷ್ಟ್ರೀಯ ವೈದ್ಯಕೀಯ ಆಯೋಗ ಕೌನ್ಸೆಲಿಂಗ್​  ಮೂಲಕ ಪ್ರವೇಶ ನಡೆಸುತ್ತದೆ. 2020ರ ಈ ವರ್ಷದಲ್ಲಿ 14.37 ಲಕ್ಷ ಜನರು ನೀಟ್​ ಪರೀಕ್ಷೆ ಎದುರಿಸಿದ್ದರು.

  ನೀಟ್ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳು ಫಲಿತಾಂಶವನ್ನು ntaneet.nic.in ವೆಬ್​ಸೈಟ್​ನಲ್ಲಿ ವೀಕ್ಷಿಸಬಹುದು ಫಲಿತಾಂಶ ವೀಕ್ಷಿಸಲು ವಿದ್ಯಾರ್ಥಿಗಳು ಅಡ್ಮಿಟ್​ ಕಾರ್ಡ್​ನಲ್ಲಿ ತಮ್ಮ ರೋಲ್ ನಂಬರ್ ದಾಖಲಿಸಬೇಕು.  nta.ac.inntaneet.nic.in ವೆಬ್​ಸೈಟ್​ನಲ್ಲಿ ಫಲಿತಾಂಶವನ್ನು ವೀಕ್ಷಿಸಬಹುದು. ಅಥವಾ ಇಲ್ಲಿ ಕ್ಲಿಕ್ ಮಾಡುವ ಮೂಲಕವೂ ಫಲಿತಾಂಶ ವೀಕ್ಷಿಸಬಹುದು.
  Published by:Seema R
  First published: