NEET 2021: ನೀಟ್ ಎಕ್ಸಾಂ ಸೆಂಟರ್, ಪರೀಕ್ಷೆಗೆ ತಯಾರಾಗುವ ಬಗ್ಗೆ ನಿಮ್ಮೆಲ್ಲಾ ಗೊಂದಲಗಳಿಗೆ ಇಲ್ಲಿದೆ ಉತ್ತರ

ನೀವು 2021ನೇ ವರ್ಷದ ನೀಟ್ ಪರೀಕ್ಷೆಗೆ ಹಾಜರಾಗುತ್ತಿದ್ದರೆ ನಿಮ್ಮ ಪರೀಕ್ಷಾ ಕೇಂದ್ರವನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ ಅಧಿಕೃತ ವೆಬ್‌ಸೈಟ್ neet.nta.nic.inನಲ್ಲಿ ಪರಿಶೀಲಿಸಬಹುದಾಗಿದೆ. ಇದಕ್ಕೆ ಈ ಕೆಳಕಂಡ ಸುಲಭವಾದ ಮಾರ್ಗವನ್ನು ಅನುಸರಿಸಿರಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

ದ್ವಿತೀಯ ಪಿಯುಸಿ ಪರೀಕ್ಷೆ ಮುಗಿಸಿ ಫಲಿತಾಂಶ ಪಡೆದುಕೊಂಡು ತಮ್ಮ ಮುಂದಿನ ವಿದ್ಯಾಭ್ಯಾಸದ ಮುಖ್ಯವಾದ ಘಟ್ಟವನ್ನು ನಿರ್ಧರಿಸುವಂತಹ ನೀಟ್ ಪರೀಕ್ಷೆಯೂ ಈಗಾಗಲೇ ವಿದ್ಯಾರ್ಥಿಗಳ ನಿದ್ದೆ ಕೆಡಿಸಿರುತ್ತದೆ.ಪರೀಕ್ಷೆಗೆ ಓದಿಕೊಂಡು ಸಿದ್ದವಾಗುವುದು ಒಂದು ಕಡೆಯಾದರೆ, ಇನ್ನೊಂದು ಕಡೆ ವಿದ್ಯಾರ್ಥಿಗಳಿಗೆ ತಮ್ಮ ಪರೀಕ್ಷಾ ಕೇಂದ್ರ ಎಲ್ಲಿದೆ ಮತ್ತು ಇನ್ನಿತರೆ ಚಿಕ್ಕ ಪುಟ್ಟ ಸಂಗತಿಗಳ ಬಗ್ಗೆ ಅನೇಕ ಗೊಂದಲಗಳಿರುವುದು ಸಹಜ. ನೀವು ಈ ಬಾರಿಯ ನೀಟ್ ಪರೀಕ್ಷೆ ಬರೆಯುತ್ತಿದ್ದು, ಪರೀಕ್ಷೆಗೆ ತುಂಬಾ ಚೆನ್ನಾಗಿ ತಯಾರಿ ಮಾಡಿಕೊಂಡರೂ ನಿಮಗೆ ಪರೀಕ್ಷಾ ಕೇಂದ್ರಗಳ ಬಗ್ಗೆ ಮತ್ತು ಇನ್ನಿತರೆ ವಿಚಾರಗಳನ್ನು ಹೇಗೆ ಪರಿಶೀಲಿಸಿಕೊಳ್ಳುವುದು ಎಂದು ಗೊಂದಲವಿದ್ದರೆ, ನಿಮಗಾಗಿ ಇಲ್ಲಿವೆ ಕೆಲವು ಸುಲಭವಾದ ಟಿಪ್ಸ್.


ಸೆಪ್ಟೆಂಬರ್ 12ರಂದು ನಿಗದಿಯಾಗಿರುವ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯ (ನೀಟ್) ಪರೀಕ್ಷಾ ಕೇಂದ್ರಗಳನ್ನು ನೀವು ನಿಮ್ಮ ಪರೀಕ್ಷಾ ಅರ್ಜಿಯಲ್ಲಿ ಆಯ್ಕೆ ಮಾಡಿದಂತಹ ನಗರಗಳಿಗೆ ಅನುಸಾರವಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಪ್ರಕಟಿಸಿದೆ.


ನೀವು 2021ನೇ ವರ್ಷದ ನೀಟ್ ಪರೀಕ್ಷೆಗೆ ಹಾಜರಾಗುತ್ತಿದ್ದರೆ ನಿಮ್ಮ ಪರೀಕ್ಷಾ ಕೇಂದ್ರವನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ ಅಧಿಕೃತ ವೆಬ್‌ಸೈಟ್ neet.nta.nic.inನಲ್ಲಿ ಪರಿಶೀಲಿಸಬಹುದಾಗಿದೆ. ಇದಕ್ಕೆ ಈ ಕೆಳಕಂಡ ಸುಲಭವಾದ ಮಾರ್ಗವನ್ನು ಅನುಸರಿಸಿರಿ.


ಇದನ್ನೂ ಓದಿ:Actress Chitra Passed Away: ಮಲೆಯಾಳಂನ ಖ್ಯಾತ ನಟಿ ಚಿತ್ರಾ ಹೃದಯಾಘಾತದಿಂದ ನಿಧನ

ಹಂತ 1:ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಅಧಿಕೃತ ವೆಬ್‌ಸೈಟ್ neet.nta.nic.inಗೆ ಮೊದಲು ಲಾಗ್ ಇನ್ ಮಾಡಿ.


ಹಂತ 2:ಅಲ್ಲೇ ಇರುವಂತಹ 'ಪರೀಕ್ಷಾ ಕೇಂದ್ರ ಮತ್ತು ನಗರ ಹಂಚಿಕೆ’ ಲಿಂಕ್ ಅನ್ನು ಕ್ಲಿಕ್ ಮಾಡಿರಿ.


ಹಂತ 3:ಮುಂದೆ, ನೀಟ್ 2021 ಅರ್ಜಿ ಸಂಖ್ಯೆ, ಹುಟ್ಟಿದ ದಿನಾಂಕ ಮತ್ತು ನಿಮ್ಮ ಪಾಸ್‌ವರ್ಡ್ ನಮೂದಿಸಿ ನಂತರ ಸಲ್ಲಿಸಿರಿ.


ಹಂತ 4:ನಿಗದಿಪಡಿಸಿದ ನೀಟ್ ಪರೀಕ್ಷಾ ಕೇಂದ್ರ ಮತ್ತು ನಗರವನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ವೀಕ್ಷಿಸಿರಿ.


ಈ ಮಧ್ಯೆ, ನೀಟ್ ಪ್ರವೇಶ ಪತ್ರಗಳನ್ನು ಸೆಪ್ಟೆಂಬರ್ 9ರಂದು ನೀಡಲಾಗುವುದು. ಪರೀಕ್ಷೆಯ ನಿಗದಿತ ದಿನಾಂಕಕ್ಕೆ (ಸೆಪ್ಟೆಂಬರ್ 12) ಮೂರು ದಿನಗಳ ಮೊದಲು ಇದನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ.


ನೀಟ್-ಯುಜಿ 2021 ಪರೀಕ್ಷೆಯು ಮಧ್ಯಾಹ್ನ 2 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮೂರು ಗಂಟೆಗಳ ಕಾಲ ನಡೆಯುತ್ತದೆ. ಈ ಪರೀಕ್ಷೆಯ ಫಲಿತಾಂಶದ ಆಧಾರದ ಮೇಲೆ ಪದವಿಪೂರ್ವ ವೈದ್ಯಕೀಯ/ದಂತ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ನೀಡಲಾಗುತ್ತದೆ.


ಇದನ್ನೂ ಓದಿ:Petrol Price Today: 3 ದಿನಗಳಿಂದ ಇಳಿಕೆ ಕಂಡಿದ್ದ ಡೀಸೆಲ್​ ದರ ಇಂದು ಸ್ಥಿರ; ಪೆಟ್ರೋಲ್​ ಬೆಲೆಯಲ್ಲೂ ಯಥಾಸ್ಥಿತಿ

ಇದೇ ಮೊದಲ ಬಾರಿಗೆ ನೀಟ್ 2021 ಪರೀಕ್ಷೆಯನ್ನು ದುಬೈನಲ್ಲಿರುವ ವೈದ್ಯಕೀಯ ವಿದ್ಯಾಭ್ಯಾಸ ಆಕಾಂಕ್ಷಿಗಳಿಗಾಗಿ ಅನುಕೂಲವಾಗಲು ಹಲವಾರು ಹೆಚ್ಚುವರಿ ಪರೀಕ್ಷಾ ಕೇಂದ್ರಗಳನ್ನು ನಿಗದಿಪಡಿಸಿದ್ದಾರೆ.


ತಮಿಳುನಾಡಿನ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನಾಲ್ಕು ಹೊಸ ನಗರಗಳಾದ ಚೆಂಗಲಪೇಟ್, ವಿರುಧುನಗರ, ದಿಂಡಿಗಲ್ ಮತ್ತು ತಿರುಪ್ಪೂರುಗಳಲ್ಲಿಯೂ ಪರೀಕ್ಷಾ ಕೇಂದ್ರಗಳನ್ನು ನಿಗದಿಪಡಿಸಿದೆ. ನೀಟ್ ಪರೀಕ್ಷಾ ಕೇಂದ್ರಗಳ ನಗರಗಳನ್ನು ಈ ವರ್ಷ 155 ರಿಂದ 198ಕ್ಕೆ ಹೆಚ್ಚಿಸಲಾಗಿದೆ. ಕಳೆದ ವರ್ಷ 3,862 ಪರೀಕ್ಷಾ ಕೇಂದ್ರಗಳಿದ್ದು, ಈ ಬಾರಿ ಈ ಸಂಖ್ಯೆಯನ್ನೂ ಹೆಚ್ಚಿಸಲಾಗಿದೆ.
ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

Published by:Latha CG
First published: