ಮೋದಿ ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿಯಾಗಿ ನೃಪೇಂದ್ರ ಮಿಶ್ರಾ ಮರುನೇಮಕ

ನೃಪೇಂದ್ರ ಮಿಶ್ರಾ 1967ನೇ ಬ್ಯಾಚ್​ನ ಐಎಎಸ್​​ ಅಧಿಕಾರಿ. ಈಗ ಅವರು ನಿವೃತ್ತಿ ಹೊಂದಿದ್ದಾರೆ. ಕಳೆದ ಬಾರಿಯೂ ಪ್ರಧಾನಿ ನರೇಂದ್ರ ಮೋದಿ ಕಾರ್ಯಾಲಯದಲ್ಲಿ ಅವರು ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.

Rajesh Duggumane | news18
Updated:June 12, 2019, 8:08 AM IST
ಮೋದಿ ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿಯಾಗಿ ನೃಪೇಂದ್ರ ಮಿಶ್ರಾ ಮರುನೇಮಕ
ನೃಪೇಂದ್ರ ಮಿಶ್ರಾ
  • News18
  • Last Updated: June 12, 2019, 8:08 AM IST
  • Share this:
ನವದೆಹಲಿ (ಜೂ. 12): ಪ್ರಧಾನಿ ನರೇಂದ್ರ ಮೋದಿ ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿಯಾಗಿ ನೃಪೇಂದ್ರ ಮಿಶ್ರಾ ಅವರನ್ನು ಮರುನೇಮಕ ಮಾಡಲಾಗಿದೆ.

ಮಂಗಳವಾರ ನಡೆದ ನೇಮಕ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಮೇ 31ರಿಂದಲೇ ಈ ನೇಮಕಾತಿ ಅನ್ವಯಗೊಂಡಿದೆ. ಉಳಿದಂತೆ ಪಿಕೆ ಮಿಶ್ರಾ ಅವರು ಹೆಚ್ಚುವರಿ ಪ್ರಧಾನ ಕಾರ್ಯದರ್ಶಿಯಾಗಿ ಮರು ನೇಮಕವಾಗಿದ್ದಾರೆ. ರಾಷ್ಟ್ರೀಯ ಭದ್ರತಾ ಕಾರ್ಯದರ್ಶಿಯಾಗಿ ಈ ಮೊದಲು ಅಜಿತ್​ ದೋವಲ್​ ಅವರನ್ನುಪ್ರಧಾನಿ ಕಾರ್ಯಾಲಯ ಮತ್ತೆ ನೇಮಿಸಿಕೊಂಡಿತ್ತು.

ನೃಪೇಂದ್ರ ಮಿಶ್ರಾ 1967ನೇ ಬ್ಯಾಚ್​ನ ಐಎಎಸ್​​ ಅಧಿಕಾರಿ. ಈಗ ಅವರು ನಿವೃತ್ತಿ ಹೊಂದಿದ್ದಾರೆ. ಕಳೆದ ಬಾರಿಯೂ ಪ್ರಧಾನಿ ನರೇಂದ್ರ ಮೋದಿ ಕಾರ್ಯಾಲಯದಲ್ಲಿ ಅವರು ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಅವರ ಕಾರ್ಯವನ್ನು ಮೆಚ್ಚಿ ಮತ್ತೆ ಕೆಲಸಕ್ಕೆ ನಿಯೋಜನೆ ಮಾಡಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಎರಡನೇ ಬಾರಿಗೆ ಮೇ 30ರಂದು ಅಧಿಕಾರ ಸ್ವೀಕರಿಸಿದ್ದರು. ಮೇ 31ರಿಂದ ಅವರ ಕಾರ್ಯ ಆರಂಭಗೊಂಡಿತ್ತು.

ಇದನ್ನೂ ಓದಿ: ಮೋದಿ ಸಚಿವ ಸಂಪುಟದಲ್ಲಿ ಕರ್ನಾಟಕಕ್ಕೆ ಬಂಪರ್​ 4 ಸ್ಥಾನ; ಯಾರವರು? ಇಲ್ಲಿದೆ ಪೂರ್ಣ ಮಾಹಿತಿ

First published:June 12, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ