HOME » NEWS » National-international » NRC TO BE HELD THROUGHOUT INDIA SAYS AMIT SHAH ASSURES NO DISCRIMINATION ON RELIGIOUS BASIS VS

ದೇಶಾದ್ಯಂತ ಎನ್ಆರ್​ಸಿ ಆಗುತ್ತದೆ; ಯಾವ ಧರ್ಮೀಯರಿಗೂ ಅನ್ಯಾಯವಾಗುವುದಿಲ್ಲ: ರಾಜ್ಯಸಭೆಯಲ್ಲಿ ಅಮಿತ್ ಶಾ ಹೇಳಿಕೆ

ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ತಾನದಲ್ಲಿ ಧಾರ್ಮಿಕ ದೌರ್ಜನ್ಯಕ್ಕೊಳಗಾಗಿ ದೇಶ ಬಿಟ್ಟು ವಲಸೆ ಬಂದ ಹಿಂದೂ, ಬೌದ್ಧ, ಜೈನ, ಸಿಖ್ ಮತ್ತು ಪಾರ್ಸಿ ಜನಾಂಗೀಯರಿಗೆ ಭಾರತೀಯ ಪೌರತ್ವವನ್ನು ಕಲ್ಪಿಸಲಾಗುವುದು ಎಂದು ಅಮಿತ್ ಶಾ ತಿಳಿಸಿದ್ದಾರೆ.

Vijayasarthy SN | news18
Updated:November 20, 2019, 4:59 PM IST
ದೇಶಾದ್ಯಂತ ಎನ್ಆರ್​ಸಿ ಆಗುತ್ತದೆ; ಯಾವ ಧರ್ಮೀಯರಿಗೂ ಅನ್ಯಾಯವಾಗುವುದಿಲ್ಲ: ರಾಜ್ಯಸಭೆಯಲ್ಲಿ ಅಮಿತ್ ಶಾ ಹೇಳಿಕೆ
ಅಮಿತ್ ಶಾ
  • News18
  • Last Updated: November 20, 2019, 4:59 PM IST
  • Share this:
ನವದೆಹಲಿ(ನ. 20): ಅಸ್ಸಾಮ್ ರಾಜ್ಯದಲ್ಲಿ ಅನುಷ್ಢಾನಕ್ಕೆ ಬಂದಿರುವ ರಾಷ್ಟ್ರೀಯ ಪೌರತ್ವ ನೊಂದಣಿ (ಎನ್​ಆರ್​ಸಿ) ಯೋಜನೆಯನ್ನು ಇಡೀ ದೇಶದಲ್ಲಿ ಜಾರಿಗೆ ತರಲಾಗುವುದು ಎಂದು ಅಮಿತ್ ಶಾ ತಿಳಿಸಿದರು. ರಾಜ್ಯಸಭೆಯಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವರು, ಎನ್​ಆರ್​ಸಿ ಯೋಜನೆಗೆ ಧಾರ್ಮಿಕ ತಾರತಮ್ಯ ಇರುವುದಿಲ್ಲ ಎಂದೂ ಸ್ಪಷ್ಟಪಡಿಸಿದರು.

“ದೇಶಾದ್ಯಂತ ಎನ್​ಆರ್​ಸಿ ಯೋಜನೆ ಜಾರಿಗೊಳಿಸಲಾಗುವುದು. ಯಾವುದೇ ಧರ್ಮದವರೂ ಕಳವಳಪಡುವ ಅಗತ್ಯವಿಲ್ಲ. ಪ್ರತಿಯೊಬ್ಬರನ್ನೂ ಎನ್​ಆರ್​ಸಿ ವ್ಯಾಪ್ತಿಗೆ ತರುವುದೇ ಇದರ ಉದ್ದೇಶ” ಎಂದು ಅಮಿತ್ ಶಾ ಹೇಳಿದರು.

ಇದನ್ನೂ ಓದಿ: ವಿಶ್ವಕ್ಕೇ ಅಚ್ಚರಿ ಮೂಡಿಸಿದ 16 ವರ್ಷದ ಗ್ರೆಟಾ ಥನ್​ಬರ್ಗ್ ಮತ್ತು 120 ವರ್ಷದ ಹಳೆಯ ಫೋಟೋ

ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ತಾನದಲ್ಲಿ ಧಾರ್ಮಿಕ ದೌರ್ಜನ್ಯಕ್ಕೊಳಗಾಗಿ ದೇಶ ಬಿಟ್ಟು ವಲಸೆ ಬಂದ ಹಿಂದೂ, ಬೌದ್ಧ, ಜೈನ, ಸಿಖ್ ಮತ್ತು ಪಾರ್ಸಿ ಜನಾಂಗೀಯರಿಗೆ ಭಾರತೀಯ ಪೌರತ್ವವನ್ನು ಕಲ್ಪಿಸಲಾಗುವುದು ಎಂದು ಹೇಳಿದ ಶಾ, ಭಾರತೀಯ ಪೌರತ್ವ ಹೊಂದಿರುವ ಯಾವುದೇ ಧರ್ಮದವರು ಕಳವಳ ಪಡುವ ಅಗತ್ಯವಿಲ್ಲವೆಂದೂ ಭರವಸೆ ನೀಡಿದರು.

“ಭಾರತೀಯ ನಾಗರಿಕರಾಗಿರುವ ಎಲ್ಲಾ ಧರ್ಮೀಯರನ್ನೂ ಎನ್​ಆರ್​ಸಿ ಪಟ್ಟಿಯಲ್ಲಿ ಒಳಗೊಳ್ಳಲಾಗುವುದು. ಧರ್ಮದ ಆಧಾರದ ಮೇಲೆ ಜನರನ್ನು ಆರಿಸುವ ಪ್ರಶ್ನೆಯೇ ಇಲ್ಲ. ಪೌರತ್ವ ತಿದ್ದುಪಡಿ ಮಸೂದೆಗೂ ಎನ್​ಆರ್​ಸಿಗೂ ವ್ಯತ್ಯಾಸವಿದೆ” ಎಂದು ಕೇಂದ್ರ ಗೃಹ ಸಚಿವರು ತಿಳಿಸಿದರು.

ಇದನ್ನೂ ಓದಿ: ಚಳಿಗಾಲದ ಅಧಿವೇಶನ: ಕಾಶ್ಮೀರದಲ್ಲಿ ಸಹಜ ಸ್ಥಿತಿ, ಸೂಕ್ತ ಸಮಯದಲ್ಲಿ ಇಂಟರ್​ನೆಟ್ ಸೇವೆ ಪುನಃಸ್ಥಾಪನೆ ಭರವಸೆ ನೀಡಿದ ಅಮಿತ್​ ಶಾ

ಪಾಕಿಸ್ತಾನ, ಆಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ ಅಕ್ರಮವಾಗಿ ವಲಸೆ ಬಂದಿರುವವರನ್ನು ಗುರುತಿಸುವುದು ಎನ್​ಆರ್​ಸಿ ಯೋಜನೆಯಾಗಿದೆ. ಹಾಗೆಯೆ, ಮುಸ್ಲಿಮೇತರ ವಲಸಿಗರಿಗೆ ಭಾರತೀಯ ಪೌರತ್ವ ನೀಡುವ ಮೂಲಕ ಅಕ್ರಮ ಮುಸ್ಲಿಮ್ ವಲಸಿಗರನ್ನು ಪ್ರತ್ಯೇಕಿಸುವುದು ಈ ಯೋಜನೆಯ ಆಶಯವಾಗಿದೆ. ಭಾರತೀಯ ಪೌರತ್ವ ಹೊಂದಿರುವವರನ್ನು ಎನ್​ಆರ್​ಸಿ ಪಟ್ಟಿಗೆ ಸೇರಿಸಲಾಗುತ್ತದೆ. ಈ ಪಟ್ಟಿಯಲ್ಲಿ ಇಲ್ಲದವರನ್ನು ಅಕ್ರಮ ನಿವಾಸಿಗಳೆಂದು ಪರಿಗಣಿಸಲಾಗುತ್ತದೆ. ಇಂಥವರಿಗೆಂದೇ ದೇಶಾದ್ಯಂತ ಎಲ್ಲಾ ರಾಜ್ಯಗಳಲ್ಲೂ ಡಿಟೆನ್ಷನ್ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ.ಅಸ್ಸಾಮ್ ರಾಜ್ಯದಲ್ಲಿ ಈಗಾಗಲೇ ಎನ್​ಆರ್​ಸಿ ಯೋಜನೆ ಜಾರಿಯಲ್ಲಿದೆ. ಇಲ್ಲಿ ಅಂತಿಮ ಎನ್​ಆರ್​ಸಿ ಪಟ್ಟಿ ಪ್ರಕಟವಾಗಿದೆ. ಆದರೆ, ಪಟ್ಟಿಯಲ್ಲಿ ಅಕ್ರಮ ವಲಸಿಗರ ಹೆಸರುಗಳಿವೆ, ಸ್ಥಳೀಯ ನಿವಾಸಿಗಳ ಹೆಸರು ಇಲ್ಲ ಎಂಬ ಟೀಕೆಗಳು ಕೇಳಿಬರುತ್ತಿವೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published: November 20, 2019, 4:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories