ಕೇಂದ್ರದ ಎನ್ಆರ್​ಸಿ ಯೋಜನೆಗೆ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೋಯ್ ಬೆಂಬಲ; ಕಟು ವಿಮರ್ಶೆಗೆ ಬೇಸರ

“ಎನ್​ಆರ್​ಸಿ ವಿಚಾರದ ಬಗ್ಗೆ ಅನೇಕ ಜನರು ಸೋಷಿಯಲ್ ಮೀಡಿಯಾ ಬಳಸಿಕೊಂಡು ಇಲ್ಲಸಲ್ಲದ್ದನ್ನು ಮಾತನಾಡುತ್ತಿದ್ದಾರೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಕಟು ವಿಮರ್ಶೆ ನಡೆಸಿದ್ದಾರೆ. ಎನ್​ಆರ್​ಸಿ ಯೋಜನೆ ಬಗ್ಗೆ ಈ ಜನರು ಮಾಡುತ್ತಿರುವ ಆರೋಪಗಳಿಗೆ ಸತ್ಯಾಂಶವಿಲ್ಲ” ಎಂದು ಸಿಜೆಐ ಟೀಕಿಸಿದ್ದಾರೆ.

news18
Updated:November 3, 2019, 7:05 PM IST
ಕೇಂದ್ರದ ಎನ್ಆರ್​ಸಿ ಯೋಜನೆಗೆ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೋಯ್ ಬೆಂಬಲ; ಕಟು ವಿಮರ್ಶೆಗೆ ಬೇಸರ
ರಂಜನ್ ಗೊಗೋಯ್
  • News18
  • Last Updated: November 3, 2019, 7:05 PM IST
  • Share this:
ನವದೆಹಲಿ(ನ. 03): ಸಾಕಷ್ಟು ವಿವಾದಕ್ಕೆ ಮತ್ತು ಟೀಕೆಗಳಿಗೆ ಗುರಿಯಾಗಿರುವ ರಾಷ್ಟ್ರೀಯ ಪೌರತ್ವ ನೊಂದಣಿ (ಎನ್​ಆರ್​ಸಿ) ಯೋಜನೆಯನ್ನು ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಇಂದು ಸಮರ್ಥಿಸಿಕೊಂಡಿದ್ದಾರೆ. ಅಸ್ಸಾಮ್​ನಲ್ಲಿ ಜಾರಿಯಾಗಿರುವ ಎನ್​ಆರ್​ಸಿ ಭವಿಷ್ಯದ ಉಲ್ಲೇಖಕ್ಕಾಗಿ ಒಂದು ಮೂಲ ದಾಖಲೆಯಾಗಿರಲಿದೆ. ಒಂದು ನಿರ್ದಿಷ್ಟ ಚೌಕಟ್ಟಿನಲ್ಲಿ ಸಮಸ್ಯೆಗೆ ಪರಿಹಾರ ಒದಗಿಸುತ್ತದೆ ಎಂದು ಮುಖ್ಯ ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.

“ಈ ಕ್ಷಣಕ್ಕೆ ಎನ್​ಆರ್​ಸಿ ಉಪಯುಕ್ತವೆನಿಸದೇ ಇರಬಹುದು. ಪೌರತ್ವ ಪಟ್ಟಿಯಿಂದ 19 ಲಕ್ಷ ಅಥವಾ 40 ಲಕ್ಷ ಜನರು ಹೊರಗಿದ್ದಾರೆಂಬುದು ಮುಖ್ಯವಲ್ಲ. ಆದರೆ, ಇದು ಭವಿಷ್ಯಕ್ಕಾಗಿ ಒಂದು ಮೂಲ ದಾಖಲೆಯಾಗಿದೆ. ಭವಿಷ್ಯದ ಉಲ್ಲೇಖಕ್ಕಾಗಿ ಈ ದಾಖಲೆಯನ್ನು ಉಪಯೋಗಿಸಬಹುದು. ಶಾಂತಿಯು ಸಹಭಾಳ್ವೆಯು ಎನ್​ಆರ್​ಸಿ ಮೂಲಾಶಯವಾಗಿದೆ. ಯಾವಾಗಲೂ ಒಳಗೊಳ್ಳುವಿಕೆಯು ಪ್ರಗತಿಪರ ಸಮಾಜದ ಆಶಯವಾಗಿದೆ” ಎಂದು ರಂಜನ್ ಗೊಗೋಯ್ ಹೇಳಿದ್ದಾರೆ.

ಇದನ್ನೂ ಓದಿ: ದೆಹಲಿ ಹವಾಮಾನ ವೈಪರೀತ್ಯ: 37 ವಿಮಾನಗಳ ಮಾರ್ಗ ಬದಲಾವಣೆ: ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

“ಪೋಸ್ಟ್ ಕೊಲೋನಿಯಲ್ ಅಸ್ಸಾಮ್” ಎಂಬ ಪುಸ್ತಕದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಿದ್ದ ಮುಖ್ಯನ್ಯಾಯಮೂರ್ತಿಗಳು, ಎನ್​ಆರ್​ಸಿ ಬಗ್ಗೆ ಅಪಪ್ರಚಾರ ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

“ಎನ್​ಆರ್​ಸಿ ವಿಚಾರದ ಬಗ್ಗೆ ಅನೇಕ ಜನರು ಸೋಷಿಯಲ್ ಮೀಡಿಯಾ ಬಳಸಿಕೊಂಡು ಇಲ್ಲಸಲ್ಲದ್ದನ್ನು ಮಾತನಾಡುತ್ತಿದ್ದಾರೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಕಟು ವಿಮರ್ಶೆ ನಡೆಸಿದ್ದಾರೆ. ಎನ್​ಆರ್​ಸಿ ಯೋಜನೆ ಬಗ್ಗೆ ಈ ಜನರು ಮಾಡುತ್ತಿರುವ ಆರೋಪಗಳಿಗೆ ಸತ್ಯಾಂಶವಿಲ್ಲ” ಎಂದು ಸಿಜೆಐ ಟೀಕಿಸಿದ್ದಾರೆ.

ಇದನ್ನೂ ಓದಿ: ಮೋದಿ ಸರ್ಕಾರ ಇಸ್ರೇಲಿ ಸಂಸ್ಥೆಗಳ ಮೂಲಕ ಫೋನ್ ಕದ್ದಾಲಿಸುತ್ತಿದೆ: ಮಮತಾ ಬ್ಯಾನರ್ಜಿ ಗಂಭೀರ ಆರೋಪ

ರಾಷ್ಟ್ರೀಯ ಪೌರತ್ವ ನೊಂದಣಿಯನ್ನು ಕೇಂದ್ರ ಸರ್ಕಾರ ಅಸ್ಸಾಮ್ ರಾಜ್ಯದಲ್ಲಿ ಮೊದಲು ಅನುಷ್ಠಾನಕ್ಕೆ ತಂದಿದೆ. ಇಲ್ಲಿ ಅಕ್ರಮ ಬಾಂಗ್ಲಾದೇಶಿಗರು ನೆಲಸಿದ್ದಾರೆಂಬುದು ಅಸ್ಸಾಮಿಗರ ಹಲವು ವರ್ಷಗಳಿಂದ ಕೇಳಿಬರುತ್ತಿದ್ದ ಆರೋಪವಾಗಿದೆ. ಹೀಗಾಗಿ, ಅಕ್ರಮ ಬಾಂಗ್ಲಾದೇಶಿ ವಲಸಿಗರನ್ನು ಗುರುತಿಸಲೆಂದು ಎನ್​ಆರ್​ಸಿ ಜಾರಿಗೆ ತರಲಾಗಿದೆ. 1971, ಮಾರ್ಚ್ 24ಕ್ಕಿಂತ ಮುಂಚಿನಿಂದ ಅಸ್ಸಾಮ್​ನಲ್ಲಿ ವಾಸಿಸುತ್ತಿರುವವರನ್ನು ಗುರುತಿಸಿ ಅವರನ್ನು ಎನ್​ಆರ್​ಸಿ ಪಟ್ಟಿಗೆ ಸೇರಿಸುವುದು ಈ ಯೋಜನೆಯಾಗಿದೆ. ಈ ಮೂಲಕ ಅಕ್ರಮ ಬಾಂಗ್ಲಾದೇಶಿ ವಲಸಿಗರನ್ನು ಗುರುತಿಸುವುದು ಮುಖ್ಯ ಉದ್ದೇಶವಾಗಿದೆ. ಎನ್​ಆರ್​ಸಿ ಅಂತಿಮ ಪಟ್ಟಿಯಲ್ಲಿ 19 ಲಕ್ಷದಷ್ಟು ಜನರ ಹೆಸರನ್ನು ಕೈಬಿಡಲಾಗಿದೆ. ಅಂದರೆ ಇವರು ಸದ್ಯಕ್ಕೆ ಶಂಕಿತ ಅಕ್ರಮ ವಲಸಿಗರೆಂದು ಪರಿಗಣಿಸಲಾಗಿದೆ. ಈಗಲೂ ಇವರು ತಮ್ಮ ಭಾರತೀಯ ಪೌರತ್ವ ಸಾಬೀತುಪಡಿಸಲು ಸ್ವಲ್ಪ ಕಾಲಾವಕಾಶವಿದೆ.ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published:November 3, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading