HOME » NEWS » National-international » NOW WE CAN BRING KASHMIRI GIRLS FOR MARRIAGE HARYANA CM KHATTAR GIVES STATMENT AT BETI BACHAO EVENT MAK

ಕಲಂ 370 ರದ್ಧತಿಯಿಂದ ಇನ್ನು ನಮ್ಮ ಯುವಕರಿಗೆ ಕಾಶ್ಮೀರದ ಕನ್ಯೆ ತರಬಹುದು: ವಿವಾದಾದ್ಮತ ಹೇಳಿಕೆ ನೀಡಿದ ಹರಿಯಾಣ ಸಿಎಂ!

ಕಾಶ್ಮೀರದ ಹೆಣ್ಣು ಮಕ್ಕಳ ಕುರಿತ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರ ಈ ಹೇಳಿಕೆ ಇದೀಗ ರಾಷ್ಟ್ರ ಮಟ್ಟದಲ್ಲಿ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಆದರೆ, ಬಿಜೆಪಿ ನಾಯಕರು ಕಲಂ 370 ರದ್ದತಿಯನ್ನು ಉಲ್ಲೇಖಿಸಿ ಕಾಶ್ಮೀರಿ ಹೆಣ್ಣು ಮಕ್ಕಳ ಕುರಿತು ಕೀಳು ಅಭಿರುಚಿಯ ಮಾತುಗಳನ್ನು ಆಡುತ್ತಿರುವುದು ಇದೇ ಮೊದಲೇನಲ್ಲ.

MAshok Kumar | news18
Updated:August 10, 2019, 3:32 PM IST
ಕಲಂ 370 ರದ್ಧತಿಯಿಂದ ಇನ್ನು ನಮ್ಮ ಯುವಕರಿಗೆ ಕಾಶ್ಮೀರದ ಕನ್ಯೆ ತರಬಹುದು: ವಿವಾದಾದ್ಮತ ಹೇಳಿಕೆ ನೀಡಿದ ಹರಿಯಾಣ ಸಿಎಂ!
ಹರಿಯಾಣ ಸಿಎಂ ಮನೋಹರ್​ ಲಾಲ್​ ಖಟ್ಟರ್​.
  • News18
  • Last Updated: August 10, 2019, 3:32 PM IST
  • Share this:
ನವ ದೆಹಲಿ (ಆಗಸ್ಟ್.10); ಕೇಂದ್ರ ಸರ್ಕಾರ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ ಕಲಂ 370 ಅನ್ನು ರದ್ದು ಮಾಡಿದೆ, ಇನ್ನು ನಮ್ಮ ರಾಜ್ಯದ ಯುವಕರ ಮದುಗೆ ಕಾಶ್ಮೀರದಿಂದ ಹುಡುಗಿಯರನ್ನು ತರಬಹುದು ಎಂದು ಹೇಳುವ ಮೂಲಕ ಹರಿಯಾಣ ರಾಜ್ಯದ ಬಿಜೆಪಿ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಹೊಸದೊಂದು ವಿವಾದವನ್ನು ಹುಟ್ಟುಹಾಕಿದ್ದಾರೆ.

ಶನಿವಾರ ಇಲ್ಲಿನ ಫತೇಹಾಬಾದ್ ನಲ್ಲಿ ಆಯೋಜಿಸಲಾಗಿದ್ದ ಮಹರ್ಷಿ ಭಾಗೀರಥ್ ಜಯಂತಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, “ನಮ್ಮ ಕ್ಯಾಬಿನೆಟ್ ಸಚಿವ ಓಪಿ ಧಂಕರ್ ಹರಿಯಾಣದಲ್ಲಿ ಲಿಂಗಾನುಪಾತ ಏರಿಳಿತವಾಗಿದ್ದು, ಇಲ್ಲಿನ ಯುವಕರ ಮದುವೆಗೆ ಬಿಹಾರದಿಂದ ಹುಡುಗಿಯರನ್ನು ತರಬೇಕು ಎಂದು ಹೇಳುತ್ತಿದ್ದರು, ಆದರೆ ಇದೀಗ ಕಲಂ 370 ತೆರೆವಾಗಿದ್ದು ಕಾಶ್ಮೀರದ ಹೆಣ್ಣುಮಕ್ಕಳನ್ನು ವರಿಸುವ ಹಾದಿ ಸುಮಗವಾಗಿದೆ” ಎಂದು ಹೇಳುವ ಮೂಲಕ ರಾಷ್ಟ್ರ ಮಟ್ಟದಲ್ಲಿ ಮತ್ತೊಂದು ವಿವಾದಕ್ಕೆ ಕಾರಣವಾಗಿದ್ದಾರೆ.

ಇದನ್ನೂ ಓದಿ : ಸಂಜೋತಾ ಎಕ್ಸ್​ಪ್ರೆಸ್​ ಬೆನ್ನಲ್ಲೇ ಭಾರತಕ್ಕೆ ಬಸ್​ ಸಂಚಾರವನ್ನೂ ನಿಲ್ಲಿಸಿದ ಪಾಕಿಸ್ತಾನ

ಕಾಶ್ಮೀರದ ಹೆಣ್ಣು ಮಕ್ಕಳ ಕುರಿತ ಪಂಜಾಬ್ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರ ಈ ಹೇಳಿಕೆ ಇದೀಗ ರಾಷ್ಟ್ರ ಮಟ್ಟದಲ್ಲಿ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಆದರೆ, ಬಿಜೆಪಿ ನಾಯಕರು ಕಲಂ 370 ರದ್ದತಿಯನ್ನು ಉಲ್ಲೇಖಿಸಿ ಕಾಶ್ಮೀರಿ ಹೆಣ್ಣು ಮಕ್ಕಳ ಕುರಿತು ಕೀಳು ಅಭಿರುಚಿಯ ಮಾತುಗಳನ್ನು ಆಡುತ್ತಿರುವುದು ಇದೇ ಮೊದಲೇನಲ್ಲ.

ಆಗಸ್ಟ್.07 ರಂದು ಉತ್ತರ ಪ್ರದೇಶದ ಮುಜಾಫರ್ ನಗರದ ಶಾಸಕ ವಿಕ್ರಮ್ ಸೈನಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, “ಕಲಂ 370 ರದ್ದು ಮಾಡಿರುವುದರಿಂದ ಕಾಶ್ಮೀರಿ ಹುಡುಗಿಯರನ್ನು ಮದುವೆಯಾಗಲು ನಮ್ಮ ಕಾರ್ಯಕರ್ತರು ಉತ್ಸುಕರಾಗಿದ್ದಾರೆ. ಅಲ್ಲದೆ ಬಿಜೆಪಿ ಕಾರ್ಯಕರ್ತರಿಗೆ ಕಾಶ್ಮೀರಕ್ಕೆ ಮುಕ್ತ ಅವಕಾಶ ಇದ್ದು ಅವರು ಇಲ್ಲಿ ಬಂದು ಆಸ್ತಿ ಭೂಮಿ ಕರೀದಿಸಬಹುದು, ಇಲ್ಲೆ ನೆಲೆಸಿ ಇಲ್ಲಿನ ಹುಡುಗಿಯರನ್ನು ಮದುವೆಯಾಗಬಹುದು” ಎಂದು ಕಾಶ್ಮೀರಕ್ಕೆ ನೀಡಿರುವ ವಿಶೇಷ ಸ್ಥಾನಮಾನ ರದ್ದತಿಯಿಂದಾಗುವ ಪ್ರಯೋಜನದ ಕುರಿತು ಮಾಹಿತಿ ನೀಡಿ ಮುಜುಗರಕ್ಕೆ ಒಳಗಾಗಿದ್ದರು.

ಬಿಜೆಪಿ ಶಾಸಕ ವಿಕ್ರಮ್ ಸೈನಿ ಅವರ ಈ ಹೇಳಿಕೆ ರಾಷ್ಟ್ರ ಮಟ್ಟದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿತ್ತು. ಆದರೆ, ಇವರ ವಿರುದ್ಧ ಬಿಜೆಪಿ ಯಾವುದೇ ಕ್ರಮ ಜರುಗಿಸಿರಲಿಲ್ಲ. ಈ ನಡುವೆ ಬಿಜೆಪಿ ಪಕ್ಷದ ಹರಿಯಾಣ ಮುಖ್ಯಮಂತ್ರಿ ಖಟ್ಟರ್ ಸಹ ಇಂತಹದ್ದೇ ಹೇಳಿಕೆ ನೀಡಿರುವುದು ಇದೀಗ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.

ಇದನ್ನೂ ಓದಿ : PM Narendra Modi Speech: ಕಾಶ್ಮೀರದಲ್ಲಿ ಅಭಿವೃದ್ಧಿಯ ಹೊಸ ಶಕೆ ಆರಂಭ; ಪ್ರಧಾನಿ ಮೋದಿಯ ಇಂದಿನ ಭಾಷಣದಲ್ಲಿ ಏನೇನಿತ್ತು? ಇಲ್ಲಿದೆ ಪೂರ್ಣ ಮಾಹಿತಿ!
First published: August 10, 2019, 11:57 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading