ನವದೆಹಲಿ: ಎಟಿಎಂನಿಂದ ಹಣ ಡ್ರಾ ಮಾಡುವಲ್ಲಿ ವಿಧಾನದಲ್ಲಿ ಎಸ್ಬಿಐ ಜುಲೈ 1ರಿಂದ ಕೆಲ ಬದಲಾವಣೆಗಳನ್ನು ಪರಿಚಯಿಸಿದೆ. ಅದರಂತೆ ಈಗ ಗ್ರಾಹಕರು ನಿಯಮಗಳನ್ನು ಸರಿಯಾಗಿ ಪಾಲನೆ ಮಾಡದಿದ್ದಲ್ಲಿ ದಂಡ ತೆರಬೇಕಾಗುತ್ತದೆ. ಎಸ್ಬಿಐ ವೆಬ್ಸೈಟ್ನಲ್ಲಿ ಲಭ್ಯವಿರುವ ಮಾಹಿತಿ ಪ್ರಕಾರ, ಮೆಟ್ರೋ ಸಿಟಿಗಳಲ್ಲಿಉಳಿತಾಯ ಖಾತೆಯ ಗ್ರಾಹಕರಿಗೆ ತಿಂಗಳಿಗೆ ಎಂಟು ಬಾರಿ ಉಚಿತವಾಗಿ ವಹಿವಾಟಿಗೆ ಅವಕಾಶ ನೀಡಿದೆ. ಎಂಟು ಬಾರಿ ವರ್ಗಾವಣೆ ಬಳಿಕ ಮುಂದಿನ ವಹಿವಾಟಿಗೆ ಪ್ರತ್ಯೇಕವಾಗಿ ಶುಲ್ಕ ವಿಧಿಸಲಾಗುತ್ತದೆ.
ಐದು ಎಸ್ಬಿಐ ಎಟಿಎಂ ಮತ್ತು 3 ಇತರೆ ಬ್ಯಾಂಕುಗಳ ಎಟಿಎಂಗಳು ಸೇರಿ ತಿಂಗಳಿಗೆ ಎಂಟು ಬಾರಿ ಮಾತ್ರ ವಹಿವಾಟಿಗೆ ಮಾಡಿಕೊಳ್ಳಲು ಉಳಿತಾಯ ಖಾತೆಯ ಗ್ರಾಹಕರಿಗೆ ಎಸ್ಬಿಐ ಅವಕಾಶ ನೀಡಿದೆ. ನಾನ್ ಮೆಟ್ರೋ ಸಿಟಿಗಳಲ್ಲಿ ಉಳಿತಾಯ ಖಾತೆಯ ಗ್ರಾಹಕರಿಗೆ ತಿಂಗಳಿಗೆ ಹತ್ತು ವಹಿವಾಟಿಗೆ ಅವಕಾಶ ನೀಡಲಾಗಿದೆ. ಎಸ್ಬಿಐ ಎಟಿಎಂನಿಂದ ಐದು ಬಾರಿ ಹಾಗೂ ಇತರೆ ಬ್ಯಾಂಕುಗಳಲ್ಲಿ ಐದು ಬಾರಿ ಉಚಿತವಾಗಿ ವಹಿವಾಟು ಮಾಡಬಹುದಾಗಿದೆ. ತಿಂಗಳಿಗೆ ಸರಾಸರಿ 1 ಲಕ್ಷಕ್ಕಿಂತ ಹೆಚ್ಚಿನ ಬಾಕಿ ಕಾಯ್ದುಕೊಳ್ಳುವ ಗ್ರಾಹಕರಿಗೆ ಸ್ಟೇಟ್ ಬ್ಯಾಂಕ್ ಗ್ರೂಪ್ ಮತ್ತು ಇತರ ಬ್ಯಾಂಕುಗಳ ಎಟಿಎಂಗಳಲ್ಲಿ ಅನಿಯಮಿತ ವಹಿವಾಟು ನಡೆಸಲು ಅವಕಾಶವಿದೆ.
ವಹಿವಾಟು ವಿಫಲವಾದರೆ ದಂಡ
ಖಾತೆಯಲ್ಲಿ ಸಮರ್ಪಕ ಬಾಕಿ ಇಲ್ಲದಿದ್ದರೂ ಹಣ ಡ್ರಾ ಮಾಡಲು ಹೋಗಿ ವಿಫಲವಾದರೆ ಅದಕ್ಕೆ ಗ್ರಾಹಕರ ಮೇಲೆ ಜಿಎಸ್ಟಿ ಸೇರಿ 20 ರೂಪಾಯಿ ದಂಡ ವಿಧಿಸಲಾಗುತ್ತದೆ.
ಇದನ್ನು ಓದಿ: ಡಿ.ಜೆ ಹಳ್ಳಿ ಸಾರ್ವಜನಿಕ ಆಸ್ತಿ-ಪಾಸ್ತಿ ಹಾನಿ ಸಂಬಂಧ ಸಿಎಂ ಸಭೆ: ಮಹತ್ವದ ನಿರ್ಧಾರಗಳು ಕೈಗೊಂಡ ಯಡಿಯೂರಪ್ಪ
ಎಸ್ಬಿಐ ಎಟಿಯಿಂದ ಹಣ ಡ್ರಾ ಮಾಡಲು ಒಟಿಪಿ ಅವಶ್ಯಕ
ಹತ್ತು ಸಾವಿರಕ್ಕಿಂತ ಹೆಚ್ಚಿನ ಹಣವನ್ನು ಎಸ್ಬಿಐ ಎಟಿಎಂನಿಂದ ಡ್ರಾ ಮಾಡಿಕೊಳ್ಳುವವರಿಗೆ ಬ್ಯಾಂಕ್ ಹೊಸ ನಿಯಮ ಜಾರಿ ಮಾಡಿದೆ. ಒಂದು ವೇಳೆ ಎಸ್ಬಿಐ ಎಟಿಎಂನಿಂದ ಹತ್ತು ಸಾವಿರಕ್ಕಿಂತ ಹೆಚ್ಚಿನ ಹಣವನ್ನು ಡ್ರಾ ಮಾಡಿಕೊಳ್ಳಬೇಕಾದರೆ ಅವರಿಗೆ ಒಟಿಪಿ ಕಡ್ಡಾಯವಾಗಿದೆ. ಈ ನಿಯಮ 2020 ಜುಲೈ 1ರಿಂದಲೇ ಜಾರಿಯಾಗಿದೆ. ಇದರ ಪ್ರಕಾರ, ರಾತ್ರಿ 8ಗಂಟೆಯಿಂದ ಬೆಳಗ್ಗೆ 8ಗಂಟೆಯವರೆಗೆ ಎಸ್ಬಿಐ ಎಟಿಎಂನಲ್ಲಿ ಹತ್ತು ಸಾವಿರಕ್ಕಿಂತ ಹೆಚ್ಚಿನ ಹಣ ಡ್ರಾ ಮಾಡುವವರಿಗೆ ಒಟಿಪಿ ಅತ್ಯಗತ್ಯವಾಗಿದೆ. ಈ ಒಟಿಪಿ ಕೇವಲ ಎಸ್ಬಿಐ ಎಟಿಎಂಗಳಿಗೆ ಮಾತ್ರ ಅನ್ವಯವಾಗಲಿದ್ದು, ಇತರೆ ಎಟಿಎಂಗಳು ಈ ಹಿಂದಿನಂತೆ ಕಾರ್ಯನಿರ್ವಹಿಸಲಿದ್ದು, ಇಲ್ಲಿ ವಹಿವಾಟಿಗೆ ಒಟಿಪಿ ಅವಶ್ಯಕತೆ ಇರುವುದಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ