ಪಾಲಕರಿಗೆ ಸಿಹಿಸುದ್ದಿ; ಇನ್ಮುಂದೆ ಉನ್ನತ ಶಿಕ್ಷಣಕ್ಕೆ ತಗಲುವ ವೆಚ್ಚ ಕಡಿಮೆಯಾಗಲಿದೆ!

ಫೆ.1ರಂದು ಕೇಂದ್ರ ಸರ್ಕಾರ ಬಜೆಟ್​ ಮಂಡನೆ ಮಾಡಲಿದೆ. ಅಲ್ಲದೆ, ಉನ್ನತ ಶಿಕ್ಷಣ ಸೇರಿದಂತೆ ಕೆಲ ಸೇವೆಗಳ ಮೇಲಿನ ಜಿಎಸ್​ಟಿ ದರವನ್ನು ಪರಿಷ್ಕರಣೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

Rajesh Duggumane | news18
Updated:January 30, 2019, 9:44 AM IST
ಪಾಲಕರಿಗೆ ಸಿಹಿಸುದ್ದಿ; ಇನ್ಮುಂದೆ ಉನ್ನತ ಶಿಕ್ಷಣಕ್ಕೆ ತಗಲುವ ವೆಚ್ಚ ಕಡಿಮೆಯಾಗಲಿದೆ!
ಸಾಂದರ್ಭಿಕ ಚಿತ್ರ
Rajesh Duggumane | news18
Updated: January 30, 2019, 9:44 AM IST
ನವದೆಹಲಿ (ಜ.23): ಮಕ್ಕಳಿಗೆ ಸರಿಯಾದ ಶಿಕ್ಷಣ ನೀಡಬೇಕು ಎಂಬುದು ಪ್ರತಿಯೊಬ್ಬ ಪಾಲಕನ ಆಸೆ. ಆದರೆ, ಆರ್ಥಿಕ ಸಮಸ್ಯೆಯಿಂದಾಗಿ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಲು ಸಾಧ್ಯವಾಗಿರುವುದೇ ಇಲ್ಲ. ಈ ರೀತಿ ಕನಸು ಕಂಡ ಪಾಲಕರಿಗೆ ಈ ಬಾರಿಯ ಕೇಂದ್ರ ಬಜೆಟ್​ನಲ್ಲಿ​ ಸಿಹಿ ಸುದ್ದಿ ಸಿಗಲಿದೆ.

ಫೆ.1ರಂದು ಕೇಂದ್ರ ಸರ್ಕಾರ ಬಜೆಟ್​ ಮಂಡನೆ ಮಾಡಲಿದೆ. ಲೋಕಸಭಾ ಚುನಾವಣೆ ಸನಿಹವಾಗುತ್ತಿರುವ ಹಿನ್ನೆಲೆಯಲ್ಲಿ ಜನಪ್ರಿಯ ಯೋಜನೆಗಳಿಗೆ ಹೆಚ್ಚು ಒತ್ತು ನೀಡಲು ಮೋದಿ ಸರ್ಕಾರ ಸಿದ್ಧತೆ ನಡೆಸುತ್ತಿದೆ. ಅಲ್ಲದೆ, ಉನ್ನತ ಶಿಕ್ಷಣ ಸೇರಿದಂತೆ ಕೆಲ ಸೇವೆಗಳ ಮೇಲಿನ ಜಿಎಸ್​ಟಿ ದರವನ್ನು ಪರಿಷ್ಕರಣೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. “ಶಿಕ್ಷಣ ವಲಯದ ಮೇಲೆ ಹೇರಲಾದ ಜಿಎಸ್​ಟಿ ದರ ಪರಿಷ್ಕರಣೆಗೆ ಸರ್ಕಾರ ಮುಂದಾಗುವ ಸಾಧ್ಯತೆ ಇದೆ,” ಎಂದು ಹಣಕಾಸು ಇಲಾಖೆಯ ಸಹಾಯಕ ಸಚಿವ ಶಿವ್​​ ಪ್ರತಾಪ್​ ಶುಕ್ಲಾ ಹೇಳಿದ್ದಾರೆ.

ಬಜೆಟ್​ಗೂ ಮೊದಲು ಮೋದಿ ಸರ್ಕಾರ, ಶಿಕ್ಷಣ ತಜ್ಞರು ಮೊದಲಾದವರ ಜೊತೆ ಚರ್ಚೆ ನಡೆಸಲಿದೆ. ಪ್ರತಿ ವಲಯದವರು ತೆರಿಗೆಯನ್ನು ಕಡಿಮೆ ಮಾಡುವಂತೆ ಕೋರುತ್ತಿವೆ. ಆದರೆ, ದೇಶವನ್ನು ನಡೆಸಲು ತೆರಿಗೆ ಹಣ ಅತ್ಯಗತ್ಯ. ಒಂದೊಮ್ಮೆ ಶಿಕ್ಷಣ ವಲಯದಲ್ಲಿ ತೆರಿಗೆ ಕಡಿಮೆ ಮಾಡಲು ಸೂಕ್ತ ಕಾರಣ ದೊರೆತರೆ ಆ ಬಗ್ಗೆ ವಿತ್ತ ಸಚಿವ ಅರುಣ್​ ಜೇಟ್ಲಿ ಅವರ ಜೊತೆ ಮಾತನಾಡುವುದಾಗಿ ಶಿವ್​ ಪ್ರತಾಪ್​ ತಿಳಿಸಿದ್ದಾರೆ.

ಇದನ್ನೂ ಓದಿ: ಕೆಸಿಆರ್​​ ರೈತಸ್ನೇಹಿ ಯೋಜನೆಗಳನ್ನೇ ಲೋಕಸಭೆ ಚುನಾವಣೆ ಅಜೆಂಡಾ ಮಾಡಿಕೊಳ್ಳೋಣ; ಮಹಾಮೈತ್ರಿಗೆ ನಾಯ್ಡು ಸಲಹೆ!

2017ರ ಜುಲೈ ತಿಂಗಳಲ್ಲಿ ಜಾರಿಗೆ ಬಂದಿತ್ತು. ಆದರೆ, ಪ್ರಾಥಮಿಕ ಶಾಲೆಯಿಂದ- ಪ್ರೌಢಶಿಕ್ಷಣದವರಗೆ ಜಿಎಸ್​ಟಿಯಿಂದ ಹೊರಗಿಡಲಾಗಿತ್ತು. ಆದರೆ, ಆದರೆ, ಉಳಿದ ವ್ಯವಸ್ಥೆಗೆ ಜಿಎಸ್​ಟಿ ಅನ್ವಯವಾಗಿತ್ತು. ಇದು ಹೊರೆಯಾಗಿ ಪರಿಣಮಿಸಿತ್ತು.

First published:January 23, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ